ಶಿಕ್ಷಣ ತಂತ್ರಜ್ಞಾನ ಘಟಕ

ಶಿಕ್ಷಣ ತಂತ್ರಜ್ಞಾನ ಘಟಕ :


ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣಕ್ಕೆ ತಾಂತ್ರಿಕತೆಯ ಒತ್ತು ಕೊಟ್ಟು ರೇಡಿಯೊ, ಶಿಕ್ಷಣ ಸಂವಾದ, ಶ್ರವಣ ಮತ್ತು ದೃಶ್ಯ ಮಾಧ್ಯಮ - ಟಿ.ವಿ., ಗಣಕ ಯಂತ್ರ, ಉಪಗ್ರಹ ಆಧಾರಿತ ದೂರ ಸಂಪರ್ಕ ತರಬೇತಿ ಕಾರ್ಯಕ್ರಮ ಇತ್ಯಾದಿಗಳ ಮುಖಾಂತರ ಶಿಕ್ಷಣ ನೀಡಿದಲ್ಲಿ ಶಿಕ್ಷಣ ಇನ್ನೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸುವುದೇ ಈ ತಂತ್ರಜ್ಞಾನ ಶಿಕ್ಷಣ ಘಟಕದ ಗುರಿ. ಈ ಘಟಕವು ಕೆಳಗೆ ನೀಡಿರುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಿದೆ.

ಗಣಕ ಮತ್ತು ಗಣಕ ಆಧಾರಿತ ಶಿಕ್ಷಣ: ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಕ ಹಾಗೂ ಗಣಕ ಆಧಾರಿತ ಶಿಕ್ಷಣ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಐ.ಸಿ.ಟಿ. ಯೋಜನೆ ಫೇಸ್- I : ಈ ಯೋಜನೆಯಡಿ 480 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಅವಧಿ ಒಟ್ಟು 5 ವರ್ಷಗಳದ್ದಾಗಿರುತ್ತದೆ. 31.03.2012 ಕ್ಕೆ ಐದು ವರ್ಷಗಳ ಮುಕ್ತಾಯವಾಗಿದ್ದು, 2013-14 ನೇ ಸಾಲಿನಲ್ಲಿ ಇದನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA) ಕಾರ್ಯಕ್ರಮದಡಿ ಸೇರ್ಪಡೆ ಮಾಡಿ ಗಣಕ ಶಿಕ್ಷಣ ನೀಡುವುದನ್ನು ಮುಂದುವರಿಸುವ ಬಗ್ಗೆ ಕ್ರಮ ಕೈ ಕೈಗೊಳ್ಳಲಾಗುವುದು.

ಐ.ಸಿ.ಟಿ. ಯೋಜನೆ ಫೇಸ್- II: ಈ ಯೋಜನೆಯಡಿಯಲ್ಲಿ 1571 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಗಣಕ ಹಾಗೂ ಗಣಕ ಆಧಾರಿತ ಶಿಕ್ಷಣವನ್ನು 2011-12 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 4,03,550 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ನಿರ್ವಹಣಾ ಸಂಸ್ಥೆಯಾದ ಎಡುಕಾಂಪ್ ಸಂಸ್ಥೆಯು ಶಾಲೆಗಳಿಗೆ ಗಣಕ ಯಂತ್ರ ಮತ್ತು ಇತರೆ ಪರಿಕರಗಳನ್ನು ಸರಬರಾಜು ಮಾಡಿ ಅಳವಡಿಸಿದೆ. ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ದಿನಾಂಕ 30.03.2013 ಕ್ಕೆ ಕರಾರಿನನ್ವಯ ಸದರಿ ಯೋಜನೆಯ 5 ವರ್ಷಗಳ ಅವಧಿ ಮುಕ್ತಾಯವಾಗುತ್ತಿದ್ದು, ಆರ್.ಎಂ.ಎಸ್.ಎ. ಅಡಿಯಲ್ಲಿ ಅಕ್ಟೋಬರ್ ನಂತರ ಸದರಿ ಶಿಕ್ಷಣವನ್ನು ಮುಂದುವರಿಸಲಾಗುವುದು.

ಐ.ಸಿ.ಟಿ. ಯೋಜನೆ ಫೇಸ್- III: ಈ ಯೋಜನೆಯಡಿಯಲ್ಲಿ 1763 ಸರ್ಕಾರಿ ಪ್ರೌಢ ಶಾಲೆ ಹಾಗೂ 2633 ಸರ್ಕಾರಿ ಅನುದಾನಿತ ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 2012-13 ನೇ ಸಾಲಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಮುಖಾಂತರ ಈ ಸಂಬಂಧ ಕರಾರು ಮಾಡಿಕೊಂಡಿದ್ದು ಕಾರ್ಯಾದೇಶ ನೀಡಲಾಗಿದೆ. 1763 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊಠಡಿ ಸಿದ್ಧತೆ ಪೂರ್ಣಗೊಂಡಿದ್ದು, 2633 ಅನುದಾನಿತ ಪ್ರೌಢ ಶಾಲೆಗಳಲ್ಲಿ ಈ ಕಂಪ್ಯೂಟರ್ ಸಿದ್ಧತೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಪೀಠೋಪಕರಣಗಳ ಸರಬರಾಜು ಪ್ರಕ್ರಿಯೆ ಹಾಗೂ ಕಂಪ್ಯೂಟರ್ ಹಾರ್ಡ್ವೇರ್ ಸರಬರಾಜು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಕಂಪ್ಯೂಟರ್ ಸರಬರಾಜು ಪ್ರಕ್ರಿಯೆಯನ್ನು 2012-13 ನೇ ಸಾಲಿನಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಆಯ್ದ ಶಾಲೆಗಳ ಶಿಕ್ಷಕರಿಗೆ ಪ್ರತಿ ಶನಿವಾರ ಶಾಲಾವಧಿ ಮುಗಿದ ನಂತರ ಕಂಪ್ಯೂಟರ್ ತರಬೇತಿಯನ್ನು (ಗರಿಷ್ಟ 30 ಶನಿವಾರಗಳಂದು) ನೀಡಲಾಗಿದೆ.

ಐ.ಸಿ.ಟಿ. ಫೇಸ್-I, ಫೇಸ್-II ಮತ್ತು ಫೇಸ್-III ಯೋಜನೆಗಳಿಗೆ ಒಟ್ಟು ರೂ. 15.79 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಒಟ್ಟು ರೂ.13.56 ಕೋಟಿ ಖರ್ಚಾಗಿರುತ್ತದೆ.

ಎಜುಸ್ಯಾಟ್ ಕಾರ್ಯಕ್ರಮ : ಎಜುಸ್ಯಾಟ್ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಡಿ.ಎಸ್.ಇ.ಆರ್.ಟಿ. ಯಲ್ಲಿ ಸ್ಟುಡಿಯೋ ಮತ್ತು ಹಬ್ ಗಳನ್ನು ಸ್ಥಾಪಿಸಲಾಗಿದ್ದು, ಚಾಮರಾಜನಗರ, ಗುಲ್ಬರ್ಗ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿನ 2603 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಸ್ರೊ ನೆರವಿನಿಂದ ಸ್ವೀಕೃತಿ ಕೇಂದ್ರಗಳನ್ನು ತೆರಯಲಾಗಿದೆ. ಒಟ್ಟು 458 ಚಿತ್ರಗಳನ್ನು ಪ್ರಸಾರಕ್ಕಾಗಿ ತಯಾರಿಸಲಾಗಿದ್ದು, ರಾಜ್ಯದ 202 ಬಿ.ಆರ್.ಸಿ. ಕೇಂದ್ರಗಳಲ್ಲಿ ಮತ್ತು ಎಲ್ಲಾ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಅಳವಡಿಸಿದ್ದು ಎಜುಸ್ಯಾಟ್ ಪಾಠ ಮತ್ತು ಉಪಗ್ರಹ ಆಧಾರಿತ ಕಾರ್ಯಕ್ರಮಗಳ ಸೌಲಭ್ಯ ಪಡೆಯಲಾಗುತ್ತಿದೆ.

ಈ ಕಾರ್ಯಕ್ರಮದ ಮೂಲಕ ಐದು ಜಿಲ್ಲೆಗಳಲ್ಲಿನ 2603 ಶಾಲೆಗಳಲ್ಲಿ 3.90 ಲಕ್ಷ ವಿದ್ಯಾರ್ಥಿಗಳಿಗೆ ನೋಡಿ ಕಲಿ, ಕೇಳಿ ಕಲಿ ರೀತಿಯ ಕಲಿಕೆಯುಂಟುಮಾಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ ಪರಿಷ್ಕೃತಗೊಂಡ 5 ರಿಂದ 8 ನೇ ತರಗತಿಯ ಪಠ್ಯ ಪುಸ್ತಕಗಳ ಕಲಿಕಾಂಶಗಳಿಗೆ ಹೊಸದಾಗಿ 60 ಪಾಠಗಳ ಚಿತ್ರ ರಚನೆಯನ್ನು ಹಿರಿಯ ಸಾಹಿತಿಗಳು ಮತ್ತು ಕವಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿನ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ. ಅರ್ಹ ಚಿತ್ರ ನಿರ್ಮಾಪಕರಿಂದ ಚಿತ್ರ ರಚನೆಯ ಕಾರ್ಯ ಪ್ರಗತಿಯಲ್ಲಿದೆ.

ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ : ಶೈಕ್ಷಣಿಕ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಡಿ.ಎಸ್.ಇ.ಆರ್.ಟಿ.ಯ ಸ್ಟುಡಿಯೋ ಮೂಲಕ ಹಮ್ಮಿಕೊಳ್ಳಲಾಗಿದೆ. ಶಾಲಾ ಶಿಕ್ಷಕರುಗಳಿಗೆ, ಸಿ.ಆರ್.ಸಿ., ಬಿ.ಆರ್.ಸಿ. ಗಳಿಗೆ ಹಾಗೂ ರಾಜ್ಯದ ವಿವಿಧ ಹಂತಗಳ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಸಭೆ, ತರಬೇತಿ, ಸಂವಾದ ಇತ್ಯಾದಿಗಳನ್ನು ನೇರವಾಗಿ ಟೆಲಿಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ರಾಜ್ಯದ 202 ಬಿ.ಆರ್.ಸಿ.ಗಳಲ್ಲಿ ಮತ್ತು ಎಲ್ಲಾ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳೊಂದಿಗೆ ದ್ವಿಮುಖ ಅಂತರ್ಕ್ರಿಯೆಗೆ ಅನುಕೂಲವಾಗುವಂತೆ ಎಸ್.ಐ.ಟಿ. ಸ್ಟುಡಿಯೋವನ್ನು ಡಿ.ಎಸ್.ಇ.ಆರ್.ಟಿ. ಯಲ್ಲಿ ಸಜ್ಜುಗೊಳಿಸಿ ಡಯಟ್ ಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಎಸ್.ಎಸ್.ಎ. ಅನುದಾನದಲ್ಲಿ ಸಿದ್ಧಪಡಿಸಿದೆ. 2012-13 ನೇ ಸಾಲಿನ ವರ್ಷದ ಅಂತ್ಯಕ್ಕೆ 461 ಗಂಟೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಸರ್ವ ಶಿಕ್ಷಣ ಅಭಿಯಾನ, ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತಿತರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಸ್ತರದ ಶೈಕ್ಷಣಿಕ ಭಾಗೀದರರಿಗೆ ಸಂವಹನಗೊಳಿಸಲಾಗುತ್ತಿದೆ.

ರೇಡಿಯೋ ಕಾರ್ಯಕ್ರಮ : 2012-13 ನೇ ಸಾಲಿನಲ್ಲಿ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪಠ್ಯಾಧಾರಿತ ರೇಡಿಯೋ ಪಾಠಗಳನ್ನು ತರಗತಿ 1 ರಿಂದ 8 ರವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಈ ಸಾಲಿನಲ್ಲಿ ಒಟ್ಟು 423 ರೇಡಿಯೋ ಪಾಠಗಳನ್ನು ಹಾಗೂ 15 ನೇರ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ವಿಚಾರಗಳನ್ನು ಪ್ರಸಾರ ಮಾಡುವ ಉದ್ದೇಶ ಹೊಂದಿದೆ. ಅಲ್ಲದೆ 3 ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯ 20 ಹೊಸ ಪಠ್ಯಗಳನ್ನು ಇ.ಡಿ.ಸಿ. ಯು ಸಿದ್ಧಪಡಿಸಿದ್ದು, ಪ್ರಸಾರವನ್ನು ಜುಲೈ 4 ರಿಂದ ಪ್ರಾರಂಭಿಸಲಾಗಿದೆ. ಇದೇ ಕಾರ್ಯಕ್ರಮದಡಿಯಲ್ಲಿ ರೇಡಿಯೋ ಪಾಠಗಳನ್ನು ಆಕಾಶವಾಣಿ ಕೇಂದ್ರದ ಮೂಲಕ ರಾಜ್ಯದ ಎಲ್ಲಾ ಶಾಲೆಗಳಲ್ಲೂ 3 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತಿ ದಿನ 3 ಅವಧಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ 5 ರಿಂದ 8 ನೇ ತರಗತಿಯ ಹೊಸ ಪಠ್ಯ ಪುಸ್ತಕಗಳಿಗೆ ಹೊಸದಾಗಿ 80 ರೇಡಿಯೋ ಪಾಠಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಧ್ವನಿ ಮುದ್ರಣ ಕಾರ್ಯವನ್ನು ಆಕಾಶವಾಣಿ ಕೇಂದ್ರ ಮತ್ತು ಪ್ರಾದೇಶಿಕ ಆಂಗ್ಲ ಭಾಷಾ ಸಂಸ್ಥೆ ಬೆಂಗಳೂರು ಎಂಬ ಸಂಸ್ಥೆಗಳಿಗೆ ವಹಿಸಿದ್ದು ಈ ಕಾರ್ಯ ಪ್ರಗತಿಯಲ್ಲಿದೆ.


TALP IT@Schools ೨೦೧೮-೧೯ ಆಗಸ್ಟ್ ೩೧ರ ವರೆಗಿನ ತರಬೇತಿ ವಿವರಗಳು

ಕ್ರಮ
ಸಂಖ್ಯೆ
ಡಯೆಟ್
ಗುರಿ
ಸಾಧನೆ
ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು
1 ಬೆಂಗಳೂರು ಉತ್ತರ 0 0 0 0 0 0
2 ಬೆಂಗಳೂರು ದಕ್ಷಿಣ 0 0 0 0 0 0
3 ಬೆಂಗಳೂರು ಗ್ರಾಮಾಂತರ 28 0 28 27 0 27
4 ಬಾಗಲಕೋಟೆ 88 0 88 43 0 43
5 ಬಳ್ಳಾರಿ 44 0 44 39 0 39
6 ಬೆಳಗಾವಿ 96 0 96 73 0 73
7 ಬೀದರ್ 116 0 116 23 0 23
8 ಚಾಮರಾಜನಗರ 52 0 52 51 0 51
9 ಚಿಕ್ಕಬಳ್ಳಾಪುರ 44 0 44 21 0 21
10 ಚಿಕ್ಕಮಗಳೂರು 0 0 0 0 0 0
11 ಚಿಕ್ಕೋಡಿ 0 0 0 0 0 0
12 ಚಿತ್ರದುರ್ಗ 80 0 80 37 0 37
13 ದಕ್ಷಿಣ ಕನ್ನಡ 0 0 0 0 0 0
14 ದಾವಣಗೆರೆ 156 0 156 76 0 76
15 ಧಾರವಾಡ 0 0 0 0 0 0
16 ಗದಗ 0 0 0 0 0 0
17 ಹಾಸನ 0 0 0 0 0 0
18 ಹಾವೇರಿ 64 0 64 42 0 42
19 ಕಲಬುರಗಿ 152 0 152 97 0 97
20 ಕೊಡಗು 0 0 0 0 0 0
21 ಕೋಲಾರ 68 0 68 56 0 56
22 ಕೊಪ್ಪಳ 100 0 100 63 0 63
23 ಮಧುಗಿರಿ 40 0 40 24 0 24
24 ಮಂಡ್ಯ 0 0 0 0 0 0
25 ಮೈಸೂರು 124 0 124 91 0 91
26 ರಾಯಚೂರು 64 0 64 57 0 57
27 ರಾಮನಗರ 72 0 72 68 0 68
28 ಶಿವಮೊಗ್ಗ 112 0 112 102 0 102
29 ಶಿರಸಿ 52 0 52 0 0 0
30 ತುಮಕೂರು 28 0 28 28 0 28
31 ಉಡುಪಿ 0 0 0 0 0 0
32 ಉತ್ತರ ಕನ್ನಡ 20 0 20 21 0 21
33 ವಿಜಯಪುರ 32 0 32 30 0 30
34 ಯಾದಗಿರಿ 68 0 68 0 0 0
ಒಟ್ಟು 1700 0 1700 1069 0 1069
ಗಮನಿಸಿ: 444 ಟೆಲಿ-ಎಜುಕೇಶನ್ ಶಾಲೆಗಳಲ್ಲಿ, ಕೆಲವನ್ನು ಬಿಡಲಾಗಿದೆ ಏಕೆಂದರೆ ಸಾಮಾಜಿಕ ಕಲ್ಯಾಣ ಇಲಾಖೆ ಅಥವಾ ಖಾಸಗಿ ಅನುದಾನಿತ ಶಾಲೆಗಳು ಅಥವಾ 2016-17 ಅಥವಾ 2017-18

TALP IT@Schoolsರ ತರಬೇತಿ ವಿವರಗಳು

ಕ್ರಮ ಸಂಖ್ಯೆ
ಡಯೆಟ್
ಗುರಿ
ಸಾಧನೆ
ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು
1 ಬೆಂಗಳೂರು ಉತ್ತರ 94 9 103 91 9 100
2 ಬೆಂಗಳೂರು ದಕ್ಷಿಣ 148 25 173 125 22 147
3 ಬೆಂಗಳೂರು ಗ್ರಾಮಾಂತರ 72 5 77 68 7 75
4 ಬಾಗಲಕೋಟೆ 192 31 223 160 20 180
5 ಬಳ್ಳಾರಿ 156 28 184 139 23 162
6 ಬೆಳಗಾವಿ 132 21 153 118 20 138
7 ಬೀದರ್ 138 25 163 115 20 135
8 ಚಾಮರಾಜನಗರ 162 36 198 159 33 192
9 ಚಿಕ್ಕಬಳ್ಳಾಪುರ 238 42 280 226 39 265
10 ಚಿಕ್ಕಮಗಳೂರು 152 9 161 120 10 130
11 ಚಿಕ್ಕೋಡಿ 182 28 210 178 28 206
12 ಚಿತ್ರದುರ್ಗ 104 16 120 93 15 108
13 ದಕ್ಷಿಣ ಕನ್ನಡ 178 31 209 178 26 204
14 ದಾವಣಗೆರೆ 150 25 175 135 22 157
15 ಧಾರವಾಡ 192 24 216 174 24 198
16 ಗದಗ 154 25 179 131 21 152
17 ಹಾಸನ 272 41 313 229 36 265
18 ಹಾವೇರಿ 160 25 185 148 22 170
19 ಕಲಬುರಗಿ 202 44 246 165 35 200
20 ಕೊಡಗು 106 13 119 90 11 101
21 ಕೋಲಾರ 116 21 137 101 20 121
22 ಕೊಪ್ಪಳ 56 8 64 48 5 53
23 ಮಧುಗಿರಿ 100 12 112 79 11 90
24 ಮಂಡ್ಯ 168 18 186 149 18 167
25 ಮೈಸೂರು 206 30 236 182 28 210
26 ರಾಯಚೂರು 158 25 183 121 13 134
27 ರಾಮನಗರ 138 23 161 125 17 142
28 ಶಿವಮೊಗ್ಗ 198 22 220 194 19 213
29 ಶಿರಸಿ 36 4 40 32 3 35
30 ತುಮಕೂರು 158 18 176 134 18 152
31 ಉಡುಪಿ 266 42 308 268 27 295
32 ಉತ್ತರ ಕನ್ನಡ 44 8 52 39 8 47
33 ವಿಜಯಪುರ 128 10 138 117 9 126
34 ಯಾದಗಿರಿ 44 6 50 40 6 46
ಒಟ್ಟು 5000 750 5750 4471 645 5116

TALP IT@Schools 2016-17ರ ತರಬೇತಿ ವಿವರಗಳು

ಕ್ರಮ ಸಂಖ್ಯೆ
ಡಯೆಟ್
ಗುರಿ
ಸಾಧನೆ
ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು ಶಿಕ್ಷಕರುಮುಖ್ಯ ಶಿಕ್ಷಕರುಒಟ್ಟು
1 ಬೆಂಗಳೂರು ಉತ್ತರ 58 29 87 58 29 87
2 ಬೆಂಗಳೂರು ದಕ್ಷಿಣ 48 24 72 48 23 71
3 ಬೆಂಗಳೂರು ಗ್ರಾಮಾಂತರ 52 26 78 49 22 71
4 ಬಾಗಲಕೋಟೆ 68 34 102 63 31 94
5 ಬಳ್ಳಾರಿ 44 22 66 41 21 62
6 ಬೆಳಗಾವಿ 48 24 72 44 25 69
7 ಬೀದರ್ 38 19 57 38 18 56
8 ಚಾಮರಾಜನಗರ 18 9 27 18 9 27
9 ಚಿಕ್ಕಬಳ್ಳಾಪುರ 70 35 105 69 33 102
10 ಚಿಕ್ಕಮಗಳೂರು 116 58 174 116 58 174
11 ಚಿಕ್ಕೋಡಿ 70 35 105 74 34 108
12 ಚಿತ್ರದುರ್ಗ 40 20 60 42 21 63
13 ದಕ್ಷಿಣ ಕನ್ನಡ 54 27 81 54 27 81
14 ದಾವಣಗೆರೆ 50 25 75 48 25 73
15 ಧಾರವಾಡ 96 48 144 95 47 142
16 ಗದಗ 54 27 81 54 27 81
17 ಹಾಸನ 108 54 162 100 47 147
18 ಹಾವೇರಿ 60 30 90 60 25 85
19 ಕಲಬುರಗಿ 26 13 39 24 13 37
20 ಕೊಡಗು 54 27 81 54 23 77
21 ಕೋಲಾರ 32 16 48 32 16 48
22 ಕೊಪ್ಪಳ 24 12 36 24 12 36
23 ಮಧುಗಿರಿ 52 26 78 48 24 72
24 ಮಂಡ್ಯ 96 48 144 96 44 140
25 ಮೈಸೂರು 86 43 129 88 43 131
26 ರಾಯಚೂರು 58 29 87 57 29 86
27 ರಾಮನಗರ 46 23 69 41 21 62
28 ಶಿವಮೊಗ್ಗ 110 55 165 101 52 153
29 ಶಿರಸಿ 20 10 30 20 8 28
30 ತುಮಕೂರು 86 43 129 82 43 125
31 ಉಡುಪಿ 98 49 147 98 49 147
32 ಉತ್ತರ ಕನ್ನಡ 12 6 18 12 6 18
33 ವಿಜಯಪುರ 88 44 132 85 42 127
34 ಯಾದಗಿರಿ 20 10 30 20 10 30
ಒಟ್ಟು 2000 1000 3000 1953 957 2910

ಗುರುಚೇತನ ಶಿಕ್ಷಕರ ತರಬೇತಿ - ಜಿಲ್ಲಾವಾರು ಪ್ರಗತಿ: ೨೦೧೭-೧೮

ಕ್ರಮ ಸಂಖ್ಯೆ ಡಯೆಟ್ ಗುರಿ ಸಾಧನೆ
1 ಬಾಗಲಕೋಟೆ 3840 2682
2 ಬೆಳಗಾವಿ 4240 3266
3 ಚಿಕ್ಕೋಡಿ 4480 2532
4 ಧಾರವಾಡ 2800 2238
5 ಗದಗ 2080 1664
6 ಹಾವೇರಿ 3440 1639
7 ಶಿರಸಿ 1840 1542
8 ಉತ್ತರ ಕನ್ನಡ 1920 1458
9 ವಿಜಯಪುರ 5120 2778
10 ಬೆಂಗಳೂರು ಉತ್ತರ 1520 919
11 ಬೆಂಗಳೂರು ಗ್ರಾಮಾಂತರ 1920 1786
12 ಬೆಂಗಳೂರು ದಕ್ಷಿಣ 2240 1445
13 ಚಿಕ್ಕಬಳ್ಳಾಪುರ 2400 1737
14 ಚಿತ್ರದುರ್ಗ 3680 2714
15 ದಾವಣಗೆರೆ 3360 2751
16 ಕೋಲಾರ 3040 2671
17 ಮಧುಗಿರಿ 2160 1880
18 ರಾಮನಗರ 2000 1920
19 ಶಿವಮೊಗ್ಗ 3600 2356
20 ತುಮಕೂರು 3440 2391
21 ಬಳ್ಳಾರಿ 4000 3135
22 ಬೀದರ್ 3280 2000
23 ಕಲಬುರಗಿ 4720 2660
24 ಕೊಪ್ಪಳ 2960 2099
25 ರಾಯಚೂರು 4000 2486
26 ಯಾದಗಿರಿ 2160 1207
27 ಚಾಮರಾಜನಗರ 1600 1205
28 ಚಿಕ್ಕಮಗಳೂರು 2800 1920
29 ದಕ್ಷಿಣ ಕನ್ನಡ 2320 2167
30 ಹಾಸನ 3840 3018
31 ಕೊಡಗು 880 882
32 ಮಂಡ್ಯ 2720 1630
33 ಮೈಸೂರು 4160 2792
34 ಉಡುಪಿ 1440 1264
ಒಟ್ಟು 100000 70834

DIKSHA ಪೋರ್ಟಲ್ ನಲ್ಲಿ ತರಗತಿ ವಾರು, ವಿಷಯವಾರು ಇ-ಸಂಪನ್ಮೂಲಗಳು 8ನೇ ಅಕ್ಟೋಬರ್ 2018 ರಲ್ಲಿ ಇದ್ದಂತೆ

ತರಗತಿ ಕನ್ನಡಆಂಗ್ಲಹಿಂದಿ ಗಣಿತವಿಜ್ಞಾನಸಮಾಜ ವಿಜ್ಞಾನEvs & ಇತರೆ ಒಟ್ಟು
ತರಗತಿ 100000246
ತರಗತಿ 200000235
ತರಗತಿ 3500000611
ತರಗತಿ 411200311128
ತರಗತಿ 51007817033
ತರಗತಿ 64317158038
ತರಗತಿ 7241164723093
ತರಗತಿ 842214868280171
ತರಗತಿ 91201447310140
ತರಗತಿ 10343516450330217
ಇತರೆ3000531223
ಒಟ್ಟು6586518626911836765

View this page in English
ನವೀಕರಿಸಿದ ದಿನಾಂಕ : 8/2/2019

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. phone: 080-26980100 email: dpi.dsert@gmail.com