ಸಮಾಜ ವಿಜ್ಞಾನ Social Science

ಇತಿಹಾಸದ ದೃಷ್ಟಿಕೋನ

ಇತಿಹಾಸ ಅಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಬರುವದು ರಾಜ ಮಹಾರಾಜರ ಸೋಲು-ಗೆಲವು ಹಾಗೂ ಅವರ ವೈಭವದ ಜೀವನ, ಇದು ಅಷ್ಟೆ ಇತಿಹಾಸವೇ? ನಮ್ಮ ಕುಟುಂಬದಲ್ಲಿ, ಹಳ್ಳಿಯಲ್ಲಿ ನಡೆದ ಘಟನೆಗಳು, ಬದಲಾವಣೆಗಳು ಇತಿಹಾಸ ಅಲ್ಲವೇ? ಇತಿಹಾಸವನ್ನು ಓದುವದರಿಂದ ನಮಗೂ ಮತ್ತು ಈ ಸಮಾಜಕ್ಕೂ ಏನು ಲಾಭವಿದೆ? ಇತಿಹಾಸ ನಿಂತ ನೀರು, ಅದು ಬದಲಾಗುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ ಇದೆ ಹಾಗಾದರೆ ಇತಿಹಾಸ ಬದಲಾಗುವದಿಲ್ಲವೆ? ಹೆಚ್ಚು ಹೆಚ್ಚು ಆಧಾರಗಳು ಸಿಕ್ಕಾಗ ಈಗಿರುವ ಇತಿಹಾಸ ಪುನರ್ ರಚನೆಗೊಳ್ಳುವದಿಲ್ಲವೆ? ಇತಿಹಾಸವು ಮೂಲಾಧಾರಗಳ ಮೇಲೆ ಕಟ್ಟಲ್ಪಟ್ಟಿದೆ. ಇತಿಹಾಸ ರಚನೆಯಲ್ಲಿ ಆಧಾರಗಳೊಂದಿಗೆ ಕಲ್ಪನೆಗೂ ಅವಕಾಶವಿದೆಯಾ? ವಾದ - ಪ್ರತಿವಾದದ ನಡುವೆಯು ಓದುಗರಿಗೆ ನಿಜವಾದ ಇತಿಹಾಸ ಕಟ್ಟಿಕೊಡುವದು ಹೇಗೆ? ಈ ತರಹದ ಅನೇಕ ಸವಾಲುಗಳನ್ನು ಮಾಡ್ಯೂಲ್ ಚರ್ಚೆಗೆ ಒಳಪಡಿಸುತ್ತಿದೆ. DOWNLOAD


thumbnail

thumbnail

ಸಮಾಜ ವಿಜ್ಞಾನ Social Science

ಅಕ್ಷಾಂಶ ಮತ್ತು ರೇಖಾಂಶ

ಸಮಾಜ ವಿಜ್ಞಾನದ ಪರಿಕಲ್ಪನೆಗಳನ್ನು ಚಟುವಟಿಕೆಗಳ ಮೂಲಕ ಹಾಗೂ ಅನುಭವಾತ್ಮಕ ಕಲಿಕೆ ಆಗುವಂತೆ ಮಾಡಲು ಸಾಕಷ್ಟು ಅವಕಾಶಗಳಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಅದರಲ್ಲೂ ಭೂಗೋಳ ಬೋಧನೆಯಲ್ಲಿ ಗ್ಲೋಬ್ ಮತ್ತು ನಕ್ಷೆಗಳನ್ನು ಹೊರತುಪಡಿಸಿ ಬೇರೆ ಉಪಕರಣಗಳ ಉಪಯೋಗದ ಕುರಿತ ಕಾರ್ಯಗಾರಗಳಿಗೆ ನಾವು ನಮ್ಮನ್ನು ತೆರೆದುಕೊಳ್ಳಬೇಕಿದೆ. ನೀವು ನಿಮ್ಮ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ಯಾವುದೇ ಆಧುನಿಕ ಉಪಕರಣಗಳ ಸಹಾಯವಿಲ್ಲದೇ ಕಂಡುಹಿಡಿಯಬೇಕೆ? ಪ್ರಮುಖ ಅಕ್ಷಾಂಶ ಮತ್ತು ರೇಖಾಂಶಗಳಿಗೆ ಅದೇ ಹೆಸರು ಏಕೆ? ಇವುಗಳನ್ನು ರಚಿಸುವಲ್ಲಿ ಇರುವ ರಾಜಕೀಯವೇನಿದೆ? ಒಂದು ದಿನ ಕಳೆದುಕೊಳ್ಳುವ ಮತ್ತು ಪಡೆದುಕೊಳ್ಳುವದರ ಕುರಿತ ಅನುಭವ ನಿಮಗಾಗಬೇಕೆ? ಇಂತಹ ಪ್ರಶ್ನೆಗಳ ಕುರಿತು ಚರ್ಚೆ ಮತ್ತು ಸ್ವತಃ ಅನುಭವಿಸಿ, ಸಂಶೋದಿಸಿ ಕಲಿಯುವ ಅವಕಾಶಗಳು ಈ ಮಾಡ್ಯೂಲ್ನೆಲ್ಲಿವೆ. DOWNLOAD


thumbnail

thumbnail

ಸಮಾಜ ವಿಜ್ಞಾನ Social Science

ಭೂಪಟದಲ್ಲಿ ಭೂಗೋಳ

ಭೂಪಟ ಎಂದ ತಕ್ಷಣ ಕೇವಲ ದೇಶ ಹಾಗೂ ಪ್ರಪಂಚದ ಭೂಪಟಗಳನ್ನು ಅರ್ಥ ಮಾಡಿಕೊಂಡರೆ ಸಾಲದು ಅದರ ಜೊತೆಗೆ ನಮ್ಮ ಸುತ್ತ ಮತ್ತಲಿನ ಶಾಲೆ, ಮನೆ, ಗ್ರಾಮದ ನಕ್ಷೆಯನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಭೂಪಟಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ದಿಕ್ಕು, ಅಳತೆ ಹಾಗೂ ಸಂಕೇತಗಳು ಅತಿ ಮುಖ್ಯ ಇವುಗಳನ್ನು ಅರ್ಥ ಮಾಡಿಕೊಳ್ಳದೆ ಭೂಪಟಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಭೂಪಟಗಳನ್ನು ರಚಿಸುವಾಗ ರಾಜಕೀಯ ಅಂಶಗಳು ಪ್ರಭಾವ ಬೀರುತ್ತವೆಯೇ? ನಮ್ಮ ಕಾಶ್ಮೀರದ ಕೇಲವು ಭಾಗಗಳನ್ನು ಪಾಕಿಸ್ತಾನ ಮತ್ತು ಚೀನಾ ದೇಶದವರು ಏಕೆ ತಮ್ಮ ತಮ್ಮ ದೇಶದ ನಕ್ಷೆಯಲ್ಲಿ ತೋರಿಸುತ್ತಾರೆ? ತರಗತಿಯಲ್ಲಿ ಭೂಪಟಗಳನ್ನು ಗೋಡೆಯ ಮೇಲೆ ಹಾಕಿ ಬೋಧಿಸುವದರಿಂದ ಮಕ್ಕಳಿಗೆ ಉತ್ತರ ಎಂದರೆ ಮೇಲೆ ದಕ್ಷಿಣವೆಂದರೆ ಕೆಳಗೆ ಎಂಬ ಭಾವನೆ ಬರಬಹುದಲ್ಲವೆ? ಈ ಕಾರಣಕ್ಕಾಗಿ ಭೂಪಟಗಳನ್ನು ಓದುವದು ಮತ್ತು ರಚಿಸುವದು ಒಂದು ವಿಶೇಷವಾದ ಕೌಶಲವೆಂದು ಅನಿಸುವದಿಲ್ಲವೆ? DOWNLOAD


thumbnail

thumbnail

ಸಮಾಜ ವಿಜ್ಞಾನ Social Science

ಸಂವಿಧಾನದಕಲ್ಪನೆ

ಸಮಾಜ ವಿಜ್ಞಾನದ ಸಹಾಯದಿಂದ ಒಬ್ಬ Responsible, Productive and caring human beingನನ್ನು ಸೃಷ್ಟಿ ಮಾಡುವದರ ಮೂಲಕ ಒಂದು ಉತ್ತಮ ಸಮಾಜವನ್ನು ಸೃಷ್ಟಿಸುವದರ ಜೊತೆಗೆ, ಸಂವಿಧಾನದ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ರಾಜ್ಯಶಾಸ್ತ್ರದ ಮೂಲವನ್ನು ಗಮನಿಸಿದರೆ, ಇಲ್ಲಿಯ ಎಲ್ಲ ಪರಿಕಲ್ಪನೆಗಳೂ ಸಂವಿಧಾನದ ಮೂಲದಿಂದಲೇ ಹುಟ್ಟಿರುವಂತಹದ್ದು ಎಂದು ನಿಮಗನಿಸುವದಿಲ್ಲವೆ? ಆದರೆ ಸಂವಿಧಾನವು ಶೂನ್ಯದಿಂದ ಉದ್ಬವವಾಗಿಲ್ಲ, ಜಾಗತಿಕ ಮಟ್ಟದಲ್ಲಿ ಕ್ರಾಂತಿಗಳು, ಹೋರಾಟಗಳು, ಮತ್ತು ಸಂಘರ್ಷಗಳು ಇದಕ್ಕೆ ಪ್ರಭಾವ ಬೀರಿವೆಯಲ್ಲವೆ? ಒಂದು ಸಂವಿಧಾನ ಎಂಬ ಪುಸ್ತಕ ಬರೆದ ಮಾತ್ರಕ್ಕೆ ಈ ಎಲ್ಲ ವ್ಯವಸ್ಥೆಗಳು ತಮ್ಮಷ್ಟಕ್ಕೆ ತಾವೆ ಸರಿಯಾಗಿ ಬಿಡುತ್ತವೆಯೇ? ಸಂವಿಧಾನದ ಸಿದ್ದಾಂತ ಮತ್ತು ವಾಸ್ತವಿಕ ಆಚರಣೆಗಳಲ್ಲಿನ ವ್ಯತ್ಯಾಸಗಳನ್ನು ತಿಳಿಯಲು ಈ ಮಾಡ್ಯೂಲನಲ್ಲಿ ಸಾಕಷ್ಟು ಅವಕಾಶಗಳಿವೆ. DOWNLOAD


thumbnail

thumbnail

ಸಮಾಜ ವಿಜ್ಞಾನ Social Science

ಭೂಮಿಯ ಭ್ರಮಣೆ ಮತ್ತು ಪರಿಭ್ರಮಣೆ

ಕಲಿಕೆ ಸುರುಳಿಯಾಕಾರದಲ್ಲಿ ಮುಂದುವರಿಯುತ್ತಾ ತನ್ನ ಹರವು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ನನ್ನ ಸುತ್ತಮುತ್ತ ಎಂಬ ಪಾಠ ಎರಡನೇ ತರಗತಿಯಲ್ಲಿದೆ. ಇಲ್ಲಿಂದ ಆರಂಭವಾಗುವ ಅನ್ವೇಷಣಾ ಕಾರ್ಯದ ಕಲಿಕೆಯು ಐದನೇ ತರಗತಿಯ ವೇಳೆಗೆ "ಭೂಮಿ"ಯನ್ನು ಅರ್ಥೈಸಿಕೊಳ್ಳುವವರೆಗೆ ಇದೆ. ಮುಂದುವರಿದು ಈ ಕಲಿಕೆ ವಿಶ್ವವನ್ನು ಅರ್ಥೈಸಿಕೊಳ್ಳುವವರೆಗೆ ಸಾಗುವುದನ್ನು ಪ್ರತಿ ತರಗತಿಗಳಲ್ಲಿ ಕಾಣುತ್ತೇವೆ. ಭೂಮಿಯ ವಿಷಯಕ್ಕೆ ಬಂದಾಗ ಅದರ ಉಗಮ ಹೇಗಾಯ್ತು? ಅದಕ್ಕೆ ಚಲನೆಗಳು ಏಕಿವೆ ? ಹೇಗಿವೆ? ಎಂಬುದರಿಂದ ಕೌತುಕ ಆರಂಭವಾಗಿ ಹಲವು ಕುತೂಹಲಕಾರಿ ಸಂಗತಿಗಳ ಹುಡುಕಾಟ ಸಾಗುತ್ತದೆ. ಇಲ್ಲಿ ತಾಂತ್ರಿಕವಾಗಿ ಅರ್ಥೈಸಿಕೊಳ್ಳಬೇಕಾದ ಸಂಗತಿಗಳಿವೆ. ಭ್ರಮಣೆ, ಪರಿಭ್ರಮಣೆ, ಅಕ್ಷ, ಅಕ್ಷದ ವಾಲುವಿಕೆ, ಕಕ್ಷೆ, ಕಕ್ಷಾಪಥ, ಚಲನೆಗೆ ಕಾರಣ, ಚಲನೆಯಿಂದಾಗುವ ಪರಿಣಾಮ ಮತ್ತು ಪ್ರಭಾವಗಳು, ನಮ್ಮ ದೈನಂದಿನ ಜೀವನದ ಮೇಲೆ ಭೂ ಚಲನೆಯ ಪ್ರಭಾವಗಳು ಹೀಗೆ ಹಲವು ವಿಷಯಗಳು ತೆರೆದುಕೊಳ್ಳುತ್ತವೆ. ಈ ಸಂಚಿಯಲ್ಲಿ (ಮಾಡ್ಯೂಲ್‍ನಲ್ಲಿ) ಚಿಂತನಾತ್ಮಕ ಪ್ರಶ್ನೆಗಳು, ಸೃಜನಾತ್ಮಕ ಊಹೆಗಳು, ಊಹೆಗಳನ್ನು ಒರೆಹಚ್ಚುವ ಮತ್ತು ತೀರ್ಮಾನಿಸುವ ಮಾರ್ಗೋಪಾಯಗಳನ್ನು ಚರ್ಚಿಸಿದೆ. ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸಾಹಿತ್ಯವು ತಮ್ಮ ಜ್ಞಾನ ಪುನಾರ್ ರಚಿಸಿಕೊಳ್ಳಲು ಸಾರುವೆ ಸಹಾಯ (ಸ್ಕಫೋಲ್ಡಿಂಗ್) ಒದಗಿಸುತ್ತದೆ ಎಂಬ ಆಶಯ ಹೊಂದಿದೆ. ನಾವಿರುವ ಭೂಮಿಯನ್ನು ಇನ್ನಷ್ಟು ಅರ್ಥೈಸಿಕೊಳ್ಳಲು ಹಾಗೂ ನಿಸರ್ಗ ಪೂರಕ ಜೀವನಕ್ಕೆ ಅನುಕೂಲಿಸಲು ಇದು ಸಹಾಯಕಾರಿ. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ಸಮಾಜ ವಿಜ್ಞಾನ ವಿಷಯದ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. DOWNLOAD


thumbnail

ಸಮಾಜ ವಿಜ್ಞಾನ Social Science

ಮಾರುತಗಳು

ಪೃಥ್ವಿಯ ಮೇಲೆ ಜೀವಿಯ ಅಸ್ತಿತ್ವದ ಮೂಲ ಕಾರಣ ನಮ್ಮ ವಾಯುಮಂಡಲ. ಅದು ಕೇವಲ ಒಂದು ಧಾತುವಿನ ಪ್ರವಾಹವಲ್ಲ. ಅನಿಲಗಳ ಮಿಶ್ರಣದ ನಿರಂತರ ಚಲನೆ. ಮಾರುತಗಳು ಪ್ರತಿಯೊಬ್ಬರ ದೈನಂದಿನ ಬದುಕಿನ ಮೇಲೆ ಮಹತ್ತರ ಪ್ರಭಾವವನ್ನು ಬೀರುತ್ತವೆÉ. ಇದರ ಆಧಾರದ ಮೇಲೆ ನಮ್ಮ ಉದ್ಯೋಗ, ಆರೋಗ್ಯ, ದೈನಂದಿನ ಜೀವನ, ಇತ್ಯಾದಿಗಳು ನಿರ್ಧರಿಸಲ್ಪಡುವುದನ್ನು ಕಾಣುತ್ತೇವೆ. ಆದರೆ ಇಂತಹ ಮಾರುತಗಳ "ಸ್ವಾಭಾವ" ಅರ್ಥ ಮಾಡಿಕೊಳ್ಳವುದು ಅವಶ್ಯಕ. ಶಿಕ್ಷಕರಿಗೆ ಶಾಲಾ ಹಂತದಲ್ಲಿ ಇದರ ಪರಿಪೂರ್ಣ ಪರಿಕಲ್ಪನೆ ಮೂಡಿದಾಗ ಭೂಗೋಳದ ಇತರೆ ಪರಿಕಲ್ಪನೆಗಳನ್ನು ಸಮರ್ಥವಾಗಿ ಅರ್ಥೈಸಲು ಸಾಧ್ಯ. ಭೂಗೋಳದ ಬಹಳಷ್ಟು ಪರಿಕಲ್ಪನೆಗಳು ಮಾರುತಕ್ಕೆ ತಳಕು ಹಾಕಿಕೊಂಡಿವೆ. ಆದ್ದರಿಂದ ಈ ಪರಿಕಲ್ಪನಾತ್ಮಕ ಸ್ಪಷ್ಟತೆಯನ್ನು ಈ ಮಾಡ್ಯೂಲ್‍ನಲ್ಲಿ (ಸಂಚಿ) ಚರ್ಚಿಸಿ, ಚಿಂತನಶೀಲತೆಗೆ ಪ್ರೇರೇಪಿಸಿದೆ. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ಸಮಾಜ ವಿಜ್ಞಾನ ವಿಷಯದ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. DOWNLOAD


thumbnail

> View Next: ನಲಿ-ಕಲಿ