ಡಿ.ಎಸ್.ಇ.ಆರ್.ಟಿ -ಇಲಾಖೆಯ ಅಂಗ ರಚನೆ

ಪೀಠಿಕೆ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿ.ಎಸ್.ಇ.ಆರ್.ಟಿ.) ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿಜ್ಞಾನ ಕರ್ಯಕ್ರಮಗಳ ಉತ್ತೇಜನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯಪೂರ್ಣ ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಆರಂಭದಲ್ಲಿ ರಾಜ್ಯ ಶಿಕ್ಷಣ ಸಂಸ್ಥೆ ಎಂಬ ಹೆಸರಿನೊಂದಿಗೆ, ಶಾಲಾ ಶೈಕ್ಷಣಿಕ ಚಟುವಟಿಕೆಗಳ ಉಸ್ತುವಾರಿಗೆ ಚಿಕ್ಕ ಘಟಕವಾಗಿ ರಚನೆಗೊಂಡು 1964ರಲ್ಲಿ ಧಾರವಾಡದಲ್ಲಿ ತನ್ನ ಕಾರ್ಯಾರಂಭ ಮಾಡಿತು. ಈ ಘಟಕವನ್ನು ಬೆಂಗಳೂರಿಗೆ ವರ್ಗಾಯಿಸಿ ರಾಜ್ಯದಲ್ಲಿದ್ದ ಇತರ ಶೈಕ್ಷಣಿಕ ಘಟಕಗಳಾದ ರಾಜ್ಯ ವಿಜ್ಞಾನ ಸಂಸ್ಥೆ (SIS), ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಘಟಕ (SEEU) ಮತ್ತು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಘಟಕಗಳೊಡನೆ (EVG) ಸೇರಿಸಿ 1975 ರಲ್ಲಿ ಏಕರೂಪದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು ರಚಿಸಲಾಯಿತು.

I) ಡಿ.ಎಸ್.ಇ.ಆರ್.ಟಿ.ಯ ಸಂರಚನೆ:

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯಗಳು, ಸರ್ಕಾರಿ ಶಿಕ್ಷಣ ತರಬೇತಿ ಸಂಸ್ಥೆಗಳು ಮತ್ತು ಅನುದಾನಿತ ಡಿ.ಎಲ್.ಇಡಿ ಕಾಲೇಜುಗಳು ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. https://dsert.kar.nic.in/ ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ.

II) ಡಿ.ಎಸ್.ಇ.ಆರ್.ಟಿ. ಯ ಧ್ಯೇಯ ಮತ್ತು ಪ್ರಮುಖ ಚಟುವಟಿಕೆಗಳು :

  1. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವುದು.
  2. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳೆರಡೂ ಒಳಗೊಂಡಂತೆ ರಾಜ್ಯದಲ್ಲಿ ಶಿಕ್ಷಕರ ಶಿಕ್ಷಣ ತರಬೇತಿಯ ನಿರ್ವಹಣೆ (ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಣ).
  3. ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯಗಳು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಮತ್ತು ಇತರ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಗಳ ನಿರ್ವಹಣೆ.
  4. ರಾಜ್ಯದಲ್ಲಿ ವಿಜ್ಞಾನ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
  5. ಪಠ್ಯ ವಿಷಯ, ಶಿಕ್ಷಣಶಾಸ್ತ್ರ, ಶಿಕ್ಷಣದಲ್ಲಿ ರಂಗ ಕಲೆಯಂತಹ ನವೀನ ಪದ್ಧತಿಗಳ ಅಳವಡಿಕೆ, ರಾಜ್ಯದಲ್ಲಿ ಕಡಿಮೆ ವೆಚ್ಚದ-ವೆಚ್ಚರಹಿತ ಬೋಧನಾ ಕಲಿಕಾ ಸಾಮಗ್ರಿಗಳ ತಯಾರಿಕೆ ಮುಂತಾದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು.
  6. ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು.
  7. ವಿದ್ಯಾರ್ಥಿವೇತನಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು.
  8. ಪ್ರೌಢ ಶಾಲಾ ಶಿಕ್ಷಕರ ಬೋಧನಾ ಅಗತ್ಯತೆಗಳನ್ನು ಗುರುತಿಸಿ, ಶಿಕ್ಷಕರ ಬೋಧನಾ ಕೌಶಲ್ಯಗಳನ್ನು ವೃದ್ಧಿಸುವುದು.
  9. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಹೆಚ್ಚಿಸುವುದು.
  10. ಶಿಕ್ಷಕ ತರಬೇತಿ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವುದು.
  11. ಡಿ.ಎಸ್.ಇ.ಆರ್.ಟಿ ಯ ಕಲಾ ಸಂಶೋಧನಾ ಕೇಂದ್ರದ ಮೂಲಕ ಪ್ರೌಢ ಶಾಲಾ ವಿದ್ಯಾರ್ಥಿ / ಶಿಕ್ಷಕರಿಗೆ ಕಲೆಯ ಅನ್ವಯಗಳು, ಹೊಸ ಆವಿಷ್ಕಾರ, ಕ್ರಿಯಾ ಸಂಶೋಧನೆ ಕುರಿತು ಪ್ರದರ್ಶನ / ಗೋಷ್ಠಿಗಳನ್ನು ಆಯೋಜಿಸುವುದು.
  12. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ.
  13. ರಾಜ್ಯ ಪಠ್ಯಕ್ರಮ ಮತ್ತು ರಾಜ್ಯ ಪಠ್ಯವಸ್ತು ರಚಿಸುವುದು ಹಾಗೂ ಅದಕ್ಕೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುವುದು.

III.ಇಲಾಖೆಯ ಅಂಗ ರಚನೆ :

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. http://dsert.kar.nic.in ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ

ಡಿ.ಎಸ್.ಇ.ಆರ್.ಟಿ. ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರಗಳು

ಕ್ರ.ಸಂ ಹುದ್ದೆಯ ಹೆಸರು ಮಂಜೂರಾದ ಹುದ್ದೆಗಳ ಸಂಖ್ಯೆ ಕರ್ತವ್ಯ ನಿರತ ಹುದ್ದೆಗಳ ಸಂಖ್ಯೆ ಖಾಲಿ ಹುದ್ದೆಗಳ ಸಂಖ್ಯೆ
ಒಟ್ಟು ಮಹಿಳೆಯರು ಪುರುಷರು
1 ನಿರ್ದೇಶಕರು 1 1 1 0 0
2 ಸಹ ನಿರ್ದೇಶಕರು 1 0 0 1
3 ಉಪ ನಿರ್ದೇಶಕರು 2 2 0 2 0
4 ಹಿರಿಯ ಸಹಾಯಕ ನಿರ್ದೇಶಕರು 14 13 9 4 1
5 ಲೆಕ್ಕಾಧಿಕಾರಿಗಳು 1 0 0 0 1
6 ಕಲಾವಿದ 1 1 0 1 0
7 ಗ್ರಂಥಾಲಯ ಅಧಿಕಾರಿ 1 1 1 0 0
8 ಸಾಂಖ್ಯಿಕ ಅಧಿಕಾರಿಗಳು 1 0 0 0 1
9 ಸಹಾಯಕ ನಿರ್ದೇಶಕರು 2 2 0 2 0
10 ಸಹಾಯಕ ಸಾಂಖ್ಯಿಕ ಅಧಿಕಾರಿ 4 1 1 0 3
11 ಅಧೀಕ್ಷಕರು 5 5 1 4 0
12 ಗ್ರಂಥಪಾಲಕರು / ಶಾಖಾ ಗ್ರಂಥಪಾಲರು, ಸೆರಿಕ್‌ 4 0 0 0 4
13 ತಾಂತ್ರಿಕ ಸಹಾಯಕರು 5 5 3 2 0
14 ಟೆಕ್ನೀಶಿಯನ್ 2 2 0 2 0
15 ಟೆಸ್ಟಿಂಗ್ ಅಸಿಸ್ಟಂಟ್ 1 0 0 0 1
16 ಶೀಘ್ರಲಿಪಿಗಾರರು 4 3 3 0 1
17 ಪ್ರ.ದ.ಸ 22 19 7 12 3
18 ಸಹಾಯಕ ಗ್ರಂಥಪಾಲಕರು 1 1 0 1 0
19 ಫೀಲ್ಡ್ ಮ್ಯಾನ್ 1 0 0 0 1
20 ಎಸ್.ಡಿ.ಎ 9 9 5 4 0
21 ಸಿ.ಸಿ.ಟಿ 3 3 3 0 0
22 ಬೆರಳಚ್ಚುಗಾರರು 6 0 0 0 6
23 ಕಾರ್ಪೆಂಟರ್ 1 0 0 0 1
24 ವಾಹನ ಚಾಲಕರು 5 4 0 4 1
25 ವಾಹನ ಚಾಲಕರು ಕಮ್ ಮೆಕ್ಯಾನಿಕ್ 1 0 0 0 1
26 ಅಟೆಂಡರ್ 11 2 0 2 9
27 "ಡಿ" ದರ್ಜೆ ನೌಕರರು 22 10 3 7 12
28 ಕಾವಲುಗಾರ 1 0 0 0 1
ಒಟ್ಟು 132 84 37 47 48

IV. ಡಿ.ಎಸ್.ಇ.ಆರ್.ಟಿ. ಯ ವಿಭಾಗಗಳು

  1. ಶಿಕ್ಷಣ ತಂತ್ರಜ್ಞಾನ ಕೋಶ
    1. ಗುರು ಚೇತನ
    2. ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ (TALP)
      1. IT@Schools in Karnataka
      2. ಟೆಲಿ ಶಿಕ್ಷಣ ಕಾರ್ಯಕ್ರಮ
      3. ಎಜುಸ್ಯಾಟ್
    3. ರಾಜ್ಯ ವಿಜ್ಞಾನ ಸಂಸ್ಥೆ (SIS)
  2. ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಘಟಕ (SEEU)
  3. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE), ಮತ್ತು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್
  4. ವಿದ್ಯಾರ್ಥಿವೇತನ ಯೋಜನೆ (NMMS)
  5. ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ (NPEP)
  6. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA)
  7. ಶಿಕ್ಷಕರ ಶಿಕ್ಷಣ (TE)
  8. ಡಿ.ಇಡಿ ಪಠ್ಯಕ್ರಮ ಪರಿಷ್ಕರಣೆ
  9. ಸರ್ವ ಶಿಕ್ಷಣ ಅಭಿಯಾನ (SSA)

View this page in English
ನವೀಕರಿಸಿದ ದಿನಾಂಕ : 4/8/2022

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com