ನಮ್ಮ ಬಗ್ಗೆ

1. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವುದು

2. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳೆರಡೂ ಒಳಗೊಂಡಂತೆ ರಾಜ್ಯದಲ್ಲಿ ಶಿಕ್ಷಕ ಶಿಕ್ಷಣ ತರಬೇತಿಯ ನಿರ್ವಹಣೆ (ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಣ)

3. ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯಗಳು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಮತ್ತು ಇತರ ಶಿಕ್ಷಕ ತರಬೇತಿ ಸಂಸ್ಥೆಗಳ ನಿರ್ವಹಣೆ

4. ರಾಜ್ಯದಲ್ಲಿ ವಿಜ್ಞಾನ ಶಿಕ್ಷಣವನ್ನು ಪ್ರೋತ್ಸಾಹಿಸುವುದು.

5. ಶಾಲೆಗಳಿಗೆ ಬೋಧನೆ-ಕಲಿಕೆಯ ಸಾಮಗ್ರಿಗಳ ಸಂಗ್ರಹಣೆ ಹಾಗೂ ವಿತರಣೆ

6. ಪಠ್ಯ ವಿಷಯ, ಶಿಕ್ಷಣಶಾಸ್ತ್ರ, ಶಿಕ್ಷಣದಲ್ಲಿ ರಂಗ ಕಲೆಯಂತಹ ನವೀನ ಪದ್ಧತಿಗಳ ಅಳವಡಿಕೆ, ರಾಜ್ಯದಲ್ಲಿ ಕಡಿಮೆ ವೆಚ್ಚದ-ವೆಚ್ಚರಹಿತ ಬೋಧನೆ, ಕಲಿಕೆಯ ಸಾಮಗ್ರಿಗಳ ತಯಾರಿಕೆ ಮುಂತಾದ ಶಿಕ್ಷಕ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವುದು.

7. ಬಣ್ಣದ ಟಿ.ವಿ.ಗಳು, ದೃಕ್ ಶ್ರವಣ ಸುರುಳಿಗಳು, ಗಣಕ ಯಂತ್ರಗಳು, ಸಿ.ಡಿ. ರೋಮ್ ಗಳು, ಪ್ರಯೋಗ ಶಾಲೆ ಮತ್ತು ಗ್ರಂಥಾಲಯ ಸಾಮಗ್ರಿಗಳು, ನಕ್ಷೆಗಳು, ಭೂಪಟಗಳು ಹಾಗೂ ಮಾದರಿಗಳನ್ನು ದೊರಕಿಸಿ ಶಾಲೆಗಳಿಗೆ ವಿತರಿಸುವುದು.

8. ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು.

9. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ನೇರವಾಗಿ ಎಜ್ಯುಸ್ಯಾಟ್ ಯೋಜನೆಯ ಮೂಲಕ ಸಂಪರ್ಕಿಸುವುದು.

Top | Designed & Developed by eGovernance Unit,Department Of Public Instuction Bengaluru