ಶೈಕ್ಷಣಿಕ ದೃಷ್ಠಿಕೋನ Education Perspective

ಮನುಷ್ಯರನ್ನು ಏಕೆ ಶಿಕ್ಷಿತರನ್ನಾಗಿ ಮಾಡಬೇಕು?

ಮಾನವನನ್ನು ಅರಿವಿನಿಂದ ಕೂಡಿದ ಸಹಜ ಬದುಕಿನ ಭಾಗವಾಗುವಂತೆ ಅವನು ಪಡೆದ ಶಿಕ್ಷಣ ಪ್ರೇರೇಪಿಸಬೇಕು. ಎಲ್ಲವನ್ನು ಗಳಿಸಬಹುದು ಎಂಬ ಭ್ರಮೆ ಇಂದು ಮಾನವನ್ನಾವರಿಸಿದೆ. ಮಾನವ ತನ್ನ ಬದುಕನ್ನು ಸುಲಭ ಮಾಡಿಕೊಳ್ಳಲು ಹೋಗಿ, ಪ್ರಕೃತಿಯ ಇತರ ಸಕಲ ಜೀವ ಸಂಕುಲವನ್ನು ತೀವ್ರತರವಾದ ಗಂಡಾಂತರದಲ್ಲಿ ಸಿಲುಕಿಸುತ್ತಿದ್ದಾನೆ. ಮಾನವನ ಜೀವನಶೈಲಿ ಅಸಹಜವಾಗಿದೆ. ಹಾಗಾದರೆ ಮಾನವನನ್ನು ಸರಿಮಾರ್ಗಕ್ಕೆ ತರುವುದು ಹೇಗೆ? ಅದಕ್ಕೆ ಇರುವ ಮಾರ್ಗೋಪಾಯಗಳೇನು? ಮಾನವನ ಬದುಕಿನ ಮೂಲಭೂತ ಆಕಾಂಕ್ಷೆಗಳೇನು? ಅವುಗಳನ್ನು ಅರಿವಿನೊಂದಿಗೆ ಪೂರೈಸಿಕೊಳ್ಳುತ್ತಿದ್ದಾನೆಯೇ? ಈ ನಿಟ್ಟಿನಲ್ಲಿ ಶಿಕ್ಷಣದ ಮೂಲಭೂತ ದೃಷ್ಟಿಕೋನವನ್ನೂ ಶಿಕ್ಷಕ ಹೊಂದುವುದು ಅತ್ಯವಶ್ಯಕ ಹಾಗೂ ಪ್ರಸ್ತುತ ಕಾಲಘಟ್ಟದ ತುರ್ತೂ ಹೌದು. ಈ ಮಾಡ್ಯೂಲ್ನದಲ್ಲಿ ಮನುಷ್ಯರನ್ನು ಜವಾಬ್ದಾರಿಯುತ ಮಾನವನನ್ನಾಗಿ ರೂಪಿಸುವ ಮೂಲಕ ಈಗ ಎದುರಿಸುತ್ತಿರುವಸಂಕಷ್ಟಗಳನ್ನು ಕ್ರಮೇಣ ಕಡಿಮೆ ಮಾಡುವ ಧ್ಯೇಯೋದ್ದೇಶವನ್ನು ಶಿಕ್ಷಣದಲ್ಲಿನ ಭಾಗೀದಾರರು ಅರಿತುಕೊಳ್ಳಬೇಕು ಎನ್ನುವುದನ್ನು ಚರ್ಚಿಸಲಾಗಿದೆ. DOWNLOAD


thumbnail

thumbnail

ಶೈಕ್ಷಣಿಕ ದೃಷ್ಠಿಕೋನ Education Perspective

ಶಿಕ್ಷಣದ ಗುರಿಗಳು-ಶಿಕ್ಷಕರನ್ನು ಏಕೆ ಇವು ಸದಾ ಕಾಡಬೇಕು?

ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005 ರ ಆಶಯದಂತೆ ಶಿಕ್ಷಕನು ಒಬ್ಬ ‘ಚಿಂತನಶೀಲ ಅಭ್ಯಾಸಿಗನಾಗಬೇಕಾಗುತ್ತದೆ’. ಇದಕ್ಕೆ ಸ್ಪೂತಿಯನ್ನು ನೀಡಲು ಶಿಕ್ಷಕರಾದ ನಮಗೆ ಶೈಕ್ಷಣಿಕ ಗುರಿಗಳ ಬಗೆಗಿನ ಸ್ಪಷ್ಟತೆ ಬೇಕಾಗುತ್ತದೆ. “ಗುರಿ ಎಂದರೆ ಏನು? ಅದು ಹೇಗೆ ರೂಪುಗೊಳ್ಳುತ್ತದೆ? ನಮ್ಮ ದೇಶದಲ್ಲಿ ಶೈಕ್ಷಣಿಕ ಗುರಿಗಳ ರಚನೆ ನಡೆದುಬಂದ ದಾರಿ ಯಾವುದು ಮತ್ತು ಯಾವ ಮಹತ್ವಾಕಾಂಕ್ಷೆಯನ್ನು ಹೊಂದಿವೆ ಎಂಬುದರ ಸ್ಪಷ್ಟತೆ ಬೇಕಾಗುತ್ತದೆ. ಜೊತೆಗೆ ಶೈಕ್ಷಣಿಕ ಗುರಿಗಳು ಯಾವವು? ನಾನು ಒಂದು ವಿಷಯದ ಬೋಧಕನಾಗಿ ನನ್ನ ಬೋಧನೆಯ ಮೂಲಕ ಹೇಗೆ ಶೈಕ್ಷಣಕ ಗುರಿಗಳನ್ನು ಈಡೇರಿಸಬಹುದು ಮತ್ತು ಶಾಲೆ/ತರಗತಿಯ ಪ್ರತಿಯೊಂದು ಚಟುವಟಿಕೆ ಹಿಂದೆ ಇರುವ ಆಶಯಗಳೇನು ಮತ್ತು ಅದನ್ನು ಈಡೇರಿಸುವಲ್ಲಿ ಒಬ್ಬ ಶಿಕ್ಷಕನ ಪಾತ್ರದ ಕುರಿತು ಸ್ಷಷ್ಟ ಚಿತ್ರಣವು ಈ ಮಾಡ್ಯೂಲ್ನಂ ಪ್ರಧಾನ ಅಂಶಗಳಾಗಿವೆ. DOWNLOAD


thumbnail

thumbnail

ಶೈಕ್ಷಣಿಕ ದೃಷ್ಠಿಕೋನ Education Perspective

ಮಗು ಮತ್ತು ಬಾಲ್ಯ

ಈ ಮಾಡ್ಯೂಲ್ನವಲ್ಲಿ ಮಗು ಎಂದರೆ ಯಾರು? ಮಗುವಿನ ಬೆಳವಣಿಗೆಯ ಹಂತಗಳನ್ನು ಯಾಕೆ ಅರ್ಥೈಸಿಕೊಳ್ಳಬೇಕಿದೆ? ಇಂತಹ ಬೆಳವಣಿಗೆಯ ಹಿನ್ನೆಲೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಮಗುವಿನ ಕಲಿಕೆಯ ಏರಿಳಿತಗಳನ್ನು ಗ್ರಹಿಸಬಹುದೇ? ಇತ್ಯಾದಿ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಮಗು ತನ್ನ ಬಾಲ್ಯಾವಸ್ಥೆಯಲ್ಲಿ ಅನುಭವಿಸಿರುವ, ಆಚರಿಸಿರುವ ಹಲವು ಅಂಶಗಳು ಅದರ ಕಲಿಕೆಯ ಮೆಟ್ಟಿಲುಗಳಾಗಿವೆ ಎನ್ನುವುದನ್ನು ವ್ಯಾಖ್ಯಾನಿಸಲಾಗಿದೆ. ಈ ಮಾಡ್ಯೂಲ್ನಅ ಇನ್ನೊಂದು ಪ್ರಮುಖ ಆಯಾಮ ಮಗುವಿನ ಸಾಮರ್ಥ್ಯಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿರುವುದು. ಮಗುವಿನ ಆಂತರ್ಯದಲ್ಲಿ ಹಲವು ಸಾಮರ್ಥ್ಯಗಳಿವೆ. ಜೊತೆಗೆ ಮಗುವಿನ ಸಾಮಥ್ರ್ಯಗಳ ಪೋಷಣೆಗೆ ಬೇಕಾದ ಸಹಕಾರಿ ಅಂಶಗಳು ಯಾವುವು? ಮಗುವಿನ ಪೋಷಣೆಯಲ್ಲಿ ಶಿಕ್ಷಕ ಮತ್ತು ಶಾಲೆಯ ಪಾತ್ರವೇನು? ಎನ್ನುವಂತಹ ಪರಿಕಲ್ಪನೆಗಳನ್ನೂ ಇಲ್ಲಿ ನೀಡಲಾಗಿದೆ. DOWNLOAD


thumbnail

thumbnail

ಶೈಕ್ಷಣಿಕ ದೃಷ್ಠಿಕೋನ Education Perspective

ಕಲಿಕೆ ಮತ್ತು ಕಲಿಕಯನ್ನು ಪ್ರಭಾವಿಸುವ ಅಂಶಗಳು

ಕಲಿಕೆ" ಎಂಬ ವಿಚಾರದ ಕುರಿತು ಶಿಕ್ಷಕರು, ಪೋಷಕರು, ಸಮುದಾಯದವರು, ಮನೋವಿಜ್ಞಾನಿಗಳು, ಶಿಕ್ಷಣ ತಜ್ಞರು ತಮ್ಮದೇ ನೆಲೆಗಟ್ಟಿನ ವಿವಿಧ ರೀತಿಗಳಲ್ಲಿ ಅರ್ಥೈಸಿಕೊಂಡಿದ್ದಾರೆ. ಕಲಿಕೆ ಎಂಬುದು ಒಂದು ಸಂಕೀರ್ಣ ಪ್ರಕ್ರಿಯೆ. ಯಾವುದೇ ಮಗುವಿನಲ್ಲಿ ಪ್ರಕೃತಿದತ್ತವಾಗಿ ರೂಪುಗೊಳ್ಳುವ ಸಹಜ ಪ್ರಕ್ರಿಯೆ ಇದು ಹುಟ್ಟಿನಿಂದ ನಿರಂತರವಾಗಿ ನಡೆಯುತ್ತಲೇ ಸಾಗುತ್ತದೆ. ಇಲ್ಲಿ ಪ್ರಶ್ನೆ ಹುಟ್ಟುವುದು ಮಗುವು ಔಪಚಾರಿಕವಾಗಿ "ಕಲಿತಿದೆ" ಎಂದು ಖಾತ್ರಿ ಪಡಿಸಿಕೊಳ್ಳುವುದು ಹೇಗೆ? ಕಲಿಕೆ ಎಂದರೇನು? ಪ್ರಸ್ತುತ ದಿನಗಳಲ್ಲಿ ಓದಲು, ಹೇಳಿದ್ದನ್ನು ಬರೆಯಲು ಹಾಗೂ ಸರಳವಾದ ಲೆಕ್ಕ ಬಿಡಿಸಿದರಷ್ಟೆ "ಮಗುವು ಕಲಿತಿದೆ" ಎಂಬ ತೀರ್ಮಾನಕ್ಕೆ ನಾವು ಬರುತ್ತಿದ್ದೇವೆ. ಇನ್ನೂ ಕೆಲವು ಶಿಕ್ಷಕರು, "ಹೊಡೆದರಷ್ಟೆ ಕಲಿಯುತ್ತಾರೆ, ವಿದ್ಯಾವಂತರ ಮಕ್ಕಳಷ್ಟೇ ಕಲಿಯುತ್ತಾರೆ, ಉರುಹೊಡೆದರೆ ಮಾತ್ರ ಹೆಚ್ಚು ಅಂಕ ಗಳಿಸಲು ಸಾಧ್ಯ, ಮನೆಗೆಲಸದಲ್ಲಿ ಹೆಚ್ಚು ಪುನರಾವರ್ತನೆ ಅಭ್ಯಾಸಗಳನ್ನು ನೀಡಿದರೆ ಮಾತ್ರ ಮಗುವು ಮನೆಯಲ್ಲಿ ಕಲಿಯುತ್ತದೆ", ಎಂಬ ನಂಬಿಕೆಗಳನ್ನು ಹೊಂದಿರುವುದು ಕಂಡು ಬರುತ್ತಿದೆ. ಈ ನಂಬಿಕೆಗಳನ್ನು ಪರೀಕ್ಷಿಸುವ ಅವಶ್ಯಕತೆ ಇದೆ. ಮಗುವು ಕಲಿಯಬೇಕಾದರೆ ಬುದ್ಧಿವಂತಿಕೆ ಎಂಬುದಿದೆಯೇ ? ಬುದ್ಧಿವಂತಿಕೆಯಲ್ಲಿ ಮೆದುಳಿನ ಪಾತ್ರವೇನು? ಕಲಿಕೆಯನ್ನು ಪ್ರಭಾವಿಸುವ ಆಂತರಿಕ ಹಾಗೂ ಬಾಹ್ಯ ಅಂಶಗಳು ಯಾವುವು? ಮಗುವಿನ ಕಲಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು ? ಅವು ಎಷ್ಟು ಪ್ರಭಾವ ಬೀರುತ್ತವೆ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಸಂಚಿಯಲ್ಲಿ (ಮಾಡ್ಯೂಲ್) ಮಾಡಲಾಗಿದೆ. ಪ್ರತಿ ಮಗುವು ಅನನ್ಯ. ಒಂದೊಂದು ಮಗುವು ಒಂದೊಂದು ಶೈಲಿಯಲ್ಲಿ ಕಲಿಯುತ್ತದೆ. ಶಿಕ್ಷಕ ತನ್ನ ತರಗತಿಯಲ್ಲಿ ವಿವಿಧ ಶೈಲಿ, ವಿಧಾನಗಳಲ್ಲಿ ಕಲಿಯುವ ಎಲ್ಲಾ ಮಕ್ಕಳಿಗೂ ಕಲಿಕೆಯನ್ನು ಪರಣಾಮಕಾರಿಯಾಗಿ ಹೇಗೆ ರೂಪಿಸಬಲ್ಲರು? ಈ ಹಿಂದೆ ಕಲಿಕೆ ಎಂದರೆ ಏನನ್ನಾಗಿ ಅರ್ಥೈಸಿಕೊಳ್ಳಲಾಗುತಿತ್ತು? ಕಲಿಕೆ ಸಾಗಿಬಂದ ದಾರಿ ಯಾವುದು? ಎಂಬಿತ್ಯಾದಿ ಹಲವಾರು ಅಂಶಗಳ ಕುರಿತು ನೈಜ ಘಟನೆ/ಉದಾಹರಣೆಗಳೊಂದಿಗೆ ಚರ್ಚೆಗಳ ರೂಪದಲ್ಲಿ ಈ ಮಾಡ್ಯೂಲ್‍ನಲ್ಲಿ ಬೆಳಕು ಹರಿಸಲಾಗಿದೆ. ಶಿಕ್ಷಕರನ್ನು ಚಿಂತನಶೀಲರನ್ನಾಗಿಸುವ ಆಶಯವನ್ನು ಹೊಂದಲಾಗಿದೆ. DOWNLOAD


thumbnail

ಶೈಕ್ಷಣಿಕ ದೃಷ್ಠಿಕೋನ Education Perspective

ಶಿಕ್ಷಕ ಮತ್ತು ಕಲಿಕೆಯ ಅನುಕೂಲಿಸುವಿಕೆ

ಎಲ್ಲರಿಗೂ ಗುಣಾತ್ಮಕ ಶಿಕ್ಷಣ ಎನ್ನುವ ಇಲಾಖೆಯ ಆಶಯದೊಂದಿಗೆ ಬೋಧನೆಗಿಂತ ಕಲಿಕೆ ಅನುಕೂಲಿಸುವುದು ಹೆಚ್ಚು ಸಹಕಾರಿ ಎಂಬುದನ್ನು ಇತ್ತೀಚಿಗೆ ಗುರುತಿಸಿಕೊಂಡಿದೆ. ಇಲ್ಲಿ ಮಗುವೇ ಕಲಿಯುವ ಹಾಗೆ ಮಾಡುವುದು ಹೇಗೆ? ಯಾವುದು ಬೋಧನೆ? ಯಾವುದು ಬೋಧನೆ ಅಲ್ಲ? Training, Coaching, Mentoring, Preaching ಗಳಿಗಿರುವ ವ್ಯತ್ಯಾಸವೇನು? ಯಾವ ಸಂದರ್ಭದಲ್ಲಿ ಯಾವ ತಂತ್ರವನ್ನು ಬಳಸಬೇಕು? ನಿಜವಾದ ಶಿಕ್ಷಕ ಯಾರು? ಮಕ್ಕಳಿಗೆ ಶಿಕ್ಷಕ ಆಪ್ತರಾಗುವುದು ಹೇಗೆ? ಎನ್ನುವ ಅಂಶಗಳನ್ನು ಈ ಮಾಡ್ಯೂಲ್ ಚರ್ಚಿಸುತ್ತದೆ. ಕೌಶಲ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ಗುರುತಿಸಿದೆ. ಕೆಲಸವನ್ನು ವೃತ್ತಿಯನ್ನಾಗಿ ಮಾಡುವುದರಿಂದ ಆಗುವ ಅನುಕೂಲಗಳನ್ನು ಸಹ ಚರ್ಚಿಸಿದೆ. ಅಷ್ಟೇ ಅಲ್ಲದೆ, ಶಾಲೆಯ ಮತ್ತು ಶಿಕ್ಷಣದ ಇತಿಹಾಸ, ಸಮಾಜದ ಅವಶ್ಯಕತೆಗೆ ತಕ್ಕಂತೆ ಶಾಲೆಯ ಹಾಗೂ ಶಿಕ್ಷಣದಲ್ಲಿ ಆದ ಬದಲಾವಣೆಗಳು, ಪ್ರಸ್ತುತ ಸನ್ನಿವೇಶದಲ್ಲಿ ಶಾಲೆ ಸಾಮಾಜಿಕ ಸಂಸ್ಥೆಯಾಗಿರುವುದು ಹಾಗೂ ಇಂತಹ ಸಂಸ್ಥೆಯಲ್ಲಿ ಕಲಿಸುವವರ ಪಾತ್ರ ಇತ್ಯಾದಿ ಅಂಶಗಳ ಕುರಿತು ಚರ್ಚೆಮಾಡಲಾಗಿದೆ. ಎನ್.ಸಿ.ಎಫ್ 2005 ಮತ್ತು ಎನ್.ಸಿ.ಎಫ್.ಟಿ.ಇ. 2009 ರ ನೆಲೆಯಲ್ಲಿ ಶಿಕ್ಷಕ ತನ್ನನ್ನು ತಾನೇ ಸ್ವಾವಲೋಕನ ಮಾಡಿಕೊಳ್ಳುವ ಅವಕಾಶವನ್ನು ಈ ಮಾಡ್ಯೂಲ್ ಒದಗಿಸುತ್ತದೆ. DOWNLOAD


thumbnail