“ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನಿರೀಕ್ಷೆಗಳನ್ನು ಈಡೇರಿಸುವ ಶಿಕ್ಷಕರ ಕಾರ್ಯದಕ್ಷತೆಯ ಮೇಲೆ ಶಿಕ್ಷಣ ಇಲಾಖೆ ಅತೀವ ನಂಬಿಕೆಯನ್ನಿರಿಸಿದೆ. ಶಿಕ್ಷಕರಲ್ಲದೆ ಇನ್ನಾರಿಗೂ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯವಾಗದು. ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಾಗಿ ಈ ದೇಶದ ಭವಿಷ್ಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವವರು. ಇಲಾಖೆಯ ಹಾಗೂ ಭಾಗಿದಾರ ಪೋಷಕರ ನಡುವೆ ಜ್ಞಾನ ಸೇತುವೆಯಾಗಿ ಅಸಾಧಾರಣ ಸಂದರ್ಭಗಳಲ್ಲಿಯೂ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವರು. ಅಂತಹ ಸಮರ್ಥ ಶಿಕ್ಷಕರ ಪಡೆಯನ್ನು ಹೊಂದುವುದೇ ನಮ್ಮ ರಾಜ್ಯದ ಕನಸು. ಶಿಕ್ಷಕರು ವ್ಯಕ್ತಿ-ಶಕ್ತಿಯಾಗಿ ರೂಪುಗೊಳ್ಳುತ್ತ ಶಿಕ್ಷಣದ ಬೆನ್ನೆಲುಬಾಗಿ ಸಮಗ್ರ ಗುರಿಯ ಕಡೆಗೆ ಹೆಜ್ಜೆಯಿರಿಸಬೇಕೆಂಬುದೇ ಶಿಕ್ಷಣ ಇಲಾಖೆಯ ಆಶಯ.
ಶಿಕ್ಷಕರ ಅಭಿವೃದ್ಧಿ ಪ್ರಯತ್ನಗಳು ಬಹಳ ಹಿಂದಿನಿಂದ ನಡೆದಿದೆ. ಆದರೆ ಶಿಕ್ಷಕರ ಮೇಲಿನ ನಿರೀಕ್ಷೆಗಳು ಇನ್ನೂ ಹೆಚ್ಚಾಗಿದೆ, ಜೊತೆಗೆ ಭಿನ್ನವಾಗಿದೆ. ಇವುಗಳನ್ನು ವಾರ್ಷಿಕ ಯೋಜನೆಗಳು, ವಿಷಯಕ್ಕೆ ಸೀಮಿತವಾದ ತರಬೇತಿಗಳಿಂದ ಪೂರೈಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಮನಗಂಡಿದೆ. ಶಿಕ್ಷಕರ ಸಂಪನ್ಮೂಲಗಳನ್ನು, ವೃತ್ತಿ ಸಾಮರ್ಥ್ಯಗಳನ್ನು ಅಭಿವೃದ್ಧಿ ಗೊಳಿಸಬೇಕು ಎನ್ನುವ ಆಶಯದೊಂದಿಗೆ ಹೊಸ ನೆಲೆಯ ಚಿಂತನೆಗಳನ್ನು ಯೋಜಿಸಲಾಗಿದೆ. ಇದಕ್ಕಾಗಿ “ಗುರುಚೇತನ” ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಜಾರಿಗೊಳಿಸುತ್ತಿದೆ. ಶಿಕ್ಷಕರನ್ನು ಅಭಿವೃದ್ಧಿ ಗೊಳಿಸಲು ದೀರ್ಘಾವಧಿಯ ಯೋಜನೆಯ ಅಗತ್ಯವಿದ್ದು, ಇದಕ್ಕಾಗಿ ವಿಶೇಷವಾದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಪಠ್ಯಕ್ರಮವನ್ನು ರೂಪಿಸಲಾಗಿದೆ.ಈ ನವೀನ ಯೋಜನೆಯಲ್ಲಿ ಶಿಕ್ಷಕರು ಸ್ವಾಯತ್ತವಾಗಿ ತಮ್ಮ ವೃತ್ತಿಪರ ಅಭಿವೃದ್ಧಿ ಗೆ ಮಾಡ್ಯೂಲ್ಗಳನ್ನು ತಾವೇ ಆಯ್ಕೆಮಾಡಿಕೊಂಡು ತೊಡಗಿಕೊಳ್ಳುವ ಸುವರ್ಣಾವಕಾಶ ಒದಗಿಸಿದೆ. ಇವುಗಳು ತರಗತಿ ಪ್ರಕ್ರಿಯೆಯನ್ನು ರೂಪಿಸುವುದಕ್ಕೆ ನೆರವಾಗುವ ಶಿಕ್ಷಣದ ತಾತ್ವಿಕತೆ, ವಿಷಯದ ಸ್ವರೂಪ, ವಿವಿಧ ಬೋಧನಾ ಕಲಿಕಾ ವಿಧಾನ ಮತ್ತು ವಿಷಯಗಳ ಸಮ್ಮಿಲನ, ಕಲಿಕೆಯನ್ನು ಅನುಭವಾತ್ಮಕವಾಗಿ ಮತ್ತು ಮಗುವಿನ ಸಂದರ್ಭಕ್ಕೆ ಪೂರಕವಾಗಿ ಅನುಕೂಲಿಸುವ ಶೈಕ್ಷಣಿಕ ದೃಷ್ಟಿಕೋನಗಳನ್ನು ಒಳಗೊಂಡಿರುತ್ತವೆ. ಗುರುಚೇತನ ಕಾರ್ಯಕ್ರಮದಲ್ಲಿ ಕನ್ನಡ,ಹಿಂದಿ, ವಿಜ್ಞಾನ, ಗಣಿತ,ಸಮಾಜ ವಿಜ್ಞಾನ, ನಲಿ ಕಲಿ,ಶೈಕ್ಷಣಿಕ ದೃಷ್ಟಿಕೋನ ವಿಷಯದಲ್ಲಿ ಮಾಡ್ಯೂಲ್ಗಳು ಸಿದ್ಧಗೊಂಡಿವೆ.
ಉದ್ದೇಶಗಳು
ಕಾರ್ಯಕ್ರಮದ ವಿಶೇಷತೆಗಳು