Chapter-5

ಸೆರಿಕ್ ಗ್ರಂಥಾಲಯ

ರಾಜ್ಯ ಶಿಕ್ಷಣ ಸಂಪನ್ಮೂಲ ಹಾಗೂ ಮಾಹಿತಿ ಕೇಂದ್ರ ಶೇಷಾದ್ರಿಪುರಂ ಬೆಂಗಳೂರು.

ರಾಜ್ಯ ಶಿಕ್ಷಣ ಸಂಪನ್ಮೂಲ ಮಾಹಿತಿ ಕೇಂದ್ರವು ಡಿ.ಎಸ್.ಇ.ಆರ್.ಟಿಯ ಅಂಗ ಸಂಸ್ಥೆಯಾಗಿದೆ, ಸರ್ಕಾರಿ ಆದೇಶ ಸಂಖ್ಯೆ C.No78, ದಿ:21.08.1891 ರಲ್ಲಿ ಅನುಮೋದನೆಗೊಂಡು ದಿ:21.08.1891 ರಂದು ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆ ಮಹಾರಾಜ ಶ್ರೀ ಚಾಮರಾಜ ಒಡೆಯರ್‌ರವರಿಂದ ಸ್ಥಾಪನೆಗೊಂಡ ಹೆಗ್ಗಳಿಕೆಯ ಸಂಸ್ಥೆಯಾಗಿದ್ದು ರಾಜ್ಯ ಶಿಕ್ಷಣ ಗ್ರಂಥಾಲಯ ಮತ್ತು ಸಂಗ್ರಹಾಲಯವಾಗಿ ಭಾರತ ದೇಶದಲ್ಲೇ ಮಾದರಿ ಸಂಸ್ಥೆಯಾಗಿದೆ. ಸಂಕ್ ಗ್ರಂಥಾಲಯ 1891ರಿಂದ 2018ರವರೆಗೆ ಪ್ರಗತಿ ಮೈಲುಗಲ್ಲುಗಳನ್ನು ಸಾಧಿಸಿದೆ.

ಸೆರಿಕ್ ಗ್ರಂಥಾಲಯ ಕಾರ್ಯಕ್ರಮ ಪ್ರಗತಿ,

189121.08.1891 ರಂದು ಮೈಸೂರು ಸರ್ಕಾರ ಒಂದು ಸಾವಿರ ರೂಪಾಯಿಗಳ ಮಂಜೂರಾತಿಯಿಂದ ರಾಜ್ಯ ಶಿಕ್ಷಣ ಗ್ರಂಥಾಲಯ ಮತ್ತು ಸಂಗ್ರಹಾಲಯವು ಅಂಕಿತವಾಗಿ ಪ್ರಾರಂಭವಾಗಿತ್ತು
1895ಮ್ಯಾಜಿಕ್ ಲ್ಯಾಂಟರ್ನ ಮತ್ತು ಸೈತ್ವಗಳು ಖರೀದಿಸಲಾಯಿತು,
1900 ಗ್ರಂಥಾಲಯದ ಪುಸ್ತಕಗಳು ಹಾಗೂ ಮುದ್ರಿತ ಸೂಚಿಯನ್ನು ಪ್ರಕಾಶನ ಮಾಡಲಾಯಿತು.
1908ಇಂಗ್ಲೆಂಡ್ ದೇಶದ ಶಿಕ್ಷಣ ಮಂಡಳಿಯವರು ಶಿಕ್ಷಣಕ್ಕೆ ಸಂಬಂಧಪಟ್ಟ ಪುಸ್ತಕಗಳು ಹಾಗು ಪಿಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು.
1910ಶಿಕ್ಷಣ ಸಂಗ್ರಹಾಲಯವನ್ನು ಶ್ರೀ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್ ಬೆಂಗಳೂರಿಗೆ ಹಸ್ತಾಂತರ ಮಾಡಲಾಯಿತು,
1914-15ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಎರಡು ಸಾರ್ವಜನಿಕ ಗ್ರಂಥಾಲಯಗಳು ಪ್ರಾರಂಭವಾದವು. ಈ ಎರಡು ಗ್ರಂಥಾಲಯಗಳನ್ನು ಪ್ರಾರಂಭಿಸಲು ಶಿಕ್ಷಣಕ್ಕೆ ಸಂಬಂಧಪಟ್ಟ 255 ಪುಸ್ತಕಗಳನ್ನು ದಾನವಾಗಿ ಈ ಎರಡು ಗ್ರಂಥಾಲಯಗಳಿಗೆ ನೀಡಲಾಯಿತು.
1918 ಗ್ರಂಥಾಲಯದ ಪುಸ್ತಕಗಳ ಸೂಚೀಕರಣ ಹಾಗೂ ವರ್ಗೀಕರಣ ಮಾಡಲಾಯಿತು. ಗ್ರಂಥಪಾಲಕರನ್ನು ಇಲಾಖೆಯ ಪ್ರಮುಖ ಸಂಪಾದಕರೆಂದು ಪದನಾಮ ಮಾಡಲಾಯಿತು.
1932-34ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಸೇರ್ಪಡೆ ಮಾಡಲಾಯಿತು. ಮತ್ತು ವಿವಿದ ಜಿಲ್ಲೆಗಳ ಅಧಿಕಾರಿಗಳಿಗೆ ನೀಡಲಾಯಿತು.
1942 ಮಿತಿಕ್ ಸಂಘ ಬೆಂಗಳೂರುರವರಿಗೆ 172 ಗ್ರಂಥಾಲಯದಿಂದ ಪುಸ್ತಕಗಳನ್ನು ವಗಾ೵ವಣೆ ಮಾಡಲಾಯಿತು.
1948 ಶ್ರೀ ವೇದರತ್ನ, ಇಲಾಖಾ ಅಧಿಕಾರಿಯವರನ್ನು ಶ್ರೀ ಎಸ್.ಆರ್. ರಂಗನಾಥ ಗ್ರಂಥಾಲಯ ವಿಜ್ಞಾನ ಪಿತಾಮಹ ರವರ ಮಾರ್ಗದರ್ಶನದಲ್ಲಿರುವಂತೆ ದೆಹಲಿಗೆ ನಿಯೋಜನೆ ಮಾಡಲಾಯಿತು.
1955 ಶ್ರೀ ಎನ್ ಎಸ್ ಹಿರಣ್ಣಯ್ಯ ಐ ಎ ಎಸ್ ಡಿ ಪಿ ಐ ಇವರ ಶಿಫಾರಸ್ಸಿನ ಮೇರೆಗೆ ಶಾಲಾ ಗ್ರಂಥಾಲಯ ಅಭಿವೃದ್ಧಿಪಡಿಸಲು ಶಿಕ್ಷಣಗ್ರಂಥಾಲಯವನ್ನು ಮೈಸುರುನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು.
1957 ಶೈಕ್ಷಣಿಕ ಗ್ರಂಥಾಲಯವನ್ನು ಮೈಸೂರು ರಾಜ್ಯ ಶಿಕ್ಷಣ ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಯಿತು.
19581) ಎಂ.ಎಸ್.ಇ.ಎಲ್ ಮೈಸೂರು ರಾಜ್ಯ ಶಿಕ್ಷಣ ಗ್ರಂಥಾಲಯ ವನ್ನು ಹೊಸ ಸಾರ್ವಜನಿಕ ಕಛೇರಿ ಕಟ್ಟಡದಲ್ಲಿ ಪ್ರಾರಂಭ ಮಾಡಲಾಗಿದೆ.
2) ಮುಕ್ತ ಗ್ರಂಥಾಲಯ ಔಚಿಟಿ ಂಛಿಛಿಜಿ ಪ್ರಾರಂಭಿಸಲಾಯಿತು.
1962 ಗ್ರಂಥಾಲಯವನ್ನು ಶೇಷಾದ್ರಿಪುರಂನಲ್ಲಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.
1966 ಎನ್.ಡಿ ಬಾಗಾರಿ, ಗ್ರಂಥಪಾಲಕರನ್ನು ರಾಜ್ಯ ಶಿಕ್ಷಣ ಗ್ರಂಥಾಲಯಕ್ಕೆ ರಾಜ್ಯ ಗ್ರಂಥಪಾಲಕರಾಗಿ ನೇಮಕ ಮಾಡಲಾಯಿತು.
1970 ಶ್ರೀ ಬಿ.ವಿ ನಾರಾಯಣರಡ್ಡಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ಗ್ರಂಥಾಲಯ ಕಟ್ಟಡದ ನಿರ್ಮಾಣಕ್ಕಾಗಿ ಸಮಿತಿಯನ್ನು ರಚಿಸಲಾಯಿತು. ಶ್ರೀ ವಿ ಸೂರ್ಯಪ್ರಕಾಶ್ ಗ್ರಂಥಪಾಲಕರನ್ನು ಸಮಾಳಿಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಆಚರಣೆ ಮಾಡಲಾಯಿತು.UNESCO ಕ್ಲಬ್‌ನ್ನು ರಚನೆ ಮಾಡಿ ಅದರ 25 ನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡಲಾಯಿತು.
1972 ಬೆಂಗಳೂರು ನಗರದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಗ್ರಂಥಾಲಯದ ನಾಲ್ಕು ಶಾಖೆಗಳನ್ನು ಪ್ರಾರಂಭ ಮಾಡಲಾಯಿತು.
1975ಶಿಕ್ಷಣ ಸಚಿವರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿರವರಿಂದ ಕರ್ನಾಟಕ ರಾಜ್ಯ ಶೈಕ್ಷಣಿಕ ಗ್ರಂಥಾಲಯಕ್ಕೆ ಶಂಕುಸ್ಥಾಪನೆ ಮಾಡಲಾಯಿತು ಹಾಗೂ ಉತ್ತಮ ಓದುಗರಿಗೆ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು.
1979ಮಕ್ಕಳ ಅಂತರಾಷ್ಟ್ರೀಯ ವರ್ಷದಲ್ಲಿ ವಿಶೇಷಸ್ಪರ್ಧೆಯನ್ನು ಪ್ರಾರಂಭಿಸಲಾಯಿತು.
19841. ರಾಷ್ಟ್ರೀಯ ಪುಸ್ತಕ ಸಪ್ತಾಹ ಆಚರಣೆಯನ್ನು ಪ್ರಾರಂಭಿಸಲಾಯಿತು.
2.ಶಿಕ್ಷಣ ಮಂತ್ರಿಗಳು ಕರ್ನಾಟಕ ರಾಜ್ಯ ರವರು ಶಿಕ್ಷಣ ಗ್ರಂಥಾಲಯದ ಮಾನ್ಯ ಶ್ರೀ ರಾಮಕೃಷ್ಣ ಹೆಗಡೆ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಮತ್ತು ಶೀ, ಬಿ. ರಾಚಯ್ಯ ಕಟ್ಟಡವನ್ನು ಉದ್ಘಾಟನೆ ಮಾಡಿದರು.
3.ಶ್ರೀ ಸೂರ್ಯ ಪ್ರಕಾಶ್ ರವರನ್ನು ಕರ್ನಾಟಕ ರಾಜ್ಯ ಶಿಕ್ಷಣ ಗ್ರಂಥಾಲಯದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನಿರ್ದೇಶಕರಾಗಿ ನಿಯೋಜನೆ ಮಾಡಲಾಯಿತು.
1985ಶ್ರೀ ಎಂ ರಘುಪತಿ ಶಿಕ್ಷಣ ಸಚಿವರು ಕರ್ನಾಟಕ ರಾಜ್ಯ ಸರ್ಕಾರ ರವರು ಎನ್.ಸಿ.ಇ.ಆರ್.ಟಿಯ ಕಾರ್ನರನ್ನು ಉದ್ಘಾಟಿಸಿದರು,
1987ಶ್ರೀ ವಿ ಸೂರ್ಯಪ್ರಕಾಶ್ .ಗ್ರಂಥಪಾಲಕರು ಕರ್ನಾಟಕ ರಾಜ್ಯ ಶಿಕ್ಷಣ ಗ್ರಂಥಾಲಯ ರವರನ್ನು ಪುಸ್ತಕಗಳನ್ನು ಸಂಗ್ರಹಿಸುವ ಬಗ್ಗೆ ತರಬೇತಿಗಾಗಿ ಇಂಗ್ಲೆಂಡ್‌ಗೆ ನಿಯೋಜನೆ ಮಾಡಲಾಯಿತು.
1989ಮೂರು ತಿಂಗಳಿಗೊಮ್ಮೆ ಪುಸ್ತಕಾಲಯದ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. 2 ಮಕ್ಕಳ ವಾಚಕರ ಕೂಟ ಎಂಬ ಮಕ್ಕಳ ಕ್ಲಬ್ ಪ್ರಾರಂಭಿಸಲಾಯಿತು.
1990ಶ್ರೀ, ಕೆ.ಎಚ್, ರಂಗನಾಥ್ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ರವರು 21.08.1990 ರಂದು ಗ್ರಂಥಾಲಯದ 100 ವರ್ಷಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
1991 ಶ್ರೀ ಎಂ.ವೀರಪ್ಪ ಮೊಯ್ಲಿ ಶಿಕ್ಷಣ ಸಚಿವರು ಹಾಗೂ ಡಾ ರಾಜಾರಾಮಣ್ಣರವರು ಮುಖ್ಯ ಅತಿಥಿಯಾಗಿ 21.08.1991ರಂದು ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.
1992ಕರ್ನಾಟಕ ರಾಜ್ಯ ಶಿಕ್ಷಣ ಗ್ರಂಥಾಲಯವನ್ನು ರಾಜ್ಯ ಶಿಕ್ಷಣ ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರ (ಸೆರಿಕ್ ಗ್ರಂಥಾಲಯ)ವೆಂದು ಮರು ನಾಮಕರಣ ಮಾಡಲಾಯಿತು.
1993ಜಿಲ್ಲಾವಾರು ಗ್ರಂಥಾಲಯಗಳು ಹಾಗೂ ಸೆರಿಕ್ ಗ್ರಂಥಾಲಯಗಳ ಅಭಿವೃದ್ಧಿಗಾಗಿ 24 ಲಕ್ಷಗಳು ಅನುದಾನವನ್ನು ಸರ್ಕಾರ ಮಂಜೂರು ಮಾಡಿತು.
1993-2014ಸೆರಿಕ್ ಗ್ರಂಥಾಲಯದಲ್ಲಿ ಅರ್ಹತೆ ಹೊಂದಿದ್ದ ಗ್ರಂಥಪಾಲಕರೆಲ್ಲರೂ ನಿವೃತ್ತಿ ಹೊಂದಿದರು.
2014ಸರಿಕ್ ಗ್ರಂಥಾಲಯ 125 ವರ್ಷಗಳನ್ನು ಪೂರೈಸಿತು.
2016ಗ್ರಂಥಾಲಯದ ಗಣಕೀಕರಣ ಕಾರ್ಯವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಪ್ರಸ್ತುತ ಚಿತ್ರಣ.

ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಹಾಗೂ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಎಚ್.ಎಸ್ ಬಾಬಾ ರವರ ಕೊಡುಗೆ ಮತ್ತು ಶ್ರಮದಿಂದ ಸೆರಿಕ್ ಗ್ರಂಥಾಲಯವು ರಾಜ್ಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಚಟುವಟಿಕೆಗಳ ಕೇಂದ್ರವಾಗಿ ಪ್ರಮುಖ ಸ್ಥಾನ ಪಡೆದಿದೆ.

ಪ್ರಸ್ತುತ ಸೆರಿಕ್ ಗ್ರಂಥಾಲಯವು ಬೆಂಗಳೂರು ನಗರದ ಶೇಷಾದ್ರಿಪುರಂನಲ್ಲಿ ಸ್ವಂತ ಕಟ್ಟಡದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಸುಮಾರು 1,40,000 ಪುಸ್ತಕಗಳನ್ನು ಒಳಗೊಂಡಿದ್ದು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವರದಿಗಳು, ವಿಶ್ವಕೋಶ, ನಿಘಂಟು ಪತ್ರಾಂಕಿತ ಪುಸ್ತಕಗಳು ಹಾಗೂ ಶಿರ್ಕಣಕ್ಕೆ ಸಂಬಂಧಿಸಿದ ಸಮಾಜಶಾಸ್ತ್ರ ಇತಿಹಾಸ ಕಲೆ ಇತ್ಯಾದಿ ಪುಸ್ತಕಗಳನ್ನು ಒಳಗೊಂಡಿದಿದೆ ಇದಲ್ಲದೇ ಕನ್ನಡ ಇಂಗ್ಲೀಷ್ ಭಾಷೆಗಳಿಗೆ ಸಂಬಂಧಿಸಿದ ನಾಟಕ ಕಥೆ ಕಾದಂಬರಿಗಳನ್ನು ಒಳಗೊಂಡಿದ್ದು ಮಕ್ಕಳ ಸಾಹಿತ್ಯದ ಒಂದು ವಿಭಾಗವನ್ನು ಹೊಂದಿದೆ.

ಪ್ರಸ್ತುತ ಸನ್ನಿವೇಶಗಳಿಗೆ ತಕ್ಕಂತೆ ಸೆರಿಕ್ ಗ್ರಂಥಾಲಯವನ್ನು ಆಧುನೀಕರಿಸಲಾಗಿತ್ತಿದ್ದು ಗ್ರಂಥಲಾಯದಲ್ಲಿ ಸ್ವಯಂಚಾಲಿತ ಗ್ರಂಥಾಲಯ ತಂತ್ರಾಂಶ ಪದ್ದತಿಯನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಗ್ರಂಥಗಳ ಮಾಹಿತಿಯನ್ನು ಅತಿ ಸುಲಭವಾಗಿ ಪಡೆಯಬಹುದಾಗಿದೆ

View this page in English
ನವೀಕರಿಸಿದ ದಿನಾಂಕ : 31/8/2019

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com