ವಿಜ್ಞಾನ Science

ಜೀವಪರಿಸರ ಶಾಸ್ತ್ರ (ಪರಿಸರ ಪ್ರಜ್ಞೆ)

ಪರಿಸರ ಶಿಕ್ಷಣದ ಮಹತ್ವ, ಪರಿಸರದ ಬಗ್ಗೆ ಜಾಗೃತಿ, ಸಮಸ್ಯೆಗಳು, ಭೂಮಿಯ ಉಗಮ, ಭೂಜೀವ ರಾಸಯನಿಕ ಚಕ್ರಗಳ ಪಾತ್ರ, ಜೀವವೈವಿದ್ಯತೆ ಮತ್ತು ಪರಿಸರದ ವ್ಯವಸ್ತೆಗಳ ಬಗ್ಗೆ ಬೆಳಕು ಚೆಲ್ಲುವ ಮಾಡ್ಯೂಲ್ ಇದಾಗಿದೆ. ಪರಿಸರದೆಡೆಗಿನ ಕಾಳಜಿ, ಸಂವೇದನೆ, ಅವುಗಳ ಸಮಸ್ಯೆಗೆ ಪರಿಹಾರ ಹುಡುಕಲು ಮಕ್ಕಳನ್ನು ಹಾಗೂ ಶಿಕ್ಷಕರನ್ನು ಪ್ರೇರೇಪಿಸುವಲ್ಲಿ ಸಹಕಾರಿ. ಪರಿಸರವನ್ನು ವೀಕ್ಷಿಸುವ, ವಿವಿಧ ಅಂಶಗಳನ್ನು ದಾಖಲಿಸಿ ವಿಶ್ಲೇಷಿಸುವ ಅನುಭವಗಳನ್ನು ಒದಗಿಸುತ್ತದೆ. ಚರ್ಚಿಸುವ ಕೌಶಲಗಳು ಜ್ಞಾನ ಸಂರಚನೆಗೆ ಹಾಗೂ ಮಕ್ಕಳನ್ನು ಪರಿಸರ ಸಂವೇಧಿಗಳನ್ನಾಗಿಸಲು ಸಹಕಾರಿ, ಇದಲ್ಲದೆ ಪಾರಿಸಾರಿಕ ಮೌಲ್ಯಗಳನ್ನು ತಾತ್ವಕ ನೆಲೆಯಲ್ಲಿ ಚರ್ಚಿಸಿ ಪಸರಿಸಲು ಈ ಮಾಡ್ಯೂಲ್ ಉಪಯುಕ್ತ. DOWNLOAD


thumbnail

thumbnail

ವಿಜ್ಞಾನ Science

ಸಂಚಲನಾ- ಚಲನೆ ಮತ್ತು ಬಲ

ಚಲನೆಯ ಮೂಲ ಕಲಿಕಾಂಶಗಳಾದ ಸಾಪೇಕ್ಷ ಚಲನೆ, ಸ್ಥಾನ, ಸ್ಥಾನಾಂತರ ಮತ್ತು ಚಲಿಸಿದ ದೂರವನ್ನು ಅನುಕೂಲಿಸಲು ಬೇಕಾದ ವಿವಿಧ ಸಾಧನಾ-ತಂತ್ರಗಳು, ತರಗತಿಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಹೆಚ್ಚು ಪರಿಣಾಮಕಾರಿಯಾಗಿ ಸುಗಮಕಾರ ನಿರ್ವಹಿಸುವುದು ಹೇಗೆ? ಮತ್ತು ಸೂಕ್ತ ಕಲಿಕಾ ಅನುಭವಗಳನ್ನು ಆಯೋಜಿಸುವುದು ಹೇಗೆ? ಎನ್ನುವುದರ ಅನುಭವವನ್ನು ಮಾಡ್ಯೂಲ್ ನೀಡುತ್ತದೆ. ”Science facilitation must be true to the child,true to nature and true to science”ಎಂದು ಎನ್.ಸಿ.ಎಫ್-2005 ಸೂಚಿಸುತ್ತದೆ. ಈ ಮಾಡ್ಯೂಲ್ನ ಲ್ಲಿ ಚಲನೆಯನ್ನು ವಿವರಿಸುವ ಪರಿಕಲ್ಪನೆಗಳಾದ ವೇಗ, ಜವ ಮತ್ತು ವೇಗೋತ್ಕರ್ಷವನ್ನು ಹೇಗೆ ಸುಲಭವಾಗಿ ಚಟುವಟಿಕೆಗಳ ಮೂಲಕ ಅನುಭವಾತ್ಮಕವಾಗಿ ಅನುಕೂಲಿಸಬಹುದು ಹಾಗೂ ಚಲನೆಗೆ ಸಹಸಂಬಂಧಿಸಿದ ಮತ್ತು ಅದರೊಂದಿಗೆ ಚರ್ಚಿಸಬಹುದಾದ ಬಲ ಪರಿಕಲ್ಪನೆಯನ್ನು, ಮತ್ತು ನ್ಯೂಟನ್ ನಿಯಮಗಳನ್ನು ಹಾಗು ಜಡತ್ವದ ಪರಿಕಲ್ಪನೆಗಳನ್ನು ಸವಿಸ್ತಾರವಾಗಿ ವಿಮರ್ಶಿಸಲಾಗಿದೆ. DOWNLOAD


thumbnail

thumbnail

ವಿಜ್ಞಾನ Science

ಸಮ್ಮಿಲನ - ಶಕ್ತಿ, ಕೆಲಸ ಮತ್ತು ಸಾಮರ್ಥ್ಯ

ಈ ಮಾಡ್ಯೂಲ್ ನಲ್ಲಿ ಶಕ್ತಿ, ಕೆಲಸ ಮತ್ತು ಸಾಮಥ್ರ್ಯಕ್ಕೆ ಬೇಕಾಗುವ ಎಲ್ಲಾ ಚಟುವಟಿಕೆಗಳನ್ನು ,ಕೂತೂಹಲಕಾರಿಯಾಗಿ ತರಗತಿಯಲ್ಲಿ ಅನುಕೂಲಿಸಲು ಬೇಕಾದ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ. ಶಕ್ತಿಯ ಅವಶ್ಯಕತೆ,ಅದರ ನಿತ್ಯತೆಯ ನಿಯಮಗಳು ,ಅದರ ಬಳಕೆ ಹೇಗೆ? ಎಂಬುದನ್ನು ಚಟುವಟಿಕೆಗಳ ಮೂಲಕ,ಸೃಜನಾತ್ಮಕವಾಗಿ ಸುಗಮಕಾರರು ನಿರ್ವಹಿಸಬಹುದಾಗಿದೆ.ಸರಳ ಯಂತ್ರಗಳ ಬಳಕೆ ಮತ್ತು ಘರ್ಷಣೆಯ ಪರಿಣಾಮಗಳನ್ನು ಸರಳ ಪ್ರಯೋಗಗಳ ಮೂಲಕ ತಿಳಿಸುವ ಪ್ರಯತ್ನಮಾಡಲಾಗಿದೆ.ಕೆಲಸ,ಘರ್ಷಣೆ ಮತ್ತು ಶಕ್ತಿಗೆ ಸಂಬಂಧಿಸಿದ ತಪ್ಪು ಪರಿಕಲ್ಪನೆಗಳನ್ನು ಮಾಡ್ಯೂಲ್ ನಲ್ಲಿ ಚರ್ಚಿಸಲಾಗಿದೆ.“science is the poetry of reality”ಎನ್ನುವಂತೆ ಕಲಿಕೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುಲು ಮಾಡ್ಯೂಲ್ ನಲ್ಲಿ ಸರಳ ಪ್ರಯೋಗಗಳಿಂದ ಕಲಿಕೆಯನ್ನು ಖಾತ್ರಿಗೊಳಿಸುವ ಬಹುರೂಪದ ಚಟುವಟಿಕೆಗಳನ್ನು ವಿನ್ಯಾಸಗೊಳಿಸಿದೆ. DOWNLOAD


thumbnail

thumbnail

ವಿಜ್ಞಾನ Science

“ಧಾತು-ಕಣದೀಪ್ತಿ” - ರಾಸಾಯನಿಕ ಬಂಧಗಳು

ರಸಾಯನ ಶಾಸ್ತ್ರದಲ್ಲಿನ ಅನೇಕ ವಿಷಯಗಳು ಎಷ್ಟು ತಿಳಿದರೂ, ಓದಿದರೂ, ತರಬೇತಿ ಪಡೆದರೂ ಸಹ ಒಂದು ರೀತಿ ಅಮೂರ್ತ ಕಲಿಕೆಯ ಭಾವನೆ ಮೂಡುವುದು ಸಹಜ. ಈ ಮಾಡ್ಯೂಲ್ನಷಲ್ಲಿ ಪ್ರಪಂಚದಲ್ಲಿನ ಎಲ್ಲ ವಸ್ತುಗಳು ಸ್ಥಿರತೆಯನ್ನು ಹೇಗೇ ಕಾಪಾಡಿಕೊಳ್ಳುತ್ತವೆ? ಧಾತುಗಳು ಯಾವುದರಿಂದ ಮಾಡಲ್ಪಟ್ಟಿದೆ? ಎಲ್ಲಾ ಧಾತುಗಳು ವಿವಿಧ ಲಕ್ಷಣಗಳನ್ನು ತೋರುವುದು ಏಕೆ? ಬಿಡಿ ಬಿಡಿಯಾದ ಮೂಲ ಧಾತುಗಳು ಒಂದರೊಡನೊಂದು ಸೇರಿದಾಗ, ಅದರ ಮೂಲ ಲಕ್ಷಣಗಳಲ್ಲಿ ಕಂಡು ಬರುವ ವಿಸ್ಮಯದ ಬದಲಾವಣೆಗಳಿಗೆ ಕಾರಣಗಳೇನು? ಎನ್ನುವುದನ್ನು ಈ ಮಾಡ್ಯೂಲ್ನ‍ಲ್ಲಿ ಪರಿಚಯಿಸಿಕೊಳ್ಳಬಹುದು. ವಿಶ್ವದಲ್ಲಿ ವಿಜ್ಞಾನದ ಕೌತುಕಗಳನ್ನು ಸರಳೀಕರಿಸಲು ಸಾಕಷ್ಟು ಪ್ರಯತ್ನಗಳಾಗುತ್ತಿದ್ದರೂ, ಇನ್ನೂ ಇದುವರೆಗೆ ಬಿಡಿಸಲಾಗದ, ಉತ್ತರ ಸಿಗದ ಅನೇಕ ಸಂಕೀರ್ಣ ವಿಷಯಗಳು ಅನಾವರಣಕ್ಕೆ ಕಾದಿವೆ. ಈ ಅನ್ವೇಷಣೆಗೆ ಶಿಕ್ಷಕ ಮತ್ತು ಮಕ್ಕಳನ್ನು ಉತ್ತೇಜಿಸಲು ಬೇಕಾದ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲಾಗಿದೆ. DOWNLOAD


thumbnail

thumbnail

ವಿಜ್ಞಾನ Science

ವಿದ್ಯುಚ್ಛಕ್ತಿ

ವಿದ್ಯುಚ್ಛಕ್ತಿಯನ್ನು ಬರೀ ಶಕ್ತಿಯ ಒಂದು ರೂಪ ಎಂದು ನೋಡದೆ ಇದು ನಾಗರೀಕತೆಯ ಉಗಮಕ್ಕೆ ಸಾಕ್ಷಿಯಾಗಿದೆ ಮತ್ತು ದೇಶದ ಪ್ರಗತಿಗೆ ಇದು ಹೇಗೆ ಸಹಾಯಕಾರಿ? ಎಂಬುದನ್ನು ಚರ್ಚಿಸಲಾಗಿದೆ. ವಿದ್ಯುಚ್ಛಕ್ತಿಯು ಶಕ್ತಿಯ ಒಂದು ರೂಪವಾದರೂ ಅತ್ಯಂತ ಪ್ರಯೋಜನಕಾರಿ ಏಕೆ? ಎಂಬುದನ್ನು ಚರ್ಚಿಸಿದೆ. ವಿದ್ಯುಚ್ಛಕ್ತಿಯ ಮೂಲ ಪರಿಕಲ್ಪನೆಗಳನ್ನು ಚಟುವಟಿಕೆಯ ರೂಪದಲ್ಲಿ ಅರ್ಥೈಸುವ ಪ್ರಯತ್ನವನ್ನು ಮಾಡಲಾಗಿದೆ. ವಿದ್ಯುತ್ ಆಧಾರಿತ ಕೃಷಿ, ಕೈಗಾರಿಕೀಕರಣಕ್ಕೆ ವಿದ್ಯುಚ್ಛಕ್ತಿಯ ಪ್ರಭಾವ ಮತ್ತು ಇದರಿಂದ ಸಮಾಜವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ವಿಮರ್ಶಾತ್ಮಕವಾಗಿ ಚರ್ಚಿಸಿದೆ. ಎನ್.ಸಿ.ಎಫ್.-2005 ಆಶಯದಂತೆ ತರಗತಿಯನ್ನು ನಿತ್ಯಜೀವನಕ್ಕೆ ಸಮ್ಮಿಳಿತಗೊಳಿಸಲು ಪ್ರಯತ್ನಿಸಿದೆ. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ವಿಜ್ಞಾನ ವಿಷಯದ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. 6 ಮತ್ತು 7ನೇ ತರಗತಿಯಲ್ಲಿರುವ ಮೂಲ ಪರಿಕಲ್ಪನೆಗಳಾದ ವಿದ್ಯುತ್ ಪ್ರವಾಹ, ವಿದ್ಯುತ್‍ಬಲ, ವಿಭವ, ವಿಭವಾಂತರಗಳ ನಡುವಿನ ಸಹ ಸಂಬಂಧವನ್ನು ಚರ್ಚಿಸಿದೆ. ವಿದ್ಯುತ್ ಪ್ರವಾಹದ ವಿವಿಧ ದೃಷ್ಟಿಕೋನಗಳನ್ನು, ಕಡಿಮೆ ವೆಚ್ಚದ ಸಾಮಗ್ರಿಗಳಲ್ಲಿ ಪ್ರಾಯೋಗಿಕವಾಗಿ ಕಲಿಸುವಂತಾಗಲು ಮತ್ತು ತಾರ್ಕಿಕವಾಗಿ ಆಲೋಚಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಈ ಮಾಡ್ಯೂಲ್ ಪೂರಕವಾಗಿದೆ. ವಿದ್ಯುತ್ ಆಘಾತ ಉಂಟಾದರೆ ಮಾಡಬೇಕಾದ ಪ್ರಥಮ ಚಿಕಿತ್ಸೆಯನ್ನು ತಿಳಿದುಕೊಳ್ಳಲು ಮಕ್ಕಳಿಗೂ ಮತ್ತು ಎಲ್ಲರಿಗೂ ಸಾಧ್ಯವಾಗಬೇಕು. ವಿದ್ಯುತ್ ಆಘಾತ ಉಂಟಾದ ಸಂದರ್ಭಗಳಲ್ಲಿ ನಮ್ಮ ಪಾತ್ರ ಮತ್ತು ವರ್ತನೆಗಳ ಬಗ್ಗೆ ತಿಳಿದುಕೊಂಡು ಅದರಂತೆ ನಡೆಯಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಸದರಿ ಸಾಹಿತ್ಯ ಅನುಕೂಲ ಮಾಡಿಕೊಡುತ್ತದೆ. ವಿದ್ಯುತ್ ಉಳಿತಾಯ ಮಾಡಲು ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೇರೇಪಿಸಲು ಆದ್ಯತೆ ನೀಡಲಾಗಿದೆ. ವಿದ್ಯುತ್ ಉಪಕರಣಗಳ ಬಗ್ಗೆ ಅರಿವು, ಗೃಹ ವಿದ್ಯುನ್ಮಂಡಲ ಜೋಡಣೆ, ವಿದ್ಯುತ್ ಅಲಂಕಾರ ಮುಂತಾದ ವೃತ್ತಿಪರ ಕೌಶಲಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಿ ಅವರು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಮಾಡ್ಯೂಲ್‍ನಲ್ಲಿ ಪ್ರಯತ್ನಿಸಿದೆ. DOWNLOAD


thumbnail

ವಿಜ್ಞಾನ Science

ಜೀವಾಂಕುರ - ಜೀವಕೋಶೀಯ ವ್ಯವಸ್ಥೆ

ಜೀವ ಎಂದರೆ ಏನು? ಅದರ ಉಗಮ ಹೇಗಾಯಿತು? ಉಗಮಕ್ಕೆ ಬೇಕಾದ ಅವಶ್ಯಕ ವಸ್ತುಗಳೇನು? ಭೂಮಿಯಲ್ಲೇ ಜೀವದ ಉಗಮ ಏಕೆ? ಅನ್ಯ ಗ್ರಹಗಳಲ್ಲಿ ಜೀವದ ಉಗಮ ಏಕಿಲ್ಲ? ಎಂಬ ಪ್ರಶ್ನೆಗಳು ಮಾನವನನ್ನು ಎಂದಿನಿಂದಲೋ ಗಮನ ಸೆಳೆದಿವೆ. ಸಾಗರದ ತಳಭಾಗದಲ್ಲಿಯೇ ಈ ಜೀವ ಉತ್ಪತ್ತಿಯಾಗಲು ಕಾರಣಗಳೇನು? ಏಕಕೋಶದಿಂದ ಬಹುಕೋಶ ಜೀವಿಗಳು ಹೇಗೆ ಉಗಮವಾದವು? ಕಾಲಾನುಕ್ರಮ ಗತಿಯಲ್ಲಿ ಯಾವ ಯಾವ ವಿಧದ ಜೀವಿಗಳು ಭೂಮಿಯಲ್ಲಿ ಉದಯಿಸಿ ನಾಶವಾದವು? ಜೀವಕೋಶವನ್ನು ಪತ್ತೆಹಚ್ಚಿದ ಬಗೆ ಹೇಗೆ? ಜೀವಕೋಶದಲ್ಲಿನ ಕಣದಂಗಗಳ ಕಾರ್ಯವೇನು? ಜೀವಿಗಳಲ್ಲಿ, ಅದರಲ್ಲೂ ಮಾನವನಲ್ಲಿ ಲಿಂಗನಿರ್ಧಾರ ಹೇಗಾಯಿತು? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದಾದ ವಿಷಯಗಳನ್ನು ಈ ಮಾಡ್ಯೂಲ್‍ನಲ್ಲಿ ಚರ್ಚಿಸುವ ಪ್ರಯತ್ನ ಮಾಡಿದ್ದೇವೆ. ಜೀವಾಂಕುರ ಜೀವಕೋಶೀಯ ವ್ಯವಸ್ಥೆಯ ನಿರಂತರ ವಿಕಾಸದ ಬಗೆ, ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿರುವ ಭೂಮಿ ಮತ್ತು ವಿಶ್ವದ ಹುಟ್ಟು - ವಿಕಾಸದ ಬಗ್ಗೆ ಕೂಲಂಕುಷವಾಗಿ ಇಲ್ಲಿ ಚರ್ಚಿಸಿದೆ. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ವಿಜ್ಞಾನ ವಿಷಯದ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. ಈ ಮಾಡ್ಯೂಲ್‍ನ ವಿಚಾರಗಳನ್ನು ಅರ್ಥೈಸಲು ಪೂರಕವಾದ ಸಾಹಿತ್ಯ ಮತ್ತು ಪ್ರಯೋಗಾಧಾರಿತ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಈ ಸಾಹಿತ್ಯದಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳು ತರಗತಿ ಪ್ರಕ್ರಿಯೆಗೆ ಪೂರಕವಾಗಿದ್ದು, ಇದರ ಅಧ್ಯಯನವು ಶಿಕ್ಷಕರಲ್ಲಿ ಹೊಸ ಕುತೂಹಲ ಮತ್ತು ಹುರುಪು ಮೂಡಿಸುವುದಲ್ಲದೆ ನಿರಂತರ ಅಭ್ಯಾಸದಲ್ಲಿ ತೊಡುಗುತ್ತಾರೆ ಎಂಬ ಆಶಯ ನಮ್ಮದಾಗಿದೆ. DOWNLOAD


thumbnail

> View Next: ಸಮಾಜ ವಿಜ್ಞಾನ