ರಾಜ್ಯ ವಿಜ್ಞಾನ ಸಂಸ್ಥೆ ಮತ್ತು ತಂತ್ರಜ್ಞಾನ

ರಾಜ್ಯ ವಿಜ್ಞಾನ ಸಂಸ್ಥೆ ಮತ್ತು ತಂತ್ರಜ್ಞಾನ :


ಶಿಕ್ಷಕರ ತರಬೇತಿ ಘಟಕ (PMU-1)

ಹಿನ್ನೆಲೆ:

ಶಿಕ್ಷಕರ ತರಬೇತಿ – ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assisted Learning Programme (TALP)) 2016-17 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ 5 ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ಒಂದು ಭಾಗವಾಗಿ ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ-ಪೂರ್ವ ಕಾಲೇಜುಗಳ ಶಿಕ್ಷಕರು ತಮ್ಮ ಕಲಿಕೆಯನ್ನು ಅನುಕೂಲಿಸುವ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ (ಐ.ಸಿ.ಟಿ.) ಕೌಶಲಗಳನ್ನು ಬಳಸುವುದಷ್ಟೇ ಅಲ್ಲದೇ ತಮ್ಮ ವೃತ್ತಿಪರ ವರ್ತನೆಗಳನ್ನು ಪುನಶ್ಚೇತನಗೊಳಿಸಿ ಕೊಳ್ಳಲು ಮತ್ತು ತಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಗಳಿಗೆ ಅಗತ್ಯವಾದ ಇ-ಸಂಪನ್ಮೂಲಗಳನ್ನು ತಾವೇ ಸೃಜಿಸಿಕೊಳ್ಳುವಂತೆ ತರಬೇತಿ ನೀಡಿ ಸಕ್ರಿಯಗೊಳಿಸುವುದೇ ಈ ‘ಐಟಿ@ಸ್ಕೂಲ್ಸ್ ಇನ್ ಕರ್ನಾಟಕ’ ಯೋಜನೆಯ ಗುರಿಯಾಗಿದೆ.

2016-17ನೇ ಸಾಲಿನಲ್ಲಿ ಡಿ.ಎಸ್.ಇ.ಆರ್.ಟಿ.ಯು ಅಜೀಂ ಪ್ರೇಂಮ್ ಜೀ ಫೌಂಡೇಶನ್ (APF) ಜೊತೆಗೂಡಿ ಸಿ.ಐ.ಇ.ಟಿ.ಯ ಐ.ಸಿ.ಟಿ. ಶಿಕ್ಷಕರ ಪಠ್ಯಕ್ರಮವನ್ನು ಆಧರಿಸಿ ರಾಜ್ಯದ ಕೆಲವು ಸಂಪನ್ಮೂಲ ಶಿಕ್ಷಕರಿಂದ ರಾಜ್ಯಕ್ಕೆ ಪಠ್ಯವಸ್ತುಗಳನ್ನು ಹೊಂದಿರುವ ಟಾಸ್ಕ್ ಗೈಡ್ ಗಳು ಮತ್ತು ಕನ್ನಡ ಭಾಷೆಯಲ್ಲಿ 143ಕ್ಕೂ ಹೆಚ್ಚು ವೀಡಿಯೋಗಳನ್ನು ತಯಾರಿಸಿ ತರಬೇತಿಗಳಿಗೆ ಬಳಸಿಕೊಳ್ಳಲಾಯಿತು.

ನಂತರ 2017-18ನೇ ಸಾಲಿನಿಂದ ರಾಜ್ಯವು ಈ ತರಬೇತಿಗಳನ್ನು ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ., ನವದೆಹಲಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನದೊಂದಿಗೆ ನಡೆಸುತ್ತಿದೆ. ಸಿ.ಐ.ಇ.ಟಿ.ಯವರು ಸಿದ್ಧಪಡಿಸಿದ ಐ.ಸಿ.ಟಿ. ಶಿಕ್ಷಕರ ಪಠ್ಯಕ್ರಮವನ್ನು ರಾಜ್ಯದಲ್ಲಿ ಅಳವಡಿಸಿಕೊಂಡಿರುವುದಲ್ಲದೇ ಅವರದೇ https://ictcurriculum.gov.in ಎಂಬ ವೆಬ್ಪೋರ್ಟಲ್ನ್ನು ಬಳಸಿಕೊಳ್ಳಲಾಗುತ್ತಿದೆ.

ಈ ತರಬೇತಿ ಕಾರ್ಯಕ್ರಮವು 3 ಹಂತಗಳನ್ನು ಹೊಂದಿದೆ.

ಹಂತ 1: ಇಂಡಕ್ಷನ್-1 10 ದಿನಗಳ ಮುಖಾಮುಖಿ ತರಬೇತಿ. ಇಲ್ಲಿ ಶಿಕ್ಷಕರು ಕಂಪ್ಯೂಡರ್ ಹಾರ್ಡ್ವೇರ್, ಸಾಫ್ಟ್ವೇರ್, ಇಂಟರ್ನೆಟ್ ಮತ್ತು ಆಫೀಸ್ ಸೂಟ್ಸ್ ಬಗ್ಗೆ ಮೂಲಜ್ಞಾನ ಮತ್ತು ಕೌಶಲಗಳನ್ನು ಗಳಿಸುತ್ತಾರೆ.

ಹಂತ 2: ರಿಫ್ರೆಶರ್ ಕೋರ್ಸ್-1 10 ದಿನಗಳ ಮುಖಾಮುಖಿ ತರಬೇತಿ. ಇಲ್ಲಿ ಶಿಕ್ಷಕರು ತಮ್ಮದೇ ಇ-ಸಂಪನ್ಮೂಲಗಳನ್ನು ಸೃಜಿಸಿಕೊಳ್ಳಲು ಅಗತ್ಯವಾದ ಅನೇಕ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ಗಳನ್ನು ಅರಿಯುತ್ತಾರೆ.

ಹಂತ 3: ರಿಫ್ರೆಶರ್ ಕೋರ್ಸ್-2ಬಹಳ ಕಡಿಮೆ ಅವಧಿಯ ಆನ್ಲೈನ್ ಕೋರ್ಸ್ ಆಗಿದ್ದು ಇಲ್ಲಿ ಶಿಕ್ಷಕರು ಅಂತರ್ಜಾಲದ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ತಿಳಿಯುತ್ತಾರೆ..

ಪ್ರತಿ ಹಂತದ ಪ್ರಮಾಣಪತ್ರದ ಜೊತೆಗೆ 3 ಹಂತಗಳನ್ನು ಪೂರೈಸಿದ ಶಿಕ್ಷಕರಿಗೆ ಸಿ.ಐ.ಇ.ಟಿ.ಯ ಅರ್ಹತಾ ಪರೀಕ್ಷೆಯ ನಂತರ ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ., ನವದೆಹಲಿ ಇವರಿಂದ ‘ಡಿಪ್ಲೊಮಾ ಇನ್ ಐ.ಸಿ.ಟಿ. ಇನ್ ಎಜುಕೇಶನ್ - ಬೇಸಿಕ್’ ಎಂಬ ಡಿಪ್ಲೊಮಾ ಪದವಿ ನೀಡಲಾಗುವುದು.

ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ತರಬೇತಿಯ ಉದ್ದೇಶಗಳು:

 • 8 ರಿಂದ 12ನೇ ತರಗತಿಯ ಎಲ್ಲಾ ಸರ್ಕಾರಿ ಶಾಲೆಗಳ ಮತ್ತು ಪದವಿ-ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎನ್.ಸಿ.ಇ.ಆರ್.ಟಿ. ಪಠ್ಯಕ್ರಮದಂತೆ ಶಿಕ್ಷಣದಲ್ಲಿ ಐ.ಸಿ.ಟಿ. ಮುಖಾಂತರ ಡಿಜಿಟಲ್ ಸಾಕ್ಷರತೆಯನ್ನು ಖಚಿತಪಡಿಸಿಕೊಳ್ಳುವುದು.
 • ಎಲ್ಲಾ ಪಠ್ಯವಿಷಯಗಳ ತರಗತಿಗಳಲ್ಲಿಯೂ ಐ.ಸಿ.ಟಿ.ಯಿಂದ ಶಕ್ತಗೊಂಡ ಬೋಧನೆ ಮತ್ತು ಕಲಿಕೆಯೊಂದಿಗೆ ಸಾಮಾನ್ಯ ತರಗತಿಗಳನ್ನು ಪೂರೈಸುವುದು.;
  • 1 ರಿಂದ 7ನೇ ತರಗತಿಗಳ ಬೋಧನಾ ಶಾಸ್ತ್ರವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಇ-ವಿಷಯಗಳನ್ನು ಬಳಸುವುದು.
  • 8 ಮತ್ತು ಹೆಚ್ಚಿನ ತರಗತಿಗಳ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಮತ್ತು ಇ-ವಿಷಯದ ಅಭ್ಯಾಸದ ಮೂಲಕ ಬೋಧನಾ ವಿಧಾನ ಹಾಗೂ ಕಲಿಕಾ ಫಲಗಳನ್ನು ಸುಧಾರಿಸುವುದು.
 • ಎನ್.ಸಿ.ಇ.ಆರ್.ಟಿ. ಪಠ್ಯಕ್ರಮದಂತೆ ಶಾಲೆಯ ಮತ್ತು ಕಾಲೇಜು ಮಟ್ಟದಲ್ಲಿ ಈ ಯೋಜನೆಯ ಚಾಲಕರ ಪಾತ್ರಕ್ಕಾಗಿ ಶಿಕ್ಷಕರ ಸಾಮಥ್ರ್ಯಗಳನ್ನು ನಿರ್ಮಿಸುವುದು.
 • ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸರಾಸರಿ ಅಂಕವನ್ನು 5% ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಧನೆಗಳನ್ನು ವೃದ್ಧಿಸುವುದು.

ತರಬೇತಿಗಾಗಿ ಅನುಸರಿಸಿದ ವಿಧಾನ:

ತರಬೇತಿ ಕ್ಯಾಸ್ಕೇಡ್ ಮೋಡ್ನಲ್ಲಿದೆ. ವಿಷಯದ ಅಭಿವೃದ್ಧಿಯಲ್ಲಿ ತೊಡಗಿರುವ 11 ಸದಸ್ಯರು ರಾಜ್ಯದಾದ್ಯಂತ 136 ಎಂಆರ್ಪಿಗಳಿಗೆ (ಮಾಸ್ಟರ್ ರಿಸೋರ್ಸ್ ಪರ್ಸನ್ಸ್) ತರಬೇತಿ ನೀಡಿದರು. ಈ 136 ಎಂಆರ್ಪಿಗಳು ಆಯ್ದ ಶಾಲೆಗಳ ಶಿಕ್ಷಕರಿಗೆ 2016-17ರ ಅವಧಿಯಲ್ಲಿ ತರಬೇತಿ ನೀಡಿದರು. ಶಿಕ್ಷಕರನ್ನು ಗೂಗಲ್ ಫಾರ್ಮ್ಗಳನ್ನು ಬಳಸಿ ನೋಂದಾಯಿಸಲಾಗಿದೆ ಮತ್ತು ನಂತರ ಸಿಎಸ್ವಿಗಳಿಂದ ಐಸಿಟಿ ವೆಬ್ ಪೋರ್ಟಲ್ https://ictcurriculum.gov.in ಗೆ ನೋಂದಾಯಿಸಲಾಗಿದೆ. ಪ್ರತಿ ದಿನದ ತರಬೇತಿಯ ನಂತರ ಗೂಗಲ್ ಫಾರ್ಮ್ಗಳನ್ನು ಬಳಸಿಕೊಂಡು ‘ದಿನವಾರು ಪ್ರತಿಕ್ರಿಯೆ’ ಸಂಗ್ರಹಿಸಲಾಯಿತು ಮತ್ತು ತರಬೇತಿಯ ಕೊನೆಯಲ್ಲಿ ತರಬೇತಿ ಪಡೆದ ಎಲ್ಲ ಶಿಕ್ಷಕರಿಂದ ‘ಒಟ್ಟಾರೆ ಪ್ರತಿಕ್ರಿಯೆ’ ಸಂಗ್ರಹಿಸಲಾಯಿತು. ವರದಿಗಳನ್ನು ತಯಾರಿಸಲು ಇವುಗಳನ್ನು ವಿಶ್ಲೇಷಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಎಪಿಎಫ್ ರಚಿಸಿದ ವೀಡಿಯೊಗಳನ್ನು ಸಹ ಬಳಸಿಕೊಳ್ಳಲಾಗಿದೆ.

ಇ-ಪೋರ್ಟ್ಫೋಲಿಯೋಗಳ ಗ್ರೇಡಿಂಗ್ ಕಾರ್ಯ:

ಇಂಡಕ್ಷನ್ -1 ರಲ್ಲಿ 39 ಇ-ಪೋರ್ಟ್‍ಫೋಲಿಯೋಗಳಿವೆ. ಇದನ್ನು ತರಬೇತಿ ಪಡೆದ ಪ್ರತಿಯೊಬ್ಬ ಶಿಕ್ಷಕರು ಪೂರ್ಣಗೊಳಿಸಿ ಐಸಿಟಿ ಪೋರ್ಟಲ್‌ನಲ್ಲಿ ಸಲ್ಲಿಸಬೇಕು. 2019-20ರ ಅವಧಿಯಲ್ಲಿ ತರಬೇತಿ ಪಡೆದ 7,676 ಎಂಆರ್‌ಪಿಗಳು ಮತ್ತು ಶಿಕ್ಷಕರ ಈ ಇ-ಪೋರ್ಟ್‍ಫೋಲಿಯೋಗಳನ್ನು ರಾಜ್ಯದಾದ್ಯಂತ ಆಯ್ದ 136 ಮಾರ್ಗದರ್ಶಕರು ಮೌಲ್ಯಮಾಪನ ಮಾಡಿದ್ದಾರೆ. ಅವರು ಶಿಕ್ಷಕರ ಅಂಕಗಳನ್ನು ದಾಖಲಿಸಲು ಸುರಕ್ಷಿತ Google sheetಗಳನ್ನು ಬಳಸಿದ್ದಾರೆ. ಗ್ರೇಡಿಂಗ್ ಕೆಲಸವನ್ನು ಪೂರ್ಣಗೊಳಿಸಿದ ನಂತರ, ಈ ಶಿಕ್ಷಕರಿಗೆ ಇಂಡಕ್ಷನ್ -1 ಕೋರ್ಸ್ ಪೂರ್ಣಗೊಂಡಿರುವ ಬಗ್ಗೆ ರಾಜ್ಯ ಸರ್ಕಾರದ ಪರವಾಗಿ ಡಿ,ಎಸ್.ಇ.ಆರ್.ಟಿ. ಮತ್ತು ಹೊಸ ದೆಹಲಿಯ ಸಿ.ಐ.ಇ.ಟಿ.-ಎನ್‌.ಸಿ.ಇ.ಆರ್.ಟಿ. ಯ ಜಂಟಿ ಪ್ರಮಾಣಪತ್ರವನ್ನು ನೀಡಲಾಯಿತು. ಅದೇ ರೀತಿ ರಿಫ್ರೆಶರ್ ಕೋರ್ಸ್ -1 ನಲ್ಲಿ 32 ಇ-ಪೋರ್ಟ್‍ಫೋಲಿಯೋಗಳಿವೆ. 2019-20 ರಲ್ಲಿ 4261 ಇಂಡಕ್ಷನ್ -1 ತರಬೇತಿ ಪಡೆದ ಶಿಕ್ಷಕರು ಮತ್ತು 5912 RC-1 ತರಬೇತಿ ಪಡೆದ ಶಿಕ್ಷಕರ ಇ-ಪೋರ್ಟ್‍ಫೋಲಿಯೋಗಳ ಗ್ರೇಡಿಂಗ್ ಕಾರ್ಯ ಪ್ರಗತಿಯಲ್ಲಿದೆ. ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ 10,173 ಶಿಕ್ಷಕರು ಡಿ,ಎಸ್.ಇ.ಆರ್.ಟಿ. ಮತ್ತು ಸಿ.ಐ.ಇ.ಟಿ.-ಎನ್‌.ಸಿ.ಇ.ಆರ್.ಟಿ. ಯ ಜಂಟಿಯಾಗಿ ನೀಡುವ ಆಯಾ ಕೋರ್ಸ್ ಪೂರ್ಣಗೊಳಿಸಿರುವ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ.

TALP IT@SCHOOLS IN KARNATAKA ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಇಂಡಕ್ಷನ್ -1 ಮತ್ತು ರಿಫ್ರೆಶರ್ ಕೋರ್ಸ್-1 ತರಬೇತಿಗಳ ನೋಂದಣಿ, ಪ್ರತಿಕ್ರಿಯೆ ಮತ್ತು ಮಾನಿಟರಿಂಗ್ ಸ್ವರೂಪಗಳ ಲಿಂಕ್ಗಳು ಮತ್ತು ಕ್ಯೂಆರ್ ಸಂಕೇತಗಳು

ಕ್ರ. ಸಂ.
ಗೂಗಲ್ ಫಾರ್ಮ್
ಕ್ಯೂಆರ್ ಕೋಡ್
1ತರಬೇತಿ ನೋಂದಣಿ ಫಾರ್ಮ್
2ದೈನಂದಿನ ಪ್ರತಿಕ್ರಿಯೆ ಫಾರ್ಮ್
3ಒಟ್ಟಾರೆ ಪ್ರತಿಕ್ರಿಯೆ ಫಾರ್ಮ್
4ತರಬೇತಿ ಮಾನಿಟರಿಂಗ್ ಫಾರ್ಮ್
5TALP ಶಾಲಾ ಭೇಟಿ ಫಾರ್ಮ್
6ಮಾರ್ಗದರ್ಶಕರಿಗೆ ಗ್ರೇಡಿಂಗ್ ಶೀಟ್
7ರಾಜ್ಯ ಹಂತದ ಕ್ರೂಢೀಕರಣ ಫಾರ್ಮ್
8ಇಂಡಕ್ಷನ್-1ಕನ್ನಡ ವೀಡಿಯೊಗಳು
9ಇಂಡಕ್ಷನ್-1ಇಂಗ್ಲೀಷ್ ವೀಡಿಯೊಗಳು
10ವಿಷಯ ನಿರ್ದಿಷ್ಟ ಪರಿಕರಗಳ ವೀಡಿಯೊಗಳು

ತರಬೇತಿಯ ಫಲಿತಗಳು:

 1. ಟಿ.ಎ.ಎಲ್.ಪಿ. ತರಬೇತಿಗಳಲ್ಲಿನ ಡಿಜಿಟಲ್ ವಿಧಾನಗಳು ಮತ್ತು ಅನ್ವಯಗಳ ತರಬೇತಿ ಕಾರಣದಿಂದ ಶಿಕ್ಷಕರು ಅಂತರ್ಜಾಲ ಸಂಪನ್ಮೂಲಗಳನ್ನು ಪಡೆಯಲು ಅಲ್ಲದೇ ತಮಗೆ ಅಗತ್ಯ ಸಂಪನ್ಮೂಲಗಳನ್ನು ವಿವಿಧ ತಂತ್ರಾಂಶಗಳಿಂದ ತಾವೇ ಸೃಜಿಸಿಕೊಳ್ಳುವುದು ಹಾಗೂ ಅವುಗಳನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಇ-ಮೇಲ್ ಲಿಸ್ಟ್ ಮುಖಾಂತರ ಹಂಚಿಕೊಳ್ಳುವುದು ಸಾಧ್ಯವಾಗಿದೆ.
 2. ಶಿಕ್ಷಕರು ಐ.ಸಿ.ಟಿ.ಗೆ ಸಂಬಂಧಿಸಿದ ಜಾಲಗಳನ್ನು ಬಳಸಲು ತಿಳಿದಿದ್ದಾರೆ.
 3. ಕಂಪ್ಯೂಟರ್ ಬಳಕೆಯ ಮತ್ತು ಅಂತರ್ಜಾಲ ಸಂಪರ್ಕವನ್ನು ಹೊಂದಿರುವ ಮೌಲ್ಯವನ್ನು ಶಿಕ್ಷಕರು ತಿಳಿಯುತ್ತಿರುವುದರಿಂದ ಅನೇಕ ಶಿಕ್ಷಕರು ತಮ್ಮ ವೈಯಕ್ತಿಕ ಲ್ಯಾಪ್ಟಾಪ್ಗಳನ್ನು ಖರೀದಿಸಿದ್ದಾರೆ. ತರಬೇತಿ ಕಾರ್ಯಾಗಾರಗಳಿಗೆ ಶಿಕ್ಷಕರು ತಮ್ಮದೇ ಲ್ಯಾಪ್ಟಾಪ್ಗಳನ್ನು ತಂದು ಬಳಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
 4. ಅನೇಕ ಶಿಕ್ಷಕರು ಟಿ.ಎ.ಎಲ್.ಪಿ. ತರಬೇತಿಗಳಲ್ಲಿ ಕಲಿಸಲ್ಪಟ್ಟಿರುವ ಫ್ರೀ ಅಂಡ್ ಓಪನ್ ಸೋರ್ಸ್ ಸಾಫ್ಟ್ವೇರ್ (FOSS) ಮತ್ತು ಅಪ್ಲಿಕೇಶನ್ಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯು ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಅಳವಡಿಸಲು ಉದ್ದೇಶಿಸಿರುವ ಐ.ಸಿ.ಟಿ. ವಿಧಾನಗಳನ್ನು ರಾಷ್ಟ್ರೀಯ ಐ.ಸಿ.ಟಿ. ಶಿಕ್ಷಣ ನೀತಿಯೊಂದಿಗೆ ಸಂಯೋಜಿಸುತ್ತದೆ. ಇದು FOSS ತಂತ್ರಾಂಶಗಳ ಬಳಕೆಯನ್ನು ಶಿಫಾರಸ್ಸು ಮಾಡುತ್ತದೆ ಮತ್ತು ಸಾಫ್ಟ್ವೇರ್ಗಳ ಕಳ್ಳತನವನ್ನು ಕ್ರಮೇಣ ನಿಯಂತ್ರಿಸುತ್ತದೆ.

ಇಲ್ಲಿಯವರೆಗಿನ ಪ್ರಗತಿ:

2016-17 ಮತ್ತು 2017-18ರ ಅವಧಿಯಲ್ಲಿ, ಒಟ್ಟು 8,026 ಶಿಕ್ಷಕರು ಮತ್ತು ಮುಖ್ಯಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಯಿತು. ಅವರಲ್ಲಿ 6,424 ಶಿಕ್ಷಕರು ಮತ್ತು 1,602 ಮುಖ್ಯಶಿಕ್ಷಕರು. ಇವರಲ್ಲಿ 7,676 ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ತಮ್ಮ ಇ-ಪೋರ್ಟ್ಫೋಲಿಯೋಗಳನ್ನು ಸಲ್ಲಿಸಿದ್ದಾರೆ. ಅವುಗಳ ಗ್ರೇಡಿಂಗ್ ಕಾರ್ಯವನ್ನು 2018-19ರಲ್ಲಿ ಮಾಡಲಾಗಿದೆ ಹಾಗೂ ಅವರಿಗೆ ಕರ್ನಾಟಕ ಸರ್ಕಾರ ಮತ್ತು ಸಿ.ಐ.ಇ.ಟಿ.ಯ ಜಂಟಿ ಪ್ರಮಾಣ ಪತ್ರವನ್ನು ಅವರ ಟಿ.ಡಿ.ಎಸ್. (Teachers Data Software)ನಲ್ಲಿ ವಿತರಿಸಲಾಗಿದೆ. ಇದೇ ವರ್ಷಗಳಲ್ಲಿ 413 ಡಯಟ್ ಉಪನ್ಯಾಸಕರುಗಳಿಗೆ ಇಂಡಕ್ಷನ್-1 ತರಬೇತಿ ನೀಡಲಾಗಿದೆ.

2018-19ರಲ್ಲಿ ತರಬೇತಿಗೆ ಒಳಪಡಿಸಿದ 1,195 ಸ.ಪ್ರೌ. ಶಾಲೆಗಳಲ್ಲಿ, 427 ಟೆಲಿ-ಎಜುಕೇಶನ್ ಪ್ರೌಢಶಾಲೆಗಳು (1,529 ಶಿಕ್ಷಕರು), 734 ಆಯ್ಕೆಯಾದ ಸ. ಪ್ರೌ. ಶಾಲೆಗಳು, 21 ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್)ಗಳು ಮತ್ತು 18 ಸ್ವಯಂ ಆಸಕ್ತ ಸ. ಪ್ರೌ. ಶಾಲೆಗಳು (2,732 ಶಿಕ್ಷಕರು) ಆಗಿದ್ದು ಆ ಶಾಲೆಗಳ ಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಯಿತು. ಇದಲ್ಲದೇ, ಇಂಡಕ್ಷನ್-1 ತರಬೇತಿ ಪಡೆದ 6,424 ಶಿಕ್ಷಕರಲ್ಲಿ 5,912 ಶಿಕ್ಷಕರಿಗೆ ರಿಫ್ರೆಶರ್ ಕೋರ್ಸ್-1 & 2 ತರಬೇತಿ ನೀಡಲಾಗಿದೆ. ಇದೇ ವರ್ಷದಲ್ಲಿ 143 ಡಯಟ್ ಉಪನ್ಯಾಸಕರುಗಳಿಗೆ ಕೂಡ ಇಂಡಕ್ಷನ್-1 ತರಬೇತಿ ನೀಡಲಾಗಿದೆ.

2019-2 0ನೇ ಸಾಲಿನಲ್ಲಿ ಉಳಿದ ಎಲ್ಲಾ 1,757 ಸ.ಪ್ರೌ.ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇಂಡಕ್ಷನ್-1 ರ ಗುರಿ, 16,190 ಮತ್ತು ರಿಫ್ರೆಶರ್ ಕೋರ್ಸ್-1 ಗುರಿ 4,680 ಒಟ್ಟು 20,870 ಆಗಿದೆ. ಇದೇ ವರ್ಷದಲ್ಲಿ 2,000 ಪ್ರಾಥಮಿಕ ಶಾಲೆಗಳಿಂದ 4,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಗುವುದು. ಮತ್ತು ಹಿಂದಿನ ವರ್ಷದಲ್ಲಿ ತರಬೇತಿ ಪಡೆದ ಶಿಕ್ಷಕರ ಇ-ಪೋರ್ಟ್ಫೋಲಿಯೋಗಳನ್ನು ಮೌಲ್ಯಮಾಪನ ಮಾಡಿ ಪ್ರಮಾಣಪತ್ರಗಳನ್ನು ನೀಡಲಾಗುವುದು.

TALP ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ತರಬೇತಿಯ ಪ್ರಗತಿ - 2016-17 ರಿಂದ 2019-20 ರವರೆಗೆ

ವರ್ಷಭಾಗವಹಿಸಿದವರು ಶಾಲೆಗಳ ಸಂಖ್ಯೆ
ತರಬೇತಿಯ ಹೆಸರು
ಇಂಡಕ್ಷನ್-1ರಿಫ್ರೆಶರ್ ಕೋರ್ಸ್-1
2016-17 ಎಂ.ಆರ್.ಪಿ. ಗಳು - 136 -
ಶಿಕ್ಷಕರು ಮತ್ತು ಮುಖ್ಯಶಿಕ್ಷಕರು 999 2910 -
ಡಯಟ್ ಉಪನ್ಯಾಸಕರು - 413 -
2016-17 ರ ಒಟ್ಟು99934590
2017-18 ಪಿ.ಯು. ಎಂ.ಆರ್.ಪಿ.ಗಳು - 97 -
ಶಿಕ್ಷಕರು ಮತ್ತು ಮುಖ್ಯಶಿಕ್ಷಕರು 750 5116 -
2017-18 ರ ಒಟ್ಟು75052130
2018-19 ಎಂ.ಆರ್.ಪಿ. ಗಳು - - 136
ಶಿಕ್ಷಕರು 1195 4261 -
ಇಂಡಕ್ಷನ್-1 ಪಡೆದ ಶಿಕ್ಷಕರು - - 5912
ಡಯಟ್ ಉಪನ್ಯಾಸಕರು - 143
2018-19ರ ಒಟ್ಟು 1195 44046048
2019-20 - 15/8/2019 ರಲ್ಲಿದಂತೆ ಶಿಕ್ಷಕರು 1757 5410
ಇಂಡಕ್ಷನ್-1 ಪಡೆದ ಶಿಕ್ಷಕರು 222
2019-20 ರ ಒಟ್ಟು17575410222
ಒಟ್ಟು4,70118,4866,270

ವೃಂದವಾರು ಭಾಗವಹಿಸಿದವರ ಪ್ರಗತಿ

ವರ್ಷಭಾಗವಹಿಸಿದವರು ತರಬೇತಿಯ ಹೆಸರು
ಇಂಡಕ್ಷನ್-1ರಿಫ್ರೆಶರ್ ಕೋರ್ಸ್-1
2016-17 ರಿಂದ 2018-19 ವರೆಗೆಶಿಕ್ಷಕರು108216048
ಮುಖ್ಯಶಿಕ್ಷಕರು 1602 -
ಡಯಟ್ ಉಪನ್ಯಾಸಕರು 556 -
ಪಿ.ಯು. ಎಂ.ಆರ್.ಪಿ.ಗಳು 97 -
2019-20 15/8/2019 ರಲ್ಲಿದಂತೆ ಶಿಕ್ಷಕರು 5410 222
ಒಟ್ಟು18,4866,276

TALP ಯ ಐಟಿ@ಸ್ಕೂಲ್ಸ್ ಅಡಿಯಲ್ಲಿ ಇಂಡಕ್ಷನ್-1 & RC-1 ತರಬೇತಿ ಪಡೆದ ಶಿಕ್ಷಕರ ಪಟ್ಟಿ

ಕ್ರ. ಸಂಜಿಲ್ಲೆಯ ಹೆಸರು2016-172017-182018-19 2018-19 TE+KPSಒಟ್ಟು2018-19 RC-1
01ಬೆಂಗಳೂರು ಗ್ರಾಮಾಂತರ 126 23 70 28 247 111
02ಬೆಂಗಳೂರು ನಗರ 112 103 58 - 273 160
03ಬೆಂಗಳೂರು ಉತ್ತರ 141 43 - - 184 127
04ಚಿಕ್ಕಬಳ್ಳಾಪುರ 139 187 - 43 369 257
05ಚಿತ್ರದುರ್ಗ97 68 116 73 354 124
06ದಾವಣಗೆರೆ 121 110 78 143 452 182
07ಕೋಲಾರ 119 78 98 72 367 119
08ಮಧುಗಿರಿ117 45 47 24 233 121
09ರಾಮನಗರ106 100 74 68 348 153
10ಶಿವಮೊಗ್ಗ 246 97 104 102 549 270
11ತುಮಕೂರು193 82 95 28 398 216
ಒಟ್ಟು1517 936 740 581 3774 1840
ಕ್ರ. ಸಂಜಿಲ್ಲೆಯ ಹೆಸರು2016-172017-182018-19 2018-19 TE+KPSಒಟ್ಟು2018-19 RC-1
01ಬಾಗಲಕೋಟೆ156 126 141 94 517 208
02ಬೆಳಗಾವಿ116 92 103 76 387 154
03ಚಿಕ್ಕೋಡಿ169 140 120 - 429 231
04ಧಾರವಾಡ218 112 23 - 353 252
05ಗದಗ128 123 48 - 299 154
06ಹಾವೇರಿ135 111 88 63 397 194
07ಶಿರಸಿ46 19 95 47 207 45
08ಉತ್ತರ ಕನ್ನಡ30 34 34 21 119 50
09ವಿಜಯಪುರ204 46 110 30 390 193
ಒಟ್ಟು1202 803 762 331 3098 1481
ಕ್ರ. ಸಂಜಿಲ್ಲೆಯ ಹೆಸರು2016-172017-182018-19 2018-19 TE+KPSಒಟ್ಟು2018-19 RC-1
01ಬಳ್ಳಾರಿ79 121 99 39 338 172
02ಬೀದರ 80 100 116 108 404 144
03ಕಲಬುರ್ಗಿ55 181 144 135 515 162
04ಕೊಪ್ಪಳ45 32 50 87 214 64
05ರಾಯಚೂರು131 92 43 56 322 165
06ಯಾದಗಿರಿ46 33 97 55 231 50
ಒಟ್ಟು436 559 549 480 2024 757
ಕ್ರ. ಸಂಜಿಲ್ಲೆಯ ಹೆಸರು2016-172017-182018-19 2018-19 TE+KPSಒಟ್ಟು2018-19 RC-1
01ಚಾಮರಾಜನಗರ45 173 65 52 335 172
02ಚಿಕ್ಕಮಗಳೂರು260 32 66 - 358 222
03ದಕ್ಷಿಣ ಕನ್ನಡ138 147 124 - 409 223
04ಹಾಸನ231 174 137 - 542 311
05ಕೊಡಗು 118 54 - - 172 137
06ಮಂಡ್ಯ205 82 98 - 385 228
07ಮೈಸೂರು202 139 137 121 599 250
08ಉಡುಪಿ232 195 59 - 486 357
ಒಟ್ಟು1431 996 686 173 3286 1900

ವರದಿಗಳು:


ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (ಖರೀದಿ ವಿಭಾಗ)

(Technology Assistance Learning Programe) TALP

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿನ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assistance Learning Programe) TALP ಕಾರ್ಯಕ್ರಮವನ್ನು 2016-17ನೇ ಶೈಕ್ಷಣಿಕ ಸಾಲಿನಿಂದ 5 ವರ್ಷಗಳ ಅವಧಿಗೆ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಜಾರಿಗೊಳಿಸಿರುವ ಎಜುಸ್ಯಾಟ್, ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದಡಿಯ ಕಂಪ್ಯೂಟರ್ ಬೆಂಬಲಿತ ಕಲಿಕೆ (TALP), ಟೆಲಿಶಿಕ್ಷಣ ಮತ್ತು ಐಸಿಟಿ-3 ಕಾರ್ಯ ಚಟುವಟಿಕೆಗಳನ್ನು ಇದರಲ್ಲಿ ವಿಲೀನಗೊಳಿಸುವುದಾಗಿದೆ.

ಈ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assistance Learning Programe) TALP ಕಾರ್ಯಕ್ರಮದ ಒಂದು ಭಾಗವಾಗಿ IT@Schools in Karnataka ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ) ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.

ಐಟಿ@ಸ್ಕೂಲ್ಸ್ ಕಾರ್ಯ ಯೋಜನೆಯ ಪ್ರಮುಖ ಚಟುವಟಿಕೆಗಳು.

 1. ಶಿಕ್ಷಕರಿಗೆ ತಂತ್ರಜ್ಞಾನ ಆಧರಿತ ತರಬೇತಿ.
 2. ಇ-ಕಂಟೆಂಟ್ ಅಭಿವೃದ್ಧಿ.
 3. ಶಾಲೆ/ಕಾಲೇಜುಗಳಿಗೆ ಇಂಟರ್ನೆಟ್ ಸೌಲಭ್ಯ.
 4. ಕಾರ್ಯಾಚರಣೆ ಮತ್ತು ನಿರ್ವಹಣೆಯ ಒತ್ತಾಸೆ.
 5. SATS ಮತ್ತು MIS ಗೆ ತಂತ್ರಾಂಶ ಅಭಿವೃದ್ಧಿ.
 6. ಶಾಲೆ ಮತ್ತು ಕಾಲೇಜುಗಳಿಗೆ ಹಾರ್ಡ್ವೇರ್ ಸರಬರಾಜು

ಸರ್ಕಾರಿ ಪ್ರೌಢಶಾಲೆಗಳಿಗೆ ಹಾರ್ಡ್ವೇರ್ ಸರಬರಾಜು.

ತಂತ್ರಜ್ಞಾನ ತರಬೇತಿ ಪಡೆದ ಶಿಕ್ಷಕರು ಇ-ಕಂಟೆಂಟ್ನ್ನು ಉಪಯೋಗಿಸಿ ಮತ್ತು ವೃದ್ಧಿಸಿ ಕಲಿಕೆ ಬೋಧನೆಯಲ್ಲಿ ಬಳಸಲು ಪ್ರತಿ ಶಾಲೆಗೆ ಒಂದು ಇ-ಕಂಟೆಂಟ್ ಪೂರಣ ಮಾಡಿದ ಲ್ಯಾಪ್ಟಾಪ್ಗಳನ್ನು ಹಾಗೂ ಎಲ್.ಸಿ.ಡಿ ಪ್ರೊಜೆಕ್ಟರ್ಗಳನ್ನು ಒದಗಿಸಲಾಗುತ್ತಿದೆ. ಈವರೆಗೆ ಅನುಷ್ಠಾನಗೊಳಿಸಿದ 2500 ಸರ್ಕಾರಿ ಪ್ರೌಢಶಾಲೆಗಳಿಗೆ ಈ ಸೌಲಭ್ಯ ಒದಗಿಸಿದೆ. ಪ್ರಸ್ತುತ 2016-17ನೇ ಸಾಲಿನ 1000 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ಗಳನ್ನು ಸರಬರಾಜು ಮತ್ತು ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ 2186 ಸರ್ಕಾರಿ ಪ್ರೌಢಶಾಲೆಗಳಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (HKDB) ಯು ತನ್ನ ವ್ಯಾಪ್ತಿಯ 06 ಜಿಲ್ಲೆಗಳಲ್ಲಿನ 718 ಸರ್ಕಾರಿ ಪ್ರೌಢಶಾಲೆಗಳಲ್ಲಿ TALP ಕಾರ್ಯಕ್ರಮವನ್ನು ಪ್ರಸ್ತುತ ವರ್ಷ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಯೋಜನೆಯಂತೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು ಏಕ ಕಾಲದಲ್ಲಿ ಪ್ರೊಜೆಕ್ಟರ್, ಲ್ಯಾಪ್ಟಾಪ್, ಕಂಪ್ಯೂಟರ್ ಕೊಠಡಿ ಸಿದ್ಧತೆ, ಯು.ಪಿ.ಎಸ್ ಮತ್ತು ಬ್ಯಾಟರಿ ಪೂರೈಕೆ ಹಾಗೂ ಕಂಪ್ಯೂಟರ್ಗಳನ್ನು ಒದಗಿಸಲು ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ಮಾಡಿದ್ದು, 2019-20ನೇ ಸಾಲಿನಲ್ಲಿ ಈ ಸೌಲಭ್ಯಗಳನ್ನು ಪೂರೈಸಲು ಪ್ರಕ್ರಿಯೆಯಲ್ಲಿದೆ.

ಈ ಕಾರ್ಯ ಯೋಜನೆಗೆ ಇಂಟರ್ನೆಟ್ ಸಂಪರ್ಕ ಸೌಲಭ್ಯವಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರಥಮಾದ್ಯತೆ ನೀಡಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷವಾರು ಶಾಲೆಗಳ ಸಂಖ್ಯೆ ಕೆಳಕಂಡಂತಿದೆ.

ಒಟ್ಟು ಸರ್ಕಾರಿ ಪ್ರೌಢಶಾಲೆಗಳುಸರಬರಾಜಾದ ಉಪಕರಣಗಳ ವಿವರಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆಒಟ್ಟು
2016-172017-182018-192019-20
4686-1000750750718 (HKDB) (1468 ರಾಜ್ಯವಲಯ)4686
ಈವರೆಗೆ ಪೂರೈಸಿರುವ ಹಾರ್ಡ್ ವೇರ್ ಗಳುಲ್ಯಾಪ್ ಟಾಪ್1000750750--
ಎಲ್.ಸಿ.ಡಿ ಪ್ರೊಜೆಕ್ಟರ್400365511--
ಆಲ್ ಇನ್ ಓನ್ ಕಂಪ್ಯೂಟರ್ 14945 + (1000 ಸರ್ವರ್) 1000 ಶಾಲೆಗಳಿಗೆ ಉಪಕರಣಗಳು ಸರಬರಾಜಾಗಿ install ಆಗಿವೆ.

ಉಳಿದ 1468 ಶಾಲೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಿಕೊಂಡಿದೆ. ಸದರಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಅನುಷ್ಠಾನಗೊಳಿಸುತ್ತಿರುವ ಶಾಲೆಗಳ ವರ್ಷವಾರು ವಿವರ

TALP ಕಾರ್ಯಕ್ರಮದಡಿಯಲ್ಲಿ IT@Schools in Karnataka ಕಾರ್ಯ ಯೋಜನೆಯಲ್ಲಿ 2016-17 ರಿಂದ 2018-19 ರವರೆಗೆ ಆಯ್ಕೆಗೊಂಡ ಶಾಲೆಗಳ ಸಂಖ್ಯೆಯ ವಿವರ.

ಕ್ರ.ಸಂ ಜಿಲ್ಲೆಯ ಹೆಸರುಒಟ್ಟು ಶಾಲೆಗಳು2016-172017-182018-19ಒಟ್ಟು ಉಳಿಕೆ ಶಾಲೆಗಳು
1 ಬಾಗಲಕೋಟೆ 183 34 31 42 107 76
2 ಬೆಂಗಳೂರು ಗ್ರಾಮಾಂತರ 63 26 5 18 49 14
3 ಬೆಂಗಳೂರು ಉತ್ತರ 57 29 9 10 48 9
4 ಬೆಂಗಳೂರು ನಗರ 86 24 25 11 60 26
5 ಬೆಳಗಾವಿ 130 25 21 30 76 54
6 ಚಾಮರಾಜನಗರ 86 9 36 16 61 25
7 ಚಿಕ್ಕಬಳ್ಳಾಪುರ 111 35 42 10 87 24
8 ಚಿಕ್ಕಮಗಳೂರು 116 58 9 16 83 33
9 ಚಿಕ್ಕೋಡಿ 181 35 28 30 93 88
10 ಚಿತ್ರದುರ್ಗ 113 20 16 28 64 49
11 ದಕ್ಷಿಣ ಕನ್ನಡ 169 27 31 31 89 80
12 ದಾವಣಗೆರೆ 158 25 25 14 64 94
13 ದಾರವಾಡ 108 48 24 6 78 30
14 ಗದಗ 113 27 25 14 66 47
15 ಹಾಸನ 241 54 41 40 135 106
16 ಹಾವೇರಿ 141 30 25 24 79 62
17 ಕೊಡಗು 47 27 13 2 42 5
18 ಕೋಲಾರ 125 16 21 28 65 60
19 ಮಧುಗಿರಿ 95 24 12 15 51 44
20 ಮಂಡ್ಯ 215 48 18 15 81 134
21 ಮೈಸೂರು 232 43 30 25 98 134
22 ರಾಮನಗರ 107 23 23 36 82 25
23 ಶಿವಮೊಗ್ಗ 164 55 22 24 101 63
24 ಶಿರಸಿ 74 10 4 26 40 34
25 ತುಮಕೂರು 133 44 18 21 83 50
26 ಉತ್ತರ ಕನ್ನಡ 49 6 8 10 24 25
27 ಉಡುಪಿ 106 49 42 6 97 9
28 ವಿಜಯಪುರ 152 44 10 30 84 68
ಒಟ್ಟು355589561457820871468
1 ಬಳ್ಳಾರಿ (HK) 197 22 28 37 87 110
2 ಬೀದರ (HK) 165 19 25 35 79 86
3 ಕಲಬುರ್ಗಿ (HK) 293 13 44 44 101 192
4 ಕೊಪ್ಪಳ (HK) 155 12 8 14 34 121
5 ರಾಯಚೂರು(HK) 199 29 25 11 65 134
6 ಯಾದಗಿರಿ (HK) 122 10 6 31 47 75
ಒಟ್ಟು1131105136172413718
Grand Total4686100075075025002186

HKRDB ಅನುದಾನದಿಂದ 718 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪಿಸಲು 7180 A-I-O Computers, 718 LCD Projector, 718 Laptop ಮತ್ತು 718 UPS Battery ಗಳ ಖರೀದಿ ಮತ್ತು ಸರಬರಾಜಿನ ಪ್ರಗತಿ ವರದಿ. (ದಿನಾಂಕ:23-08-2019 ರಲ್ಲಿದ್ದಂತೆ)

ಟೆಂಡರ್ ಆಹ್ವಾನದ ಪ್ರಗತಿ:

 1. 7180 A-I-O Computers, 718 LCD Projector, 718 Laptop ಮತ್ತು 718 UPS Battery ಗಳನ್ನು ಸರಬರಾಜು ಮಾಡುವ ಸಂಬಂಧ ದಿನಾಂಕ : 01-07-2019 ರಂದು ನಾಲ್ಕು ಪ್ರತ್ಯೇಕ ಟೆಂಡರ್ಗಳನ್ನು E Procurement portal ಮೂಲಕ ಆಹ್ವಾನಿಸಲಾಗಿದೆ.
 2. ದಿನಾಂಕ 03-09-2019 ರಂದು ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
 3. ಟೆಂಡರ್ಗಳನ್ನು ಆಹ್ವಾನಿಸಿದ ಬಗ್ಗೆ ದಿನಾಂಕ : 02-07-2019 ರಂದು ಕನ್ನಡ ಹಾಗೂ ಆಂಗ್ಲ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದ್ದು, ಪ್ರಕಟಣೆಗೊಂಡಿರುತ್ತದೆ.
 4. ರಾಜ್ಯಾದ್ಯಂತ ಹಾಗೂ ಜಿಲ್ಲೆಯಾದ್ಯಂತ ಪ್ರಕಟಗೊಳ್ಳಲು ರಾಜ್ಯ ಹಂತದ ಮತ್ತು ಜಿಲ್ಲಾ ಹಂತದ ಟೆಂಡರ್ ಬುಲೆಟಿನ್ನಲ್ಲಿ ಪ್ರಕಟಿಸಲು ಕ್ರಮವಹಿಸಲಾಗಿದೆ.
 5. ದಿನಾಂಕ : 07-08-2019 ರಂದು ಮಧ್ಯಾಹ್ನ 3.00 ಗಂಟೆಗೆ 4 ಟೆಂಡರ್ಗಳಿಗೆ ಸಂಬಂಧಿಸಿದಂತೆ ಪ್ರಿ-ಬಿಡ್ ಸಭೆಗಳನ್ನು ಆಯೋಜಿಸಲಾಗಿದೆ.

ಕಂಪ್ಯೂಟರ್ ಅಳವಡಿಸಲು ಕೊಠಡಿ ಪೂರ್ವ ಸಿದ್ಧತೆಯ ಪ್ರಗತಿ:

 1. ಕೊಠಡಿ ಪೂರ್ವ ಸಿದ್ಧತೆ ಕೈಗೊಳ್ಳುವ ಕುರಿತು ವಿವರವಾದ ಸುತ್ತೋಲೆಯನ್ನು ಹೊರಡಿಸಲಾಗಿದೆ.
 2. ದಿನಾಂಕ : 03-08-2019 ರಂದು 718 ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಂಬಂಧಿಸಿದ ಡಯಟ್ ಪ್ರಾಂಶುಪಾಲರುಗಳು, ಬಿ.ಇ.ಒ ಮತ್ತು ಬಿ.ಆರ್.ಸಿ ಗಳಿಗೆ ದೂರಸಂಪರ್ಕ ತರಬೇತಿ ಮೂಲಕ ಕೊಠಡಿಪೂರ್ವ ಸಿದ್ಧತೆ ಕೈಗೊಳ್ಳುವ ಕುರಿತಂತೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ.
 3. ದಿನಾಂಕ : 19-08-2019 ಮತ್ತು 20-08-2019 ರಂದು ಕ್ರಮವಾಗಿ ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಸಂಬಂಧಿಸಿದ ಪ್ರೌಢಶಾಲೆಗಳ ಮುಖ್ಯಶಿಕ್ಷಕರುಗಳ ಸಭೆಯನ್ನು ನಡೆಸಿ ಕೊಠಡಿಪೂರ್ವ ಸಿದ್ಧತೆಯ ಪ್ರಗತಿ ಪರಿಶೀಲನೆ ಮಾಡಲಾಗಿದೆ.
 4. ಪ್ರತಿಶಾಲೆಗೆ ರೂ 1 ಲಕ್ಷ ಗಳಂತೆ ಕೊಠಡಿ ಪೂರ್ವಸಿದ್ಧತೆಯ ಸಲುವಾಗಿ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಅಭಿಯಾನ ಇವರಿಂದ ರೂ 7,18,00,000,00/- (ಏಳು ಕೋಟಿ ಹದಿನೆಂಟು ಲಕ್ಷ ರೂಗಳು ಬಿಡುಗಡೆಯಾಗಿದ್ದು) ಇದನ್ನು 6 ಜಿಲ್ಲೆಗಳ 718 ಶಾಲಾ ಮುಖ್ಯೋಪಾಧ್ಯಾಯರ ಖಾತೆಗಳಿಗೆ NEFT ಮೂಲಕ ದಿನಾಂಕ 18-07-2019 ರಂದು ವರ್ಗಾವಣೆ ಮಾಡಲಾಗಿದೆ.
 5. 70 ಶಾಲೆಗಳ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ IFSC Code ಗಳಲ್ಲಿ ವ್ಯತ್ಯಾಸಗಳಿದ್ದ ಕಾರಣ ಅನುದಾನವು ವಾಪಸ್ ಬಂದಿದ್ದು, ರೂ ಎಪ್ಪತ್ತು ಲಕ್ಷಗಳನ್ನು ಸಂಬಂಧಿಸಿದ ಶಾಲೆಗಳಿಗೆ ತುರ್ತು ಬಿಡುಗಡೆ ಮಾಡಲು ಡಯಟ್ ಪ್ರಾಂಶುಪಾಲರುಗಳಿಗೆ ಅನುದಾನವನ್ನು ದಿನಾಂಕ:23-08-2019 ರಂದು NEFT ಮೂಲಕ ವರ್ಗಾವಣೆ ಮಾಡಲಾಗಿದೆ.
 6. ಕೊಠಡಿ ಪೂರ್ವ ಸಿದ್ದತೆಯ ಪ್ರಗತಿ ಹಾಗೂ ಪ್ರಗತಿಯ ಫೋಟೋಗಳನ್ನು ಶಾಲಾವಾರು ಹಂಚಿಕೊಳ್ಳಲು ಗೂಗಲ್ ಶೀಟ್ನ್ನು ಡಯಟ್ಗಳಿಗೆ ನೀಡಲಗಿದ್ದು, ಅದರಲ್ಲಿ ಮಾಹಿತಿಯನ್ನು ವಾರಕ್ಕೊಮ್ಮೆ ಅಪ್ಡೇಟ್ ಮಾಡಲು ಡಯಟ್ಗಳಿಗೆ ಸೂಚಿಸಲಾಗಿದೆ.

ಅ) ರಾಜ್ಯ ವಿಜ್ಞಾನ ಸಂಸ್ಥೆ :

ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಮಟ್ಟವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಂತಗಳಲ್ಲಿ ಉತ್ತಮಪಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಆಸಕ್ತಿ ಮೂಡಿಸಿ ಕುಶಲತೆಗಳನ್ನು ಹೆಚ್ಚಿಸುವುದು ಮತ್ತು ನಿತ್ಯ ಜೀವನದಲ್ಲಿ ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಧ್ಯೇಯ. ಇದಕ್ಕೆ ಪೂರಕವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ರಾಜ್ಯದಲ್ಲಿ 224 ವಿಜ್ಞಾನ ಕೇಂದ್ರಗಳಿವೆ ಹಾಗೂ ಸಿ.ಟಿ.ಇ. ಮೈಸೂರು ಇಲ್ಲಿನ ಆವರಣದಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಲಾಗಿದೆ. ಈ ಹಿಂದೆ ಈ ಕೆಳಗಿನಂತೆ ವಿವಿಧ ಕಾರ್ಯಕ್ರಮಗಳನ್ನು ಡಿ.ಎಸ್.ಇ.ಆರ್.ಟಿ.ವತಿಯಿಂದ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಈ ಕೆಳಗಿನ ಕಾರ್ಯಕ್ರಮಗಳಲ್ಲಿ ಕೆಲವು ಕಾರ್ಯಕ್ರಮಗಳು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆರವರ ಕಛೇರಿಯ ಪ್ರೌಢಶಿಕ್ಷಣ ವಿಭಾಗದಲ್ಲಿ ನಿರ್ವಹಣೆಯಾಗುತ್ತಿವೆ.

 1. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರ ಗೋಷ್ಠಿ
 2. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ವಿಜ್ಞಾನ ವಿಚಾರ ಗೋಷ್ಠಿ
 3. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ
 4. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ
 5. ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ನಾಟಕ ಸ್ಪರ್ಧೆ
 6. ವಿಜ್ಞಾನ ಕೇಂದ್ರಗಳು ಹಾಗೂ ವಿಜ್ಞಾನ ಪಾರ್ಕ್ :

ಆ) ಇನ್ ಸ್ಪೈರ್ ಪ್ರಶಸ್ತಿ ಮಾನಕ್ ಕಾರ್ಯಕ್ರಮ:

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಎಳೆಯ ವಯಸ್ಸಿನಲ್ಲೇ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡು, ಸಂಶೋಧನೆಯನ್ನು ಒಂದು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೇರೇಪಿಸಲು ಇನ್ ಸ್ಪೈರ್(Innovation in Science Pursuit for Inspired Research) ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು 2009-10ನೇ ಸಾಲಿನಿಂದ ಅನುಷ್ಠಾನ ಮಾಡುತ್ತಿದೆ. ದೇಶದ ಸಂಶೋಧನೆ ಮತ್ತು ಬೆಳವಣಿಗೆ ಕ್ಷೇತ್ರಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಗುರುತಿಸಿ, ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಂತದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಯಲ್ಲಿ ಆಸಕ್ತಿ ಹೊಂದುವಂತೆ ಪ್ರೇರೇಪಿಸುವುದು ಹಾಗೂ ಅವರಲ್ಲಿ ಸೃಜನಶೀಲ ಆಲೋಚನೆಯನ್ನು ಬೆಳೆಸುವ ಮೂಲಕ ನಾವೀನ್ಯತೆಯ ಸಂಸ್ಕೃತಿಯನ್ನು ಹೊಂದುವಂತೆ ಮಾಡುವುದು ಈ ಕಾರ್ಯಕ್ರಮದ ಮಹದುದ್ದೇಶವಾಗಿದೆ.

ಈ ಕಾರ್ಯಕ್ರಮದ ಅನುಷ್ಠಾನದ ಪ್ರಾರಂಭದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಕಾರ್ಯಕ್ರಮ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಇನ್ ಸ್ಪೈರ್ ಪ್ರಶಸ್ತಿ ಮಾನಕ್ (INSPIRE- Innovation in Science Pursuit for Inspired Research Award MANAK- Million Minds Augmenting National Aspiration and Knowledge) ಎಂದು ಮಾರ್ಪಡಿಸಲಾಗಿದೆ. ಒಂದು ಶೈಕ್ಷಣಿಕ ವರ್ಷದಲ್ಲಿ ದೇಶದ ಹಿರಿಯ ಪ್ರಾಥಮಿಕ ಶಾಲೆಗಳ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲೆಗಳ 5 ಲಕ್ಷ ವಿದ್ಯಾರ್ಥಿಗಳಿಂದ ಸೇರಿ ಒಟ್ಟು 10 ಲಕ್ಷ ವಿದ್ಯಾರ್ಥಿಗಳಿಂದ ಪ್ರತಿಯೊಬ್ಬರಿಂದ ಒಂದೊಂದು ನೂತನ ವಿಚಾರ ಅಥವಾ ಹೊಳಹು ಅಥವಾ ಕಲ್ಪನೆಗಳನ್ನು (ಐಡಿಯಾ) ಸೃಜಿಸುವ ಉದ್ದೇಶ ಹೊಂದಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 10 ರಿಂದ 15 ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.

ಪ್ರತಿ ಶಾಲೆಯಿಂದ ಇಬ್ಬರಿಂದ ಮೂವರು ವಿದ್ಯಾರ್ಥಿಗಳು ತಮ್ಮ ನವೀನ ಕಲ್ಪನೆ, ಐಡಿಯಾ (ವಿಚಾರ) ಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ಸ್ವೀಕೃತವಾದ ಒಟ್ಟು ಐಡಿಯಾಗಳಲ್ಲಿ ನಾವೀನ್ಯಯುತವಾದ ಐಡಿಯಾಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ಆಯ್ಕೆ ಮಾಡಲಾದ ಐಡಿಯಾಗಳನ್ನು ಸಲ್ಲಿಸಿದ ವಿದ್ಯಾರ್ಥಿ/ನಿಯ ಬ್ಯಾಂಕ್ ಖಾತೆಗೆ ರೂ.10,000 ಮೊತ್ತವನ್ನು ಜಮೆ ಮಾಡಲಾಗುತ್ತದೆ. ಈ ಮೊತ್ತವನ್ನು ಬಳಸಿಕೊಂಡು ವಿದ್ಯಾಥಿ/ನಿಯು ಮಾದರಿಯನ್ನು ಸಿದ್ಧಪಡಿಸಿ, ಜಿಲ್ಲಾ ಹಂತದ ವಸ್ತುಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ಪ್ರದರ್ಶಿಸುತ್ತಾರೆ. ನಾವೀನ್ಯಯುತ ಮಾದರಿಗಳನ್ನು ರಾಜ್ಯ ಹಂತ ಹಾಗೂ ನಂತರ ರಾಷ್ಟ್ರ ಹಂತದಲ್ಲಿ ಪ್ರದರ್ಶಿಸಲಾಗುತ್ತದೆ.

ರಾಷ್ಟ್ರ ಹಂತದಲ್ಲಿ ಅತ್ಯುತ್ತಮವಾದ ಮಾದರಿಗಳನ್ನು ತೀರ್ಪುಗಾರರು ಆಯ್ಕೆ ಮಾಡುತ್ತಾರೆ. ಅವುಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರ ಜೊತೆ ಪ್ರಾಂತೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಷ್ಟ್ರ ಹಂತದಲ್ಲಿ ಆಯ್ಕೆಯಾದ ಅತ್ಯುತ್ತಮವಾದ ಮಾದರಿಗಳನ್ನು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲ್ಪಡುವ ನಾವೀನ್ಯತೆಯ ಉತ್ಸವದಲ್ಲಿ ಪ್ರದರ್ಶಿತವಾಗುತ್ತವೆ. ಸೂಕ್ತವಾದ ಮಾದರಿಗಳನ್ನು ಹೆಚ್ಚಿನ ಜನರು ಬಳಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಸಾರ್ವಜನಿಕ ಬಳಕೆಗೆ ಸೂಕ್ತವಾಗಿರುವ ಮಾದರಿಗಳನ್ನು ಉಪಕರಣಗಳಾಗಿ ಮಾರ್ಪಡಿಸಲು ಸಾಧ್ಯವಿದೆ ಎಂದು ಖಾತ್ರಿಯಾದಲ್ಲಿ ಅವುಗಳಿಗೆ ಏಕ ಹಕ್ಕು ಸ್ವಾಮ್ಯ (ಪೇಟೆಂಟ್) ಕೊಡಿಸಿ ಅಭಿವೃದ್ಧಿಪಡಿಸಲಾಗುತ್ತದೆ.

ಇನ್ ಸ್ಪೈರ್ ಕಾರ್ಯಕ್ರಮದಲ್ಲಿ ರಾಜ್ಯವು ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಈವೆರೆಗೆ ದೇಶದಲ್ಲಿ ಒಟ್ಟು 14,89,490 ವಿದ್ಯಾರ್ಥಿಗಳಿಗೆ ಇನ್ ಸ್ಪೈರ್ ಪ್ರಶಸ್ತಿಗಳನ್ನು ನೀಡಲಾಗಿದ್ದು ಇದರಲ್ಲಿ ಕರ್ನಾಟಕ ರಾಜ್ಯದ ಒಟ್ಟು 1,55,226 ವಿದ್ಯಾರ್ಥಿಗಳಿಗೆ (10.42%) ಇನ್ ಸ್ಪೈರ್ ಪ್ರಶಸ್ತಿ ದೊರೆತಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಪ್ರಶಸ್ತಿ ಪಡೆದ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಈವರೆಗೆ ರಾಜ್ಯದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಪಡೆದ ಒಟ್ಟು ವಿದ್ಯಾರ್ಥಿಗಳಲ್ಲಿ 79,742 ಬಾಲಕಿಯರು ಹಾಗೂ 75,484 ಬಾಲಕರು ಪ್ರಶಸ್ತಿ ಪಡೆದಿರುವುದು ಬಾಲಕಿಯರು ಇನ್ ಸ್ಪೈರ್ ಪ್ರಶಸ್ತಿ ಪಡೆಯುವಲ್ಲಿ ಬಾಲಕರಿಗಿಂತ ಮುಂದಿರುವುದನ್ನು ಗಮನಿಸಬಹುದಾಗಿದೆ. ಈವರೆಗೆ ಆರಂಭದಿಂದ 2015-16ರವರೆಗೆ ನಡೆದ ರಾಷ್ಟ್ರ ಹಂತದ ಇನ್ ಸ್ಪೈರ್ ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 457 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿನ್ನ, ಒಬ್ಬ ವಿದ್ಯಾರ್ಥಿ ಬೆಳ್ಳಿ, ಮೂವರು ವಿದ್ಯಾರ್ಥಿಗಳು ದಕ್ಷಿಣ ಪ್ರಾಂತ್ಯ ಹಂತದಲ್ಲಿ ದ್ವಿತೀಯ ಪ್ರಶಸ್ತಿ ಮತ್ತು ಒಂಭತ್ತು ವಿದ್ಯಾರ್ಥಿಗಳು ರಾಜ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

2018-19ನೇ ಸಾಲಿನಲ್ಲಿ ರಾಜ್ಯದಿಂದ 41,242 ಪ್ರಸ್ತಾವನೆಗಳು ರಾಜ್ಯದಿಂದ ಸಲ್ಲಿಕೆಯಾಗಿದ್ದು, ಇಡೀ ದೇಶದಲ್ಲಿಯೇ ಅತಿ ಹೆಚ್ಚು ಪ್ರಸ್ತಾವನೆ ಸಲ್ಲಿಸಿದ ರಾಜ್ಯವಾಗಿ ಕರ್ನಾಟಕವು ಹೊರಹೊಮ್ಮಿತ್ತು. ರಾಜ್ಯದಿಂದ ಸಲ್ಲಿಕೆಯಾದ ಪ್ರಸ್ತಾವನೆಗಳಲ್ಲಿ 7179 ಪ್ರಶಸ್ತಿಗಳು ರಾಜ್ಯಕ್ಕೆ ಬಂದಿರುತ್ತವೆ. ದೇಶದಲ್ಲಿ ನೀಡಲ್ಪಟ್ಟ ಒಟ್ಟು 50,296 ಪ್ರಶಸ್ತಿಗಳಲ್ಲಿ ಕರ್ನಾಟಕದ ಪಾಲು 7179 (14.27%) ಆಗಿದ್ದು, ಇದು ಸಹ ದೇಶದಲ್ಲಿಯೇ ಅತಿ ಹೆಚ್ಚು ಆಗಿರುತ್ತದೆ. 2018-19 ನೇ ಸಾಲಿನ 90 ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲಿನ 20 ವಿದ್ಯಾರ್ಥಿಗಳ ಪೈಕಿ 108 ವಿದ್ಯಾರ್ಥಿಗಳು ಫೆಬ್ರವರಿ 14,15-2019 ರಂದು ನವದೆಹಲಿಯ ಐ.ಐ.ಟಿ.ಯಲ್ಲಿ ನಡೆಯಲಿರುವ ರಾಷ್ಟ್ರ ಹಂತದ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ, ಈ ಕೆಳಗಿನ 5 ವಿದ್ಯಾರ್ಥಿಗಳು ರಾಷ್ಟ್ರ ಪ್ರಶಸ್ತಿ ಪಡೆದಿರುತ್ತಾರೆ.

 1. ಅನುಶ್ರೀ.ಎನ್., 7ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಬೊಂಪಲ್ಲಿ, ಕೊಣಗರಹಳ್ಳಿ ಅಂಚೆ, ಬಂಗಾರಪೇಟೆ ತಾಲೂಕು, ಕೋಲಾರ ಜಿಲ್ಲೆ: Eco friendly multipurpose agricultural tools
 2. ಪ್ರಸನ್ನ ಉಮೇಶ ಶಿರಹಟ್ಟಿ, 9ನೇ ತರಗತಿ, ಕೆ.ಎಲ್.ಎಸ್.ಆಂಗ್ಲ ಮಾಧ್ಯಮ ಶಾಲೆ, ಬೆಳಗಾವಿ: Automatic dim and dip of headlight of vehicles
 3. ಕ್ರಿಷ್ ಪಾಂಡೆ, 8ನೇ ತರಗತಿ, ಲಿಟಲ್ ರಾಕ್ ಇಂಡಿಯನ್ ಶಾಲೆ, ಉಡುಪಿ: Document Classifier
 4. ಮಧು ಮಂಜುನಾಥ ನಾಯಕ್, 9ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೆಂಗಿನಗುಂಡಿ, ಹೆಬ್ಲೆ ಅಂಚೆ, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ: Oil Cleaner with Fuel less Boat
 5. ಸಯ್ದಾ ಇಕ್ರಾ ಉರೂಜ್ 8 ನೇ ತರಗತಿ, ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ಮಂಡ್ಯ : Umbrella on road or the miracle umbrella

2019-20ನೆ ಸಾಲಿನಲ್ಲಿ ಕೈಗೊಳ್ಳುತ್ತಿರುವ ಚಟುವಟಿಕೆಗಳು:

2019-20 ನೇ ಸಾಲಿನಲ್ಲಿ ಇನ್ ಸ್ಪೈರ್ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಎಲ್ಲಾ ಡಯಟ್ ಪ್ರಾಂಶುಪಾಲರು ಹಾಗೂ ಇನ್ ಸ್ಪೈರ್ ನೋಡಲ್ ಉಪನ್ಯಾಸಕರು ಹಾಗೂ ಪ್ರತಿ ಸರ್ಕಾರಿ ಪ್ರೌಢಶಾಲೆಗಳ ಒಬ್ಬ ಶಿಕ್ಸಕರಿಗೆ ದಿನಾಂಕ:06-06-2019 ರಂದು ದೂರಸಂಪರ್ಕ ತರಬೇತಿ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದಿನಾಂಕ:22-08-2019ರವರೆಗೆ 36,000 ದಷ್ಟು ನಾಮನಿರ್ದೇಶನಗಳು ರಾಜ್ಯದಿಂದ ಸಲ್ಲಿಕೆಯಾಗಿದ್ದು, ದೇಶದಲ್ಲಿ ಅತಿ ಹೆಚ್ಚು ನಾಮನಿರ್ದೇಶನ ಸಲ್ಲಿಸಿದ ರಾಜ್ಯವಾಗಿ ಕರ್ನಾಟಕವು ಹೊರಹೊಮ್ಮಿದೆ. ಅತಿ ಹೆಚ್ಚು ನಾಮನಿರ್ದೇಶನ ಸಲ್ಲಿಸಿದ ದೇಶದ ಮೊದಲ 25 ಜಿಲ್ಲೆಗಳಲ್ಲಿ ರಾಜ್ಯದ 9 ಜಿಲ್ಲೆಗಳಿರುವುದು ಹೆಮ್ಮೆಯ ಸಂಗತಿಯಾಗಿದೆ. E-MIAS ಪೋರ್ಟಲ್ ನಲ್ಲಿ ನಾಮನಿರ್ದೇಶನ ಮಾಡುವ ವಿಧಾನ, ಹೊಸದಾಗಿ ಶಾಲೆಗಳನ್ನು ನೋಂದಣಿ ಮಾಡುವ ವಿಧಾನ, ನವೀನ ವಿಚಾರಗಳ ಸೃಜನೆ, ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಗಿದೆ.

ದಿನಾಂಕ: 10-06-2019 ರಿಂದ 15-06-2019 ರವರೆಗೆ ಇನ್ ಸ್ಪೈರ್ ಕಾರ್ಯಕ್ರಮಕ್ಕೆ ನವೀನ ವಿಚಾರಗಳ ಸೃಜನೆ ಮಾಡಲು ಐಡಿಯಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಮೂಲಕ ವಿದ್ಯಾರ್ಥಿಗಳು ನವೀನವಾಗಿ, ಸೃಜನಶೀಲವಾಗಿ ಆಲೋಚಿಸಲು ಅವಕಾಶ ಕಲ್ಪಿಸಲಾಗಿತ್ತು.

ಇ) ಸಕುರಾ ಕಾರ್ಯಕ್ರಮ:

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿಯವರು ರಾಷ್ಟ್ರ ಮಟ್ಟದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಪಡೆದ ವಿದ್ಯಾರ್ಧಿಗಳ ಪೈಕಿ 15 ವರ್ಷ ಮೇಲ್ಪಟ್ಟ ಕೆಲವು ವಿದ್ಯಾರ್ಥಿಗಳನ್ನು ಸಕುರಾ ಕಾರ್ಯದಡಿ ಜಪಾನ್ ದೇಶಕ್ಕೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡುತ್ತಾರೆ. ಈ ಕಾರ್ಯಕ್ರಮವು 2014-15ನೇ ಸಾಲಿನಿಂದ ಅನುಷ್ಠಾನದಲ್ಲಿದೆ. 2018-19ನೇ ಸಾಲಿನಲ್ಲಿ 05 ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ 07 ದಿನಗಳ (26-05-2019 ರಿಂದ 01-06-2019ರವರೆಗೆ) ಜಪಾನ್ ಪ್ರವಾಸ ಕೈಗೊಂಡಿರುತ್ತಾರೆ. ವಿದ್ಯಾರ್ಥಿಗಳ ವಿವರಗಳು ಈ ಕೆಳಗಿನಂತಿದೆ.

 1. ಸಕ್ರಿ ಸಾಕ್ಷಿ ಎಸ್., ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ
 2. ಪಟಗಾರ್ ಗಗನ್ ದೀಪ್ ಲಂಬೋದರ್, ಜಿ.ಐ.ಬಿ.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಮುಟಾ, ಉತ್ತರ ಕನ್ನಡ ಜಿಲ್ಲೆ
 3. ಕುಮಾರ್ ಪ್ರಶಾಂತ್ ಜಿತೇಂದ್ರ, ಆಟಾಮಿಕ್ ಎನರ್ಜಿ ಸೆಂಟ್ರಲ್ ಶಾಲೆ, ಕೈಗಾ ಟೌನ್ ಶಿಪ್, ಕಾರವಾರ, ಉತ್ತರ ಕನ್ನಡ ಜಿಲ್ಲೆ
 4. ಅನುರಾಗ್ ಕುಮಾರ್ ಸಿಂಗ್, ಕೇಂದ್ರೀಯ ವಿದ್ಯಾಲಯ, ಸಾಂಬ್ರ, ಬೆಳಗಾವಿ
 5. ಕೌಷಿಕ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಮಣಿನಲ್ಕೂರು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಈ) ಅಟಲ್ ಟಿಂಕರಿಂಗ್ ಪ್ರಯೋಗಾಲಯ:

ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆಯ ಅಟಲ್ ಇನ್ನೋವೇಶನ್ ಮಿಷನ್ ಅಡಿ ದೇಶದ ಆಯ್ದ ಶಾಲೆಗಳಲ್ಲಿ 2016-17ನೇ ಸಾಲಿನಿಂದ 5441 ಅಧಿಕ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ನಿಗಧಿತ ಸೌಲಭ್ಯ, ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಇನ್ನಿತರೆ ಅನುಕೂಲಗಳನ್ನು ಹೊಂದಿದ ಶಾಲೆಗಳು ನೇರವಾಗಿ ತಮ್ಮ ಪ್ರಸ್ತಾವನೆಯನ್ನು ಆನ್ ಲೈನ್ ಮೂಲಕ https://www.aim.gov.in ಸಲ್ಲಿಸಬೇಕು. ಆಯ್ಕೆಯಾದ ಶಾಲೆಗಳಿಗೆ ಪ್ರಯೋಗಾಲಯ ಸ್ಥಾಪನೆಗೆ ಮೊದಲ ವರ್ಷದಲ್ಲಿ ಅಟಲ್ ಇನ್ನೊವೇಶನ್ ಮಿಷನ್ ನಿಂದ ಒಟ್ಟು ರೂ.20 ಲಕ್ಷ ನೀಡಲಾಗುವುದು. ನಂತರದ 5 ವರ್ಷಗಳಲ್ಲಿ ವಾರ್ಷಿಕ ರೂ.2 ಲಕ್ಷಗಳಂತೆ ರೂ.10 ಲಕ್ಷವನ್ನು ಪ್ರಯೋಗಾಲಯ ನಿರ್ವಹಣೆ, ಪರಿಕರಗಳನ್ನು ಖರೀದಿಸಲು, ವಿಜ್ಞಾನ ಉಪನ್ಯಾಸ ಸರಣಿ ಹಾಗೂ ಇತರೆ ವೈಜ್ಞಾನಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಶಾಲೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 309 ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, 2,67 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 309 ಶಾಲೆಗಳ ಪೈಕಿ 139 ಶಾಲೆಗಳು ಕೇಂದ್ರ ಸರ್ಕಾರದಿಂದ ಅನುದಾನ ಪಡೆದಿವೆ. ರಾಜ್ಯದಲ್ಲಿ 79 ಸರ್ಕಾರಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಯಾಗಿದೆ.

ಎಳೆಯ ವಯಸ್ಸಿನಲ್ಲಿಯೇ ಸಂಶೋಧನೆಯಲ್ಲಿ ಆಸಕ್ತಿ ಬೆಳೆಸುವುದು ಈ ಪ್ರಯೋಗಾಲಯ ಸ್ಥಾಪನೆಯ ಉದ್ದೇಶವಾಗಿದೆ. ಪ್ರಯೋಗಾಲಯದಲ್ಲಿರುವ ಉಪಕರಣ ಹಾಗೂ ಸಾಧನಗಳನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುವಂತೆ ಮಾಡಲಾಗುತ್ತದೆ. ಈ ಪ್ರಯೋಗಾಲಯಗಳಲ್ಲಿ ವಿಜ್ಞಾನ, ಎಲೆಕ್ಟ್ರಾನಿಕ್ಸ್, ರೋಬಾಟಿಕ್ಸ್, ಒಪನ್ ಸೋರ್ಸ್ ಮೈಕ್ರೊ ಕಂಟ್ರೋಲರ್ ಬೋರ್ಡ್ ಗಳು, ತ್ರಿ ಡಿ ಪ್ರಿಂಟರ್ ಗಳು, ಸ್ವತ: ಮಾಡಬಹುದಾದ ಕಿಟ್ ಗಳು (Do It Yourself kits) ಲಭ್ಯವಿದ್ದು, ವಿದ್ಯಾರ್ಥಿಗಳು ಪ್ರಯೋಗದಲ್ಲಿ ತೊಡಗಿಕೊಳ್ಳಲು ಅನುಕೂಲವಿದೆ.

ದಿನಾಂಕ:07-03-2019 ರಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ದೇಶದಲ್ಲಿ ಹೊಸದಾಗಿ ಒಟ್ಟು 3487 ಶಾಲೆಗಳಿಗೆ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, ಅದರಲ್ಲಿ 394 ಶಾಲೆಗಳು ರಾಜ್ಯಕ್ಕೆ ಸೇರಿದ್ದು, ಇದರಲ್ಲಿ 209 ಶಾಲೆಗಳು ಸರ್ಕಾರಿ ಶಾಲೆಗಳಾಗಿವೆ

ಕಾರ್ಯಕ್ರಮದ ಉದ್ದೇಶ

ಕರ್ನಾಟಕ IT @ Schools ಯೋಜನೆ ಅಡಿಯಲ್ಲಿ, e content ಘಟಕವು ಈ ಕೆಳಗಿನ ಉದ್ದೇಶಗಳೊಂದಿಗೆ ಇ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

 • ಈಗಾಗಲೇ ಇತರೆ ರಾಜ್ಯಗಳು, NCERT ಮತ್ತು ಇತರ ಏಜೆನ್ಸಿಗಳಲ್ಲಿ ಲಭ್ಯವಿರುವ ಇ ವಿಷಯ / ಇ ಸಂಪನ್ಮೂಲಗಳನ್ನು ಗುರುತಿಸುವುದು.
 • ಗುರುತಿಸಲಾದ e content ಅನ್ನು ರಾಜ್ಯದ ಪಠ್ಯಕ್ರಮಕ್ಕೆ ಸಮನ್ವಯ ಮಾಡುವುದು.
 • ತಾಂತ್ರಿಕ ಪರಿಣಿತಿ ಹೊಂದಿರುವ ವ್ಯಕ್ತಿಗಳ ಬೆಂಬಲದೊಂದಿಗೆ ಹೆಚ್ಚುವರಿ ಿ ಸಂಪನ್ಮೂಲವನ್ನುಅಭಿವೃದ್ಧಿಪಡಿಸುವುದು.
 • ಈಗಾಗಲೇ ಅಗತ್ಯವಿರುವ ಇ ಸಂಪನ್ಮೂಲಗಳನ್ನು ರಾಜ್ಯದ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹಿಸುವುದು.
 • ಸೂಕ್ತವಾದ ಪರಿಕರಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸುವುದು.
 • DIKSHA ಪೋರ್ಟಲ್‌ನಲ್ಲಿ ಇ-ಸಂಪನ್ಮೂಲವನ್ನು ಅಪ್‌ಲೋಡ್ ಮಾಡಲು ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಳಕೆಗೆ ಇ-ವಿಷಯವನ್ನು ಲಭ್ಯವಾಗುವಂತೆ ಮಾಡುವುದು.
ಕಾರ್ಯಕ್ರಮದ ಘಟಕಗಳು:
 • 8 ರಿಂದ 10 ನೇ ತರಗತಿಯ - ಗಣಿತ, ವಿಜ್ಞಾನ, ಇಂಗ್ಲಿಷ್ (2 ನೇ ಭಾಷೆ), ಸಮಾಜ ವಿಜ್ಞಾನ, ಕನ್ನಡ (1 ನೇ ಭಾಷೆ) ಮತ್ತು ಹಿಂದಿ (3 ನೇ ಭಾಷೆ) ವಿಷಯಗಳಲ್ಲಿ ಇ-ಸಂಪನ್ಮೂಲಗಳ ಅಭಿವೃದ್ಧಿ - ಮ್ಯಾಪಿಂಗ್, ಕ್ಯುರೇಶನ್ ಮತ್ತು ಸೃಷ್ಟಿ
 • ಲಭ್ಯವಿರುವ ಇ-ಸಂಪನ್ಮೂಲಗಳನ್ನು DIKSHA ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡುವುದು, ಹೊಸ ಸಂಪನ್ಮೂಲಗಳನ್ನು ರಚಿಸುವುದು ಮತ್ತು ಸಂಪನ್ಮೂಲಗಳನ್ನು ಪಡೆದುಕೊಳ್ಳುವುದು.
 • ಗುರುತಿಸಲಾದ ಇ-ಸಂಪನ್ಮೂಲಗಳನ್ನು Energised Text Book ಗಳ ಕ್ಯೂಆರ್ ಕೋಡ್‌ಗಳಿಗೆ ಲಿಂಕ್ ಮಾಡುವುದು
 • NCERT-CIET ಅಭಿವೃದ್ಧಿಪಡಿಸಿದ ಐಸಿಟಿ ವಿದ್ಯಾರ್ಥಿ ಪಠ್ಯಕ್ರಮವನ್ನು ಸ್ಥಳೀಕರಿಸುವುದು.

ತರಗತಿವಾರು ಲಭ್ಯವಿರುವ ಖಾನ್ ಅಕಾಡೆಮಿ ಸಂಪನ್ಮೂಲಗಳು


ತರಗತಿ ಸ್ಥಳೀಕರಿಸಿದ ಸಂಪನ್ಮೂಲಗಳ ಸಂಖ್ಯೆ
575
6250
7212
8250
9183
10210

ಖಾನ್ ಅಕಾಡೆಮಿ ಗಣಿತ ಮತ್ತು ವಿಜ್ಞಾನ ಸಂಪನ್ಮೂಲಗಳ ಸ್ಥಳೀಕರಣ:

ಕಾರ್ಯಕ್ರಮದ ಉದ್ದೇಶಗಳು
 • ಕನ್ನಡದಲ್ಲಿ ಖಾನ್ ಅಕಾಡೆಮಿ ಗಣಿತ ಮತ್ತು ವಿಜ್ಞಾನ ಸಂಪನ್ಮೂಲಗಳ ಪುರ್ನಸೃಷ್ಠಿ
 • ಖಾನ್ ಅಕಾಡೆಮಿಯ ವಿಷಯ ರಚನೆ ಪರಿಣತಿ ಹಾಗೂ ಶಿಕ್ಷಕರ ಬೋಧನೆ-ಪ್ರಾವೀಣ್ಯತೆಯನ್ನು ಮಿಳಿತಗೊಳಿಸುವುದು
 • ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಒಳಗೆ ಮತ್ತು ಹೊರಗೆ ಬಳಸಲು ಸಂಪನ್ಮೂಲ ಮತ್ತು ಸಾಧನಗಳನ್ನು ಲಭ್ಯವಾಗುವಂತೆ ಮಾಡುವುದು
 • ವಿಷಯ,ವೈಯಕ್ತಿಕಗೊಳಿಸಿದ ಡ್ಯಾಶ್‌ಬೋರ್ಡ್, ವಿಶ್ಲೇಷಣೆ ಮತ್ತು ತರಬೇತಿ ಪರಿಕರಗಳನ್ನು ಬಳಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು ಅವರ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕ ಕಲಿಕೆಯನ್ನು ಒದಗಿಸಲು ಕನ್ನಡದಲ್ಲಿನ ಸಂಪನ್ಮೂಲಗಳನ್ನು ಒದಗಿಸುವುದು.

DIKSHA - ಒಂದು ಅವಲೋಕನ

DIKSHA - ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (MHRD) ಉಪಕ್ರಮವಾಗಿದೆ. ಇದು ರಾಷ್ಟ್ರ ಮಟ್ಟದ ಶಿಕ್ಷಕರ ವೇದಿಕೆಯಾಗಿದೆ. ಈ ವೇದಿಕೆಯು ಜ್ಞಾನ ಹಂಚಿಕೆಗಾಗಿ ಡಿಜಿಟಲ್ ಮೂಲಸೌಕರ್ಯ ಒದಗಿಸಸುತ್ತದೆ. ಇದು ಪ್ರಸ್ತುತ Online, offline ಮತ್ತು App ಆಧಾರಿತ ವಿಷಯ ಅಭಿವೃದ್ಧಿ ಮತ್ತು ಹಂಚಿಕೊಳ್ಳುವ ವಿಧಾನವನ್ನು ನೀಡುತ್ತದೆ. DIKSHA ಪ್ಲಾಟ್‌ಫಾರ್ಮ್‌ನಲ್ಲಿನ ಸಂಪನ್ಮೂಲಗಳು CC-by-SA ಅಡಿಯಲ್ಲಿ ಲಭ್ಯವಿರುತ್ತದೆ.ಇದು ಬಳಕೆದಾರರಿಗೆ ಅವುಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಂಡು ಬಳಸಿಕೊಳ್ಳಬಹುದಾಗಿರುತ್ತದೆ.

ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು, ಶಾಲೆಗಳಿಗೆ ಒದಗಿಸಲಾಗಿರುವ ಲ್ಯಾಪ್ ಟಾಪ್ ಗಳಲ್ಲಿ ಒದಗಿಸಲಾಗುತ್ತದೆ.ಈ ಸಂಪನ್ಮೂಲಗಳು ಶಿಕ್ಷಕರು ಮತ್ತು ಸಂಪನ್ಮೂಲ ಪಾಲುದಾರರು ಸಂಗ್ರಹಿಸಿದ ಅಭಿವೃದ್ಧಿಪಡಿಸಿದ, ಸ್ಥಳೀಕರಿಸಿದ ಮತ್ತು ಅನುವಾದಿಸಿದ ಸಂಪನ್ಮೂಲಗಳಾಗಿರುತ್ತದೆ. ಈ ಸಂಪನ್ಮೂಲಗಳನ್ನು ತರಗತಿ, ವಿಷಯ ಮತ್ತು ಮಾಧ್ಯಮಗಳಿಗೆ ಮ್ಯಾಪ್ ಮಾಡಲಾಗುತ್ತದೆ. ಮತ್ತು ಶಿಕ್ಷಣ ಇಲಾಖೆಯಿಂದ DIKSHA ವೇದಿಕೆಯಲ್ಲಿ ಹಂಚಿಕೊಳ್ಳಲಾಗುತ್ತದೆ. ಈ ಸಂಪನ್ಮೂಲಗಳಲ್ಲಿ ಪ್ರಾಯೋಗಿಕ ವೀಡಿಯೊಗಳು, ಕಲಿಕೆಯ ವೀಡಿಯೊಗಳು, ಮೌಲ್ಯಮಾಪನಗಳು, ಪ್ರಶ್ನೆ ಬ್ಯಾಂಕುಗಳು ಇತ್ಯಾದಿಗಳು ಸೇರಿವೆ. ಲಾಗಿನ್ ಅಗತ್ಯವಿಲ್ಲದೇ ಸಂಪನ್ಮೂಲಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು www.diksha.gov.in/explore ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು.

Energized Textbooks

Energised Text Books (ETB) 16-11-2018 ರಂದು ಕರ್ನಾಟಕದ ಮಾನ್ಯಮುಖ್ಯಮಂತ್ರಿಗಳಿಂದ ಕರ್ನಾಟಕ ರಾಜ್ಯದಲ್ಲಿ ಉದ್ಘಾಟಿಸಲ್ಪಟ್ಟಿತು. 2019-20ರ ಶೈಕ್ಷಣಿಕ ವರ್ಷದಲ್ಲಿ ಗಣಿತ, ವಿಜ್ಞಾನ ಮತ್ತು 2 ನೇ ಭಾಷಾ ಇಂಗ್ಲಿಷ್ ವಿಷಯಗಳಿಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮಗಳಲ್ಲಿ Energised ಪಠ್ಯಪುಸ್ತಕಗಳನ್ನು ಇಲಾಖೆ ಪರಿಚಯಿಸಿದೆ. ಈ ಪಠ್ಯಪುಸ್ತಕಗಳು ಶೀರ್ಷಿಕೆ-ಮಟ್ಟದ ಮತ್ತು ಅಧ್ಯಾಯ-ಮಟ್ಟದ QR Code ಗಳನ್ನು DIKSHA ನಲ್ಲಿ ಲಭ್ಯವಿರುವ ಡಿಜಿಟಲ್ ಕಲಿಕಾ ಸಂಪನ್ಮೂಲಗಳೊಂದಿಗೆ ಸಂಪರ್ಕ ಹೊಂದಿವೆ.

ಶೀರ್ಷಿಕೆಗಳ ಸಂಖ್ಯೆ33
ಮಾಧ್ಯಮಗಳು 2
ವಿಷಯಗಳು3
ತರಗತಿಗಳು 6 to 10
ಒಟ್ಟು ಕ್ಯೂಆರ್ ಕೋಡ್ ಗಳು 361

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ DIKSHA app ಬಳಸಿ QR Code ಅನ್ನು scan ಮಾಡಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಅಥವಾ ಸಾರ್ವಜನಿಕರು ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ವೀಕ್ಷಿಸಬಹುದು ಹಾಗೂ ಸಂಪನ್ಮೂಲಗಳನ್ನು offline ನಲ್ಲಿ ವೀಕ್ಷಿಸಲು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ ನಲ್ಲಿ, 6-digit alphanumeric code ಅನ್ನು ಬಳಸಿಯೂ ಸಂಪನ್ಮೂಲಗಳನ್ನು ಬಳಸಬಹುದಾಗಿದೆ. ಈ ಎಲ್ಲಾ ಪ್ರಯತ್ನಗಳು ವಿದ್ಯಾರ್ಥಿಗಳ ಕಲಿಕಾ ಸನ್ನಿವೇಶಗಳು ಹೆಚ್ಚಿಸಿ, ಕಲಿಕೆಯನ್ನು ಪರಿಣಾಮಕಾರಿಯಾಗಿಸಬಲ್ಲದು.

DIKSHA portal ನಲ್ಲಿ ತರಗತಿವಾರು, ವಿಷಯವಾರು ಸಂಪನ್ಮೂಲಗಳ ಲಭ್ಯತೆ

ತರಗತಿಕನ್ನಡಆಂಗ್ಲಹಿಂದಿಗಣಿತವಿಜ್ಞಾನಸಮಾಜ ವಿಜ್ಞಾನ ಒಟ್ಟು
ತರಗತಿ 4930203136
ತರಗತಿ 5171070817167
ತರಗತಿ 6420113267943654
ತರಗತಿ 72217121110152584
ತರಗತಿ 842761334640679
ತರಗತಿ 9128012661360684
ತರಗತಿ 1030277173111270762
Total5113252115385181133566

ETB ಬಳಕೆ

ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು 18 ಲಕ್ಷಕ್ಕೂ ಹೆಚ್ಚು ಬಾರಿ ಸ್ಕ್ಯಾನ್ ಮಾಡಲಾಗಿದೆ, ಸಂಪನ್ಮೂಲಗಳ ಡೌನ್‌ಲೋಡ್‌ಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿ 5 ಲಕ್ಷಗಳನ್ನು ದಾಟಿದೆ ಮತ್ತು ಬಳಕೆದಾರರು 81000 ಗಂಟೆಗಳಿಗಿಂತ ಹೆಚ್ಚಿನ ಸಮಯ ಸಂಪನ್ಮೂಲಗಳನ್ನು ವೀಕ್ಷಿಸಿದ್ದಾರೆ .

ಒಟ್ಟು ಕ್ಯೂಆರ್ ಕೋಡ್ ಸ್ಕ್ಯಾನ್ 23,80,555
ಸಂಪನ್ಮೂಲಗಳನ್ನು App ಮೂಲಕ ವೀಕ್ಷಿಸಲು ಬಳಸಿದ ಉಪಕರಣಗಳಗಳ ಸಂಖ್ಯೆ 6,91,752
ಒಟ್ಟು ಸಂಪನ್ಮೂಲಗಳ ಡೌನ್‌ಲೋಡ್‌ಗಳು 7,27,043
ಆಪ್ ನಲ್ಲಿ ವೀಕ್ಷಿಸಿದ ಒಟ್ಟು ಸಂಪನ್ಮೂಲಗಳ ಸಂಖ್ಯೆ 28,66,157
Portalನಲ್ಲಿ ವೀಕ್ಷಿಸಿದ ಸಂಪನ್ಮೂಲಗಳ ಸಂಖ್ಯೆ 2,95,722
ಒಟ್ಟು ವೀಕ್ಷಿಸಿದ ಸಂಪನ್ಮೂಲಗಳು 31,61,879
App ನಲ್ಲಿ ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) 1,12,928.41
Portal ನಲ್ಲಿ ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) 8,409.36
ಒಟ್ಟು ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) 1,21,390.72


 

 

 

 

 

 

 

 

 

ವಿದ್ಯಾರ್ಥಿ ಐ ಸಿ ಟಿ ಪಠ್ಯವಸ್ತು ವರ್ಷ- 1

ಶಾಲಾ ಶಿಕ್ಷಣದಲ್ಲಿ ICT ರಾಷ್ಟ್ರೀಯ ನೀತಿಯ ಮಾರ್ಗದರ್ಶನಕ್ಕನುಗುಣವಾಗಿ, ವಿದ್ಯಾರ್ಥಿಗಳ ICT ಪಠ್ಯಕ್ರಮವು ವಿದ್ಯಾರ್ಥಿಗಳ ಸೃಜನಶೀಲತೆ, ಸಮಸ್ಯಾ ಪರಿಹಾರ ವಿಧಾನವನ್ನು ಉತ್ತೇಜಿಸಲು. ವಿದ್ಯಾರ್ಥಿಗಳನ್ನು ತಮ್ಮ ಕಲಿಕಾ ಪರಿಧಿಯನ್ನು ವಿಸ್ತರಿಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಜಗತ್ತಿಗೆ ಪರಿಚಯಿಸಲು ವಿನ್ಯಾಸಗೊಳಿಸಲಾಗಿದೆ. ಅವರ ವೃತ್ತಿಜೀವನದ ಅನ್ವೇಷಣೆಗಳಲ್ಲಿ ನಿರ್ದಿಷ್ಟವಾಗಿ ಹೇಳುವುದಾದರೆ, ಪಠ್ಯಕ್ರಮವು ವಿದ್ಯಾರ್ಥಿಗೆ ವಿವಿಧ ಸಂಪನ್ಮೂಲಗಳೊಂದಿಗೆ ಕೆಲಸ ಮಾಡಲು ತರಬೇತಿ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ; ಮಾಹಿತಿ ಮತ್ತು ಸಂಪನ್ಮೂಲಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಲು ಕಲಿಯುವುದು; ಮತ್ತು ಈ ಸಂಪನ್ಮೂಲಗಳ ಸುರಕ್ಷಿತ, ಉತ್ಪಾದಕ, ನೈತಿಕ ಮತ್ತು ಕಾನೂನುಬದ್ಧ ಬಳಕೆಯನ್ನು ಅಭ್ಯಾಸವನ್ನಾಗಿ ಮಾಡುವುದು.

ತರಗತಿಯ ಸಂದರ್ಭದ ಹೊರಗೆ ವಿದ್ಯಾರ್ಥಿಗಳನ್ನು ICT ಗೆ ಪರಿಚಯಿಸಲಾಗುತ್ತದೆ. ಅವರ ಕುತೂಹಲ ಮತ್ತು ಕಲಿಯುವ ಬಯಕೆ ICT ಚಟುವಟಿಕೆಗಳಲ್ಲಿ ಹೆಚ್ಚು ತೀವ್ರವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಬ್ಲಾಗಿಂಗ್, ಸಾಮಾಜಿಕ ಜಾಲತಾಣಗಳ ಪರಿಚಯ, ಸೈಬರ್ ಬೆದರಿಸುವಿಕೆ ಅಥವಾ ಅವರ ಹಕ್ಕುಗಳನ್ನು ಉಲ್ಲಂಘಿಸುವ ಪರಿಣಾಮ ಹಾಗೂ ಇನ್ನಿತರ ವಿಷಯಗಳ ಅರಿವು ಮೂಡಿಸುವುದು ತರಬೇತಿಯ ಅತ್ಯಗತ್ಯ ಭಾಗವಾಗಬೇಕು. ಕಲಿಕಾ ಸಂದರ್ಭದಲ್ಲಿ ಹಾರ್ಡ್ವೇರ್‌ ಮತ್ತು ಸಾಫ್ಟ್‌ವೇರ್‌ನೊಂದಿಗೆ ಹೊಸ ಹೊಸ ವಿಧಾನಗಳನ್ನು ಬಳಸಿ ಪ್ರಯೋಗ ಮಾಡುವಾಗ ಕಲಿಕೆಯು ತುಂಬಾ ಅರ್ಥಪೂರ್ಣವಾಗಿರುತ್ತದೆ. ಈ ಪ್ರವೃತ್ತಿಗಳನ್ನು ಕಲಿಕಾ ಸನ್ನಿಇವೇಶಗಳಲ್ಲಿ ಸರಿಹೊಂದಿಸುವುದು ಮತ್ತು ಅವುಗಳನ್ನು ಬೋಧನೆ-ಕಲಿಕೆಯ ಪ್ರಕ್ರಿಯೆಗೆ ಸಹಕರಿಸುವುದು ಶಾಲೆಯಲ್ಲಿ ಐಸಿಟಿ ವ್ಯವಸ್ಥೆಗೆ ಸಮರ್ಥ ಬೆಂಬಲವನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ.

NCERT - CIET ಐಸಿಟಿ ವಿದ್ಯಾರ್ಥಿ ಕೋರ್ಸ್ ವರ್ಷ 1 ಅನ್ನು AY 2019-20ರಲ್ಲಿ ಅಳವಡಿಸಲಾಗುತ್ತಿದೆ.

ಎಜುಸ್ಯಾಟ್

 • ಸರ್ಕಾರವು ಇಸ್ರೋ ನೆರವಿನಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಉಪಗ್ರಹ ಆಧಾರಿತ ದೂರದರ್ಶನದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಎಜುಸ್ಯಾಟ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ನಮ್ಮ ರಾಜ್ಯದ 05 ಶೈಕ್ಷಣಿಕ ಜಿಲ್ಲೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಚಾಮರಾಜನಗರ, ಗುಲ್ಬರ್ಗಾ ಮತ್ತು ಯಾದಗಿರಿ)ಳಿಂದ ಎಜುಸ್ಯಾಟ್ ಕಾರ್ಯಕ್ರಮಕ್ಕೆ 2547 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
 • ಡಿ.ಎಸ್.ಇ.ಆರ್.ಟಿಯ ಹಬ್ನಿಂದ 05 ವಿಷಯಗಳಿಗೆ(ಕನ್ನಡ, ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ, ವಿಜ್ಞಾನ) 4-8ನೇ ತರಗತಿಯವರೆಗೂ ದೃಶ್ಯಮಾಧ್ಯಮದ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಪರಿಣಾಮಕಾರಿಯಾದ ಹೊಸ ಮಾಧ್ಯಮದ ಮೂಲಕ ಬೋಧನೆಯನ್ನು ಅಳವಡಿಸಿಕೊಳ್ಳುವುದು, ಬಹುವರ್ಗ ಬೋಧನೆಗೆ ಅನುಕೂಲವಾಗುವಂತೆ ವೀಡಿಯೋ ಪಾಠಗಳನ್ನು ರಚಿಸುವುದು, ಅಂತರ್ ಕ್ರಿಯಾತ್ಮಕತೆಯನ್ನು ತರುವುದು, ವಿಷಯ ಪುನಶ್ಚೇತನ ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ. ಪ್ರಸಾರವಾದ ಪಾಠಗಳ ಹಿಮ್ಮಾಹಿತಿಯನ್ನು ಮೊಬೈಲ್ ಅಪ್ಲಿಕೇಷನ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲಾಗುವುದು.

ವೀಡಿಯೋಕಾನ್ಫರೆನ್ಸ್

 • ಶಿಕ್ಷಣ ಇಲಾಖೆಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ, ಅನುಪಾಲನೆ ಹಾಗೂ ಮೌಲ್ಯಮಾಪನ ಮಾಡಬೇಕಾದ ಅಗತ್ಯತೆಯಿದ್ದು ಬಹುತೇಕ ನಿರಂತರವಾಗಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಸ್ಪರ ಸಂಪರ್ಕ ಮಾಡುವ ಉದ್ದೇಶದಿಂದ ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ.
 • ಡಯಟ್ಗಳಲ್ಲಿ ದ್ವಿಮುಖ ಸಂವಹನ ಮಾಡಲು ಸರ್ಕಾರದ ಆದೇಶ ಸಂ: ಇಡಿ 68 ಮಾಹಿತಿ 2017, ಬೆಂಗಳೂರು ದಿನಾಂಕ:13.03.2017.ರನ್ವಯ 30 ಡಯಟ್ ಕೇಂದ್ರಗಳಲ್ಲಿ, 8 ಉಪನಿರ್ದೇಶಕರ ಕಛೇರಿಗಳಲ್ಲಿ, ಆಯುಕ್ತರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡಿ.ಎಸ್.ಇ.ಆರ್.ಟಿಯನ್ನೊಳಗೊಂಡಂತೆ ಒಟ್ಟು 41 ಘಟಕಗಳಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಒದಗಿಸಲು ಸಿ.ಇ.ಜಿರವರನ್ನು ಕೋರಲಾಗಿತ್ತು. ಸಿ.ಇ.ಜಿರವರು 41 ಘಟಕಗಳಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸಿರುತ್ತಾರೆ.

ಡಿ.ಎಸ್.ಇ.ಆರ್.ಟಿ. ಕಛೇರಿಯಲ್ಲಿನ ಸ್ಟುಡಿಯೋಗಳ ಮತ್ತು ಹಬ್ ನ ವಿವರ

 • ಡಿ.ಎಸ್.ಇ.ಆರ್.ಟಿ. ಕಛೇರಿಯಲ್ಲಿ ಕೃಷ್ಣ ಸ್ಟುಡಿಯೋ, ಎಸ್.ಐ.ಟಿ. ಸ್ಟುಡಿಯೋ ಹಾಗು ಆಡಿಯೋ ಕೊಠಡಿಗಳ ಸೌಲಭ್ಯವಿದೆ. ಕೃಷ್ಣ ಸ್ಟುಡಿಯೋ, ಆಡಿಯೋ ಕೊಠಡಿ ಹಾಗೂ ಎಸ್.ಐ.ಟಿ. ಸ್ಟುಡಿಯೋಗಳನ್ನು ಹೆಚ್ಚು ಸ್ಪಷ್ಟರೂಪತೆಯುಳ್ಳಂತಹ(High Definition) ಪರಿಕರಗಳಿಂದ ಉನ್ನತೀಕರಿಸಲಾಗಿರುತ್ತದೆ.
 • ಕೃಷ್ಣ ಸ್ಟುಡಿಯೋದಿಂದ ಶಿಕ್ಷಣ ಹಾಗು ಇತರೆ ಇಲಾಖೆಗಳ ಕೋರಿಕೆಯ ಮೇರೆಗೆ ಟೆಕಾನ್ಫರೆನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸದರಿ ಸ್ಟುಡಿಯೋವಿನ ಒಂದು ದಿನದ ಬಾಡಿಗೆ ರೂ.30,000/-(8 ಗಂಟೆಗಳಿಗೆ) ಮತ್ತು ರೂ.15,000/-(4 ಗಂಟೆಗಳಿಗೆ) ನಿಗದಿಪಡಿಸಲಾಗಿರುತ್ತದೆ.
 • ಎಸ್.ಐ.ಟಿ. ಸ್ಟುಡಿಯೋದಿಂದ ಟೆಲಿ ಎಜುಕೇಷನ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಖಾನ್ ಅಕಾಡೆಮಿ ವತಿಯಿಂದ ಕಂಟೆಂಟ್ ರೆರ್ಕಾಡಿಂಗ್ಅನ್ನು ಮಾಡಲಾಗುತ್ತಿದೆ.
 • ಡಿ.ಎಸ್.ಇ.ಆರ್.ಟಿ.ಯಲ್ಲಿರುವ ಹಬ್ನಿಂದ ಎಜುಸ್ಯಾಟ್ ಪಾಠಪ್ರಸಾರವನ್ನು 4 ರಿಂದ 8ನೇ ತರಗತಿಯವರೆಗೆ ಮಾಡಲಾಗುತ್ತಿದ್ದು, ಸದರಿ ಹಬ್ಅನ್ನು ಕಾಲೇಜು ಶಿಕ್ಷಣ ಇಲಾಖೆಯವರು ಸಹ ತಮ್ಮ ಉಪಗ್ರಹ ಆಧಾರಿತ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳುತ್ತಿರುತ್ತಾರೆ.

ಆರ್.ಓ.ಟಿ.

 • ದಿನಾಂಕ: 06.12.2016ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು. ಎಜುಸ್ಯಾಟ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಎಜುಸ್ಯಾಟ್ ಕಾರ್ಯಕ್ರಮವಿರುವ 05 ಜಿಲ್ಲೆಗಳಲ್ಲಿ ಆರ್.ಓ.ಟಿ. ನಿರ್ವಹಣೆ ಸಂಬಂಧಿಸಿದಂತೆ ಎಜುಸ್ಯಾಟ್ ಶಾಲೆಗಳಾದ 2547 ಶಾಲೆಗಳಿಗೆ ತಲಾ ರೂ.4,000/-ದಂತೆ ಹಾಗೂ ಬಿಡುಗಡೆ ಮಾಡುವ ನಿರ್ವಹಣೆ ಮಾರ್ಗಸೂಚಿ (Maintenance Manual) ಸಿದ್ಧಪಡಿಸಿ ಹಣ ಬಿಡುಗಡೆ ಮಾಡುವಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತಿಳಿಸಿರುವ ಸಂಬಂಧ ಇಡಿ 16 ಮಾಹಿತಿ 2016 ದಿ:17.09.2016. ರಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಪ್ರತಿ ಶಾಲೆಗೆ 2016-17ನೇ ಸಾಲಿಗೆ ನಿರ್ವಹಣೆ ಮತ್ತು ದುರಸ್ಥಿಗಾಗಿ ರೂ.4,000/- ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

Mobile Application

 • ಎಜುಸ್ಯಾಟ್ ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸಲು ಹಾಗೂ ಕ್ಷೇತ್ರಮಟ್ಟದಿಂದ ಬಂದ ಹಿಮ್ಮಾಹಿತಿ ಆಧಾರದ ಮೇಲೆ ಸುಧಾರಣೆ ಮಾಡಿಕೊಳ್ಳಲು, ಶಾಲೆಗಳಲ್ಲಿ ಎಷ್ಟರ ಮಟ್ಟಿಗೆ ಎಜುಸ್ಯಾಟ್ ಪಾಠ ಪ್ರಸಾರವಾಗುತ್ತಿದೆ? ಎಂಬುದನ್ನು ತಿಳಿದುಕೊಳ್ಳಲು ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿ ಮೌಲ್ಯಮಾಪನ ಮಾಡಲು ಮೊಬೈಲ್ ಅಪ್ಲಿಕೇಷನ್ (Mobile Application) ಉಪಯೋಗವಾಗುತ್ತದೆ. ಆರ್.ಓ.ಟಿ. ಉಪಕರಣಗಳ ಸ್ಥಿತಿಗತಿ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ದೊರೆಯುತ್ತದೆ. 05 ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಗುಲ್ಬರ್ಗಾ ಮತ್ತು ಯಾದಗಿರಿ 2547 ಶಾಲೆಗಳಲ್ಲಿ ಎಜುಸ್ಯಾಟ್ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಶಿಕ್ಷಕರು ಕಾರ್ಯನಿರ್ವಹಿಸುತ್ತಿರುತ್ತಾರೆ.
 • ಮೊಬೈಲ್ ಅಪ್ಲಿಕೇಷನ್ಅನ್ನು ಸ.ಪ್ರೌ.ಶಾಲಾ ಶಿಕ್ಷಕರಿಂದ ಸಿದ್ಧಪಡಿಸಲಾಗಿದ್ದು, ಪ್ರಾಯೋಗಿಕವಾಗಿ ರಾಮನಗರದಲ್ಲಿ ಚಾಲನೆ ಮಾಡಲಾಗಿರುತ್ತದೆ.

ಡಿ.ಟಿ.ಹೆಚ್. ಟಿವಿ-ಚಾನಲ್

 • ಸಿ.ಐ.ಇ.ಟಿ. ನವದೆಹಲಿ, ಎಂ.ಹೆಚ್.ಆರ್.ಡಿ.ರವರು ಡಿ.ಟಿ.ಹೆಚ್. ಟಿವಿ ಚಾನಲ್ನ್ನು ಸ್ವಯಂಪ್ರಭದಡಿಯಲ್ಲಿ ಪ್ರಾರಂಭಿಸಲು ಪ್ರಸ್ತಾಪಿತ ಪತ್ರವನ್ನು ಸಲ್ಲಿಸಿರುತ್ತಾರೆ. ಭಾರತ ಸರ್ಕಾರವು ರೂ.2.05 ಕೋಟಿಗಳನ್ನು ಚಾನಲ್ ಸ್ಥಾಪಿಸಲು ಒಂದು ಸಮಯದ ವೆಚ್ಚವಾಗಿ ಭರಿಸಲು ನಿರ್ಧರಿಸಿದೆ. ಈ ವಿಷಯದಲ್ಲಿ ಡಿ.ಟಿ.ಹೆಚ್. ಎಜುಕೇಷನ್ ಚಾನಲ್ನ್ನು ಡಿ.ಎಸ್.ಇ.ಆರ್.ಟಿ.ಯಲ್ಲಿ “ಸ್ವಯಂಪ್ರಭಾ”ದಡಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣರವರು ಅನುಮೋದನೆಯನ್ನು ನೀಡಿರುತ್ತಾರೆ. ಬೆಸಿಲ್ ರವರಿಂದ ಡಿ.ಪಿ.ಆರ್.ನ್ನು ಪಡೆಯಲು ಕೆ.ಟಿ.ಪಿ.ಪಿ.ಯ 4(ಜಿ)ಅಡಿಯಲ್ಲಿ ವಿನಾಯಿತಿಯನ್ನು ಪಡೆಯಲಾಗಿದ್ದು, ಕಾರ್ಯ ಪ್ರಗತಿಯಲ್ಲಿರುತ್ತದೆ.

ರೇಡಿಯೋ ಕಾರ್ಯಕ್ರಮ

 • 2018-19ನೇಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಮತ್ತು ಫೋನ್-ಇನ್-ಕಾರ್ಯಕ್ರಮಗಳನ್ನು ಎ.ಐ.ಆರ್. ರವರ ಮೂಲಕ ಪ್ರಸಾರ ಮಾಡಲು ಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಅಡಿಯಲ್ಲಿ 54 ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ ಮತ್ತು 1 ಫೋನ್-ಇನ್-ಕಾರ್ಯಕ್ರಮಗಳು ಈವರೆಗೆ ನಡೆದಿರುತ್ತದೆ.
 • ಪರೀಕ್ಷಾ ಸಿದ್ಧತೆಯ ಪ್ರಸಾರ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ಸಂಪನ್ಮೂಲ ಶಿಕ್ಷಕರಿಂದ ತಯಾರಿಸಲಾಗಿರುತ್ತದೆ. ಪ್ರತಿ ವಿಷಯಗಳ ಆಡಿಟ್ ಮತ್ತು ರಿವ್ಯೂ ಕಾರ್ಯವನ್ನು ಡಿ.ಎಸ್.ಇ.ಆರ್.ಟಿ. ವತಿಯಿಂದ ಮಾಡಲಾಯಿತು. ಎಲ್ಲ ಶಾಲೆಗಳಿಗೆ ಪ್ರಸಾರ ಮಾಡಲು ಅನುಮೋದಿತ ವಿಷಯವನ್ನು ಎ.ಐ.ಆರ್. ಬಳಸುತ್ತಿದೆ.

View this page in English
ನವೀಕರಿಸಿದ ದಿನಾಂಕ : 21/10/2019

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com