ಶಿಕ್ಷಕರ ಶಿಕ್ಷಣ ವಿಭಾಗ

ಶಿಕ್ಷಕರ ಶಿಕ್ಷಣ ವಿಭಾಗ


ರಾಜ್ಯ ಶೈಕ್ಷಣಿಕ ಮೌಲ್ಯಮಾಪನ

 1. 2019-20 ನೇ ಸಾಲಿನಲ್ಲಿ C.C.R.T ನವದೆಹಲಿ, ಇವರು ಆಯೋಜಿಸಿರುವ ತರಬೇತಿಗಳಿಗೆ, ರಾಜ್ಯದ ಅಧಿಕಾರಿಗಳನ್ನು ಮತ್ತು ಡಯಟ್ ಉಪನ್ಯಾಸಕರುಗಳನ್ನು ನಿಯೋಜನೆ ಮಾಡಲಾಗುತ್ತಿದೆ ಹಾಗೂ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರುಗಳಿಗೆ ಡಯಟ್ ಮುಖೇನ ತರಬೇತಿಗಳಿಗೆ ನಿಯೋಜನೆ ಮಾಡಲಾಗುತ್ತಿದೆ.
 2. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 & N.C.F ಆಧಾರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು (ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ) website ಗೆ upload ಮಾಡಲಾಗಿದೆ.
 3. ಡಿ.ಎಸ್.ಇ.ಆರ್.ಟಿ ಯ Homepage ನಲ್ಲಿನ ಕಲಿಕಾ ಸಾಮಾಗ್ರಿಗಳಲ್ಲಿ ಕಲಿಕಾ ಫಲಗಳು link ನಲ್ಲಿ ಕನ್ನಡ, ಮರಾಠಿ ಮತ್ತು ಉರ್ದು ಭಾಷೆಗಳಲ್ಲಿ ಕಲಿಕಾ ಫಲಗಳನ್ನು ಪ್ರತ್ಯೇಕವಾಗಿ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ upload ಮಾಡಲಾಗಿದೆ.
 4. NCERT ಯಿಂದ ಬರುವ ಪಠ್ಯಕ್ರಮದ ಆದೇಶಗಳನ್ನು ಪಾಲಿಸುವುದು ಹಾಗೂ NCF 2005 ಮತ್ತು NCF ಆಧಾರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳನ್ನು ತಯಾರಿಸಲಾಗಿದೆ.
 5. ಪಠ್ಯವಸ್ತುವನ್ನು ಸಿದ್ದಪಡಿಸಿ ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಲು K.T.B.S (ಕರ್ನಾಟಕ ಪಠ್ಯ ಪುಸ್ತಕ ಸಂಘ) ಗೆ ನೀಡಲಾಗಿದೆ.
 6. ಸರ್ಕಾರೇತರ ಸಂಸ್ಥೆಗಳ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತಿದೆ.

ಸಮಗ್ರ ಶಿಕ್ಷಣ ಕರ್ನಾಟಕ – 2019-20 ನೇ ಸಾಲಿನ ಕಾರ್ಯಕ್ರಮ

AWP ಯೋಜನೆ 2019-20ನೇ ಸಾಲಿನ 30409 ಪ್ರೌಢ ಶಾಲಾ ಶಿಕ್ಷಕರಿಗೆ ಸೇವಾನಿರತ ತರಬೇತಿ ನೀಡಲಾಗುವುದು. ಕನ್ನಡ, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ತರಬೇತಿಯ ಸಾಹಿತ್ಯ ರಚನೆಯಾಗಿದ್ದು, ಕನ್ನಡ, ವಿಜ್ಞಾನ, ಗಣಿತ ವಿಷಯಗಳ MRP ತರಬೇತಿಯನ್ನು ಮಾಡಲಾಗಿದೆ. ಹಿಂದಿ ಪ್ರಾಜೆಕ್ಟ್ – 10 ದಿನಗಳ MRP ತರಬೇತಿ ನಡೆಸಲಾಗುತ್ತಿದೆ. ಸಮಾಜ ವಿಜ್ಞಾನ ವಿಷಯದ MRP ತರಬೇತಿಯನ್ನು ಆಗಸ್ಟ್ ಕೊನೆಯ ವಾರದಲ್ಲಿ ನಡೆಸಲಾಗುವುದು.

ಪ್ರೌಢ ಶಾಲಾ ಶಿಕ್ಷಕರಿಗೆ ಸಮಾನ್ಯ ವಿಷಯ ತರಬೇತಿ ನೀಡಲು ಮಾಡ್ಯೂಲ್ ರಚಿಸುತ್ತಿದ್ದು, ಮೂರನೇ ಹಂತದ ಕಾರ್ಯಾಗಾರವನ್ನು ಆಗಸ್ಟ್ ಕೊನೆಯ ವಾರದಲ್ಲಿ ಹಮ್ಮಿಕೊಂಡಿದ್ದು, MRP ತರಬೇತಿಯನ್ನು ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು.

4707 ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಯೋಗ ತರಬೇತಿ ನೀಡಲು ತರಬೇತಿ ಸಾಹಿತ್ಯ ರಚಿಸಲು ಎರಡು ಹಂತದ ಕಾರ್ಯಾಗಾರ ಮುಗಿದಿದ್ದು, ಮೂರನೇ ಹಂತದ ಕಾರ್ಯಾಗಾರವನ್ನು ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುವುದು.

IISc ಚಳ್ಳಕೆರೆ, ಚಿತ್ರದುರ್ಗ ಇಲ್ಲಿ 10 ಜಿಲ್ಲೆಗಳ 1300 ಗಣಿತ ಮತ್ತು ವಿಜ್ಞಾನ ಪ್ರೌಢ ಶಾಲಾ ಶಿಕ್ಷಕರಿಗೆ 10 ದಿನಗಳ ಸನಿವಾಸ ತರಬೇತಿಯನ್ನು ನೀಡಲಾಗುತ್ತಿದ್ದು, ಈಗಾಗಲೇ ಮೂರು ತಂಡಗಳಿಗೆ ತರಬೇತಿ ಮುಗಿದಿದೆ.

ಪ್ರೌಢ ಶಾಲಾ ವೃತ್ತಿ ಶಿಕ್ಷಣ ಹಾಗೂ ಇತರೆ ವಿಷಯಗಳ ತರಬೇತಿ ನೀಡಲು ಸಾಹಿತ್ಯ ರಚನೆಗಾಗಿ ಸೆಪ್ಟೆಂಬರ್ ಮಾಹೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಪ್ರೌಢ ಶಾಲಾ 9 ಮತ್ತು 10ನೇ ತರಗತಿಯ ಎಲ್ಲಾ ವಿಷಯಗಳಿಗೆ ಕಲಿಕಾ ಫಲಗಳ ಅಭಿವೃದ್ಧಿ ಕುರಿತು ಎರಡು ಹಂತದ ಕಾರ್ಯಾಗಾರ ನಡೆಸಿದ್ದು, ಮೂರನೇ ಹಂತ ಕಾರ್ಯಾಗಾರವನ್ನು ಆಗಸ್ಟ್ ಮಾಹೆಯ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಾಥಮಿಕ ವಿಭಾಗ

1) NEP-2020 ಆಧಾರಿತ ಗುರುಚೇತನ ತರಬೇತಿ ಕಾರ್ಯಕ್ರಮ
2021-22 ನೇ ಸಾಲಿನ ಎಸ್.ಎಸ್.ಕೆ ಪ್ರಾಥಮಿಕ ವಿಭಾಗದ ಗುರುಚೇತನ ಕಾರ್ಯಕ್ರಮದಡಿ 1ರಿಂದ 8ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗಾಗಿ ಎನ್.ಇ.ಪಿ-2020 ರ ಆಶಯದಂತೆ 34 ಮಾಡ್ಯೂಲ್ ಗಳ ಕಪ್ಲೆಟ್ ಮತ್ತು ವೀಡಿಯೋಗಳನ್ನು ಸೃಜಿಸಿ ದೀಕ್ಷಾ ಪೋರ್ಟಲ್‌ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜೂನ್-2022 ರ ಮಾಹೆಯಿಂದ ಶಿಕ್ಷಕರ ತರಬೇತಿಯು ಆಯೋಜನೆಗೊಳ್ಳಲಿದ್ದು ದೀಕ್ಷಾ ಪೋರ್ಟಲ್‌ ನಲ್ಲಿ ಮಾಡ್ಯೂಲ್ ಕೋರ್ಸ್‌ ಗಳು ಲಭ್ಯವಾಗಲಿದೆ.

   

ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಿಷ್ಠಾ-1.0 ಮತ್ತು ನಿಷ್ಠಾ-3.0 ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ನಿಷ್ಠಾ-2.0 ತರಬೇತಿ :

ನಿಷ್ಠಾ1.0, ನಿಷ್ಠಾ-2.0 ಮತ್ತು ನಿಷ್ಠಾ-3.0 ಕಾರ್ಯಕ್ರಮವು ರಾಷ್ಟಿಯ ಉಪಕ್ರಮವಾಗಿದ್ದು, ಸಮಗ್ರ ಶಿಕ್ಷಕರ ತರಬೇತಿಯ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ಇವು ಮೆಗಾ ಟ್ರೈನಿಂಗ್ ಪ್ರೋಗ್ರಾಂ ಆಗಿದ್ದು, ಸ್ವ-ವೇಗದ ಕಲಿಕೆಗೆ ಅವಕಾಶವಿರುವ, ರಾಷ್ಟಾದ್ಯಂತ ಏಕರೂಪವಾಗಿ ಅನುಷ್ಠಾನವಾಗುತ್ತಿರುವ, ವೈವಿಧ್ಯಮಯ ಕೋರ್ಸ್ಗಳಿಂದ ಕೂಡಿದ ಡಿಜಿಟಲ್ ಆಗಿ ಪ್ರಮಾಣಪತ್ರ ಪಡೆಯುವ ಅತೀ ದೊಡ್ಡ ತರಬೇತಿ ವ್ಯವಸ್ಥೆಯಾಗಿದೆ.

2020-21ನೇ ಸಾಲಿನಲ್ಲಿ ಎನ್.ಸಿ.ಇ.ಆರ್.ಟಿ ವತಿಯಿಂದ ನಿಷ್ಠಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಎಲ್ಲಾ ಶಿಕ್ಷಕರ ಮತ್ತು ಶಾಲಾ ಮುಖ್ಯಸ್ಥರ ವೃತ್ತಿಪರ ಸಾಮರ್ಥ್ಯವನ್ನು ಬೆಳೆಸುವ ಗುರಿ ಹೊಂದಿದೆ. ನಿಷ್ಠಾ ಆನ್ಲೈನ್ ತರಬೇತಿಯು ಕನ್ನಡ, ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಲಭ್ಯವಿದ್ದು, ಸದರಿ ಇಂಗ್ಲೀಷ್ ಮಾಡ್ಯೂಲ್ಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲಾಗಿದೆ. ರಾಷ್ಟçಹಂತದಲ್ಲಿ ಮಾನ್ಯ ಗೌರವಾನ್ವಿತ ಕೇಂದ್ರ ಶಿಕ್ಷಣ ಮಂತ್ರಿಗಳು, ಭಾರತ ಸರ್ಕಾರದವರು ದಿನಾಂಕ 06.10.2020 ರಂದು ನಿಷ್ಠಾ ಆನ್ಲೈನ್ ಮಾಡ್ಯೂಲ್ಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.

ಜುಲೈ, 5-2021 ರಂದು ಅರ್ಥಗ್ರಹಿಕೆ ಮತ್ತು ಪ್ರಾವೀಣ್ಯತೆಯೊಂದಿಗೆ ಓದುವಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟಿಯ ಉಪಕ್ರಮ "ನಿಪುಣ್ ಭಾರತ್ ಮಿಷನ್" ಅನ್ನು ಪ್ರಾರಂಭಿಸಿದ್ದಾರೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯದ ಸಾರ್ವತ್ರಿಕ ಸ್ವಾಧೀನವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುವ ವಾತವರಣವನ್ನು ರಚಿಸಿ ಇದರಿಂದಾಗಿ ಪ್ರತಿ ಮಗುವು 2026-27 ರ ವೇಳೆಗೆ 3ನೇ ತರಗತಿಯ ಅಂತ್ಯದೊಳಗೆ ಓದುವ, ಬರವಣಿಗೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪೇಕ್ಷಿತ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

2) ನಿಷ್ಠಾ 1.0 :-

2020-21 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ಲೈನ್ ದೀಕ್ಷಾ ಪೋರ್ಟಲ್‌ ನಲ್ಲಿ ನೀಡಲಾಗಿದೆ.

ಎಸ್.ಎಸ್.ಎ 2020-21 ನೇ ಸಾಲಿಗಾಗಿ ಪಿ.ಎ.ಬಿ ಯಿಂದ ಅನುಮೋದನೆಯಾಗಿರುವಂತೆ 1,52,733 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಿಷ್ಠಾ ತರಬೇತಿಯನ್ನು ನವೆಂಬರ್ನಿಂದ ಆನ್ಲೈನ್ನಲ್ಲಿ ನೀಡಲಾಗಿದ್ದೂ ಒಟ್ಟು, ಮಾರ್ಚ್ 3ನೇ ವಾರದಲ್ಲಿ ಒಟ್ಟು 18 ಮಾಡ್ಯೂಲ್ಗಳನ್ನು ಎಲ್ಲರೂ ಪರಿಚಯಿಸಿಕೊಂಡಿದ್ದೂ 1,46,487 ಶಿಕ್ಷಕರು ಪೂರ್ಣಗೊಳಿಸಿರುತ್ತಾರೆ.

ಮಾರ್ಚ್ ಅಂತ್ಯಕ್ಕೆ ಪ್ರಗತಿ ವಿವರ ಈ ಕೆಳಗಿನಂತಿದೆ.

ತರಬೇತಿ ಹೆಸರುಭೌತಿಕ ಗುರಿ18 ಕೋರ್ಸ್ ಪೂರ್ಣಗೊಳಿಸಿರುವ ಶಿಕ್ಷಕರ ಸಂಖ್ಯೆ
ನಿಷ್ಠಾ ಆನ್ ಲೈನ್ ತರಬೇತಿ1,52,7331,46,487
ನಿಷ್ಠಾ-3.0 (NEP): 2021-22 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ಲೈನ್ ದೀಕ್ಷಾ ಪೋರ್ಟಲ್‌ ನಲ್ಲಿ ನೀಡಲಾಗುತ್ತಿರುವ ಈ ತರಬೇತಿಗಳಲ್ಲಿ ಎನ್.ಇ.ಪಿ-2020ರ ಆಶಯಗಳನ್ನು ಒಳಗೊಂಡಿದ್ದು ರಾಜ್ಯಾದ್ಯಾಂತ ಶಿಕ್ಷಕರು ತರಬೇತಿಯನ್ನು ಪಡೆಯುತ್ತಿದ್ದಾರೆ. ನಿಷ್ಠಾ-3.0 (FLN): ಕಾರ್ಯಕ್ರಮ ಅಕ್ಟೊಬರ್ 01 ರಿಂದ ಪ್ರಾರಂಭಿಸಲಾಗಿದ್ದೂ ದಿನಾಂಕ: 30:04:2022 ರ ಅಂತ್ಯಕ್ಕೆ ಕೋರ್ಸ್ ತರಬೇತಿ ಹೊಂದಿ ಪ್ರಮಾಣ ಪತ್ರವನ್ನು ಪಡೆದವರ ಸಂಖ್ಯೆ ಕೆಳಗಿನಂತಿವೆ. ಒಟ್ಟಾರೆಯಾಗಿ ನಿಷ್ಠಾ 3.0 ತರಬೇತಿಯಡಿಯಲ್ಲಿ 2021-22 ಸಾಲಿಗೆ ಗುರಿ 51056 ಇದ್ದು 66707 ಗುರಿ ಸಾಧಿಸಿದ್ದು,60% ಪ್ರಗತಿ ಸಾಧಿಸಲಾಗಿದೆ.

3) ಇಂಗ್ಲಿಷ್ ನಲಿ-ಕಲಿ ತರಬೇತಿ
ಇಂಗ್ಲಿಷ್ ನಲಿ-ಕಲಿ ಲೆವೆಲ್-01

ಪ್ರಸ್ತುತ ನಲಿ-ಕಲಿ ಬೋಧನಾ ವಿಧಾನಗಳಲ್ಲಿ ಇಂಗ್ಲೀಷ್ನ್ನು ಕಲಿಸಲಾಗುತ್ತಿದೆ. ಮಾತೃಭಾಷೆಯ ಮೂಲ ಪರಿಸರದ ಜೊತೆಯಲ್ಲಿಯೇ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಇದರ ಉದ್ದೇಶವಾಗಿದೆ.

ಶಿಕ್ಷಕರಲ್ಲಿ ಮತ್ತು ವಿಧ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ಬೋಧನಾ ಕೌಶಲ್ಯವನ್ನು ತಳಹಂತ/ಮೂಲಹAತದಲ್ಲಿಯೇ ಭದ್ರಪಡಿಸುವುದು ಈ ತರಬೇತಿಯ ಉದ್ದೇಶವಾಗಿದೆ. ಇಂಗ್ಲೀಷ್ ನಲಿ-ಕಲಿ ತರಬೇತಿಯಲ್ಲಿ 1,068 ಜನರಿಗೆ ಎಂ.ಆರ್.ಪಿ. ತರಬೇತಿಯನ್ನು ಹಾಗೂ ಇದುವರೆಗೆ ಬ್ಲಾಕ್ವಾರು 37,398 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಕ್ರ.ಸಂತರಬೇತಿ ವಿವರಭೌತಿಕ ಗುರಿಭೌತಿಕ ಸಾಧನೆ
1ಎಂ.ಆರ್.ಪಿ ತರಬೇತಿ1,1221,068
2ಶಿಕ್ಷಕರ ತರಬೇತಿ58,36237,398
ಒಟ್ಟು59,48438,466
ಇಂಗ್ಲಿಷ್ ನಲಿ-ಕಲಿ ಲೆವೆಲ್-02
ರ ತರಬೇತಿ 2021-22 ನೇ ಸಾಲಿನ ಎಸ್.ಆರ್.ಪಿ, ಎಂ.ಆರ್.ಪಿ ಹಾಗೂ ಶಿಕ್ಷಕರ ತರಬೇತಿಯು ಒಟ್ಟು ಭೌತಿಕ ಗುರಿಯು 2732 ಇದ್ದು 2545 ಗುರಿ ಸಾಧಿಸಿದ್ದು, 93% ಪ್ರಗತಿ ಸಾಧಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿಪರ ಅಭಿವೃದ್ದಿ ತರಬೇತಿ (5 ದಿನಗಳು)

ಮಾನ್ಯ ಆಯುಕ್ತರ ಸಭೆಯಲ್ಲಿ ತಿಳಿಸಿದಂತೆ ಈ ಸಂಬಂಧ ಮಾರ್ಚ್ 31-2021 ರ ಅಂತ್ಯದವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಲಿಕಲಿ ಸಮಗ್ರ, ಜೀವನ ಕೌಶಲ ಸೇರಿದಂತೆ ಶಿಕ್ಷಕರಿಗೆ ಮುಖಾಮುಖಿ ಹಾಗೂ ತಂತ್ರಜ್ಞಾನ ಆಧಾರಿತ ಗೂಗಲ್ ಮೀಟ್/ಮೈಕ್ರೋಸಾಫ್ಟ್/ಜೂಮ್ ಇತ್ಯಾದಿ ಮೀಟಿಂಗ್ ಆಪ್ಗಳನ್ನು ಬಳಸಿ ಕಾರ್ಯಗಾರಗಳನ್ನು ನಡೆಸಲಾಗಿದೆ. ಇಲ್ಲಿಯವರೆಗೆ ಒಟ್ಟು 1,21,933 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಕ್ರ.ಸಂತರಬೇತಿ ವಿವರಭೌತಿಕ ಗುರಿಭೌತಿಕ ಸಾಧನೆ
1ಮುಖಾಮುಖಿ ತರಬೇತಿ ಮತ್ತು ಆನ್ಲೈನ್ ತರಬೇತಿ1,52,7331,21,933
(4) ಎಸ್.ಡಿ.ಎಂ.ಸಿ ತರಬೇತಿ:

2020-21 ನೇ ಸಾಲಿನ ಎಸ್.ಡಿ.ಎಂ.ಸಿ ಟೆಲೆಕಾನ್ಫರೆನ್ಸ್ ಮುಖ್ಯ ಶಿಕ್ಷಕರು, ಶಿಕ್ಷಕರ ಕಾರ್ಯಾಗಾರವು 10,070 ಭೌತಿಕ ಪ್ರಗತಿಯನ್ನು ಬಿ.ಆರ್.ಪಿ/ಆರ್.ಪಿ ಟೆಲಿಕಾನ್ಫರೆನ್ಸ್ ಕಾರ್ಯಾಗಾರವು 5,100 ಭೌತಿಕ ಪ್ರಗತಿಯನ್ನು, ಹೋಬಳಿ ಹಂತದ ತರಬೇತಿಯು ಒಟ್ಟು 24,761 ಭೌತಿಕ ಗುರಿಯನ್ನು ಸಾಧಿಸಿರುತ್ತದೆ. ಒಟ್ಟು 39,931 ಭೌತಿಕ ಪ್ರಗತಿಯನ್ನು ಸಾಧಿಸಲಾಗಿದೆ. ಎಸ್.ಡಿ.ಎಂ.ಸಿ ತರಬೇತಿಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಿಂದ ಒಟ್ಟು 47,525 ಭೌತಿಕ ಗುರಿಯನ್ನು ಹೊಂದಿದ್ದು, ಮಾರ್ಚ್ ಅಂತ್ಯಕ್ಕೆ 43,699 ಶಾಲೆಗಳ ಭೌತಿಕ ಗುರಿಯನ್ನು ಸಾಧಿಸಿರುತ್ತದೆ. ಇದುವರೆಗೂ ಒಟ್ಟು ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಿಂದ 7,29,199 ಸದಸ್ಯರು ತರಬೇತಿಯನ್ನು ಪಡೆದಿರುತ್ತಾರೆ.

5. ಶಿಕ್ಷಕರ ಸಮಾಲೋಚನಾ ಸಭೆಗಳು
ಡಿ.ಎಸ್.ಇ.ಆರ್.ಟಿ ಹಾಗೂ ಸ್ಟರ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ 2021-22 ಸಾಲಿನ ಮೊದಲ ಕ್ಲಸ್ಟರ್ ಶಿಕ್ಷಕರ ಸಮಾಲೊಚನಾ ಸಭೆಯನ್ನು ದಿ: 29-09-2021 ರಂದು ಆನ್ಲೈನ್ ಮೂಲಕ ಆಯೋಜಿಸಿದ್ದೂ ಒಟ್ಟು 1,32,110 ಶಿಕ್ಷಕರು ಹಾಗೂ ಎರಡನೇ ಕ್ಲ.ಶಿ.ಸ. ಸಭೆಯನ್ನು ದಿ: 29-10-2021ರಂದು ಆಯೋಜಿಸಿದ್ದು, CSAS ಮತ್ತ NAS, ಕಲಿಕಾಫಲಗಳು, ಬೋಧನಾ ಕಲಿಕಾ ಪ್ರಕ್ರಿಯೆಗಳ ಆಧಾರದ ಮೇಲೆ ನೀಡಲಾಗಿದ್ದು ಒಟ್ಟು 89,205 ಶಿಕ್ಷಕರು ಭಾಗವಹಿಸಿರುತ್ತಾರೆ. ಮೂರನೇ ಕ್ಲ.ಶಿ.ಸ. ಸಭೆಯನ್ನು ದಿ: 29-11-2021 ರಂದು ಆಯೋಜಿಸಿದ್ದು, ಒಟ್ಟು 1,01,322 ಶಿಕ್ಷಕರು ಭಾಗವಹಿಸಿರುತ್ತಾರೆ. ನಾಲ್ಕನೇ ಕ್ಲ.ಶಿ.ಸ. ಸಭೆಯನ್ನು ದಿ: 29-12-2021 ರಂದು "ಕೌಶಲ ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ (ವಿವರಣೆ) & LIC-2 ರ ವಿಷಯ ವಸ್ತು: ಕಲಿಕಾ ನಷ್ಟವನ್ನು ಪರಿಹರಿಸುವ ಭೋಧನಾ ತಂತ್ರಗಳು" ವಿಷಯದ ಆಧಾರಿತ ಆಯೋಜಿಸಿದ್ದು, ಒಟ್ಟು 99,043 ಶಿಕ್ಷಕರು ಭಾಗವಹಿಸಿರುತ್ತಾರೆ. ಐದನೇ ಕ್ಲ.ಶಿ.ಸ. ಸಭೆಯು ದಿ: 29-01-2022 ರಂದು ನೀಡಲಾಗಿದ್ದು ಒಟ್ಟು 92,131 ಶಿಕ್ಷಕರು ಭಾಗವಹಿಸಿರುತ್ತಾರೆ. ಉರ್ದು ಮಾಧ್ಯಮದಲ್ಲಿ 1,2 ಮತ್ತು 3ನೇ ಸಭೆಯಲ್ಲಿ ಒಟ್ಟು 6144 ಶಿಕ್ಷಕರು ಹಾಗೂ ಮರಾಠಿ ಮಾಧ್ಯಮದಲ್ಲಿ 1,2 ಮತ್ತು 3ನೇ ಸಭೆಯಲ್ಲಿ ಒಟ್ಟು 294 ಶಿಕ್ಷಕರು ಭಾಗವಹಿಸಿರುತ್ತಾರೆ.

ಪ್ರೌಢವಿಭಾಗ

1. ಎಸ್.ಎಸ್.ಕೆ ಪ್ರೌಢವಿಭಾಗದಿಂದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಆನ್ಲೈನ್ ದೀಕ್ಷಾ ಪೊರ್ಟ್ಲ್ ಮೂಲಕ ನೀಡಲಾಗುತ್ತಿರುವ ನಿಷ್ಠಾ-2.0 ತರಬೇತಿಗಳು ಎನ್.ಇ.ಪಿ-2020ರ ಆಶಯಗಳನ್ನು ಒಳಗೊಂಡಿದ್ದು ರಾಜ್ಯಾದ್ಯಾಂತ ಶಿಕ್ಷಕರು ತರಬೇತಿಯನ್ನು ಪಡೆಯುತ್ತಿದ್ದಾರೆ.

ನಿಷ್ಠಾ-2.0

ತರಬೇತಿಯ ಎಲ್ಲಾ 12 ಕೋರ್ಸ್ಗಳು ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಉಸ್ತುವಾರಿ ಅಧಿಕಾರಿಗಳು ಈ ತರಬೇತಿಯನ್ನು ಪಡೆಯಲು ಪ್ರೇರೇಪಿಸಲಾಗುತ್ತದೆ ಹಾಗೂ ಜಿಲ್ಲಾ ಹಂತದ ನಿಷ್ಠಾ ಸಮಿತಿಯ ಮೂಲಕ ತಾಂತ್ರಿಕ ಬೆಂಬಲವನ್ನು ನೀಡಲಾಗುತ್ತದೆ. ಕೋರ್ಸ್ಗಳನ್ನು ಪೂರ್ಣಗೊಳಿಸಿದ ಭೌತಿಕ ಸಂಖ್ಯೆ ಹಾಗೂ ಆರ್ಥಿಕ ವಿವರವನ್ನು ಮೇ-2022 ರಲ್ಲಿ ನೀಡಲಾಗುವುದು. ದಿನಾಂಕ: 30:04:2022 ಅಂತ್ಯಕ್ಕೆ 12 ಕೋರ್ಸ್‌ ಗಳ ತರಬೇತಿ ಹೊಂದಿ ಪ್ರಮಾಣ ಪತ್ರವನ್ನು ಪಡೆದವರ ಸಂಖ್ಯೆ ಕೆಳಗಿನಂತಿವೆ. ನಿಷ್ಠಾ-2.0 3 ನೇ ಬ್ಯಾಚ್ ತರಬೇತಿಯು ಪ್ರಗತಿಯಲ್ಲಿರುತ್ತದೆ, ಒಟ್ಟಾರೆಯಾಗಿ ಈ ತರಬೇತಿಯಡಿಯಲ್ಲಿ 2021-22ನೇ ಸಾಲಿಗೆ ಗುರಿ 58249 ಇದ್ದು 53879 ಗುರಿ ಸಾಧಿಸಿದ್ದು, 89% ಪ್ರಗತಿ ಸಾಧಿಸಲಾಗಿದೆ.

2. ಗಣಿತ ಮತ್ತು ವಿಜ್ಞಾನ ಭೋದಿಸುವ ಪ್ರೌಢಶಾಲಾ ಶಿಕ್ಷಕರಿಗೆ IISc ತರಬೇತಿ:

2021-22 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಒಟ್ಟು 1000 ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ TDC-IISc ಕುದಾಪುರ ಕ್ಯಾಂಪಸ್, ಚಳ್ಳಕೆರೆ ತಾ|| ಇಲ್ಲಿ 10 ದಿನಗಳ ಪಠ್ಯಾಧಾರಿತ ಸನಿವಾಸ ತರಬೇತಿ ನೀಡಲು ಸರ್ಕಾರದಿಂದ ಅನುಮೋದನೆಯಾಗಿದ್ದು, ಸದರಿಯಂತೆ ದಿನಾಂಕ 29-08-2021 ರಿಂದ ತರಬೇತಿ ಪ್ರಾರಂಭವಾಗಿದ್ದು ಮೇ 25ರ ಅಂತ್ಯಕ್ಕೆ 1002 ಶಿಕ್ಷಕರು ತರಬೇತಿ ಪಡೆದಿರುತ್ತಾರೆ. 2022-23 ನೇ ಸಾಲಿಗೆ MoU ಮಾಡಿಕೊಂಡು ಈ ತರಬೇತಿಯನ್ನು ಮುಂದುವರೆಸುವ ಪ್ರಕ್ರಿಯೆ ನಡೆಯುತ್ತದೆ.

1. 2020-21 ನೇ ಸಾಲಿನಲ್ಲಿ 8 ನೇ ತರಗತಿ ಗಣಿತ & ವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಎನ್.ಸಿ.ಇ.ಆರ್.ಟಿ ಪಠ್ಯ ಆಧಾರಿತ ಆನ್ಲೈನ್ನಲ್ಲಿ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗಿದ್ದೂ ಒಟ್ಟು 8,000 ಭೌತಿಕ ಗುರಿಯನ್ನು ಹೊಂದಿದ್ದೂ 7,937 ಶಿಕ್ಷಕರು ತರಬೇತಿಯನ್ನು ಪಡೆದಿದ್ದಾರೆ.

2. 2020-21 ನೇ ಸಾಲಿನಲ್ಲಿ ಗಣಿತ & ವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಐ.ಐ.ಎಸ್.ಸಿ ಕುದಾಪುರ ಇಲ್ಲಿ ಎನ್.ಸಿ.ಇ.ಆರ್.ಟಿ ಪಠ್ಯ ಆಧಾರಿತ ಮುಖಾಮುಖಿಯಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗಿದ್ದೂ ಒಟ್ಟು 465 ಶಿಕ್ಷಕರು ತರಬೇತಿಯನ್ನು ಪಡೆದಿದ್ದಾರೆ.

ನಲಿ-ಕಲಿ Joyful Learning

ಗುಣಾತ್ಮಕ ಶಿಕ್ಷಣವನ್ನು ಪ್ರಭುತ್ವ ಮಟ್ಟದಲ್ಲಿ ಪ್ರಾಥಮಿಕ ಹಂತದಿಂದಲೇ ನೀಡಬೇಕೆಂಬ ಸದಾಶಯದೊಂದಿಗೆ ಅಳವಡಿಸಿಕೊಳ್ಳಲಾದ ಅನೇಕ ಕಾರ್ಯಕ್ರಮಗಳಲ್ಲಿ ನಲಿಕಲಿ ವಿಧಾನ ಪ್ರಮುಖವಾಗಿದೆ. ಸಂತಸ ಕಲಿಕೆ, ಸ್ವವೇಗ ಕಲಿಕೆ, ಸ್ವಕಲಿಕೆ, ಬಹುವರ್ಗಕಲಿಕೆ ಹಾಗೂ ಬಹುಹಂತದ ಕಲಿಕೆ ಎಂಬ ಐದು ಪ್ರಧಾನ ತತ್ವಗಳನ್ನು ಆಧರಿಸಿ ರೂಪುಗೊಂಡ ಶಿಶು ಹಾಗೂ ಶಿಕ್ಷಕ ಸ್ನೇಹಿ, ಚಟುವಟಿಕೆ ಆಧಾರಿತ, ಅನುಭವಕ್ಕೆ ಹೆಚ್ಚು ಒತ್ತು ನೀಡಿರುವ ಬೋಧನಾ-ಕಲಿಕಾ ಪದ್ಧತಿಯೇ ನಲಿಕಲಿ.

ಹುಟ್ಟು ಮತ್ತು ಬೆಳವಣಿಗೆಯ ಸಂಕ್ಷಿಪ್ತ ವಿವರ:

ಶಿಕ್ಷಣ ಕ್ಷೇತ್ರವನ್ನು ನಿರಂತರವಾಗಿ ಕಾಡುತ್ತಿರುವ ಬಹುವರ್ಗ ಹಾಗೂ ಬಹುಹಂತದ ಕಲಿಕೆಯ ಸವಾಲುಗಳನ್ನು ಎದುರಿಸಲು ಅವಶ್ಯಕವಾದ ಪರಿಹಾರಗಳನ್ನು ಕಂಡುಕೊಳ್ಳಲು 1995-96 ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಶಿಕ್ಷಕರ ತಂಡವು ಯುನಿಸೆಫ್ ಸಹಯೋಗದಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿಗೆ ಭೇಟಿ ನೀಡಿತು. ಮದನಪಲ್ಲಿ ತಾಲ್ಲೂಕಿನ ರಿಷಿವ್ಯಾಲಿಯಲ್ಲಿ ನಡೆಯುತ್ತಿದ್ದ ಆಶ್ರಿತ ಶಾಲೆ (ಸ್ಯಾಟಿಲೈಟ್ ಸಕೂಲ್) ಗಳಿಗೆ ಭೇಟಿ ನೀಡಿದ ಈ ತಂಡವು ಅಲ್ಲಿ ಅಳವಡಿಸಿದ ಚಟುವಟಿಕೆ, ಕಲಿಕಾ ಸಾಮಗ್ರಿ ಮತ್ತು ತರಗತಿ ನಿರ್ವಹಣಾ ಕ್ರಮಗಳ ಬಗ್ಗೆ ಅಧ್ಯಯನ ಮಾಡಿತು. ನಂತರ ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಚಟುವಟಿಕೆ, ಕಲಿಕಾ ಸಾಮಗ್ರಿ, ತರಗತಿ ನಿರ್ವಹಣಾ ಕ್ರಮವನ್ನು ಮಾರ್ಪಾಡು ಮಾಡಿಕೊಂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಯಿತು.

ನಲಿಕಲಿ ವಿಧಾನದ ವಿಶೇಷತೆ:

ನಲಿಕಲಿ ಬೋಧನಾ ಕಲಿಕಾ ಪ್ರಕ್ರಿಯೆಯು ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ಗುಣಾತ್ಮಕ ಕಲಿಕೆಯನ್ನು ಪ್ರಭುತ್ವಮಟ್ಟದಲ್ಲಿ ಉಂಟು ಮಾಡಲು ಅಗತ್ಯವಿರುವ ಅನೇಕ ಸಾಧನೋಪಕರಣಗಳನ್ನು ಒಳಗೊಂಡಿದೆ. ಈ ಸಾಧನೋಪಕರಣಗಳನ್ನು ಗುರ್ತಿಸಲು ಬಹುವರ್ಗ, ಬಹುಹಂತದ ಕಲಿಕೆ, ಕಲಿಕಾಂಶಗಳು, ಕಲಿಕಾಗೋಪುರ, ಮೈಲುಗಲ್ಲು, ಚಟುವಟಿಕೆ ಎಂಬ ವಿಶೇಷ ಹೆಸರು/ ಪದಗಳನ್ನು ಬಳಸಲಾಗಿದೆ. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 1-3 ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ 5 ದಿನಗಳ ತರಬೇತಿಯನ್ನು ನೀಡಲಾಗಿದೆ.

ಪ್ರತಿ ಜಿಲ್ಲೆಯಿಂದ ಆಯ್ಕೆಯಾದ 16 ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ತರಬೇತಿ ಸಾಹಿತ್ಯವನ್ನು ರಚಿಸಲಾಗಿದೆ.

ತಾಲ್ಲೂಕು ಹಂತದಲ್ಲಿ ಡಯಟ್ ಮೇಲ್ವಿಚಾರಣೆಯಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. 2017-18 ಹಾಗೂ 2018-19ನೇ ಶೈಕ್ಷಣಿಕ ವರದಿಯಂತೆ ಸಮಗ್ರ ಶಿಕ್ಷಣ ಅಭಿಯಾನದಡಿಯಲ್ಲಿ ನಲಿ-ಕಲಿ ಸಂಭ್ರಮ ಕನ್ನಡ, ಉರ್ದು ಭಾಷೆ 75,327 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಗುರುಚೇತನ ತರಬೇತಿ ಅಡಿ -ಶಿಕ್ಷಕರಿಗೆ ಇಂದು ಅವರಿಗೆ ಅಗತ್ಯವಿದ್ದಲ್ಲಿ ಆದ್ಯತೆ ನೀಡಿ ಆಯ್ಕೆ ಆಧಾರಿತ ತರಬೇತಿ ಹೊಂದಲು ಅವಕಾಶವಿದೆ.

ಓದು ಕರ್ನಾಟಕ

4 ರಿಂದ 5ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ ಓದು ಕರ್ನಾಟಕ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಪ್ರಥಮ್ ಸಂಸ್ಥೆ ಹಾಗೂ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರ ಮಾರ್ಗದರ್ಶನದಂತೆ ಡಯಟ್ನಾ ನೋಡಲ್ ಅಧಿಕಾರಿಗಳೊಂದಿಗೆ ತಮ್ಮ ಜಿಲ್ಲೆಗಳಿಗೆ ನಿಗದಿಯಾದ ಗುರಿಯನ್ನು ವಿಭಜಿಸಿಕೊಂಡು ವ್ಯವಸ್ಥಿತವಾಗಿ ಗುಣಾತ್ಮಕವಾಗಿ ಕಾರ್ಯಾಗಾರವನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗುತ್ತಿದೆ.

ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ

Learning Mathematics – A mission Programme

4 ಮತ್ತು 5ನೇ ತರಗತಿಗಳಿಗೆ ಚಟುವಟಿಕೆ ಆಧಾರಿತ ಗಣಿತ ಕಲಿಕಾ ಬೋಧನಾ ವಿಧಾನವನ್ನು ವಿಸ್ತರಿಸುವುದು

ಅಕ್ಷರ ಪ್ರತಿಷ್ಠಾನದ ಸಹಯೋಗದೊಂದಿಗೆ U್ಪಣಿತ ಕಲಿಕಾ ಆಂದೋಲನಾ ಕಾರ್ಯಕ್ರಮವನ್ನು ರಾಜ್ಯದ 6 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಗದಗ ಹಾಗೂ ಧಾರವಾಡದಲ್ಲಿನ 6559 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ವರ್ಷಾವಾರು 1.47 ಲಕ್ಷ ವಿದ್ಯಾರ್ಥಿಗಳಂತೆ ಮೂರು ವರ್ಷಕ್ಕೆ ರೂ. 16.8 ಕೋಟಿಗಳ ವೆಚ್ಚವನ್ನು ನಿಗಧಿಪಡಿಸಿದೆ. ಸವಿವರವಾದ ಒಪ್ಪಂದವನ್ನು ಅಕ್ಷರ ಪ್ರತಿಷ್ಠಾನದೊಂದಿಗೆ ಮಾಡಿಕೊಂಡಿದೆ. ಸರ್ವ ಶಿಕ್ಷಣ ಅಭಿಯಾನದಡಿ ಲಭ್ಯವಿರುವ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

2017-18ನೇ ಸಾಲಿನಲ್ಲಿ ರಾಜ್ಯದ 06 ಜಿಲ್ಲೆಗಳಲ್ಲಿ ಅಕ್ಷರ ಪ್ರತಿಷ್ಠಾನ ಸಹಯೋಗದೊಂದಿಗೆ 2ನೇ ಹಂತದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 4 ಮತ್ತು 5ನೇ ತರಗತಿ ಬೋಧಿಸುತ್ತಿರುವ ಗಣಿತ ಶಿಕ್ಷಕರಿಗೆ 03 ದಿನಗಳ ತರಬೇತಿಯನ್ನು ನೀಡಲಾಗಿದೆ.

2018-19ನೇ ಸಾಲಿನಲ್ಲಿ 3ನೇ ಹಂತದ 7 ಹೊಸ ಜಿಲ್ಲೆಗಳು ಸೇರಿದಂತೆ 20 ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

2019-20ನೇ ಸಾಲಿನಲ್ಲಿ ಕಳೆದ ಸಾಲಿನ ಇಕಿUIP ಅಡಿ ಮಂಜೂರಾದ 700 ಲಕ್ಷ ಅನುದಾನದ ಅಂಶವನ್ನು ಬಳಸಿ ತರಬೇತಿ ಸಂಘಟಿಸಲಾಗುತ್ತಿದೆ.

ಕಾರ್ಯಕ್ರಮದ ಉದ್ದೇಶಗಳು:

 1. ಈ ಕಾರ್ಯಕ್ರಮವು ಪ್ರಾಥಮಿಕ ಶಾಲಾ ಹಂತದಲ್ಲಿ ಗಣಿತ ವಿಷಯದ ಪರಿಣಾಮಕಾರಿ ಬೋಧನೆ ಹಾಗೂ ಕಲಿಕೆಗೆ ಅನುಕೂಲವಾಗುವಂತೆ ಬೆಂಬಲಿಸುವ ಕಾರ್ಯಕ್ರಮವಾಗಿರುತ್ತದೆ.
 2. ಈ ಕಾರ್ಯಕ್ರಮಕ್ಕೆ ಗಣಿತ ಕಿಟ್ಗೆಳನ್ನು ಪೂರೈಸಿ ಗಣಿತ ವಿಷಯ ಬೋಧನೆಗೆ ಬಳಕೆ ಮಾಡುವುದು.
 3. ಪ್ರತಿ ವರ್ಷಾಂತ್ಯದಲ್ಲಿ 2014ರ ವರದಿಯಲ್ಲಿರುವ ಗಣಿತ ವಿಷಯದ ಫಲಿತಾಂಶದಲ್ಲಿ ಶೇಕಡ 10 ರಷ್ಟು ಈ ಕಾರ್ಯಕ್ರಮದಿಂದ ಉತ್ತಮಗೊಳಿಸುವುದು.
 4. ಗಣಿತ ವಿಷಯ ಬೋಧನೆಗೆ ಸುದೀರ್ಘವಾದ ಬದಲಾವಣೆಯನ್ನು ಶಿಕ್ಷಕರಲ್ಲಿ ತರುವುದು.

2019-20 ಎಸ್.ಎಸ್.ಎ ವಿಭಾಗದ ಶಿಕ್ಷಕರ ಮತ್ತು ಎಸ್.ಡಿ.ಎಂ.ಸಿ ಸದಸ್ಯರ ತರಬೇತಿ ಕಾರ್ಯಕ್ರಮಗಳು:

1 ರಿಂದ 8ನೇ ತರಗತಿ ಬೋಧಿಸುವ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಗುರುಚೇತನ ಕಾರ್ಯಕ್ರಮವನ್ನು ಜಾರಿಗೆ ತಂದಿರುತ್ತದೆ. 2017-18ನೇ ಸಾಲಿನಲ್ಲಿ 1,12,530 ಶಿಕ್ಷಕರು ಹಾಗೂ 2018-19ನೇ ಸಾಲಿನಲ್ಲಿ 45,834 ಶಿಕ್ಷಕರು ವೃತ್ತಿಪರ ಅಭಿವೃದ್ಧಿಗಾಗಿ ತರಬೇತಿಯನ್ನು ಪಡೆದಿರುತ್ತಾರೆ.

2019-20ನೇ ಸಾಲಿನಲ್ಲಿ 1,66,135 ಶಿಕ್ಷಕರಿಗೆ 05 ದಿನಗಳ ಕಾರ್ಯಾಗಾರ ಮತ್ತು 05 ದಿನಗಳ ಹೋಬಳಿ ಹಂತದ ಸಮಾಲೋಚನಾ ಕಾರ್ಯಾಗಾರಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 1-3 ನೇ ತರಗತಿ ವಿಭಾಗದ ಆರಂಭಿಕ ಕಲಿಕೆಗೆ 15,000 ಶಿಕ್ಷಕರನ್ನು, ಮಾನವರನ್ನು ಏಕೆ ಸುಶಿಕ್ಷಿತರನ್ನಾಗಿ ಮಾಡುವುದು ಈ ತರಬೇತಿಗೆ 15,000 ಶಿಕ್ಷಕರನ್ನು ಜೀವನ ಕೌಶಲ ತರಬೇತಿಗೆ 13,692 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 4-5 ನೇ ತರಗತಿ ವಿಭಾಗದ ಜೀವನ ಕೌಶಲ ತರಬೇತಿಗೆ 20,000 ಶಿಕ್ಷಕರಿಗೆ, ಗುರುಚೇತನ ತರಬೇತಿ ಅಡಿಯಲ್ಲಿ 20,541 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 6-8 ನೇ ತರಗತಿ ವಿಭಾಗದ ಗುರುಚೇತನ ತರಬೇತಿ ಅಡಿಯಲ್ಲಿ 40,000 ಶಿಕ್ಷಕರಿಗೆ, 7ನೇ ತರಗತಿ ಗಣಿತ ಮತ್ತು ವಿಜ್ಞಾನ ಎನ್.ಸಿ.ಇ.ಆರ್.ಟಿ ಪಠ್ಯಾಧಾರಿತ 41,902 ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕ್ಲಸ್ಟರ್ ಸಮಾಲೋಚನೆ ಸಭೆಯಲ್ಲಿ ಒಟ್ಟು 166135 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೊಸದಾಗಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ(2015-16 ಹಾಗೂ 2018-19 ರ ಬ್ಯಾಚ್ವಾನರು) ಒಟ್ಟು 7,755 ಶಿಕ್ಷಕರಿಗೆ ಇಂಡಕ್ಷನ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಹಾಗೂ 2019-20 ರಲ್ಲಿ ಹೊಸದಾಗಿ ನೇಮಕವಾಗುವ ಅಂದಾಜು 10,000 ಶಿಕ್ಷಕರಿಗೆ ಇಂಡಕ್ಷನ್ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಎನ್.ಪಿ.ಇ.ಪಿ ಅಡಿಯಲ್ಲಿ ರಾಜ್ಯದ್ಯಾಂತ ಎಲ್ಲಾ ಡಯಟ್ ನೋಡಲ್ ಅಧಿಕಾರಿಗಳ ಮೂಲಕ ವ್ಯವಸ್ಥಿತವಾಗಿ ಮಾಹೆವಾರು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ನೀತಿಯ ಆಶಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಬಂಧಿಸಿದ ಪರಿಕಲ್ಪನೆಗನುಸಾರವಾಗಿ ಮಾಡ್ಯೂಲ್ಗುಳನ್ನು ರಚಿಸಲಾಗುತ್ತಿದೆ. ಜಿಲ್ಲಾ, ತಾಲ್ಲೂಕು, ಶಾಲಾ ಹಂತಗಳಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ರಾಷ್ಟ್ರೀಯ ಪ್ರತಿಭ್ವಾನೇಷಣಾ ಪರೀಕ್ಷೆ

National Talent Search Examination (NTSE)

10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (National Talent Search Examination, NTSE) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು NCERT, New Delhi, ರವರ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

NTSE ಪರೀಕ್ಷೆಗೆ ಅರ್ಹತೆ (Eligibility) :- :- ಪರೀಕ್ಷೆಗೆ ಅರ್ಜಿ ಹಾಕುವ ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

NTSE ಪರೀಕ್ಷೆಯ ಉದ್ದೇಶಗಳು:

 • 10 ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.
 • ಆಯ್ಕೆಯಾದವರಿಗೆ ಆರ್ಥಿಕ ನೆರವು ನೀಡಿ, ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು.
 • ಈ ಮೂಲಕ ಮಕ್ಕಳಲ್ಲಿ ಉತ್ತಮವಾಗಿ ದೇಶಸೇವೆ ಮಾಡುವ ಮನೋಭಾವ ಬೆಳೆಸುವುದು.

ಈ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತದೆ.

ಪ್ರಥಮ ಹಂತ: ಪ್ರಥಮ ಹಂತದ ಪರೀಕ್ಷೆಯನ್ನು ಪ್ರತಿ ವರ್ಷ ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. 2019-20ನೇ ಸಾಲಿನ NTSE ಪರೀಕ್ಷೆಯು ದಿನಾಂಕ: 03-11-2019 ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದೆ. 2019-20ನೇ ಸಾಲಿನ NTSE ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300

ಮೊದಲನೇ ಹಂತದ ಪರೀಕ್ಷೆಯು 2 ವಿಷಯಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ,

 • ಅ) ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)
 • ಈ ಪತ್ರಿಕೆಯಲ್ಲಿ 100 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 100 ಅಂಕಗಳು. ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ , ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನು ಅಳೆಯುವ ಪ್ರಶ್ನೆಗಳಿರುತ್ತವೆ.
 • ಆ) ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)
 • ಈ ಪತ್ರಿಕೆಯಲ್ಲಿ 100 ಅಂಕಗಳಿಗೆ ಒಟ್ಟು 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 40 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ಪೌರನೀತಿ ಮತ್ತು ಅರ್ಥಶಾಸ್ತ್ರ್ರ ವಿಷಯಗಳನ್ನು) 40 ಪ್ರಶ್ನೆಗಳು ಸಾಮಾನ್ಯ ವಿಜ್ಞಾನ (ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಮತ್ತು ಜೀವಶಾಸ್ರ್ತ ) ಮತ್ತು 20 ಪ್ರಶ್ನೆಗಳು (ಗಣಿತ ವಿಷಯವನ್ನು ಆಧರಿಸಿರುತ್ತವೆ)

ಈ ವಿಷಯದ ಪರೀಕ್ಷೆಗೆ ಸಿದ್ಧವಾಗುವಾಗ ವಿದ್ಯಾರ್ಥಿಗಳು 10ನೇ ತರಗತಿಯ ಪಠ್ಯವಸ್ತು( State/CBSC/ICSE, Syllabus) ಚೌಕಟ್ಟಿನಲ್ಲಿರುವ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ State Rank ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದ್ವಿತೀಯ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ದ್ವಿತೀಯ ಹಂತ (Second Phase)

ಪ್ರಥಮ ಹಂತದ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಅರ್ಹತೆಗಳಿಸಿದ ವಿದ್ಯಾರ್ಥಿಗಳಿಗೆ National Council of Educational Research and Training, NCERT, New Delhi ರವರು ದ್ವಿತೀಯ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ. ದ್ವಿತೀಯ ಹಂತದ ಪರೀಕ್ಷೆ ವಿವರಗಳಿಗೆ NCERT Website ನಲ್ಲಿ ವೀಕ್ಷಿಸುವುದು.

ವಿದ್ಯಾರ್ಥಿ ವೇತನ : ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ( ಪ್ರಥಮ ಮತ್ತು ದ್ವಿತೀಯ ) ಯಲ್ಲಿ ತಿಂಗಳಿಗೆ ರೂ 1,250 ಮತ್ತು ಪದವಿ ಹಂತದಲ್ಲಿ ರೂ 2,000 ಹಾಗೂ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿವೇತನ ಯು.ಜಿ.ಸಿ ನಿಯಮಾನುಸಾರ ನೀಡಲಾಗುತ್ತದೆ.

YEAR WISE STATISTICS OF NTS EXAMINATION

Sl No Year of ExamNo of Students Registered No of Students Appeared No of Students Qualified at State LevelNo of Students Qualified at National Level
12004-053078030295 235( 10TH ) 88
22005-064357043200295( 10TH ) 134
32006-076285062595235+295=530( 8TH +10TH ) 74+99=173
42007-085397053447225+295=520( 8TH +10TH ) 84+74=158
52008-092313320010231104
62009-10454434189123480
72010-11507024591124492
82011-12490364483223481
92012-13538635071122364
102013-14543415132023775
112014-15712696684721166
122015-16850008114621155
132016-17869548195422562
142017-18863008421219475
152018-1910317798689395*

ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ ವೇತನ ಯೋಜನೆ

(National Means- cum-Merit Scholarship) NMMS

8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (National Means cum Merit Scholarship Examination, NMMS) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

2019-20ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ: 03-11-2019 ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300

ಅರ್ಹತೆ (Eligibility) :

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಿಂದ ನಡೆಯುವ ವಸತಿಯುತ ಶಾಲೆಗಳ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. (ಉದಾ: ಮೊರಾರ್ಜಿ, ನವೋದಯ ಶಾಲೆ ಕೇಂದ್ರಿಯ ವಿದ್ಯಾಲಯ, ಸೈನಿಕ ಶಾಲೆ, ಇತ್ಯಾದಿ)

ಯೋಜನೆಯ ಉದ್ದೇಶಗಳು :

 • 8 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.
 • ಗುರ್ತಿಸಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರಿಕೆಗೆ ವಿದ್ಯಾರ್ಥಿವೇತನ ನೀಡುವುದು ( ಹಣಕಾಸಿನ ನೆರವು).
 • ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆದು ಅವರ ವಿದ್ಯಾಭ್ಯಾಸ ಮುಂದುವರಿಕೆಗೆ ಪ್ರೇರೇಪಿಸುವುದು.

NMMS ಪರೀಕ್ಷೆಗೆ ಇರುವ ನಿಬಂಧನೆಗಳು :

 • ಪೋಷಕರ ವಾರ್ಷಿಕ ವರಮಾನ 1,50,000 ಮೀರಿರಬಾರದು.
 • 7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 55 ಅಂಕಗಳನ್ನು (ಅಥವಾ ಗ್ರೇಡ್) ಪಡೆದಿರಬೇಕು.
 • ಪ.ಜಾ/ಪ.ಪಂ ಹಾಗೂ ವಿಕಲ ಚೇತನ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಮೀಸಲಾತಿ ಇರುತ್ತದೆ.

ಆಯ್ಕೆ ಪ್ರಕ್ರಿಯೆ (Selection Procedure)

ಈ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

 • ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)
 • ಈ ಪತ್ರಿಕೆಯಲ್ಲಿ 90 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳು. ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ , ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನು ಅಳೆಯುವ ಪ್ರಶ್ನೆಗಳಿರುತ್ತವೆ.
 • ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)
 • ಈ ಪತ್ರಿಕೆಯಲ್ಲಿ ಒಟ್ಟು 90 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 35 ಪ್ರಶ್ನೆಗಳು (ಸಾಮಾಜಿಕ ವಿಜ್ಞಾನ ವಿಷಯಗಳಾದ ಇತಿಹಾಸ , ಭೂಗೋಳ, ಪೌರನೀತಿ ಮತ್ತು ಅರ್ಥಶಾಸ್ತ್ರ್ರ ವಿಷಯಗಳನ್ನು) 35 ಪ್ರಶ್ನೆಗಳು (ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಮತ್ತು ಜೀವಶಾಸ್ರ್ತ ) ಮತ್ತು 20 ಪ್ರಶ್ನೆಗಳು (ಗಣಿತ ವಿಷಯವನ್ನು ಆಧರಿಸಿರುತ್ತವೆ.) ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಜಿಲ್ಲಾವಾರು, ಪ್ರವರ್ಗವಾರು rank ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ 9 ನೇ ತರಗತಿಯಿಂದ ತಿಂಗಳಿಗೆ ರೂ 1000 ರಂತೆ ವರ್ಷಕ್ಕೆ 12,000/- ಗಳಂತೆ 4 ವರ್ಷಗಳು ವಿದ್ಯಾರ್ಥಿವೇತನ ಸಿಗುತ್ತದೆ. (ದ್ವಿತೀಯ ಪಿ.ಯು.ಸಿ ಯವರೆಗೆ)

ವಿದ್ಯಾರ್ಥಿವೇತನ ವಿತರಣೆ :- ಆಯ್ಕೆಯಾದ ವಿದ್ಯಾರ್ಥಿಗಳ ಹೆಸರಿನಲ್ಲಿ ತೆರೆಯುವ ಬ್ಯಾಂಕ್, ಖಾತೆಗೆ ನೇರವಾಗಿ ಎಸ್.ಬಿ.ಐ, ನವದೆಹಲಿಯಿಂದ ವಿದ್ಯಾರ್ಥಿವೇತನ ಜಮಾ ಆಗುತ್ತದೆ.

ವಿದ್ಯಾರ್ಥಿವೇತನ ಮುಂದುವರಿಕೆಗೆ ನಿಬಂಧನೆಗಳು: NMMS ಪರೀಕ್ಷೆಯಲ್ಲಿ ಆಯ್ಕೆಯಾದ ಮೇಲೆ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಶೈಕ್ಷಣಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿರುತ್ತದೆ.

 • ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9, 11 ಮತ್ತು 12 ನೇ ತರಗತಿಗಳಲ್ಲಿ ಕನಿಷ್ಟ ಶೇ55 ರಷ್ಟು ಮತ್ತು 10 ನೇ ತರಗತಿಯಲ್ಲಿ ಕನಿಷ್ಟ ಶೇ60 ರಷ್ಟು ಅಂಕಗಳನ್ನು ಗಳಿಸಲೇಬೇಕಾಗುತ್ತದೆ. (ಪ.ಜಾತಿ / ಪ. ಪಂ ವಿದ್ಯಾರ್ಥಿಗಳಿಗೆ ಶೇ5 ರಷ್ಟು ವಿನಾಯಿತಿ ನೀಡಲಾಗುತ್ತದೆ.) MHRD, ನವದೆಹಲಿರವರ ಸೂಚನೆಯಂತೆ ನಿಬಂಧನೆಗಳು ಆಗಿಂದಾಗ್ಗೆ ಬದಲಾಗುತ್ತವೆ.
 • ಆಯ್ಕೆಯಾದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆ / ಕಾಲೇಜಿನಲ್ಲಿ ಮಾತ್ರ ವಿದ್ಯಾಭ್ಯಾಸ ಮುಂದುವರಿಸಬೇಕು.
 • ITI ಹಾಗೂ Diploma ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವುವರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.

YEAR WISE STATISTICS OF NMMS EXAMINATION

SL No Year ExamNo of Students Registered No of Students AppearedNo of students Qualified at State Level
12007-0812415120291914
22008-0912231114921888
32009-1035307336892569
42010-1163363581223341
52011-1264427590983102
62012-131288541161115471
72013-141126441033535418
82014-1595457848755518
92015-161050001015835529
102016-171150001050005516
112017-181210001191005530
122018-191260291200775375
 1. D.El.Ed ಕೋರ್ಸ್‌ನ ಪಠ್ಯಕ್ರಮ ಮತ್ತು ಪಠ್ಯವಸ್ತು ಅನುಷ್ಠಾನ.
 2. ಅನುದಾನಿತ ಮತ್ತು ಅನುದಾನರಹಿತ D.El.Ed ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಂಬಂಧಿತ ವಿಷಯಗಳು.
 3. NCTE ಮಾರ್ಗಸೂಚಿಗಳ ಆಧಾರದ ಮೇಲೆ ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸುವುದು.
 4. D.El.Ed ಕೋರ್ಸ್‌ನ ನಿಗದಿತ ವಿಷಯಗಳಲ್ಲಿ ಅಗತ್ಯ ಆಧಾರಿತ ತರಬೇತಿಗಳು/ಕಾರ್ಯಾಗಾರಗಳನ್ನು ಆಯೋಜಿಸುವುದು.
 5. ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಹೊಸದಾಗಿ ಪ್ರಾರಂಭವಾದ ಡಿಪ್ಲೊಮಾ ಇನ್ ಪ್ರಿ ಸ್ಕೂಲ್ ಎಜುಕೇಶನ್ (DPSE) ಇಂಗ್ಲೀಷ್ ಮೀಡಿಯಂ ಕೋರ್ಸ್ ಮತ್ತು D.El.Ed ಇಂಗ್ಲೀಷ್ ಮೀಡಿಯಂ ಕೋರ್ಸ್‌ನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು.
 6. ಎಸ್.ಎಸ್.ಪಿ ಪೋರ್ಟ್ ಲ್ ಮೂಲಕ Post matric scholarship ಕಾರ್ಯನಿರ್ವಹಣೆ.

ಶಿಕ್ಷಕರ ಶಿಕ್ಷಣ ಘಟಕ :

ಸಮಗ್ರ ಶಿಕ್ಷಣ ಯೋಜನೆಯಡಿ ಶಿಕ್ಷಕ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದುಕೊಳ್ಳುತ್ತಿದೆ. ಶಿಕ್ಷಕ ಶಿಕ್ಷಣವು ಸೇವಾ ಪೂರ್ವ ಶಿಕ್ಷಕ ಶಿಕ್ಷಣ ಮತ್ತು ಸೇವಾ ನಿರತ ಶಿಕ್ಷಕ ಶಿಕ್ಷಣ (ತರಬೇತಿ) ವನ್ನು ಒಳಗೊಂಡಿರುತ್ತದೆ.

ಪ್ರತಿ ವರ್ಷವು DSERT ಯಲ್ಲಿನ ಶಿಕ್ಷಕ ಶಿಕ್ಷಣ ಕೋಶವು ಎಲ್ಲಾ ಡಯಟ್ ಗಳೊಂದಿಗೆ ಸಮನ್ವಯ ಸಾಧಿಸಿ ಆಯಾ ಡಯಟ್ ನ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯವನ್ನು ಸಿದ್ದಪಡಿಸಲು ನೆರವಾಗುತ್ತಿದೆ. ಎಲ್ಲ ಡಯಟ್ ಗಳ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯಗಳನ್ನು ಕ್ರೋಢೀಕರಿಸಿ DSERT ಯ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯ ಯೋಜನೆಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ.

ಸಂಶೋಧನೆ

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗ ಸೂಚಿಯಂತೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರತಿಯೊಬ್ಬ ಬೋಧಕ ಸಿಬ್ಬಂದಿಯು ಸಂಶೋಧನಾ ಅಧ್ಯಯನವನ್ನು ಕೈಗೊಳ್ಳ ಬೇಕಾಗಿದೆ. ಹಿರಿಯ ಉಪನ್ಯಾಸಕರ ನೇತೃದ್ವದಲ್ಲಿ ಒಂದು ಡಯಟ್‌ ನಿಂದ ಕನಿಷ್ಠ 06 ಸಂಶೋಧನ ಅಧ್ಯಯನಗಳನ್ನು ಕೈಗೊಂಡು ವರದಿ ಸಿದ್ಧಪಡಿಸಲಾಗುತ್ತದೆ.

2022-23 ನೇ ಸಾಲಿನಲ್ಲಿ ಡಯಟ್ ಗಳಲ್ಲಿ ಈ ಕೆಳಗೆ ನಮೂದಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದಕ್ಕಾಗಿ ಗುರುತಿಸಲಾಗಿದೆ.
 1. ತರಗತಿ ಬೋಧನೆಯಲ್ಲಿ CELT ತರಬೇತಿಯ ಪರಿಣಾಮ - ಅಧ್ಯಯನ
 2. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ಮೇಲೆ TALP ಕಾರ್ಯಕ್ರಮದ ಪ್ರಭಾವ.
 3. ಶಾಲೆಗಳಲ್ಲಿ ಗ್ರಂಥಾಲಯಗಳ ಬಳಕೆಯ ಕುರಿತು ಅಧ್ಯಯನ.
 4. ಡಯಟ್ ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಪ್ರಯೋಗಾಲಯ ಬಳಕೆಯ ಕುರಿತು ಅಧ್ಯಯನ.
 5. EMTIP-1 ತರಬೇತಿಯ ತರಗತಿ ಅನ್ವಯ ಸ್ವರೂಪ ಅಧ್ಯಯನ.
 6. ಡಯಟ್ ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳ ಸೇವಾಪೂರ್ವ ಶಿಕ್ಷಕ ತರಬೇತಿಗಳಲ್ಲಿ ಮಾಹಿತಿ ತಂತ್ರಜ್ಞಾನಗಳ ಬಳಕೆ.
 7. ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳ ನಿರ್ವಹಣೆ ಕುರಿತು ಅಧ್ಯಯನ.
 8. ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಅಧ್ಯಯನ.
 9. ಸರ್ಕಾರಿ & ಅನುದಾನಿತ ಪ್ರೌಢ ಶಾಲೆಗಳ ಗಣಿತ & ವಿಜ್ಞಾನ ಶಿಕ್ಷಕರಿಗೆ IISC ಚಳ್ಳಕೆರೆ ವತಿಯಿಂದ ನಡೆಸುತ್ತಿರುವ ವಿಷಯಾಧಾರಿತ ತರಬೇತಿಯ ತರಗತಿ ಅನ್ವಯ ಸ್ವರೂಪ ಅಧ್ಯಯನ.
 10. ಶಾಲೆಗಳಲ್ಲಿ ಪ್ರಯೋಗಾಲಯ ಬಳಕೆಯ ಕುರಿತು ಅಧ್ಯಯನ.
 11. ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಯಿಂದ ವಿದ್ಯಾರ್ಥಿಗಳಲ್ಲುಂಟಾದ ಕಲಿಕೆಯ ಪ್ರಗತಿಯ ಅಧ್ಯಯನ.
 12. ಡಯಟ್ ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಗ್ರಂಥಾಲಯಗಳ ಬಳಕೆಯ ಕುರಿತು ಅಧ್ಯಯನ.
 13. ಶಾಲಾಭಿವೃದ್ಧಿಯಲ್ಲಿ ಸ್ಥಳಿಯ ಸಂಸ್ಥೆಗಳ ಪಾತ್ರ.
 14. ಇನ್‌ಸ್ಟೈರ್ ಕಾರ್ಯಕ್ರಮದ ವ್ಯಾಪ್ತಿ, ಗುಣಮಟ್ಟ ಹಾಗೂ ಪರಿಣಾಮದ ಕುರಿತು ಅಧ್ಯಯನ.
 15. ಕೋವಿಡ್-19 ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸ್ಥಿತಿಗತಿ ಅಧ್ಯಯನ – (Lead)
 16. ಪ್ರೌಢಶಾಲೆಗಳಿಗೆ ಒದಗಿಸಲಾದ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಮತ್ತು ಕಂಪ್ಯೂಟರ್‌ಗಳ ಬಳಕೆ ಕುರಿತು ಅಧ್ಯಯನ.
 17. ಸಂವೇದ-ದೂರದರ್ಶನ ಆಧಾರಿತ ಕಲಿಕಾ ಕಾರ್ಯಕ್ರಮದಡಿ ಪ್ರಸಾರವಾಗುತ್ತಿರುವ ವೀಡಿಯೋ ಪಾಠಗಳಿಂದ ವಿದ್ಯಾರ್ಥಿಗಳ ಕಲಿಕೆಯಲ್ಲುಂಟಾದ ಪರಿಣಾಮದ ಕುರಿತು ಅಧ್ಯಯನ.
 18. ಶಾಲಾಭಿವೃದ್ಧಿಯಲ್ಲಿ ಎಸ್‌ಡಿಎಂಸಿಗಳ ಪಾತ್ರ.
 19. TALP ತರಬೇತಿಯಿಂದಾಗಿ ಶಿಕ್ಷಕರ ಬೋಧನಾ ಪ್ರಕ್ರಿಯೆಯಲ್ಲಿ ಉಂಟಾದ ಬದಲಾವಣೆ ಕುರಿತು ಅಧ್ಯಯನ.
 20. ಸಮೂಹ ಸಂಪನ್ಮೂಲ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಅಧ್ಯಯನ.
 21. ಶೈಕ್ಷಣಿಕ ಆಡಳಿತಗಾರರಾಗಿ ಶಾಲಾ ಮುಖ್ಯ ಶಿಕ್ಷಕರ ಕಾರ್ಯನಿರ್ವಹಣೆ ಕುರಿತು ಅಧ್ಯಯನ.
 22. ಎನ್‌ಟಿಎಸ್‌ಇ ಮತ್ತು ಎನ್‌ಎಂಎಂಎಸ್ ಸೌಲಭ್ಯಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಅಧ್ಯಯನ.
ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು

2022-23 ನೇ ಸಾಲಿನಲ್ಲಿ ಈ ಕೆಳಗೆ ನಮೂದಿಸಿರುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಎಲ್ಲ ಡಯಟ್ ಗಳಿಗೂ ಮಾರ್ಗದರ್ಶನ ನೀಡಲಾಗಿದೆ.

 1. NEP -2020 ಕ್ಕೆ ಸಂಬಂಧಿಸಿದ ವಿಚಾರ ಗೋಷ್ಠಿ.
 2. NEP 2020‌ ರ ವಿಷಯವಾಗಿ ರಾಜ್ಯ ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸಂವಹನ.
 3. NEP 2020‌ ರ ಅನುಷ್ಠಾನಕ್ಕೆ ಸಂಬಂಧಸಿದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
 4. ಸಂವಿಧಾನ ಮತ್ತು NEP 2020 ಗೆ ಅನುಗುಣವಾಗಿ ಶೈಕ್ಷಣಿಕ ನಿಘಂಟನ್ನು ಅಭಿವೃದ್ಧಿಪಡಿಸುವುದು.
 5. ಸಂಪನ್ಮೂಲ ಕೇಂದ್ರಗಳ (SERC) ಬಲವರ್ಧನೆ.
 6. ಸಂಶೋಧನಾ ಅಧ್ಯಯನಗಳ ವಿಶ್ಲೇಷಣೆ.
 7. ಜೀವನ ವಿಜ್ಞಾನ ಕಾರ್ಯಕ್ರಮ ಅನುಷ್ಠಾನ.
 8. ಶಾಲೆಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಉತ್ತಮ ಅಭ್ಯಾಸಗಳನ್ನು ಕುರಿತು ಕ್ಷೇತ್ರ ಸಂವಹನ.
 9. NPEP ಅಧ್ಯಯನಗಳು ಮತ್ತು ಪರಿಣಾಮ ಹಂಚಿಕೆ ಕಾರ್ಯಾಗಾರ.
 10. ಆಟಿಕೆ ಆಧಾರಿತ ಶಿಕ್ಷಣ ಮತ್ತು ಬಲವರ್ಧನೆ (ವೆಬ್ ಸಂಪನ್ಮೂಲಗಳು)
 11. ಸಂಜ್ಞೆ ಭಾಷಾ ಕಾರ್ಯಾಗಾರ.
 12. ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣದೊಂದಿಗೆ ಸಂಪರ್ಕಗಳು – ಚರ್ಚಾ ಗೋಷ್ಠಿ.
 13. ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳ ಮೌಲ್ಯಮಾಪನ.

ಗುರು ಚೇತನ- ಆಯ್ಕೆ ಆಧಾರಿತ ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಸರ್ಕಾರವು ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಮರು ಸಂಯೋಜಿಸುವ ಪ್ರಯತ್ನವನ್ನು ಮಾಡಿದೆ. ಎ.ಪಿ.ಎಫ್ ನ ಸಹಕಾರದೊಂದಿಗೆ ಟಿ.ಟಿ.ಎಂ.ಎಸ್ ಅನ್ನು ಅಳವಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದೆ.

ಅ) ನೂತನ ಕಾರ್ಯಕ್ರಮದ ಮುಖ್ಯ ಅಂಶಗಳು

 1. ದಶಕಗಳ ವೃತ್ತಿಪರ ಅಭಿವೃದ್ಧಿ ಪ್ರಯತ್ನಗಳು ಹಾಗೂ ರಾ.ಪ.ಚೌ 2005 ಮತ್ತು ಎನ್ ಸಿ ಎಫ್ ಟಿ ಇ 2009 ರ ಶಿಕ್ಷಕರ ಕಾಣ್ಕೆಯನ್ನು ಆಧರಿಸಿ ರೂಪಿಸಲಾಗಿದೆ.
 2. ಸುದೀರ್ಘಾವಧಿಯಲ್ಲಿ 240-250 ಮಾಡ್ಯೂಲ್ ಗಳನ್ನು ಹೊಂದುವ ಯೋಜನೆಯಿದೆ.
 3. ಈ ಎಲ್ಲಾ ಮಾಡ್ಯೂಲ್ಗಳಲ್ಲಿ ಶೈಕ್ಷಣಿಕ ದೃಷ್ಟಿಕೋನ, ವಿಷಯಾಧಾರಿತ ಪರಿಕಲ್ಪನೆಗಳು ಮತ್ತು ಮೌಲ್ಯಾಂಕನದ ವಿಚಾರಗಳನ್ನು ಸಂಯೋಜಿಸಲಾಗಿದೆ.
 4. 2018-19ನೇ ಸಾಲಿನಲ್ಲಿ 28+1 29 ಮಾಡ್ಯೂಲ್ಗಳನ್ನು ಆಯ್ಕೆಗಾಗಿ ಒದಗಿಸಲಾಗಿದೆ.

ಆ) ಕಾರ್ಯಾಚರಣೆಯ ಮುಖ್ಯಾಂಶಗಳು

 1. 3512 ಜನ ಎಂ ಆರ್ ಪಿ ಗಳನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಗುರುತಿಸಿ ಅವರನ್ನು ತರಬೇತುಗೊಳಿಸಲಾಗಿದೆ.
 2. ಜಿಲ್ಲೆ ಮತ್ತು ಬ್ಲಾಕ್ ಹಂತಗಳಲ್ಲಿ ಕಾರ್ಯಾಗಾರಗಳ ನಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಕರ ಕಲಿಕಾ ಕೇಂದ್ರಗಳನ್ನು ಹೊಂದಲು ಯೋಜಿಸಿದೆ.- ಇದು ಸಹವರ್ತಿ-ಕಲಿಕೆ, ಸ್ವ-ಕಲಿಕೆ ಗಳನ್ನು ಹೆಚ್ಚಿಸುವಂತೆ ಗಣಕಯಂತ್ರ ಮತ್ತು ಅಂತರ್ಜಾಲದ ಸೌಲಭ್ಯದೊಂದಿಗೆ ಒದಗಿಸಲಾಗುವುದು.
 3. ಹೀಗೆ ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಸ್ವ-ಪ್ರೇರಣೆಯಿಂದ ಶಿಕ್ಷಕರು ಹೊಂದುವಂತೆ ವಿನ್ಯಾಸಗೊಳಿಸಿದೆ.

ಇ) ಇದುವರೆಗಿನ ಪ್ರಗತಿ

 1. ಶಿಕ್ಷಕರು ತಮ್ಮ ಡಿಜಿಟಲ್ ಆಯ್ಕೆ ಮಾಡಲು ಅನುಗುಣವಾಗಿ ಪ್ರತ್ಯೇಕ ವೆಬ್ಸೈಟ್ ಮತ್ತು ಪೋರ್ಟಲ್ ಆರಂಭಿಸಲಾಗಿದೆ.
 2. ಪ್ರತಿಯೊಬ್ಬ ಶಿಕ್ಷಕರು ನಾಲ್ಕು ಆದ್ಯತೆಗಳನ್ನು ನೀಡಿ ಅದರಲ್ಲಿ ಪ್ರಸಕ್ತ ವರ್ಷ ಎರಡು ಮಾಡ್ಯೂಲ್ಗಳ ಅನುಭವ ಪಡೆಯಲು ಅವಕಾಶವಿದೆ.
 3. ಒಟ್ಟು 1,66,000 ಶಿಕ್ಷಕರಲ್ಲಿ 1,35,000 ಜನ (ಶೇ 82.5 ) ತಮ್ಮ ಆಯ್ಕೆಯನ್ನು ದಾಖಲಿಸಿದ್ದಾರೆ.
 4. ಟಿ ಟಿ ಎಂ ಎಸ್ ತಂತ್ರಾಂಶದ ಮೂಲಕ ಬ್ಯಾಚ್ಮೇಕಿಂಗ್ ಮಾಡಿ ಶಿಕ್ಷಕರನ್ನು ಎಸ್ ಎಂ ಎಸ್ ಮೂಲಕ ಆಹ್ವಾನಿಸಲಾಗಿದೆ.
 5. ದಿನಾಂಕ 03-01-2018 ರಲ್ಲಿದ್ದಂತೆ ರಾಜ್ಯದ 46970 ಶಿಕ್ಷಕರು 5 ದಿನಗಳ ತರಬೇತಿ ಹೊಂದಿದ್ದಾರೆ.
 6. ಡಯಟ್ ಫ್ಯಾಕಲ್ಟಿ/ ಪ್ರೌಢಶಾಲಾ ಮುಖ್ಯ ಶಿಕ್ಷಕರು/ ವಿಷಯ ಪರಿವೀಕ್ಷಕರನ್ನು ಗುರುಚೇತನ ಕಾರ್ಯಾಗಾರಗಳ ಪರಿಣಿತ ವೀಕ್ಷಕರನ್ನಾಗಿ ಡಯಟ್ ನೇಮಿಸಿದೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳನ್ನು ರಾಜ್ಯ ಹಂತದಿಂದ ವೀಕ್ಷಕರಾಗಿ ನೇಮಿಸಲಾಗಿದೆ.
 7. ಕಮಲ ಮುಕುಂದ ಬರೆದ "ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳೀದೆ?" ಪುಸ್ತಕವನ್ನು ಕಾರ್ಯಾಗಾರಕ್ಕೆ ಹಾಜರಾದ ಎಲ್ಲಾ ಶಿಕ್ಷಕರಿಗೆ ವಿತರಿಸಲಾಗಿದೆ.
 8. ಈ ಎಲ್ಲಾ ಪ್ರಕ್ರಿಯೆಗಳನ್ನು ಸುಗಮವಾಗಿ ನಿರ್ವಹಿಸಲು ಡಯಟ್ ಹಂತದಲ್ಲಿರುವ ನೋಡಲ್ ಅಧಿಕಾರಿಗಳ ಜತೆ ಟಿ-ಕಾನ್ ನಡೆಸಿ ಕಾರ್ಯಾಗಾರದ ಗುಣಮಟ್ಟ ಹಾಗೂ ಸಾಮಗ್ರಿಗಳ ಬಳಕೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ.
 9. ಪ್ರತಿ ಕಾರ್ಯಾಗಾರದಲ್ಲಿ ಪೂರ್ವಪರೀಕ್ಷೆ, ದೈನಂದಿನ ಮೌಲ್ಯಾಂಕನ, ಸಾಫಲ್ಯ ಪರೀಕ್ಷೆಯನ್ನು ನಡೆಸಿ ಅದನ್ನು ಆನ್ ಲೈನ್ ನಲ್ಲಿ ದಾಖಲಿಸಲಾಗುತ್ತಿದೆ.
 10. ಎಲ್ಲಾ ಕಾರ್ಯಾಗಾರಗಳು ಮುಕ್ತಾಯವಾದ ನಂತರ ಡಯಟ್ಗಳ ಮುಖಾಂತರ ಸರಳ (ಕೇಸ್ ಸ್ಟಡಿ) ಅಧ್ಯಯನಗಳನ್ನು ಕೈಗೊಳ್ಳಲಾಗುವುದು.
 11. ರಾಜ್ಯ ಹಂತದಲ್ಲಿ ಹೆಲ್ಪ್ ಡೆಸ್ಕ್ ರಚಿಸಿ ತಾಂತ್ರಿಕ ಸಹಾಯ ನೀಡಲಾಗುತ್ತಿದೆ.

ಈ) 2018-19ನೇ ಸಾಲಿನ ಯೋಜನೆ

 1. 2018-19ನೇ ಸಾಲಿನ ಗುರುಚೇತನ ಕಾರ್ಯ ಕ್ರಮದ ಅನುಷ್ಟಾನ ಕ್ಕಾಗಿ ಬಜೆಟ್ , ಟೈಮ್ಲೈನ್ ಮತ್ತು ಯೋಜನೆಯನ್ನು ರೂ 71.15 ಕೋಟಿ ಅಂದಾಜಿನೊಂದಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ.
 2. ಪೇಸ್-1 -13 , ಪೇಸ್-2 -14 ಮತ್ತು ಪೇಸ್-3 -05 ರಂತೆ ಒಟ್ಟು 32 ಮಾಡ್ಯೂಲ್ಗಳನ್ನು ಪರಿಚಯಿಸಲಾಗುವುದು.
 3. ಈ ಸಾಲಿನಲ್ಲಿ 1,66,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪರಿಗಣಿಸಲಾಗುವುದು.
ಗುರುಚೇತನ ಬಗ್ಗೆ ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ

ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಬೇಕಾದ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿರುವಂತಹ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಮತ್ತು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರೂಪಿಸುವ, ಒಂದು ಶಿಕ್ಷಣ ವ್ಯವಸ್ಥೆಯನ್ನು ರಚಿಸುವ ದೃಷ್ಟಿಕೋನದೊಂದಿಗೆ ಮಾನ್ಯ ಪ್ರಧಾನ ಮಂತ್ರಿಗಳು, 2020 ರ ಜುಲೈ 29 ರಂದು ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನುರಾಷ್ಟ್ರಕ್ಕೆ ಸಮರ್ಪಿಸಿದರು.

 1. ಪೊಸಿಷನ್ ಪೇಪರ್:

  ಪಠ್ಯಕ್ರಮಕ್ಕೆ ಪೂರಕವಾಗಿ ಎನ.ಸಿ.ಆರ್.ಟಿ.ಯು ಕೆಳಗಿನ ನಾಲ್ಕು ಕ್ಷೇತ್ರಗಳಿಗೆ ಪೂರಕವಾದ ವಿಷಯಗಳನ್ನು ಒಳಗೊಂಡ 26 ಪೊಸಿಷನ್ ಪೇಪರ್ಗಳನ್ನು ಸಿದ್ಧಪಡಿಸಲು ವಿವಿಧ ಸ್ಥರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಷಯ ಪರಿಣಿತರನ್ನು ಒಳಗೊಂಡAತಹ ರಾಜ್ಯ ಮಟ್ಟದ 26 ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಸಮಿತಿಯು ಒಬ್ಬರು ಮುಖ್ಯಸ್ಥರು, ಏಳು ಸದಸ್ಯರು, ಹಾಗೂ ಒಬ್ಬರು ಇಲಾಖೆಯ ಸಮನ್ವಯಾಧಿಕಾರಿಗಳನ್ನು ಒಳಗೊಂಡಿದೆ. ಪ್ರಸ್ತುತ 26 ವಿಷಯಗಳ ಪೊಸಿಷನ್ ಪೇಪರ್ ಗಳ ಸಿದ್ಧತಾ ಕಾರ್ಯವು ಪೂರ್ಣಗೊಂಡಿರುತ್ತದೆ. ಪೊಸಿಷನ್ ಪೇಪರ್ ಗಳನ್ನು ಎನ್.ಸಿ.ಇ.ಆರ್.ಟಿ. ಅಭಿವೃದ್ಧಿಪಡಿಸಿರುವ ತಾಂತ್ರಿಕ ವೇದಿಕೆಯಲ್ಲಿ ಅಪ್ ಲೋಡ್ ಮಾಡಲಾಗಿದೆ.

 2. ಪಠ್ಯಕ್ರಮ ಚೌಕಟ್ಟು ರಚನೆ:

  ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಶಿಫಾರಸ್ಸಿಗೆ ಅನುಗುಣವಾಗಿ ಹೊಸ 5+3+3+4 ವಿನ್ಯಾಸದ ಶಾಲಾ ಪಠ್ಯಕ್ರಮ ಸಿದ್ಧಪಡಿಸಲು ಕೆಳಕಂಡ ನಾಲ್ಕು ಕ್ಷೇತ್ರಗಳಲ್ಲಿ ರಾಜ್ಯ ಪಠ್ಯಕ್ರಮ ರಚಿಸುವ ಕಾರ್ಯ ಪ್ರಗತಿಯಲ್ಲಿದೆ.

  1. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ)
  2. ಶಾಲಾ ಶಿಕ್ಷಣ (ಎಸ್.ಇ)
  3. ಶಿಕ್ಷಕರ ಶಿಕ್ಷಣ (ಟಿ.ಇ) ಮತ್ತು
  4. ವಯಸ್ಕರ ಶಿಕ್ಷಣ (ಎ.ಇ).

  ಸರ್ಕಾರಿ ಆದೇಶ ಸಂಖ್ಯೆ ಇಪಿ 69 ಯೋಯೋಕ 2022 ದಿನಾಂಕ: 07.04.2022 ರಂತೆ ಶಾಲಾ ಶಿಕ್ಷಣ(ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಒಳಗೊಂಡಂತೆ), ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ರಾಜ್ಯ ಪಠ್ಯಕ್ರಮ ಚೌಕಟ್ಟು ರಚಿಸಲು ಪ್ರತ್ಯೇಕವಾದ ಚಾಲನಾ ಸಮಿತಿಗಳನ್ನು ರಚಿಸಲಾಗಿದೆ.

  ಇಪಿ70 ಯೋಯೋಕ2022 ದಿನಾಂಕ:06.04.2022 ರಂತೆ ಪೂರ್ವ ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ಚೌಕಟ್ಟು ರಚನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸಮಿತಿಯನ್ನು ರಚಿಸಲಾಗಿದೆ.

  ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ಪಠ್ಯಕ್ರಮ ಚೌಕಟ್ಟು ರಚನೆಗೆ ಕ್ರಮ ವಹಿಸಲಾಗಿದೆ.

 3. ತರಬೇತಿ:

  • ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಉಸ್ತುವಾರಿ ಅಧಿಕಾರಿಗಳಾದ ಇಲಾಖೆಯ ನಿರ್ದೇಶಕರು, ಸಹನಿರ್ದೇಶಕರು, ಉಪನಿರ್ದೇಶಕರು(ಆಡಳಿತ ಮತ್ತು ಅಭಿವೃದ್ಧಿ) ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಹಂತದಲ್ಲಿ ಒಂದು ದಿನದ ಸಮ್ಮೇಳನವನ್ನು ನಡೆಸಲಾಗಿದೆ.
  • ಪೊಸಿಷನ್ ಪೇಪರ್ ತಯಾರಿಕೆಯಲ್ಲಿ ಸಮಿತಿಯ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಲು ಸಮಿತಿಯ ಮುಖ್ಯಸ್ಥರಿಗೆ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ ನಡೆಸಲಾಗಿದೆ.
  • ಸಿದ್ಧಪಡಿಸಿದ ಪೊಸಿಷನ್ ಪೇಪರ್ನ್ನು ತಾಂತ್ರಿಕ ವೇದಿಕೆಯಲ್ಲಿ ಇಂದೀಕರಿಸುವ ಬಗ್ಗೆ ಡಯಟ್ನ ನೋಡಲ್ ಅಧಿಕಾರಿಗಳು ಹಾಗೂ ಟೆಕ್ನಿಕಲ್ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಸಲಾಗಿದೆ.
  • ಕ್ಷೇತ್ರಮಟ್ಟದಲ್ಲಿ ಎಲ್ಲಾ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯಹಂತದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ, ಬಿ.ಆರ್.ಸಿ, ಸಿ.ಆರ್.ಪಿಗಳಿಗೆ ಒಂದು ದಿನದ ಟೆಲಿಕಾನ್ಫರೆನ್ಸ್ ಅನ್ನು ನಡೆಸಲಾಗಿದೆ.
  • ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು, ಬಿ.ಆರ್.ಸಿ, ಸಿ.ಆರ್.ಪಿಗಳು ತಮ್ಮ ವ್ಯಾಪ್ತಿಯ ಶಾಲಾ ಶಿಕ್ಷಕರಿಗೆ ವಿಬಿನಾರ್ ಮೂಲಕ ತರಬೇತಿಯನ್ನು ನೀಡಿದ್ದಾರೆ.

  ಎನ್.ಸಿ.ಇ.ಆರ್.ಟಿ. ನಿರ್ದೇಶನದಂತೆ ರಾಷ್ಟ್ರಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ರಾಜ್ಯ ಪಠ್ಯ ಕ್ರಮ ಚೌಕಟ್ಟನ್ನು ರಚಿಸಿ, ರಚನೆಯ ನಂತರದಲ್ಲಿ ಪಠ್ಯಕ್ರಮ ರಚನೆ ಹಾಗೂ ಅದರ ನಂತರ ಪಠ್ಯ ಪುಸ್ತಕ ರಚನೆ ಕಾರ್ಯವನ್ನು ನಿರ್ವಹಿಸಲಾಗುವುದು.

View this page in English
ನವೀಕರಿಸಿದ ದಿನಾಂಕ : 25/5/2022

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com