ನಲಿ-ಕಲಿ Nali Kali

ಬೆಳ್ಳಿಮೋಡ ನಲಿಕಲಿ-ಸಮಗ್ರ

ಶಿಶುಕೇಂದ್ರಿತ ತತ್ವವನ್ನು ಅಕ್ಷರಶಃ ಅಳವಡಿಸಿಕೊಂಡಿರುವ, ಸ್ವವೇಗದ ಕಲಿಕೆ-ಸಂತಸದ ಕಲಿಕೆ-ಸ್ವಕಲಿಕೆ ಎಂಬ ತತ್ವಗಳನ್ನು ಆಧರಿಸಿ ಚಟುವಟಿಕೆಗಳನ್ನು ಹೆಣೆದಿರುವ, ಬಹುವರ್ಗ ಹಾಗೂ ಬಹುಹಂತ ಎಂಬ ಸರ್ವಕಾಲಿಕ ಸಮಸ್ಯೆಗೆ ಪರಿಹಾರಾತ್ಮಕವಾಗಿ ಅಳವಡಿಸಿಕೊಂಡಿರುವ ಕಲಿಕಾ ಪದ್ಧತಿಯೇ ನಲಿಕಲಿ.

ಈ ಸಾಹಿತ್ಯದಲ್ಲಿ ನಲಿಕಲಿಯ ಪ್ರಸ್ತುತತೆ, ಚಟುವಟಿಕೆಗಳು, ನಲಿಕಲಿ ತರಗತಿ ವ್ಯವಸ್ಥೆ, ಕಲಿಕಾ ಪ್ರಕ್ರಿಯೆಯ ಹಂತಗಳು, ತರಗತಿ ನಿರ್ವಹಣೆ, ್ಲ ಮೌಲ್ಯಮಾಪನ ಪ್ರಕ್ರಿಯೆ, ದಾಖಲೆಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಪ್ರಾಯೋಗಿಕವಾಗಿ ನಲಿಕಲಿಯ ಪರಿಚಯವನ್ನು ಪಡೆದುಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಿದೆÉ. ಈವರೆಗೆ ನಲಿಕಲಿ ತರಬೇತಿ, ಕಾರ್ಯಗಾರಗಳಲ್ಲಿ ಭಾಗವಹಿಸದೇ ಇರುವ ಶಿಕ್ಷಕರಿಗೆ ಇದು ಆರಂಭಿಕ ಮಾಡ್ಯೂಲ್. DOWNLOAD


thumbnail

thumbnail

ನಲಿ-ಕಲಿ Nali Kali

ಬೆಳ್ಳಿಮೋಡ ನಲಿಕಲಿ-ಕನ್ನಡ

ಭಾಷೆ ಕಲಿಕೆ ಮಗು ಶಾಲೆಗೆ ಬಂದ ನಂತರ ಪ್ರಾರಂಭವಾಗುವಂತಹದ್ದಲ್ಲ. ಹಾಗಾಗಿ ಭಾಷೆಯನ್ನು ಅನುಕೂಲಿಸುವ ಶಿಕ್ಷಕರು ಅಗತ್ಯವಾದ ಆರಂಭಿಕ ಸಾಕ್ಷರತೆ, ಭಾಷಾ ಕಲಿಕೆಯ ಸಿದ್ದಾಂತಗಳು ಇತ್ಯಾದಿಯನ್ನು ಪರಿಚಯಿಸಲಾಗಿದೆ. ನಲಿಕಲಿ ವಿಧಾನದ ಬಗ್ಗೆ ಅರಿತು, ಈ ವಿಧಾನದಲ್ಲಿ ಕನ್ನಡ ವಿಷಯವನ್ನು ಮಾತ್ರ ಅಳವಡಿಸಿಕೊಂಡು ಕಲಿಕಾ ಪ್ರಕ್ರಿಯೆಯನ್ನು ನಡೆಸುತ್ತೇನೆ ಎಂಬ ಆಕಾಂಕ್ಷೆ ಹೊಂದಿದವರನ್ನು ದೃಷ್ಠಿಯಲ್ಲಿರಿಸಿಕೊಂಡು ಈ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಕಲಿಕೆಯಲ್ಲಿ ಚಟುವಟಿಕೆಗಳ ಅವಶ್ಯಕತೆ, ಅವುಗಳ ಮಹತ್ವ ಮತ್ತು ತರಗತಿ ಪ್ರಕ್ರಿಯೆಯಲ್ಲಿ ಅವುಗಳನ್ನು ಬಳಸಿಕೊಳ್ಳುವುದು ಹೇಗೆಂಬ ಬಗ್ಗೆ ಸವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ. ನಲಿಕಲಿ ಆಧಾರಿತ ಭಾಷಾ ತರಗತಿ ಪ್ರಕ್ರಿಯೆಯನ್ನು ಅರ್ಥೈಸುವ ಜೊತೆಗೆ ಮೌಲ್ಯಮಾಪನ ಮುಂತಾದ ಅಂಶಗಳಿಗೆ ಸಹ ಒತ್ತು ನೀಡಲಾಗಿದೆ. ಈ ತರಬೇತಿಯನ್ನು ಪಡೆದಲ್ಲಿ ಕನ್ನಡ ಕಲಿಕಾ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಅರಿವನ್ನು ಪಡೆಯಬಹುದು. DOWNLOAD


thumbnail

thumbnail

ನಲಿ-ಕಲಿ Nali Kali

ಬೆಳ್ಳಿಮೋಡ ನಲಿಕಲಿ-ಗಣಿತ

ಮಾಡ್ಯೂಲ್ನಕಲ್ಲಿ ಗಣಿತದ ಅರ್ಥ, ಸ್ವಭಾವ, ಉದ್ದೇಶ, ವಿಧಾನ, ಸಾಮಗ್ರಿ, ಸವಾಲು ಹಾಗೂ ಪರಿಹಾರಗಳಿಗೆ ಸಂಬಂಧಿಸಿದ ಪ್ರಸ್ತುತಿ ಇದೆ. ನಲಿಕಲಿಯ ವಿಶೇಷತೆಗಳ, ಇದರಲ್ಲಿ ಬಳಸಿದ ವಿಶೇಷ ಪದಗಳು, ಕಲಿಕಾ ಗೋಪುರ, ತಟ್ಟೆ, ಕಲಿಕಾ ಏಣಿ, ಮಾಹೇವಾರು ಹಂಚಿಕೆ, ಮೌಲ್ಯಮಾಪನ ಹಾಗೂ ದಾಖಲೆÉಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಒಳಗೊಂಡಿದೆ. ನಲಿಕಲಿ ವಿಧಾನದಲ್ಲಿ ಗಣಿತದ ಕಲಿಕಾ ಪ್ರಕ್ರಿಯೆ ಹೇಗೆ ಸಾಗುತ್ತದೆಂದು ಪ್ರಾತ್ಯಕ್ಷಿಕೆಯನ್ನು ಸಹ ಇದರಲ್ಲಿ ನೀಡಲಾಗಿದೆ. ಶಿಕ್ಷಕರಿಗೆ ನೆರವಾಗಲೆಂದು ತರಗತಿ ನಿರ್ವಹಣೆಯಲ್ಲಿ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು? ವಿಧ್ಯಾರ್ಥಿಗಳನ್ನು ಕಲಿಕೆಗೆ ಹೇಗೆ ಅಣಿಗೊಳಿಸಬೇಕು? ಪ್ರಕ್ರಿಯೆ ಹೇಗೆ ಸಾಗಬೇಕೆಂಬುದನ್ನು ಮಾಡ್ಯೂಲ್ ವಿವರಿಸುತ್ತದೆ. ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬಹುದಾದ ವಿವರವನ್ನು ನೀಡಲಾಗಿದೆ. DOWNLOAD


thumbnail

thumbnail

ನಲಿ-ಕಲಿ Nali Kali

ಬೆಳ್ಳಿಮೋಡ ನಲಿಕಲಿ-ಪರಿಸರ ಅಧ್ಯಯನ

ಪರಿಸರ ಅಧ್ಯಯನದ ಅರ್ಥ, ವ್ಯಾಪ್ತಿ, ಅವಶ್ಯಕತೆ, ಮಹತ್ವ ಹಾಗೂ ಪರಿಸರ ಹಾನಿಯಿಂದಾಗುವ ದುಷ್ಪರಿಣಾಮಗಳು, ಪರಿಸರ ಸಂರಕ್ಷಣೆ ಏಕೆ? ಹೇಗೆ?, ಸ್ವಚ್ಛತೆ ಮತ್ತು ಆರೋಗ್ಯ, ಇತರ ವಿಷಯಗಳ ಪ್ರಭಾವ ಮುಂತಾದ ಅಂಶಗಳನ್ನು ಒಳಗೊಂಡಂತೆ ಸಾಹಿತ್ಯ ರಚನೆಯಾಗಿದೆ. ಹೆಚ್ಚುವರಿ ಮಾಹಿತಿಯಾಗಿ ಪರಿಸರವಾದಿಗಳು ಹಾಗೂ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ದಿನಾಚರಣೆಗಳ ಬಗ್ಗೆ ಸಹ ಲೇಖನಗಳನ್ನು ನೀಡಲಾಗಿದೆ. ಇವುಗಳೊಂದಿಗೆ ಪ್ರಮುಖವಾಗಿ ನಲಿಕಲಿಯಲ್ಲಿ ಪರಿಸರ ಅಧ್ಯಯನ, ಗುಂಪು ತಟ್ಟೆ, ಕಲಿಕಾ ಗೋಪುರ, ಅಳವಡಿಸಿಕೊಂಡಿರುವ ಚಟುವಟಿಕೆಗಳು, ಅವುಗಳ ಉದ್ದೇಶ, ಬಳಕೆಯ ವಿಧಾನಗಳನ್ನು ಚರ್ಚಿಸುವ ಜೊತೆಗೆ ಕಲಿಕಾಪ್ರಕ್ರಿಯೆ, ತರಗತಿ ನಿರ್ವಹಣೆಯ ಪ್ರ್ರಾತ್ಯಕ್ಷಿಕೆಗೂ ಅವಕಾಶ ನೀಡಲಾಗಿದೆ. ಚಟುವಟಿಕೆಗಳು ಏನು? ಏಕೆ? ಹೇಗೆ? ತರಗತಿವಾರು ಸಾಮರ್ಥ್ಯಗಳು, ಮಾಹೆವಾರು ಹಂಚಿಕೆ ಇತ್ಯಾದಿಗಳನ್ನು ಸಹ ತಿಳಿಸುವ ಪ್ರಯತ್ನ ಮಾಡಲಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಗುರ್ತಿಸುವ, ಹೆಸರಿಸುವ, ಸಂರಕ್ಷಿಸುವ, ಅವಶ್ಯಕತೆಗಳನ್ನು ಮನಗಂಡು ಸುಗಮಕಾರರಿಗೆ ಮತ್ತು ಕಲಿಕಾರ್ಥಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಸೂಕ್ತ ವ್ಯಾಪ್ತಿಯೊಂದಿಗೆ ಗಮನಿಸಬೇಕಾದ ಅಂಶಗಳನ್ನು ಸಹ ಚರ್ಚಿಸಲಾಗಿದೆ. DOWNLOAD


thumbnail

thumbnail

ನಲಿ-ಕಲಿ Nali Kali

ಮಾಡಿ ಕಲಿಯೋಣ

ಶಾಲಾ ಶಿಕ್ಷಣ ಮತ್ತು ಮಗುವಿನ ಕಲಿಕೆಯ ಸ್ವರೂಪಗಳು ಬದಲಾಗಿವೆ. ಹಾಗಾಗಿ ಬದಲಾವಣೆಯ ಅನಿವಾರ್ಯತೆ ಇಂದು ನಮ್ಮೆದುರಿಗಿದೆ. ರಚನಾವಾದಿ ಕಲಿಕಾ ಪ್ರಕ್ರಿಯೆಯಲ್ಲಿ ಜ್ಞಾನವನ್ನು ಕಟ್ಟಿಕೊಳ್ಳಬೇಕೆಂದರೆ ಕಲಿಕಾರ್ಥಿಗೆ ಅವಶ್ಯಕ ಚಟುವಟಿಕೆ ಹಾಗೂ ಕಲಿಕೋಪಕರಣಗಳನ್ನು ಒದಗಿಸಿ ಕೊಡುವುದು ಅನಿವಾರ್ಯ. ಇಲ್ಲಿಯೂ ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಚಟುವಟಿಕೆ ಬಳಸಿದರೆ ಕಲಿಕೆ ಪ್ರಭುತ್ವ ಮಟ್ಟವನ್ನು ತಲುಪದಿರಬಹುದು. ಆದ್ದರಿಂದ ವೈವಿಧ್ಯಮಯ ಚಟುವಟಿಕೆಗಳನ್ನು ಒಂದೇ ಕಲಿಕಾಂಶಕ್ಕೆ ಬಳಸಬೇಕಾಗಬಹುದು. ಒಂದು ಕಲಿಕಾಂಶಕ್ಕೆ ಹಲವು ಚಟುಟಿಕೆಗಳನ್ನೂ ಸಹ ಬಳಸಬೇಕಾಗಬಹುದು. ಹೀಗೆ ಕಲಿಕಾ ಸಾಮಗ್ರಿ ಮತ್ತು ಚಟುವಟಿಕೆಗಳನ್ನು ಬಳಸಬೇಕೆಂದರೆ ಅವುಗಳ ಸಂಪೂರ್ಣ ಪರಿಚಯ ಹಾಗೂ ಸರಿಯಾದ ಕ್ರಮದ ಆಯೋಜನೆ ಸುಗಮಕಾರರಿಗೆ ತಿಳಿದಿರಬೇಕಾಗುತ್ತದೆ. ಈ ವಿವರ ಇದುವರೆಗೆ ಅಲ್ಲಲ್ಲಿ ಬಿಡಿಬಿಡಿಯಾಗಿ ಸಿಗುತ್ತಿತ್ತು. ತರಗತಿ ಕೊಠಡಿ ಒಳಗೆ ಶಿಕ್ಷಕರು ಪ್ರವೇಶಿಸುವಾಗ ತಾನು ನಿರ್ವಹಿಸಬೇಕಾದ ಕಲಿಕಾ ಪ್ರಕ್ರಿಯೆಯಲ್ಲಿ ಬಳಸಬಹುದಾದ ಚಟುವಟಿಕೆ ಮತ್ತು ಕಲಿಕೋಪಕರಣಗಳ ಪೂರ್ಣ ಪರಿಚಯವಿರಬೇಕಾಗುತ್ತದೆ. ಆದ್ದರಿಂದ ಕಲಿಕೋಪಕರಣಗಳನ್ನು ಸಿದ್ಧಪಡಿಸಿಕೊಂಡು ಹೋಗಲು ಅವಶ್ಯಕವಾದ ವಿವರಗಳನ್ನೊಳಗೊಂಡ ಒಂದು ಕೈಪಿಡಿಯ ಅವಶ್ಯಕತೆ ಇದ್ದು, ಇದನ್ನು ಪೂರೈಸುವ ಪ್ರಯತ್ನವನ್ನು ಇಲ್ಲಿ ಮಾಡಿದೆ. ನಲಿಕಲಿ ಕಲಿಕೋಪಕರಣಗಳನ್ನು ಒಳಗೊಂಡಂತೆ ಒಂದರಿಂದ ಐದನೇ ತರಗತಿವರೆಗೆ ಬೇಕಾದ ವಿಷಯವಾರು ಕಲಿಕೋಪಕರಣಗಳು, ಚಟುವಟಿಕೆಗಳು, ಕಲಿಕೋಪಕರಣಗಳ ತಯಾರಿಕೆ & ಬಳಕೆಯ ವಿವರವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ಇದೇ ಅಂತಿಮವಲ್ಲ. ಸುಗಮಕಾರರು ತಮ್ಮ ಸ್ಥಳೀಯ ಸನ್ನಿವೇಶಕ್ಕನುಗುಣವಾಗಿ ಕಲಿಕೋಪಕರಣಗಳನ್ನು ಸೃಜಿಸಿ ಬಳಸಬಹುದು. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. ಇವುಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮೆಲ್ಲ ಸುಗಮಕಾರರೂ ತಮ್ಮ ತರಗತಿ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುತ್ತಾರೆ ಎಂಬುದು ನಮ್ಮ ನಿರೀಕ್ಷೆ. DOWNLOAD


thumbnail

ನಲಿ-ಕಲಿ Nali Kali

ಆರಂಭಿಕ ಕಲಿಕೆ

ಕಲಿಕೆ ಅನುಕೂಲಿಸುವವರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮೆಲ್ಲರ ಗುರಿ ಶಾಲೆಗೆ ಬರುವ ಮಗುವಿನಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡುವುದೇ ಆಗಿದೆ. ಈ ಗುಣಾತ್ಮಕ ಕಲಿಕೆಗೆ ಮಗುವನ್ನು ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಪರಿಚಿತ ಮನೆಯ ಪರಿಸರದಿಂದÀ ಮಗು ಅಪರಿಚಿತವಾದ ಶಾಲಾ ಪರಿಸರಕ್ಕೆ ಪ್ರವೇಶ ಪಡೆಯುವುದು ಮಗುವಿನ ಜೀವನದಲ್ಲಿ ಬಹು ದೊಡ್ಡ ಬದಲಾವಣೆ. ಈ ಬದಲಾವಣೆಗೆ ಮಗುವನ್ನು ಹೊಂದಿಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಶಾಲೆಗೆ ಪ್ರವೇಶ ಪಡೆಯುವ ಮಗುವಿನ ಮೊದಲಿನ ಪರಿಸ್ಥಿತಿ, ಶಾಲಾ ಪ್ರವೇಶ ಪಡೆದಾಗಿನ ಮಗುವಿನ ಮನೋಸ್ಥಿತಿ, ನಂತರ ಮಗುವಿಗೆ ಎದುರಾಗುವ ಸವಾಲುಗಳು, ಅವುಗಳನ್ನು ಪರಿಹರಿಸಲು ಸೂಕ್ತ ಮಾರ್ಗೋಪಾಯಗಳ ಅರಿವು ನಮಗಿರಬೇಕಾದುದು ಅವಶ್ಯಕ. ಈ ಅಂಶಗಳ ಪರಿಚಯವನ್ನು ಮಾಡಿಕೊಡುವುದು ಈ "ಆರಂಭಿಕ ಕಲಿಕೆ" ಸಾಹಿತ್ಯದ ಮೂಲ ಆಶಯ. ಈ ಆಶಯಕ್ಕೆ ತಕ್ಕಂತೆ ಇಲ್ಲಿ ಮಗುವನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಮಗುವಿನ ವಿಕಾಸ, ಸಾಕ್ಷರತೆ ಮತ್ತು ಅದರ ಮೇಲೆ ಪ್ರಭಾವ ಬೀರುವ ಅಂಶಗಳು, ಸಂವಹನ, ಸಂಕೇತಗಳು-ಅವುಗಳ ಮೂಲಕ ಭಾಷೆ-ಗಣಿತ ಕಲಿಕೆ ಹೀಗೆ ಶಾಲಾ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ವಿಷಯಗಳ ಬಗ್ಗೆ ಅರಿವನ್ನುಂಟು ಮಾಡಲು ಅನುಕೂಲವಾಗುವಂತೆ ಈ ಕೈಪಿಡಿ ಸಿದ್ಧವಾಗಿದೆ. ಸಿಸಾಸ್ (CSAS) ಮತ್ತು ನ್ಯಾಸ್(NAS) ಮೌಲ್ಯಮಾಪನಗಳು ನಮ್ಮ ಮಕ್ಕಳ ಕಲಿಕಾ ಪ್ರಗತಿ ಮತ್ತು ಕೊರತೆಯ ಮೇಲೆ ಬೆಳಕು ಚೆಲ್ಲಿವೆ. ಅಲ್ಲಿ ಗುರುತಿಸಲಾದ ಕೊರತೆಗಳಿಗೆ ನೈದಾನಿಕ ಕಾರಣಗಳನ್ನು ಪತ್ತೆ ಹಚ್ಚುವುದು ಅತೀ ಅಗತ್ಯ. ಶಿಕ್ಷಕರು ತರಬೇತಿಗೆ ಬರುವಾಗ ಈ ಕೊರತೆಗಳನ್ನು ಗುರುತಿಸಿಕೊಂಡಿದ್ದಲ್ಲಿ ತರಬೇತಿಯು ಪರಿಹಾರ ವೇದಿಕೆಯಾಗುತ್ತದೆ. DOWNLOAD


thumbnail

> View Next: ಶೈಕ್ಷಣಿಕ ದೃಷ್ಟಿಕೋನ