Chapter-11

ಗುರು ಚೇತನ- ಆಯ್ಕೆ ಆಧಾರಿತ ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಸರ್ಕಾರವು ಸೇವಾನಿರತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಮರು ಸಂಯೋಜಿಸುವ ಪ್ರಯತ್ನವನ್ನು ಮಾಡಿದೆ. ಎ.ಪಿ.ಎಫ್ ನ ಸಹಕಾರದೊಂದಿಗೆ ಟಿ.ಟಿ.ಎಂ.ಎಸ್ ಅನ್ನು ಅಳವಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದೆ.

ಅ) ನೂತನ ಕಾರ್ಯಕ್ರಮದ ಮುಖ್ಯ ಅಂಶಗಳು

 1. ದಶಕಗಳ ವೃತ್ತಿಪರ ಅಭಿವೃದ್ಧಿ ಪ್ರಯತ್ನಗಳು ಹಾಗೂ ರಾ.ಪ.ಚೌ 2005 ಮತ್ತು ಎನ್ ಸಿ ಎಫ್ ಟಿ ಇ 2009 ರ ಶಿಕ್ಷಕರ ಕಾಣ್ಕೆಯನ್ನು ಆಧರಿಸಿ ರೂಪಿಸಲಾಗಿದೆ.
 2. ಸುದೀರ್ಘಾವಧಿಯಲ್ಲಿ 240-250 ಮಾಡ್ಯೂಲ್ ಗಳನ್ನು ಹೊಂದುವ ಯೋಜನೆಯಿದೆ.
 3. ಈ ಎಲ್ಲಾ ಮಾಡ್ಯೂಲ್ಗಳಲ್ಲಿ ಶೈಕ್ಷಣಿಕ ದೃಷ್ಟಿಕೋನ, ವಿಷಯಾಧಾರಿತ ಪರಿಕಲ್ಪನೆಗಳು ಮತ್ತು ಮೌಲ್ಯಾಂಕನದ ವಿಚಾರಗಳನ್ನು ಸಂಯೋಜಿಸಲಾಗಿದೆ.
 4. 2018-19ನೇ ಸಾಲಿನಲ್ಲಿ 28+1 29 ಮಾಡ್ಯೂಲ್ಗಳನ್ನು ಆಯ್ಕೆಗಾಗಿ ಒದಗಿಸಲಾಗಿದೆ.

ಆ) ಕಾರ್ಯಾಚರಣೆಯ ಮುಖ್ಯಾಂಶಗಳು

 1. 3512 ಜನ ಎಂ ಆರ್ ಪಿ ಗಳನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಗುರುತಿಸಿ ಅವರನ್ನು ತರಬೇತುಗೊಳಿಸಲಾಗಿದೆ.
 2. ಜಿಲ್ಲೆ ಮತ್ತು ಬ್ಲಾಕ್ ಹಂತಗಳಲ್ಲಿ ಕಾರ್ಯಾಗಾರಗಳ ನಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಕರ ಕಲಿಕಾ ಕೇಂದ್ರಗಳನ್ನು ಹೊಂದಲು ಯೋಜಿಸಿದೆ.- ಇದು ಸಹವರ್ತಿ-ಕಲಿಕೆ, ಸ್ವ-ಕಲಿಕೆ ಗಳನ್ನು ಹೆಚ್ಚಿಸುವಂತೆ ಗಣಕಯಂತ್ರ ಮತ್ತು ಅಂತರ್ಜಾಲದ ಸೌಲಭ್ಯದೊಂದಿಗೆ ಒದಗಿಸಲಾಗುವುದು.
 3. ಹೀಗೆ ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಸ್ವ-ಪ್ರೇರಣೆಯಿಂದ ಶಿಕ್ಷಕರು ಹೊಂದುವಂತೆ ವಿನ್ಯಾಸಗೊಳಿಸಿದೆ.

ಇ) ಇದುವರೆಗಿನ ಪ್ರಗತಿ

 1. ಶಿಕ್ಷಕರು ತಮ್ಮ ಡಿಜಿಟಲ್ ಆಯ್ಕೆ ಮಾಡಲು ಅನುಗುಣವಾಗಿ ಪ್ರತ್ಯೇಕ ವೆಬ್ಸೈಟ್ ಮತ್ತು ಪೋರ್ಟಲ್ ಆರಂಭಿಸಲಾಗಿದೆ.
 2. ಪ್ರತಿಯೊಬ್ಬ ಶಿಕ್ಷಕರು ನಾಲ್ಕು ಆದ್ಯತೆಗಳನ್ನು ನೀಡಿ ಅದರಲ್ಲಿ ಪ್ರಸಕ್ತ ವರ್ಷ ಎರಡು ಮಾಡ್ಯೂಲ್ಗಳ ಅನುಭವ ಪಡೆಯಲು ಅವಕಾಶವಿದೆ.
 3. ಒಟ್ಟು 1,66,000 ಶಿಕ್ಷಕರಲ್ಲಿ 1,35,000 ಜನ (ಶೇ 82.5 ) ತಮ್ಮ ಆಯ್ಕೆಯನ್ನು ದಾಖಲಿಸಿದ್ದಾರೆ.
 4. ಟಿ ಟಿ ಎಂ ಎಸ್ ತಂತ್ರಾಂಶದ ಮೂಲಕ ಬ್ಯಾಚ್ಮೇಕಿಂಗ್ ಮಾಡಿ ಶಿಕ್ಷಕರನ್ನು ಎಸ್ ಎಂ ಎಸ್ ಮೂಲಕ ಆಹ್ವಾನಿಸಲಾಗಿದೆ.
 5. ದಿನಾಂಕ 03-01-2018 ರಲ್ಲಿದ್ದಂತೆ ರಾಜ್ಯದ 46970 ಶಿಕ್ಷಕರು 5 ದಿನಗಳ ತರಬೇತಿ ಹೊಂದಿದ್ದಾರೆ.
 6. ಡಯಟ್ ಫ್ಯಾಕಲ್ಟಿ/ ಪ್ರೌಢಶಾಲಾ ಮುಖ್ಯ ಶಿಕ್ಷಕರು/ ವಿಷಯ ಪರಿವೀಕ್ಷಕರನ್ನು ಗುರುಚೇತನ ಕಾರ್ಯಾಗಾರಗಳ ಪರಿಣಿತ ವೀಕ್ಷಕರನ್ನಾಗಿ ಡಯಟ್ ನೇಮಿಸಿದೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳನ್ನು ರಾಜ್ಯ ಹಂತದಿಂದ ವೀಕ್ಷಕರಾಗಿ ನೇಮಿಸಲಾಗಿದೆ.
 7. ಕಮಲ ಮುಕುಂದ ಬರೆದ "ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳೀದೆ?" ಪುಸ್ತಕವನ್ನು ಕಾರ್ಯಾಗಾರಕ್ಕೆ ಹಾಜರಾದ ಎಲ್ಲಾ ಶಿಕ್ಷಕರಿಗೆ ವಿತರಿಸಲಾಗಿದೆ.
 8. ಈ ಎಲ್ಲಾ ಪ್ರಕ್ರಿಯೆಗಳನ್ನು ಸುಗಮವಾಗಿ ನಿರ್ವಹಿಸಲು ಡಯಟ್ ಹಂತದಲ್ಲಿರುವ ನೋಡಲ್ ಅಧಿಕಾರಿಗಳ ಜತೆ ಟಿ-ಕಾನ್ ನಡೆಸಿ ಕಾರ್ಯಾಗಾರದ ಗುಣಮಟ್ಟ ಹಾಗೂ ಸಾಮಗ್ರಿಗಳ ಬಳಕೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ.
 9. ಪ್ರತಿ ಕಾರ್ಯಾಗಾರದಲ್ಲಿ ಪೂರ್ವಪರೀಕ್ಷೆ, ದೈನಂದಿನ ಮೌಲ್ಯಾಂಕನ, ಸಾಫಲ್ಯ ಪರೀಕ್ಷೆಯನ್ನು ನಡೆಸಿ ಅದನ್ನು ಆನ್ ಲೈನ್ ನಲ್ಲಿ ದಾಖಲಿಸಲಾಗುತ್ತಿದೆ.
 10. ಎಲ್ಲಾ ಕಾರ್ಯಾಗಾರಗಳು ಮುಕ್ತಾಯವಾದ ನಂತರ ಡಯಟ್ಗಳ ಮುಖಾಂತರ ಸರಳ (ಕೇಸ್ ಸ್ಟಡಿ) ಅಧ್ಯಯನಗಳನ್ನು ಕೈಗೊಳ್ಳಲಾಗುವುದು.
 11. ರಾಜ್ಯ ಹಂತದಲ್ಲಿ ಹೆಲ್ಪ್ ಡೆಸ್ಕ್ ರಚಿಸಿ ತಾಂತ್ರಿಕ ಸಹಾಯ ನೀಡಲಾಗುತ್ತಿದೆ.

ಈ) 2018-19ನೇ ಸಾಲಿನ ಯೋಜನೆ

 1. 2018-19ನೇ ಸಾಲಿನ ಗುರುಚೇತನ ಕಾರ್ಯ ಕ್ರಮದ ಅನುಷ್ಟಾನ ಕ್ಕಾಗಿ ಬಜೆಟ್ , ಟೈಮ್ಲೈನ್ ಮತ್ತು ಯೋಜನೆಯನ್ನು ರೂ 71.15 ಕೋಟಿ ಅಂದಾಜಿನೊಂದಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ.
 2. ಪೇಸ್-1 -13 , ಪೇಸ್-2 -14 ಮತ್ತು ಪೇಸ್-3 -05 ರಂತೆ ಒಟ್ಟು 32 ಮಾಡ್ಯೂಲ್ಗಳನ್ನು ಪರಿಚಯಿಸಲಾಗುವುದು.
 3. ಈ ಸಾಲಿನಲ್ಲಿ 1,66,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪರಿಗಣಿಸಲಾಗುವುದು.

ನವೀಕರಿಸಿದ ದಿನಾಂಕ : 18/6/2018

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com