ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ.) :

ಪ್ರೌಢ ಶಾಲಾ ಶಿಕ್ಷಣ ಸಾರ್ವತ್ರೀಕರಣ ಹಿನ್ನೆಲೆಯಲ್ಲಿ 14 ರಿಂದ 18 ವರ್ಷ ವಯೋಮಿತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರೌಢ ಶಾಲಾ ಶಿಕ್ಷಣ ಲಭ್ಯವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾಣ್ಕೆಯನ್ನು ಹೊಂದಿರುವ ಕಾರ್ಯಕ್ರಮ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ. ಈ ಯೋಜನೆಯ ತರಬೇತಿ ಕೆಲಸವನ್ನು ಮಾತ್ರ ಡಿ.ಎಸ್.ಇ.ಆರ್.ಟಿ.ಮೂಲಕ ನಿರ್ವಹಿಸಲಾಗುತ್ತಿದೆ. ರಾಜ್ಯ ಮಟ್ಟದ ಪ್ರಧಾನ ಸಂಪನ್ಮೂಲ ವ್ಯಕ್ತಿಗಳ ತರಬೇತಿಯನ್ನು ಆಗಸ್ಟ್ 27, 2012 ರಿಂದ 21 ರ ನವಂಬರ್ 2012 ರವರೆಗೆ ಡಿ.ಎಸ್.ಇ.ಆರ್.ಟಿಯಲ್ಲಿ ನಡೆಸಲಾಗಿದೆ. ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ 192 ಪಾಥಮಿಕ ಶಾಲಾ ಶಿಕ್ಷಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ಯೋಜನೆಯಲ್ಲಿ ಎಸ್.ಟಿ.ಎಫ್. ತರಬೇತಿ, ಕಂಟೆಂಟ್ ಎನ್ರಿಚ್ಮೆಂಟ್ ಮತ್ತು ದೈಹಿಕ ಶಿಕ್ಷಕರ ತರಬೇತಿಗಳು ಇದ್ದು ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗಿದೆ. 29,914 ಎಸ್.ಡಿ.ಎಂ.ಸಿ ಸದಸ್ಯರು ಆರ್.ಎಂ.ಎಸ್.ಎ. ತರಬೇತಿಗಳ ಫಲಾನುಭವಿಗಳಾಗಿದ್ದಾರೆ. ಈ ಸಾಲಿನಲ್ಲಿ ಈ ಯೋಜನೆಯಡಿ ಸುಮಾರು ರೂ.3.86/- ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ.

ನವೀಕರಿಸಿದ ದಿನಾಂಕ : 2/1/2018

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com