ಶಿಕ್ಷಕರ ಶಿಕ್ಷಣ ಘಟಕ
ಶಿಕ್ಷಕರ ಶಿಕ್ಷಣ ಘಟಕ :
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಕೇಂದ್ರ ಪ್ರಾಯೋಜಿತ ಯೋಜನೆಯಡಿ ಶಿಕ್ಷಕರ ಶಿಕ್ಷಣವನ್ನು ಪುನರ್ರಚನೆ ಮತ್ತು ಮರು ವಿನ್ಯಾಸಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜನವರಿ 2013 ರಲ್ಲಿ ಶಿಕ್ಷಕರ ಶಿಕ್ಷಣ ಘಟಕವನ್ನು ಸ್ಥಾಪಿಸಲಾಗಿದೆ. ಡಿ.ಎಸ್.ಇ.ಆರ್.ಟಿ.ಯ ಸಹ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯವನ್ನು ಆರಂಭಿಸಿದ ಈ ಘಟಕಕ್ಕೆ ಇಬ್ಬರು ಹಿರಿಯ ಸಹಾಯಕ ನಿರ್ದೇಶಕರು ಮತ್ತು ಒಬ್ಬರು ಸಹಾಯಕ ನಿರ್ದೇಶಕರನ್ನು ನೇಮಿಸಲಾಗಿದೆ. 12 ನೇ ಪಂಚ ವಾರ್ಷಿಕ ಯೋಜನೆಯ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಡಿ.ಎಸ್..ಇ.ಆರ್.ಟಿ., ಐ.ಎ.ಎಸ್.ಇ., ಮತ್ತು ಡಯಟ್ ಗಳ ಬಲವರ್ಧನೆ ಮತ್ತು ಉನ್ನತೀಕರಣಕ್ಕಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಘಟಕವು ಹೊಂದಿದೆ.
-
2013-14 ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ.ಇ.ಟಿ.)ಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ.
- ಸರ್ಕಾರದ ಮಾನ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಲಹಾ ಸಮಿತಿ (ಪಿ.ಎ.ಸಿ.)ಯನ್ನು ರಚಿಸಲಾಗಿದೆ.
- ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ವಯ 5 ವರ್ಷಗಳ (2012-17) ಅವಧಿಗೆ ಸಮಗ್ರ ಯೋಜನೆಯನ್ನು ಕೇಂದ್ರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯಲಾಗಿದೆ.
- ಯೋಜನೆಯನ್ವಯ ಕಾರ್ಯಕ್ರಮ ಮತ್ತು ಚಟುವಟಿಕೆಗಳಿಗೆ ಪ್ರತಿ ವರ್ಷ ರೂ. 30 ಲಕ್ಷ ಬಿಡುಗಡೆಯಾಗಲಿದೆ.
ನವೀಕರಿಸಿದ ದಿನಾಂಕ : 2/1/2018