ಶಿಕ್ಷಕರ ತರಬೇತಿ – ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assisted Learning Programme (TALP)) 2016-17 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ 5 ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ಒಂದು ಭಾಗವಾಗಿ ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ-ಪೂರ್ವ ಕಾಲೇಜುಗಳ ಶಿಕ್ಷಕರು ತಮ್ಮ ಕಲಿಕೆಯನ್ನು ಅನುಕೂಲಿಸುವ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ (ಐ.ಸಿ.ಟಿ.) ಕೌಶಲಗಳನ್ನು ಬಳಸುವುದಷ್ಟೇ ಅಲ್ಲದೇ ತಮ್ಮ ವೃತ್ತಿಪರ ವರ್ತನೆಗಳನ್ನು ಪುನಶ್ಚೇತನಗೊಳಿಸಿ ಕೊಳ್ಳಲು ಮತ್ತು ತಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಗಳಿಗೆ ಅಗತ್ಯವಾದ ಇ-ಸಂಪನ್ಮೂಲಗಳನ್ನು ತಾವೇ ಸೃಜಿಸಿಕೊಳ್ಳುವಂತೆ ತರಬೇತಿ ನೀಡಿ ಸಕ್ರಿಯಗೊಳಿಸುವುದೇ ಈ ‘ಐಟಿ@ಸ್ಕೂಲ್ಸ್ ಇನ್ ಕರ್ನಾಟಕ’ ಯೋಜನೆಯ ಗುರಿಯಾಗಿದೆ.
2016-17ನೇ ಸಾಲಿನಲ್ಲಿ ಡಿ.ಎಸ್.ಇ.ಆರ್.ಟಿ.ಯು ಅಜೀಂ ಪ್ರೇಂಮ್ ಜೀ ಫೌಂಡೇಶನ್ (APF) ಜೊತೆಗೂಡಿ ಸಿ.ಐ.ಇ.ಟಿ.ಯ ಐ.ಸಿ.ಟಿ. ಶಿಕ್ಷಕರ ಪಠ್ಯಕ್ರಮವನ್ನು ಆಧರಿಸಿ ರಾಜ್ಯದ ಕೆಲವು ಸಂಪನ್ಮೂಲ ಶಿಕ್ಷಕರಿಂದ ರಾಜ್ಯಕ್ಕೆ ಪಠ್ಯವಸ್ತುಗಳನ್ನು ಹೊಂದಿರುವ ಟಾಸ್ಕ್ ಗೈಡ್ ಗಳು ಮತ್ತು ಕನ್ನಡ ಭಾಷೆಯಲ್ಲಿ 143ಕ್ಕೂ ಹೆಚ್ಚು ವೀಡಿಯೋಗಳನ್ನು ತಯಾರಿಸಿ ತರಬೇತಿಗಳಿಗೆ ಬಳಸಿಕೊಳ್ಳಲಾಯಿತು.
ನಂತರ 2017-18ನೇ ಸಾಲಿನಿಂದ ರಾಜ್ಯವು ಈ ತರಬೇತಿಗಳನ್ನು ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ., ನವದೆಹಲಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನದೊಂದಿಗೆ ನಡೆಸುತ್ತಿದೆ. ಸಿ.ಐ.ಇ.ಟಿ.ಯವರು ಸಿದ್ಧಪಡಿಸಿದ ಐ.ಸಿ.ಟಿ. ಶಿಕ್ಷಕರ ಪಠ್ಯಕ್ರಮವನ್ನು ರಾಜ್ಯದಲ್ಲಿ ಅಳವಡಿಸಿಕೊಂಡಿರುವುದಲ್ಲದೇ ಅವರದೇ https://ictcurriculum.gov.in ಎಂಬ ವೆಬ್ಪೋರ್ಟಲ್ನ್ನು ಬಳಸಿಕೊಳ್ಳಲಾಗುತ್ತಿದೆ.
ಈ ತರಬೇತಿ ಕಾರ್ಯಕ್ರಮವು 3 ಹಂತಗಳನ್ನು ಹೊಂದಿದೆ.ಹಂತ 1: ಇಂಡಕ್ಷನ್-1 10 ದಿನಗಳ ಮುಖಾಮುಖಿ ತರಬೇತಿ. ಇಲ್ಲಿ ಶಿಕ್ಷಕರು ಕಂಪ್ಯೂಡರ್ ಹಾರ್ಡ್ವೇರ್, ಸಾಫ್ಟ್ವೇರ್, ಇಂಟರ್ನೆಟ್ ಮತ್ತು ಆಫೀಸ್ ಸೂಟ್ಸ್ ಬಗ್ಗೆ ಮೂಲಜ್ಞಾನ ಮತ್ತು ಕೌಶಲಗಳನ್ನು ಗಳಿಸುತ್ತಾರೆ.
ಹಂತ 2: ರಿಫ್ರೆಶರ್ ಕೋರ್ಸ್-1 10 ದಿನಗಳ ಮುಖಾಮುಖಿ ತರಬೇತಿ. ಇಲ್ಲಿ ಶಿಕ್ಷಕರು ತಮ್ಮದೇ ಇ-ಸಂಪನ್ಮೂಲಗಳನ್ನು ಸೃಜಿಸಿಕೊಳ್ಳಲು ಅಗತ್ಯವಾದ ಅನೇಕ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ಗಳನ್ನು ಅರಿಯುತ್ತಾರೆ.
ಹಂತ 3: ರಿಫ್ರೆಶರ್ ಕೋರ್ಸ್-2ಬಹಳ ಕಡಿಮೆ ಅವಧಿಯ ಆನ್ಲೈನ್ ಕೋರ್ಸ್ ಆಗಿದ್ದು ಇಲ್ಲಿ ಶಿಕ್ಷಕರು ಅಂತರ್ಜಾಲದ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ತಿಳಿಯುತ್ತಾರೆ..
ಪ್ರತಿ ಹಂತದ ಪ್ರಮಾಣಪತ್ರದ ಜೊತೆಗೆ 3 ಹಂತಗಳನ್ನು ಪೂರೈಸಿದ ಶಿಕ್ಷಕರಿಗೆ ಸಿ.ಐ.ಇ.ಟಿ.ಯ ಅರ್ಹತಾ ಪರೀಕ್ಷೆಯ ನಂತರ ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ., ನವದೆಹಲಿ ಇವರಿಂದ ‘ಡಿಪ್ಲೊಮಾ ಇನ್ ಐ.ಸಿ.ಟಿ. ಇನ್ ಎಜುಕೇಶನ್ - ಬೇಸಿಕ್’ ಎಂಬ ಡಿಪ್ಲೊಮಾ ಪದವಿ ನೀಡಲಾಗುವುದು.
ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ತರಬೇತಿಯ ಉದ್ದೇಶಗಳು:
ತರಬೇತಿಗಾಗಿ ಅನುಸರಿಸಿದ ವಿಧಾನ:
ತರಬೇತಿ ಕ್ಯಾಸ್ಕೇಡ್ ಮೋಡ್ನಲ್ಲಿದೆ. ವಿಷಯದ ಅಭಿವೃದ್ಧಿಯಲ್ಲಿ ತೊಡಗಿರುವ 11 ಸದಸ್ಯರು ರಾಜ್ಯದಾದ್ಯಂತ 136 ಎಂಆರ್ಪಿಗಳಿಗೆ (ಮಾಸ್ಟರ್ ರಿಸೋರ್ಸ್ ಪರ್ಸನ್ಸ್) ತರಬೇತಿ ನೀಡಿದರು. ಈ 136 ಎಂಆರ್ಪಿಗಳು ಆಯ್ದ ಶಾಲೆಗಳ ಶಿಕ್ಷಕರಿಗೆ 2016-17ರ ಅವಧಿಯಲ್ಲಿ ತರಬೇತಿ ನೀಡಿದರು. ಶಿಕ್ಷಕರನ್ನು ಗೂಗಲ್ ಫಾರ್ಮ್ಗಳನ್ನು ಬಳಸಿ ನೋಂದಾಯಿಸಲಾಗಿದೆ ಮತ್ತು ನಂತರ ಸಿಎಸ್ವಿಗಳಿಂದ ಐಸಿಟಿ ವೆಬ್ ಪೋರ್ಟಲ್ https://ictcurriculum.gov.in ಗೆ ನೋಂದಾಯಿಸಲಾಗಿದೆ. ಪ್ರತಿ ದಿನದ ತರಬೇತಿಯ ನಂತರ ಗೂಗಲ್ ಫಾರ್ಮ್ಗಳನ್ನು ಬಳಸಿಕೊಂಡು ‘ದಿನವಾರು ಪ್ರತಿಕ್ರಿಯೆ’ ಸಂಗ್ರಹಿಸಲಾಯಿತು ಮತ್ತು ತರಬೇತಿಯ ಕೊನೆಯಲ್ಲಿ ತರಬೇತಿ ಪಡೆದ ಎಲ್ಲ ಶಿಕ್ಷಕರಿಂದ ‘ಒಟ್ಟಾರೆ ಪ್ರತಿಕ್ರಿಯೆ’ ಸಂಗ್ರಹಿಸಲಾಯಿತು. ವರದಿಗಳನ್ನು ತಯಾರಿಸಲು ಇವುಗಳನ್ನು ವಿಶ್ಲೇಷಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಎಪಿಎಫ್ ರಚಿಸಿದ ವೀಡಿಯೊಗಳನ್ನು ಸಹ ಬಳಸಿಕೊಳ್ಳಲಾಗಿದೆ.
ಇ-ಪೋರ್ಟ್ಫೋಲಿಯೋಗಳ ಗ್ರೇಡಿಂಗ್ ಕಾರ್ಯ:
ಇಂಡಕ್ಷನ್ -1 ರಲ್ಲಿ 39 ಇ-ಪೋರ್ಟ್ಫೋಲಿಯೋಗಳಿವೆ. ಇದನ್ನು ತರಬೇತಿ ಪಡೆದ ಪ್ರತಿಯೊಬ್ಬ ಶಿಕ್ಷಕರು ಪೂರ್ಣಗೊಳಿಸಿ ಐಸಿಟಿ ಪೋರ್ಟಲ್ನಲ್ಲಿ ಸಲ್ಲಿಸಬೇಕು. 2019-20ರ ಅವಧಿಯಲ್ಲಿ ತರಬೇತಿ ಪಡೆದ 7,676 ಎಂಆರ್ಪಿಗಳು ಮತ್ತು ಶಿಕ್ಷಕರ ಈ ಇ-ಪೋರ್ಟ್ಫೋಲಿಯೋಗಳನ್ನು ರಾಜ್ಯದಾದ್ಯಂತ ಆಯ್ದ 136 ಮಾರ್ಗದರ್ಶಕರು ಮೌಲ್ಯಮಾಪನ ಮಾಡಿದ್ದಾರೆ. ಅವರು ಶಿಕ್ಷಕರ ಅಂಕಗಳನ್ನು ದಾಖಲಿಸಲು ಸುರಕ್ಷಿತ Google sheetಗಳನ್ನು ಬಳಸಿದ್ದಾರೆ. ಗ್ರೇಡಿಂಗ್ ಕೆಲಸವನ್ನು ಪೂರ್ಣಗೊಳಿಸಿದ ನಂತರ, ಈ ಶಿಕ್ಷಕರಿಗೆ ಇಂಡಕ್ಷನ್ -1 ಕೋರ್ಸ್ ಪೂರ್ಣಗೊಂಡಿರುವ ಬಗ್ಗೆ ರಾಜ್ಯ ಸರ್ಕಾರದ ಪರವಾಗಿ ಡಿ,ಎಸ್.ಇ.ಆರ್.ಟಿ. ಮತ್ತು ಹೊಸ ದೆಹಲಿಯ ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ. ಯ ಜಂಟಿ ಪ್ರಮಾಣಪತ್ರವನ್ನು ನೀಡಲಾಯಿತು. ಅದೇ ರೀತಿ ರಿಫ್ರೆಶರ್ ಕೋರ್ಸ್ -1 ನಲ್ಲಿ 32 ಇ-ಪೋರ್ಟ್ಫೋಲಿಯೋಗಳಿವೆ. 2019-20 ರಲ್ಲಿ 4261 ಇಂಡಕ್ಷನ್ -1 ತರಬೇತಿ ಪಡೆದ ಶಿಕ್ಷಕರು ಮತ್ತು 5912 RC-1 ತರಬೇತಿ ಪಡೆದ ಶಿಕ್ಷಕರ ಇ-ಪೋರ್ಟ್ಫೋಲಿಯೋಗಳ ಗ್ರೇಡಿಂಗ್ ಕಾರ್ಯ ಪ್ರಗತಿಯಲ್ಲಿದೆ. ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ 10,173 ಶಿಕ್ಷಕರು ಡಿ,ಎಸ್.ಇ.ಆರ್.ಟಿ. ಮತ್ತು ಸಿ.ಐ.ಇ.ಟಿ.-ಎನ್.ಸಿ.ಇ.ಆರ್.ಟಿ. ಯ ಜಂಟಿಯಾಗಿ ನೀಡುವ ಆಯಾ ಕೋರ್ಸ್ ಪೂರ್ಣಗೊಳಿಸಿರುವ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ.
TALP IT@SCHOOLS IN KARNATAKA ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಇಂಡಕ್ಷನ್ -1 ಮತ್ತು ರಿಫ್ರೆಶರ್ ಕೋರ್ಸ್-1 ತರಬೇತಿಗಳ ನೋಂದಣಿ, ಪ್ರತಿಕ್ರಿಯೆ ಮತ್ತು ಮಾನಿಟರಿಂಗ್ ಸ್ವರೂಪಗಳ ಲಿಂಕ್ಗಳು ಮತ್ತು ಕ್ಯೂಆರ್ ಸಂಕೇತಗಳು
ತರಬೇತಿಯ ಫಲಿತಗಳು:
ಇಲ್ಲಿಯವರೆಗಿನ ಪ್ರಗತಿ:
2016-17 ಮತ್ತು 2017-18ರ ಅವಧಿಯಲ್ಲಿ, ಒಟ್ಟು 8,026 ಶಿಕ್ಷಕರು ಮತ್ತು ಮುಖ್ಯಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಯಿತು. ಅವರಲ್ಲಿ 6,424 ಶಿಕ್ಷಕರು ಮತ್ತು 1,602 ಮುಖ್ಯಶಿಕ್ಷಕರು. ಇವರಲ್ಲಿ 7,676 ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ತಮ್ಮ ಇ-ಪೋರ್ಟ್ಫೋಲಿಯೋಗಳನ್ನು ಸಲ್ಲಿಸಿದ್ದಾರೆ. ಅವುಗಳ ಗ್ರೇಡಿಂಗ್ ಕಾರ್ಯವನ್ನು 2018-19ರಲ್ಲಿ ಮಾಡಲಾಗಿದೆ ಹಾಗೂ ಅವರಿಗೆ ಕರ್ನಾಟಕ ಸರ್ಕಾರ ಮತ್ತು ಸಿ.ಐ.ಇ.ಟಿ.ಯ ಜಂಟಿ ಪ್ರಮಾಣ ಪತ್ರವನ್ನು ಅವರ ಟಿ.ಡಿ.ಎಸ್. (Teachers Data Software)ನಲ್ಲಿ ವಿತರಿಸಲಾಗಿದೆ. ಇದೇ ವರ್ಷಗಳಲ್ಲಿ 413 ಡಯಟ್ ಉಪನ್ಯಾಸಕರುಗಳಿಗೆ ಇಂಡಕ್ಷನ್-1 ತರಬೇತಿ ನೀಡಲಾಗಿದೆ.
2018-19ರಲ್ಲಿ ತರಬೇತಿಗೆ ಒಳಪಡಿಸಿದ 1,195 ಸ.ಪ್ರೌ. ಶಾಲೆಗಳಲ್ಲಿ, 427 ಟೆಲಿ-ಎಜುಕೇಶನ್ ಪ್ರೌಢಶಾಲೆಗಳು (1,529 ಶಿಕ್ಷಕರು), 734 ಆಯ್ಕೆಯಾದ ಸ. ಪ್ರೌ. ಶಾಲೆಗಳು, 21 ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್)ಗಳು ಮತ್ತು 18 ಸ್ವಯಂ ಆಸಕ್ತ ಸ. ಪ್ರೌ. ಶಾಲೆಗಳು (2,732 ಶಿಕ್ಷಕರು) ಆಗಿದ್ದು ಆ ಶಾಲೆಗಳ ಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಯಿತು. ಇದಲ್ಲದೇ, ಇಂಡಕ್ಷನ್-1 ತರಬೇತಿ ಪಡೆದ 6,424 ಶಿಕ್ಷಕರಲ್ಲಿ 5,912 ಶಿಕ್ಷಕರಿಗೆ ರಿಫ್ರೆಶರ್ ಕೋರ್ಸ್-1 & 2 ತರಬೇತಿ ನೀಡಲಾಗಿದೆ. ಇದೇ ವರ್ಷದಲ್ಲಿ 143 ಡಯಟ್ ಉಪನ್ಯಾಸಕರುಗಳಿಗೆ ಕೂಡ ಇಂಡಕ್ಷನ್-1 ತರಬೇತಿ ನೀಡಲಾಗಿದೆ.
2019-2 0ನೇ ಸಾಲಿನಲ್ಲಿ ಉಳಿದ ಎಲ್ಲಾ 1,757 ಸ.ಪ್ರೌ.ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇಂಡಕ್ಷನ್-1 ರ ಗುರಿ, 16,190 ಮತ್ತು ರಿಫ್ರೆಶರ್ ಕೋರ್ಸ್-1 ಗುರಿ 4,680 ಒಟ್ಟು 20,870 ಆಗಿದೆ. ಇದೇ ವರ್ಷದಲ್ಲಿ 2,000 ಪ್ರಾಥಮಿಕ ಶಾಲೆಗಳಿಂದ 4,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಡಕ್ಷನ್-1 ತರಬೇತಿ ನೀಡಲಾಗುವುದು. ಮತ್ತು ಹಿಂದಿನ ವರ್ಷದಲ್ಲಿ ತರಬೇತಿ ಪಡೆದ ಶಿಕ್ಷಕರ ಇ-ಪೋರ್ಟ್ಫೋಲಿಯೋಗಳನ್ನು ಮೌಲ್ಯಮಾಪನ ಮಾಡಿ ಪ್ರಮಾಣಪತ್ರಗಳನ್ನು ನೀಡಲಾಗುವುದು.
ವರ್ಷ | ಭಾಗವಹಿಸಿದವರು | ಶಾಲೆಗಳ ಸಂಖ್ಯೆ | ||
ಇಂಡಕ್ಷನ್-1 | ರಿಫ್ರೆಶರ್ ಕೋರ್ಸ್-1 | |||
2016-17 | ಎಂ.ಆರ್.ಪಿ. ಗಳು | - | 136 | - |
ಶಿಕ್ಷಕರು ಮತ್ತು ಮುಖ್ಯಶಿಕ್ಷಕರು | 999 | 2910 | - | |
ಡಯಟ್ ಉಪನ್ಯಾಸಕರು | - | 413 | - | |
2016-17 ರ ಒಟ್ಟು | 999 | 3459 | 0 | |
2017-18 | ಪಿ.ಯು. ಎಂ.ಆರ್.ಪಿ.ಗಳು | - | 97 | - |
ಶಿಕ್ಷಕರು ಮತ್ತು ಮುಖ್ಯಶಿಕ್ಷಕರು | 750 | 5116 | - | |
2017-18 ರ ಒಟ್ಟು | 750 | 5213 | 0 | |
2018-19 | ಎಂ.ಆರ್.ಪಿ. ಗಳು | - | - | 136 |
ಶಿಕ್ಷಕರು | 1195 | 4261 | - | |
ಇಂಡಕ್ಷನ್-1 ಪಡೆದ ಶಿಕ್ಷಕರು | - | - | 5912 | |
ಡಯಟ್ ಉಪನ್ಯಾಸಕರು | - | 143 | ||
2018-19ರ ಒಟ್ಟು | 1195 | 4404 | 6048 | |
2019-20 - 15/8/2019 ರಲ್ಲಿದಂತೆ | ಶಿಕ್ಷಕರು | 1757 | 5410 | |
ಇಂಡಕ್ಷನ್-1 ಪಡೆದ ಶಿಕ್ಷಕರು | 222 | |||
2019-20 ರ ಒಟ್ಟು | 1757 | 5410 | 222 | |
ಒಟ್ಟು | 4,701 | 18,486 | 6,270 |
ವರ್ಷ | ಭಾಗವಹಿಸಿದವರು | ತರಬೇತಿಯ ಹೆಸರು | |
ಇಂಡಕ್ಷನ್-1 | ರಿಫ್ರೆಶರ್ ಕೋರ್ಸ್-1 | ||
2016-17 ರಿಂದ 2018-19 ವರೆಗೆ | ಶಿಕ್ಷಕರು | 10821 | 6048 |
ಮುಖ್ಯಶಿಕ್ಷಕರು | 1602 | - | |
ಡಯಟ್ ಉಪನ್ಯಾಸಕರು | 556 | - | |
ಪಿ.ಯು. ಎಂ.ಆರ್.ಪಿ.ಗಳು | 97 | - | |
2019-20 15/8/2019 ರಲ್ಲಿದಂತೆ | ಶಿಕ್ಷಕರು | 5410 | 222 |
ಒಟ್ಟು | 18,486 | 6,276 |
ಕ್ರ. ಸಂ | ಜಿಲ್ಲೆಯ ಹೆಸರು | 2016-17 | 2017-18 | 2018-19 | 2018-19 TE+KPS | ಒಟ್ಟು | 2018-19 RC-1 |
---|---|---|---|---|---|---|---|
01 | ಬೆಂಗಳೂರು ಗ್ರಾಮಾಂತರ | 126 | 23 | 70 | 28 | 247 | 111 |
02 | ಬೆಂಗಳೂರು ನಗರ | 112 | 103 | 58 | - | 273 | 160 |
03 | ಬೆಂಗಳೂರು ಉತ್ತರ | 141 | 43 | - | - | 184 | 127 |
04 | ಚಿಕ್ಕಬಳ್ಳಾಪುರ | 139 | 187 | - | 43 | 369 | 257 |
05 | ಚಿತ್ರದುರ್ಗ | 97 | 68 | 116 | 73 | 354 | 124 |
06 | ದಾವಣಗೆರೆ | 121 | 110 | 78 | 143 | 452 | 182 |
07 | ಕೋಲಾರ | 119 | 78 | 98 | 72 | 367 | 119 |
08 | ಮಧುಗಿರಿ | 117 | 45 | 47 | 24 | 233 | 121 |
09 | ರಾಮನಗರ | 106 | 100 | 74 | 68 | 348 | 153 |
10 | ಶಿವಮೊಗ್ಗ | 246 | 97 | 104 | 102 | 549 | 270 |
11 | ತುಮಕೂರು | 193 | 82 | 95 | 28 | 398 | 216 |
ಒಟ್ಟು | 1517 | 936 | 740 | 581 | 3774 | 1840 |
ಕ್ರ. ಸಂ | ಜಿಲ್ಲೆಯ ಹೆಸರು | 2016-17 | 2017-18 | 2018-19 | 2018-19 TE+KPS | ಒಟ್ಟು | 2018-19 RC-1 |
---|---|---|---|---|---|---|---|
01 | ಬಾಗಲಕೋಟೆ | 156 | 126 | 141 | 94 | 517 | 208 |
02 | ಬೆಳಗಾವಿ | 116 | 92 | 103 | 76 | 387 | 154 |
03 | ಚಿಕ್ಕೋಡಿ | 169 | 140 | 120 | - | 429 | 231 |
04 | ಧಾರವಾಡ | 218 | 112 | 23 | - | 353 | 252 |
05 | ಗದಗ | 128 | 123 | 48 | - | 299 | 154 |
06 | ಹಾವೇರಿ | 135 | 111 | 88 | 63 | 397 | 194 |
07 | ಶಿರಸಿ | 46 | 19 | 95 | 47 | 207 | 45 |
08 | ಉತ್ತರ ಕನ್ನಡ | 30 | 34 | 34 | 21 | 119 | 50 |
09 | ವಿಜಯಪುರ | 204 | 46 | 110 | 30 | 390 | 193 |
ಒಟ್ಟು | 1202 | 803 | 762 | 331 | 3098 | 1481 |
ಕ್ರ. ಸಂ | ಜಿಲ್ಲೆಯ ಹೆಸರು | 2016-17 | 2017-18 | 2018-19 | 2018-19 TE+KPS | ಒಟ್ಟು | 2018-19 RC-1 |
---|---|---|---|---|---|---|---|
01 | ಚಾಮರಾಜನಗರ | 45 | 173 | 65 | 52 | 335 | 172 |
02 | ಚಿಕ್ಕಮಗಳೂರು | 260 | 32 | 66 | - | 358 | 222 |
03 | ದಕ್ಷಿಣ ಕನ್ನಡ | 138 | 147 | 124 | - | 409 | 223 |
04 | ಹಾಸನ | 231 | 174 | 137 | - | 542 | 311 |
05 | ಕೊಡಗು | 118 | 54 | - | - | 172 | 137 |
06 | ಮಂಡ್ಯ | 205 | 82 | 98 | - | 385 | 228 |
07 | ಮೈಸೂರು | 202 | 139 | 137 | 121 | 599 | 250 |
08 | ಉಡುಪಿ | 232 | 195 | 59 | - | 486 | 357 |
ಒಟ್ಟು | 1431 | 996 | 686 | 173 | 3286 | 1900 |
ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿನ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assistance Learning Programe) TALP ಕಾರ್ಯಕ್ರಮವನ್ನು 2016-17ನೇ ಶೈಕ್ಷಣಿಕ ಸಾಲಿನಿಂದ 5 ವರ್ಷಗಳ ಅವಧಿಗೆ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಜಾರಿಗೊಳಿಸಿರುವ ಎಜುಸ್ಯಾಟ್, ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದಡಿಯ ಕಂಪ್ಯೂಟರ್ ಬೆಂಬಲಿತ ಕಲಿಕೆ (TALP), ಟೆಲಿಶಿಕ್ಷಣ ಮತ್ತು ಐಸಿಟಿ-3 ಕಾರ್ಯ ಚಟುವಟಿಕೆಗಳನ್ನು ಇದರಲ್ಲಿ ವಿಲೀನಗೊಳಿಸುವುದಾಗಿದೆ.
ಈ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ (Technology Assistance Learning Programe) TALP ಕಾರ್ಯಕ್ರಮದ ಒಂದು ಭಾಗವಾಗಿ IT@Schools in Karnataka ಐಟಿ@ಸ್ಕೂಲ್ಸ್ ಇನ್ ಕರ್ನಾಟಕ ) ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.
ಐಟಿ@ಸ್ಕೂಲ್ಸ್ ಕಾರ್ಯ ಯೋಜನೆಯ ಪ್ರಮುಖ ಚಟುವಟಿಕೆಗಳು.
ಸರ್ಕಾರಿ ಪ್ರೌಢಶಾಲೆಗಳಿಗೆ ಹಾರ್ಡ್ವೇರ್ ಸರಬರಾಜು.
ತಂತ್ರಜ್ಞಾನ ತರಬೇತಿ ಪಡೆದ ಶಿಕ್ಷಕರು ಇ-ಕಂಟೆಂಟ್ನ್ನು ಉಪಯೋಗಿಸಿ ಮತ್ತು ವೃದ್ಧಿಸಿ ಕಲಿಕೆ ಬೋಧನೆಯಲ್ಲಿ ಬಳಸಲು ಪ್ರತಿ ಶಾಲೆಗೆ ಒಂದು ಇ-ಕಂಟೆಂಟ್ ಪೂರಣ ಮಾಡಿದ ಲ್ಯಾಪ್ಟಾಪ್ಗಳನ್ನು ಹಾಗೂ ಎಲ್.ಸಿ.ಡಿ ಪ್ರೊಜೆಕ್ಟರ್ಗಳನ್ನು ಒದಗಿಸಲಾಗುತ್ತಿದೆ. ಈವರೆಗೆ ಅನುಷ್ಠಾನಗೊಳಿಸಿದ 2500 ಸರ್ಕಾರಿ ಪ್ರೌಢಶಾಲೆಗಳಿಗೆ ಈ ಸೌಲಭ್ಯ ಒದಗಿಸಿದೆ. ಪ್ರಸ್ತುತ 2016-17ನೇ ಸಾಲಿನ 1000 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್ಗಳನ್ನು ಸರಬರಾಜು ಮತ್ತು ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ 2186 ಸರ್ಕಾರಿ ಪ್ರೌಢಶಾಲೆಗಳಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (HKDB) ಯು ತನ್ನ ವ್ಯಾಪ್ತಿಯ 06 ಜಿಲ್ಲೆಗಳಲ್ಲಿನ 718 ಸರ್ಕಾರಿ ಪ್ರೌಢಶಾಲೆಗಳಲ್ಲಿ TALP ಕಾರ್ಯಕ್ರಮವನ್ನು ಪ್ರಸ್ತುತ ವರ್ಷ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಯೋಜನೆಯಂತೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು ಏಕ ಕಾಲದಲ್ಲಿ ಪ್ರೊಜೆಕ್ಟರ್, ಲ್ಯಾಪ್ಟಾಪ್, ಕಂಪ್ಯೂಟರ್ ಕೊಠಡಿ ಸಿದ್ಧತೆ, ಯು.ಪಿ.ಎಸ್ ಮತ್ತು ಬ್ಯಾಟರಿ ಪೂರೈಕೆ ಹಾಗೂ ಕಂಪ್ಯೂಟರ್ಗಳನ್ನು ಒದಗಿಸಲು ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ಮಾಡಿದ್ದು, 2019-20ನೇ ಸಾಲಿನಲ್ಲಿ ಈ ಸೌಲಭ್ಯಗಳನ್ನು ಪೂರೈಸಲು ಪ್ರಕ್ರಿಯೆಯಲ್ಲಿದೆ.
ಈ ಕಾರ್ಯ ಯೋಜನೆಗೆ ಇಂಟರ್ನೆಟ್ ಸಂಪರ್ಕ ಸೌಲಭ್ಯವಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರಥಮಾದ್ಯತೆ ನೀಡಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷವಾರು ಶಾಲೆಗಳ ಸಂಖ್ಯೆ ಕೆಳಕಂಡಂತಿದೆ.
ಒಟ್ಟು ಸರ್ಕಾರಿ ಪ್ರೌಢಶಾಲೆಗಳು | ಸರಬರಾಜಾದ ಉಪಕರಣಗಳ ವಿವರ | ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ | ಒಟ್ಟು | |||
2016-17 | 2017-18 | 2018-19 | 2019-20 | |||
4686 | - | 1000 | 750 | 750 | 718 (HKDB) (1468 ರಾಜ್ಯವಲಯ) | 4686 |
ಈವರೆಗೆ ಪೂರೈಸಿರುವ ಹಾರ್ಡ್ ವೇರ್ ಗಳು | ಲ್ಯಾಪ್ ಟಾಪ್ | 1000 | 750 | 750 | - | - |
ಎಲ್.ಸಿ.ಡಿ ಪ್ರೊಜೆಕ್ಟರ್ | 400 | 365 | 511 | - | - | |
ಆಲ್ ಇನ್ ಓನ್ ಕಂಪ್ಯೂಟರ್ | 14945 + (1000 ಸರ್ವರ್) | 1000 ಶಾಲೆಗಳಿಗೆ ಉಪಕರಣಗಳು ಸರಬರಾಜಾಗಿ install ಆಗಿವೆ. |
ಉಳಿದ 1468 ಶಾಲೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಿಕೊಂಡಿದೆ. ಸದರಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಅನುಷ್ಠಾನಗೊಳಿಸುತ್ತಿರುವ ಶಾಲೆಗಳ ವರ್ಷವಾರು ವಿವರ
ಕ್ರ.ಸಂ | ಜಿಲ್ಲೆಯ ಹೆಸರು | ಒಟ್ಟು ಶಾಲೆಗಳು | 2016-17 | 2017-18 | 2018-19 | ಒಟ್ಟು | ಉಳಿಕೆ ಶಾಲೆಗಳು |
1 | ಬಾಗಲಕೋಟೆ | 183 | 34 | 31 | 42 | 107 | 76 |
2 | ಬೆಂಗಳೂರು ಗ್ರಾಮಾಂತರ | 63 | 26 | 5 | 18 | 49 | 14 |
3 | ಬೆಂಗಳೂರು ಉತ್ತರ | 57 | 29 | 9 | 10 | 48 | 9 |
4 | ಬೆಂಗಳೂರು ನಗರ | 86 | 24 | 25 | 11 | 60 | 26 |
5 | ಬೆಳಗಾವಿ | 130 | 25 | 21 | 30 | 76 | 54 |
6 | ಚಾಮರಾಜನಗರ | 86 | 9 | 36 | 16 | 61 | 25 |
7 | ಚಿಕ್ಕಬಳ್ಳಾಪುರ | 111 | 35 | 42 | 10 | 87 | 24 |
8 | ಚಿಕ್ಕಮಗಳೂರು | 116 | 58 | 9 | 16 | 83 | 33 |
9 | ಚಿಕ್ಕೋಡಿ | 181 | 35 | 28 | 30 | 93 | 88 |
10 | ಚಿತ್ರದುರ್ಗ | 113 | 20 | 16 | 28 | 64 | 49 |
11 | ದಕ್ಷಿಣ ಕನ್ನಡ | 169 | 27 | 31 | 31 | 89 | 80 |
12 | ದಾವಣಗೆರೆ | 158 | 25 | 25 | 14 | 64 | 94 |
13 | ದಾರವಾಡ | 108 | 48 | 24 | 6 | 78 | 30 |
14 | ಗದಗ | 113 | 27 | 25 | 14 | 66 | 47 |
15 | ಹಾಸನ | 241 | 54 | 41 | 40 | 135 | 106 |
16 | ಹಾವೇರಿ | 141 | 30 | 25 | 24 | 79 | 62 |
17 | ಕೊಡಗು | 47 | 27 | 13 | 2 | 42 | 5 |
18 | ಕೋಲಾರ | 125 | 16 | 21 | 28 | 65 | 60 |
19 | ಮಧುಗಿರಿ | 95 | 24 | 12 | 15 | 51 | 44 |
20 | ಮಂಡ್ಯ | 215 | 48 | 18 | 15 | 81 | 134 |
21 | ಮೈಸೂರು | 232 | 43 | 30 | 25 | 98 | 134 |
22 | ರಾಮನಗರ | 107 | 23 | 23 | 36 | 82 | 25 |
23 | ಶಿವಮೊಗ್ಗ | 164 | 55 | 22 | 24 | 101 | 63 |
24 | ಶಿರಸಿ | 74 | 10 | 4 | 26 | 40 | 34 |
25 | ತುಮಕೂರು | 133 | 44 | 18 | 21 | 83 | 50 |
26 | ಉತ್ತರ ಕನ್ನಡ | 49 | 6 | 8 | 10 | 24 | 25 |
27 | ಉಡುಪಿ | 106 | 49 | 42 | 6 | 97 | 9 |
28 | ವಿಜಯಪುರ | 152 | 44 | 10 | 30 | 84 | 68 |
ಒಟ್ಟು | 3555 | 895 | 614 | 578 | 2087 | 1468 | |
1 | ಬಳ್ಳಾರಿ (HK) | 197 | 22 | 28 | 37 | 87 | 110 |
2 | ಬೀದರ (HK) | 165 | 19 | 25 | 35 | 79 | 86 |
3 | ಕಲಬುರ್ಗಿ (HK) | 293 | 13 | 44 | 44 | 101 | 192 |
4 | ಕೊಪ್ಪಳ (HK) | 155 | 12 | 8 | 14 | 34 | 121 |
5 | ರಾಯಚೂರು(HK) | 199 | 29 | 25 | 11 | 65 | 134 |
6 | ಯಾದಗಿರಿ (HK) | 122 | 10 | 6 | 31 | 47 | 75 |
ಒಟ್ಟು | 1131 | 105 | 136 | 172 | 413 | 718 | |
Grand Total | 4686 | 1000 | 750 | 750 | 2500 | 2186 |
ಟೆಂಡರ್ ಆಹ್ವಾನದ ಪ್ರಗತಿ:
ಕಂಪ್ಯೂಟರ್ ಅಳವಡಿಸಲು ಕೊಠಡಿ ಪೂರ್ವ ಸಿದ್ಧತೆಯ ಪ್ರಗತಿ:
ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಮಟ್ಟವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಂತಗಳಲ್ಲಿ ಉತ್ತಮಪಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಆಸಕ್ತಿ ಮೂಡಿಸಿ ಕುಶಲತೆಗಳನ್ನು ಹೆಚ್ಚಿಸುವುದು ಮತ್ತು ನಿತ್ಯ ಜೀವನದಲ್ಲಿ ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಧ್ಯೇಯ. ಇದಕ್ಕೆ ಪೂರಕವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ರಾಜ್ಯದಲ್ಲಿ 224 ವಿಜ್ಞಾನ ಕೇಂದ್ರಗಳಿವೆ ಹಾಗೂ ಸಿ.ಟಿ.ಇ. ಮೈಸೂರು ಇಲ್ಲಿನ ಆವರಣದಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಲಾಗಿದೆ. ಈ ಹಿಂದೆ ಈ ಕೆಳಗಿನಂತೆ ವಿವಿಧ ಕಾರ್ಯಕ್ರಮಗಳನ್ನು ಡಿ.ಎಸ್.ಇ.ಆರ್.ಟಿ.ವತಿಯಿಂದ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಈ ಕೆಳಗಿನ ಕಾರ್ಯಕ್ರಮಗಳಲ್ಲಿ ಕೆಲವು ಕಾರ್ಯಕ್ರಮಗಳು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆರವರ ಕಛೇರಿಯ ಪ್ರೌಢಶಿಕ್ಷಣ ವಿಭಾಗದಲ್ಲಿ ನಿರ್ವಹಣೆಯಾಗುತ್ತಿವೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಎಳೆಯ ವಯಸ್ಸಿನಲ್ಲೇ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡು, ಸಂಶೋಧನೆಯನ್ನು ಒಂದು ವೃತ್ತಿಯಾಗಿ ಸ್ವೀಕರಿಸುವಂತೆ ಪ್ರೇರೇಪಿಸಲು ಇನ್ ಸ್ಪೈರ್(Innovation in Science Pursuit for Inspired Research) ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು 2009-10ನೇ ಸಾಲಿನಿಂದ ಅನುಷ್ಠಾನ ಮಾಡುತ್ತಿದೆ. ದೇಶದ ಸಂಶೋಧನೆ ಮತ್ತು ಬೆಳವಣಿಗೆ ಕ್ಷೇತ್ರಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಗುರುತಿಸಿ, ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಂತದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಯಲ್ಲಿ ಆಸಕ್ತಿ ಹೊಂದುವಂತೆ ಪ್ರೇರೇಪಿಸುವುದು ಹಾಗೂ ಅವರಲ್ಲಿ ಸೃಜನಶೀಲ ಆಲೋಚನೆಯನ್ನು ಬೆಳೆಸುವ ಮೂಲಕ ನಾವೀನ್ಯತೆಯ ಸಂಸ್ಕೃತಿಯನ್ನು ಹೊಂದುವಂತೆ ಮಾಡುವುದು ಈ ಕಾರ್ಯಕ್ರಮದ ಮಹದುದ್ದೇಶವಾಗಿದೆ.
ಈ ಕಾರ್ಯಕ್ರಮದ ಅನುಷ್ಠಾನದ ಪ್ರಾರಂಭದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಕಾರ್ಯಕ್ರಮ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಇನ್ ಸ್ಪೈರ್ ಪ್ರಶಸ್ತಿ ಮಾನಕ್ (INSPIRE- Innovation in Science Pursuit for Inspired Research Award MANAK- Million Minds Augmenting National Aspiration and Knowledge) ಎಂದು ಮಾರ್ಪಡಿಸಲಾಗಿದೆ. ಒಂದು ಶೈಕ್ಷಣಿಕ ವರ್ಷದಲ್ಲಿ ದೇಶದ ಹಿರಿಯ ಪ್ರಾಥಮಿಕ ಶಾಲೆಗಳ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲೆಗಳ 5 ಲಕ್ಷ ವಿದ್ಯಾರ್ಥಿಗಳಿಂದ ಸೇರಿ ಒಟ್ಟು 10 ಲಕ್ಷ ವಿದ್ಯಾರ್ಥಿಗಳಿಂದ ಪ್ರತಿಯೊಬ್ಬರಿಂದ ಒಂದೊಂದು ನೂತನ ವಿಚಾರ ಅಥವಾ ಹೊಳಹು ಅಥವಾ ಕಲ್ಪನೆಗಳನ್ನು (ಐಡಿಯಾ) ಸೃಜಿಸುವ ಉದ್ದೇಶ ಹೊಂದಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 10 ರಿಂದ 15 ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.
ಪ್ರತಿ ಶಾಲೆಯಿಂದ ಇಬ್ಬರಿಂದ ಮೂವರು ವಿದ್ಯಾರ್ಥಿಗಳು ತಮ್ಮ ನವೀನ ಕಲ್ಪನೆ, ಐಡಿಯಾ (ವಿಚಾರ) ಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ಸ್ವೀಕೃತವಾದ ಒಟ್ಟು ಐಡಿಯಾಗಳಲ್ಲಿ ನಾವೀನ್ಯಯುತವಾದ ಐಡಿಯಾಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ಆಯ್ಕೆ ಮಾಡಲಾದ ಐಡಿಯಾಗಳನ್ನು ಸಲ್ಲಿಸಿದ ವಿದ್ಯಾರ್ಥಿ/ನಿಯ ಬ್ಯಾಂಕ್ ಖಾತೆಗೆ ರೂ.10,000 ಮೊತ್ತವನ್ನು ಜಮೆ ಮಾಡಲಾಗುತ್ತದೆ. ಈ ಮೊತ್ತವನ್ನು ಬಳಸಿಕೊಂಡು ವಿದ್ಯಾಥಿ/ನಿಯು ಮಾದರಿಯನ್ನು ಸಿದ್ಧಪಡಿಸಿ, ಜಿಲ್ಲಾ ಹಂತದ ವಸ್ತುಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ಪ್ರದರ್ಶಿಸುತ್ತಾರೆ. ನಾವೀನ್ಯಯುತ ಮಾದರಿಗಳನ್ನು ರಾಜ್ಯ ಹಂತ ಹಾಗೂ ನಂತರ ರಾಷ್ಟ್ರ ಹಂತದಲ್ಲಿ ಪ್ರದರ್ಶಿಸಲಾಗುತ್ತದೆ.
ರಾಷ್ಟ್ರ ಹಂತದಲ್ಲಿ ಅತ್ಯುತ್ತಮವಾದ ಮಾದರಿಗಳನ್ನು ತೀರ್ಪುಗಾರರು ಆಯ್ಕೆ ಮಾಡುತ್ತಾರೆ. ಅವುಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರ ಜೊತೆ ಪ್ರಾಂತೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಷ್ಟ್ರ ಹಂತದಲ್ಲಿ ಆಯ್ಕೆಯಾದ ಅತ್ಯುತ್ತಮವಾದ ಮಾದರಿಗಳನ್ನು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲ್ಪಡುವ ನಾವೀನ್ಯತೆಯ ಉತ್ಸವದಲ್ಲಿ ಪ್ರದರ್ಶಿತವಾಗುತ್ತವೆ. ಸೂಕ್ತವಾದ ಮಾದರಿಗಳನ್ನು ಹೆಚ್ಚಿನ ಜನರು ಬಳಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಸಾರ್ವಜನಿಕ ಬಳಕೆಗೆ ಸೂಕ್ತವಾಗಿರುವ ಮಾದರಿಗಳನ್ನು ಉಪಕರಣಗಳಾಗಿ ಮಾರ್ಪಡಿಸಲು ಸಾಧ್ಯವಿದೆ ಎಂದು ಖಾತ್ರಿಯಾದಲ್ಲಿ ಅವುಗಳಿಗೆ ಏಕ ಹಕ್ಕು ಸ್ವಾಮ್ಯ (ಪೇಟೆಂಟ್) ಕೊಡಿಸಿ ಅಭಿವೃದ್ಧಿಪಡಿಸಲಾಗುತ್ತದೆ.
ಇನ್ ಸ್ಪೈರ್ ಕಾರ್ಯಕ್ರಮದಲ್ಲಿ ರಾಜ್ಯವು ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಈವೆರೆಗೆ ದೇಶದಲ್ಲಿ ಒಟ್ಟು 14,89,490 ವಿದ್ಯಾರ್ಥಿಗಳಿಗೆ ಇನ್ ಸ್ಪೈರ್ ಪ್ರಶಸ್ತಿಗಳನ್ನು ನೀಡಲಾಗಿದ್ದು ಇದರಲ್ಲಿ ಕರ್ನಾಟಕ ರಾಜ್ಯದ ಒಟ್ಟು 1,55,226 ವಿದ್ಯಾರ್ಥಿಗಳಿಗೆ (10.42%) ಇನ್ ಸ್ಪೈರ್ ಪ್ರಶಸ್ತಿ ದೊರೆತಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಪ್ರಶಸ್ತಿ ಪಡೆದ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಈವರೆಗೆ ರಾಜ್ಯದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಪಡೆದ ಒಟ್ಟು ವಿದ್ಯಾರ್ಥಿಗಳಲ್ಲಿ 79,742 ಬಾಲಕಿಯರು ಹಾಗೂ 75,484 ಬಾಲಕರು ಪ್ರಶಸ್ತಿ ಪಡೆದಿರುವುದು ಬಾಲಕಿಯರು ಇನ್ ಸ್ಪೈರ್ ಪ್ರಶಸ್ತಿ ಪಡೆಯುವಲ್ಲಿ ಬಾಲಕರಿಗಿಂತ ಮುಂದಿರುವುದನ್ನು ಗಮನಿಸಬಹುದಾಗಿದೆ. ಈವರೆಗೆ ಆರಂಭದಿಂದ 2015-16ರವರೆಗೆ ನಡೆದ ರಾಷ್ಟ್ರ ಹಂತದ ಇನ್ ಸ್ಪೈರ್ ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 457 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿನ್ನ, ಒಬ್ಬ ವಿದ್ಯಾರ್ಥಿ ಬೆಳ್ಳಿ, ಮೂವರು ವಿದ್ಯಾರ್ಥಿಗಳು ದಕ್ಷಿಣ ಪ್ರಾಂತ್ಯ ಹಂತದಲ್ಲಿ ದ್ವಿತೀಯ ಪ್ರಶಸ್ತಿ ಮತ್ತು ಒಂಭತ್ತು ವಿದ್ಯಾರ್ಥಿಗಳು ರಾಜ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.
2018-19ನೇ ಸಾಲಿನಲ್ಲಿ ರಾಜ್ಯದಿಂದ 41,242 ಪ್ರಸ್ತಾವನೆಗಳು ರಾಜ್ಯದಿಂದ ಸಲ್ಲಿಕೆಯಾಗಿದ್ದು, ಇಡೀ ದೇಶದಲ್ಲಿಯೇ ಅತಿ ಹೆಚ್ಚು ಪ್ರಸ್ತಾವನೆ ಸಲ್ಲಿಸಿದ ರಾಜ್ಯವಾಗಿ ಕರ್ನಾಟಕವು ಹೊರಹೊಮ್ಮಿತ್ತು. ರಾಜ್ಯದಿಂದ ಸಲ್ಲಿಕೆಯಾದ ಪ್ರಸ್ತಾವನೆಗಳಲ್ಲಿ 7179 ಪ್ರಶಸ್ತಿಗಳು ರಾಜ್ಯಕ್ಕೆ ಬಂದಿರುತ್ತವೆ. ದೇಶದಲ್ಲಿ ನೀಡಲ್ಪಟ್ಟ ಒಟ್ಟು 50,296 ಪ್ರಶಸ್ತಿಗಳಲ್ಲಿ ಕರ್ನಾಟಕದ ಪಾಲು 7179 (14.27%) ಆಗಿದ್ದು, ಇದು ಸಹ ದೇಶದಲ್ಲಿಯೇ ಅತಿ ಹೆಚ್ಚು ಆಗಿರುತ್ತದೆ. 2018-19 ನೇ ಸಾಲಿನ 90 ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲಿನ 20 ವಿದ್ಯಾರ್ಥಿಗಳ ಪೈಕಿ 108 ವಿದ್ಯಾರ್ಥಿಗಳು ಫೆಬ್ರವರಿ 14,15-2019 ರಂದು ನವದೆಹಲಿಯ ಐ.ಐ.ಟಿ.ಯಲ್ಲಿ ನಡೆಯಲಿರುವ ರಾಷ್ಟ್ರ ಹಂತದ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ, ಈ ಕೆಳಗಿನ 5 ವಿದ್ಯಾರ್ಥಿಗಳು ರಾಷ್ಟ್ರ ಪ್ರಶಸ್ತಿ ಪಡೆದಿರುತ್ತಾರೆ.
2019-20 ನೇ ಸಾಲಿನಲ್ಲಿ ಇನ್ ಸ್ಪೈರ್ ಪ್ರಶಸ್ತಿಗಾಗಿ ನಾಮನಿರ್ದೇಶನಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಎಲ್ಲಾ ಡಯಟ್ ಪ್ರಾಂಶುಪಾಲರು ಹಾಗೂ ಇನ್ ಸ್ಪೈರ್ ನೋಡಲ್ ಉಪನ್ಯಾಸಕರು ಹಾಗೂ ಪ್ರತಿ ಸರ್ಕಾರಿ ಪ್ರೌಢಶಾಲೆಗಳ ಒಬ್ಬ ಶಿಕ್ಸಕರಿಗೆ ದಿನಾಂಕ:06-06-2019 ರಂದು ದೂರಸಂಪರ್ಕ ತರಬೇತಿ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದಿನಾಂಕ:22-08-2019ರವರೆಗೆ 36,000 ದಷ್ಟು ನಾಮನಿರ್ದೇಶನಗಳು ರಾಜ್ಯದಿಂದ ಸಲ್ಲಿಕೆಯಾಗಿದ್ದು, ದೇಶದಲ್ಲಿ ಅತಿ ಹೆಚ್ಚು ನಾಮನಿರ್ದೇಶನ ಸಲ್ಲಿಸಿದ ರಾಜ್ಯವಾಗಿ ಕರ್ನಾಟಕವು ಹೊರಹೊಮ್ಮಿದೆ. ಅತಿ ಹೆಚ್ಚು ನಾಮನಿರ್ದೇಶನ ಸಲ್ಲಿಸಿದ ದೇಶದ ಮೊದಲ 25 ಜಿಲ್ಲೆಗಳಲ್ಲಿ ರಾಜ್ಯದ 9 ಜಿಲ್ಲೆಗಳಿರುವುದು ಹೆಮ್ಮೆಯ ಸಂಗತಿಯಾಗಿದೆ. E-MIAS ಪೋರ್ಟಲ್ ನಲ್ಲಿ ನಾಮನಿರ್ದೇಶನ ಮಾಡುವ ವಿಧಾನ, ಹೊಸದಾಗಿ ಶಾಲೆಗಳನ್ನು ನೋಂದಣಿ ಮಾಡುವ ವಿಧಾನ, ನವೀನ ವಿಚಾರಗಳ ಸೃಜನೆ, ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಗಿದೆ.
ದಿನಾಂಕ: 10-06-2019 ರಿಂದ 15-06-2019 ರವರೆಗೆ ಇನ್ ಸ್ಪೈರ್ ಕಾರ್ಯಕ್ರಮಕ್ಕೆ ನವೀನ ವಿಚಾರಗಳ ಸೃಜನೆ ಮಾಡಲು ಐಡಿಯಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಮೂಲಕ ವಿದ್ಯಾರ್ಥಿಗಳು ನವೀನವಾಗಿ, ಸೃಜನಶೀಲವಾಗಿ ಆಲೋಚಿಸಲು ಅವಕಾಶ ಕಲ್ಪಿಸಲಾಗಿತ್ತು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿಯವರು ರಾಷ್ಟ್ರ ಮಟ್ಟದಲ್ಲಿ ಇನ್ ಸ್ಪೈರ್ ಪ್ರಶಸ್ತಿ ಪಡೆದ ವಿದ್ಯಾರ್ಧಿಗಳ ಪೈಕಿ 15 ವರ್ಷ ಮೇಲ್ಪಟ್ಟ ಕೆಲವು ವಿದ್ಯಾರ್ಥಿಗಳನ್ನು ಸಕುರಾ ಕಾರ್ಯದಡಿ ಜಪಾನ್ ದೇಶಕ್ಕೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡುತ್ತಾರೆ. ಈ ಕಾರ್ಯಕ್ರಮವು 2014-15ನೇ ಸಾಲಿನಿಂದ ಅನುಷ್ಠಾನದಲ್ಲಿದೆ. 2018-19ನೇ ಸಾಲಿನಲ್ಲಿ 05 ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ 07 ದಿನಗಳ (26-05-2019 ರಿಂದ 01-06-2019ರವರೆಗೆ) ಜಪಾನ್ ಪ್ರವಾಸ ಕೈಗೊಂಡಿರುತ್ತಾರೆ. ವಿದ್ಯಾರ್ಥಿಗಳ ವಿವರಗಳು ಈ ಕೆಳಗಿನಂತಿದೆ.
ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆಯ ಅಟಲ್ ಇನ್ನೋವೇಶನ್ ಮಿಷನ್ ಅಡಿ ದೇಶದ ಆಯ್ದ ಶಾಲೆಗಳಲ್ಲಿ 2016-17ನೇ ಸಾಲಿನಿಂದ 5441 ಅಧಿಕ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ನಿಗಧಿತ ಸೌಲಭ್ಯ, ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಇನ್ನಿತರೆ ಅನುಕೂಲಗಳನ್ನು ಹೊಂದಿದ ಶಾಲೆಗಳು ನೇರವಾಗಿ ತಮ್ಮ ಪ್ರಸ್ತಾವನೆಯನ್ನು ಆನ್ ಲೈನ್ ಮೂಲಕ https://www.aim.gov.in ಸಲ್ಲಿಸಬೇಕು. ಆಯ್ಕೆಯಾದ ಶಾಲೆಗಳಿಗೆ ಪ್ರಯೋಗಾಲಯ ಸ್ಥಾಪನೆಗೆ ಮೊದಲ ವರ್ಷದಲ್ಲಿ ಅಟಲ್ ಇನ್ನೊವೇಶನ್ ಮಿಷನ್ ನಿಂದ ಒಟ್ಟು ರೂ.20 ಲಕ್ಷ ನೀಡಲಾಗುವುದು. ನಂತರದ 5 ವರ್ಷಗಳಲ್ಲಿ ವಾರ್ಷಿಕ ರೂ.2 ಲಕ್ಷಗಳಂತೆ ರೂ.10 ಲಕ್ಷವನ್ನು ಪ್ರಯೋಗಾಲಯ ನಿರ್ವಹಣೆ, ಪರಿಕರಗಳನ್ನು ಖರೀದಿಸಲು, ವಿಜ್ಞಾನ ಉಪನ್ಯಾಸ ಸರಣಿ ಹಾಗೂ ಇತರೆ ವೈಜ್ಞಾನಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಶಾಲೆಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 309 ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, 2,67 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 309 ಶಾಲೆಗಳ ಪೈಕಿ 139 ಶಾಲೆಗಳು ಕೇಂದ್ರ ಸರ್ಕಾರದಿಂದ ಅನುದಾನ ಪಡೆದಿವೆ. ರಾಜ್ಯದಲ್ಲಿ 79 ಸರ್ಕಾರಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಯಾಗಿದೆ.
ಎಳೆಯ ವಯಸ್ಸಿನಲ್ಲಿಯೇ ಸಂಶೋಧನೆಯಲ್ಲಿ ಆಸಕ್ತಿ ಬೆಳೆಸುವುದು ಈ ಪ್ರಯೋಗಾಲಯ ಸ್ಥಾಪನೆಯ ಉದ್ದೇಶವಾಗಿದೆ. ಪ್ರಯೋಗಾಲಯದಲ್ಲಿರುವ ಉಪಕರಣ ಹಾಗೂ ಸಾಧನಗಳನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುವಂತೆ ಮಾಡಲಾಗುತ್ತದೆ. ಈ ಪ್ರಯೋಗಾಲಯಗಳಲ್ಲಿ ವಿಜ್ಞಾನ, ಎಲೆಕ್ಟ್ರಾನಿಕ್ಸ್, ರೋಬಾಟಿಕ್ಸ್, ಒಪನ್ ಸೋರ್ಸ್ ಮೈಕ್ರೊ ಕಂಟ್ರೋಲರ್ ಬೋರ್ಡ್ ಗಳು, ತ್ರಿ ಡಿ ಪ್ರಿಂಟರ್ ಗಳು, ಸ್ವತ: ಮಾಡಬಹುದಾದ ಕಿಟ್ ಗಳು (Do It Yourself kits) ಲಭ್ಯವಿದ್ದು, ವಿದ್ಯಾರ್ಥಿಗಳು ಪ್ರಯೋಗದಲ್ಲಿ ತೊಡಗಿಕೊಳ್ಳಲು ಅನುಕೂಲವಿದೆ.
ದಿನಾಂಕ:07-03-2019 ರಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ದೇಶದಲ್ಲಿ ಹೊಸದಾಗಿ ಒಟ್ಟು 3487 ಶಾಲೆಗಳಿಗೆ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, ಅದರಲ್ಲಿ 394 ಶಾಲೆಗಳು ರಾಜ್ಯಕ್ಕೆ ಸೇರಿದ್ದು, ಇದರಲ್ಲಿ 209 ಶಾಲೆಗಳು ಸರ್ಕಾರಿ ಶಾಲೆಗಳಾಗಿವೆ
ಕರ್ನಾಟಕ IT @ Schools ಯೋಜನೆ ಅಡಿಯಲ್ಲಿ, e content ಘಟಕವು ಈ ಕೆಳಗಿನ ಉದ್ದೇಶಗಳೊಂದಿಗೆ ಇ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.
ತರಗತಿ | ಸ್ಥಳೀಕರಿಸಿದ ಸಂಪನ್ಮೂಲಗಳ ಸಂಖ್ಯೆ |
5 | 75 |
6 | 250 |
7 | 212 |
8 | 250 |
9 | 183 |
10 | 210 |
DIKSHA - ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (MHRD) ಉಪಕ್ರಮವಾಗಿದೆ. ಇದು ರಾಷ್ಟ್ರ ಮಟ್ಟದ ಶಿಕ್ಷಕರ ವೇದಿಕೆಯಾಗಿದೆ. ಈ ವೇದಿಕೆಯು ಜ್ಞಾನ ಹಂಚಿಕೆಗಾಗಿ ಡಿಜಿಟಲ್ ಮೂಲಸೌಕರ್ಯ ಒದಗಿಸಸುತ್ತದೆ. ಇದು ಪ್ರಸ್ತುತ Online, offline ಮತ್ತು App ಆಧಾರಿತ ವಿಷಯ ಅಭಿವೃದ್ಧಿ ಮತ್ತು ಹಂಚಿಕೊಳ್ಳುವ ವಿಧಾನವನ್ನು ನೀಡುತ್ತದೆ. DIKSHA ಪ್ಲಾಟ್ಫಾರ್ಮ್ನಲ್ಲಿನ ಸಂಪನ್ಮೂಲಗಳು CC-by-SA ಅಡಿಯಲ್ಲಿ ಲಭ್ಯವಿರುತ್ತದೆ.ಇದು ಬಳಕೆದಾರರಿಗೆ ಅವುಗಳನ್ನು ಡೌನ್ಲೋಡ್ ಮಾಡಲು ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಂಡು ಬಳಸಿಕೊಳ್ಳಬಹುದಾಗಿರುತ್ತದೆ.
ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು, ಶಾಲೆಗಳಿಗೆ ಒದಗಿಸಲಾಗಿರುವ ಲ್ಯಾಪ್ ಟಾಪ್ ಗಳಲ್ಲಿ ಒದಗಿಸಲಾಗುತ್ತದೆ.ಈ ಸಂಪನ್ಮೂಲಗಳು ಶಿಕ್ಷಕರು ಮತ್ತು ಸಂಪನ್ಮೂಲ ಪಾಲುದಾರರು ಸಂಗ್ರಹಿಸಿದ ಅಭಿವೃದ್ಧಿಪಡಿಸಿದ, ಸ್ಥಳೀಕರಿಸಿದ ಮತ್ತು ಅನುವಾದಿಸಿದ ಸಂಪನ್ಮೂಲಗಳಾಗಿರುತ್ತದೆ. ಈ ಸಂಪನ್ಮೂಲಗಳನ್ನು ತರಗತಿ, ವಿಷಯ ಮತ್ತು ಮಾಧ್ಯಮಗಳಿಗೆ ಮ್ಯಾಪ್ ಮಾಡಲಾಗುತ್ತದೆ. ಮತ್ತು ಶಿಕ್ಷಣ ಇಲಾಖೆಯಿಂದ DIKSHA ವೇದಿಕೆಯಲ್ಲಿ ಹಂಚಿಕೊಳ್ಳಲಾಗುತ್ತದೆ. ಈ ಸಂಪನ್ಮೂಲಗಳಲ್ಲಿ ಪ್ರಾಯೋಗಿಕ ವೀಡಿಯೊಗಳು, ಕಲಿಕೆಯ ವೀಡಿಯೊಗಳು, ಮೌಲ್ಯಮಾಪನಗಳು, ಪ್ರಶ್ನೆ ಬ್ಯಾಂಕುಗಳು ಇತ್ಯಾದಿಗಳು ಸೇರಿವೆ. ಲಾಗಿನ್ ಅಗತ್ಯವಿಲ್ಲದೇ ಸಂಪನ್ಮೂಲಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು www.diksha.gov.in/explore ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು.
Energized TextbooksEnergised Text Books (ETB) 16-11-2018 ರಂದು ಕರ್ನಾಟಕದ ಮಾನ್ಯಮುಖ್ಯಮಂತ್ರಿಗಳಿಂದ ಕರ್ನಾಟಕ ರಾಜ್ಯದಲ್ಲಿ ಉದ್ಘಾಟಿಸಲ್ಪಟ್ಟಿತು. 2019-20ರ ಶೈಕ್ಷಣಿಕ ವರ್ಷದಲ್ಲಿ ಗಣಿತ, ವಿಜ್ಞಾನ ಮತ್ತು 2 ನೇ ಭಾಷಾ ಇಂಗ್ಲಿಷ್ ವಿಷಯಗಳಿಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮಗಳಲ್ಲಿ Energised ಪಠ್ಯಪುಸ್ತಕಗಳನ್ನು ಇಲಾಖೆ ಪರಿಚಯಿಸಿದೆ. ಈ ಪಠ್ಯಪುಸ್ತಕಗಳು ಶೀರ್ಷಿಕೆ-ಮಟ್ಟದ ಮತ್ತು ಅಧ್ಯಾಯ-ಮಟ್ಟದ QR Code ಗಳನ್ನು DIKSHA ನಲ್ಲಿ ಲಭ್ಯವಿರುವ ಡಿಜಿಟಲ್ ಕಲಿಕಾ ಸಂಪನ್ಮೂಲಗಳೊಂದಿಗೆ ಸಂಪರ್ಕ ಹೊಂದಿವೆ.
ಶೀರ್ಷಿಕೆಗಳ ಸಂಖ್ಯೆ | 33 |
ಮಾಧ್ಯಮಗಳು | 2 |
ವಿಷಯಗಳು | 3 |
ತರಗತಿಗಳು | 6 to 10 |
ಒಟ್ಟು ಕ್ಯೂಆರ್ ಕೋಡ್ ಗಳು | 361 |
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ DIKSHA app ಬಳಸಿ QR Code ಅನ್ನು scan ಮಾಡಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಅಥವಾ ಸಾರ್ವಜನಿಕರು ಡಿಜಿಟಲ್ ಕಲಿಕಾ ಸಂಪನ್ಮೂಲಗಳನ್ನು ವೀಕ್ಷಿಸಬಹುದು ಹಾಗೂ ಸಂಪನ್ಮೂಲಗಳನ್ನು offline ನಲ್ಲಿ ವೀಕ್ಷಿಸಲು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಬಹುದು. ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ನಲ್ಲಿ, 6-digit alphanumeric code ಅನ್ನು ಬಳಸಿಯೂ ಸಂಪನ್ಮೂಲಗಳನ್ನು ಬಳಸಬಹುದಾಗಿದೆ. ಈ ಎಲ್ಲಾ ಪ್ರಯತ್ನಗಳು ವಿದ್ಯಾರ್ಥಿಗಳ ಕಲಿಕಾ ಸನ್ನಿವೇಶಗಳು ಹೆಚ್ಚಿಸಿ, ಕಲಿಕೆಯನ್ನು ಪರಿಣಾಮಕಾರಿಯಾಗಿಸಬಲ್ಲದು.
ತರಗತಿ | ಕನ್ನಡ | ಆಂಗ್ಲ | ಹಿಂದಿ | ಗಣಿತ | ವಿಜ್ಞಾನ | ಸಮಾಜ ವಿಜ್ಞಾನ | ಒಟ್ಟು |
---|---|---|---|---|---|---|---|
ತರಗತಿ 4 | 9 | 3 | 0 | 20 | 3 | 1 | 36 |
ತರಗತಿ 5 | 1 | 71 | 0 | 70 | 8 | 17 | 167 |
ತರಗತಿ 6 | 4 | 201 | 1 | 326 | 79 | 43 | 654 |
ತರಗತಿ 7 | 2 | 217 | 1 | 211 | 101 | 52 | 584 |
ತರಗತಿ 8 | 4 | 276 | 1 | 334 | 64 | 0 | 679 |
ತರಗತಿ 9 | 1 | 280 | 1 | 266 | 136 | 0 | 684 |
ತರಗತಿ 10 | 30 | 277 | 17 | 311 | 127 | 0 | 762 |
Total | 51 | 1325 | 21 | 1538 | 518 | 113 | 3566 |
ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಕ್ಯೂಆರ್ ಕೋಡ್ಗಳನ್ನು 18 ಲಕ್ಷಕ್ಕೂ ಹೆಚ್ಚು ಬಾರಿ ಸ್ಕ್ಯಾನ್ ಮಾಡಲಾಗಿದೆ, ಸಂಪನ್ಮೂಲಗಳ ಡೌನ್‌ಲೋಡ್‌ಗಳು ಮೊಬೈಲ್ ಅಪ್ಲಿಕೇಶನ್ನಲ್ಲಿ 5 ಲಕ್ಷಗಳನ್ನು ದಾಟಿದೆ ಮತ್ತು ಬಳಕೆದಾರರು 81000 ಗಂಟೆಗಳಿಗಿಂತ ಹೆಚ್ಚಿನ ಸಮಯ ಸಂಪನ್ಮೂಲಗಳನ್ನು ವೀಕ್ಷಿಸಿದ್ದಾರೆ .
ಒಟ್ಟು ಕ್ಯೂಆರ್ ಕೋಡ್ ಸ್ಕ್ಯಾನ್ | 23,80,555 |
ಸಂಪನ್ಮೂಲಗಳನ್ನು App ಮೂಲಕ ವೀಕ್ಷಿಸಲು ಬಳಸಿದ ಉಪಕರಣಗಳಗಳ ಸಂಖ್ಯೆ | 6,91,752 |
ಒಟ್ಟು ಸಂಪನ್ಮೂಲಗಳ ಡೌನ್‌ಲೋಡ್‌ಗಳು | 7,27,043 |
ಆಪ್ ನಲ್ಲಿ ವೀಕ್ಷಿಸಿದ ಒಟ್ಟು ಸಂಪನ್ಮೂಲಗಳ ಸಂಖ್ಯೆ | 28,66,157 |
Portalನಲ್ಲಿ ವೀಕ್ಷಿಸಿದ ಸಂಪನ್ಮೂಲಗಳ ಸಂಖ್ಯೆ | 2,95,722 |
ಒಟ್ಟು ವೀಕ್ಷಿಸಿದ ಸಂಪನ್ಮೂಲಗಳು | 31,61,879 |
App ನಲ್ಲಿ ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) | 1,12,928.41 |
Portal ನಲ್ಲಿ ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) | 8,409.36 |
ಒಟ್ಟು ಸಂಪನ್ಮೂಲಗಳನ್ನು ವೀಕ್ಷಿಸಿದ ಅವಧಿ ( ಗಂಟೆಗಳಲ್ಲಿ) | 1,21,390.72 |
ವಿದ್ಯಾರ್ಥಿ ಐ ಸಿ ಟಿ ಪಠ್ಯವಸ್ತು ವರ್ಷ- 1
ಶಾಲಾ ಶಿಕ್ಷಣದಲ್ಲಿ ICT ರಾಷ್ಟ್ರೀಯ ನೀತಿಯ ಮಾರ್ಗದರ್ಶನಕ್ಕನುಗುಣವಾಗಿ, ವಿದ್ಯಾರ್ಥಿಗಳ ICT ಪಠ್ಯಕ್ರಮವು ವಿದ್ಯಾರ್ಥಿಗಳ ಸೃಜನಶೀಲತೆ, ಸಮಸ್ಯಾ ಪರಿಹಾರ ವಿಧಾನವನ್ನು ಉತ್ತೇಜಿಸಲು. ವಿದ್ಯಾರ್ಥಿಗಳನ್ನು ತಮ್ಮ ಕಲಿಕಾ ಪರಿಧಿಯನ್ನು ವಿಸ್ತರಿಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಜಗತ್ತಿಗೆ ಪರಿಚಯಿಸಲು ವಿನ್ಯಾಸಗೊಳಿಸಲಾಗಿದೆ. ಅವರ ವೃತ್ತಿಜೀವನದ ಅನ್ವೇಷಣೆಗಳಲ್ಲಿ ನಿರ್ದಿಷ್ಟವಾಗಿ ಹೇಳುವುದಾದರೆ, ಪಠ್ಯಕ್ರಮವು ವಿದ್ಯಾರ್ಥಿಗೆ ವಿವಿಧ ಸಂಪನ್ಮೂಲಗಳೊಂದಿಗೆ ಕೆಲಸ ಮಾಡಲು ತರಬೇತಿ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ; ಮಾಹಿತಿ ಮತ್ತು ಸಂಪನ್ಮೂಲಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಲು ಕಲಿಯುವುದು; ಮತ್ತು ಈ ಸಂಪನ್ಮೂಲಗಳ ಸುರಕ್ಷಿತ, ಉತ್ಪಾದಕ, ನೈತಿಕ ಮತ್ತು ಕಾನೂನುಬದ್ಧ ಬಳಕೆಯನ್ನು ಅಭ್ಯಾಸವನ್ನಾಗಿ ಮಾಡುವುದು.
ತರಗತಿಯ ಸಂದರ್ಭದ ಹೊರಗೆ ವಿದ್ಯಾರ್ಥಿಗಳನ್ನು ICT ಗೆ ಪರಿಚಯಿಸಲಾಗುತ್ತದೆ. ಅವರ ಕುತೂಹಲ ಮತ್ತು ಕಲಿಯುವ ಬಯಕೆ ICT ಚಟುವಟಿಕೆಗಳಲ್ಲಿ ಹೆಚ್ಚು ತೀವ್ರವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಬ್ಲಾಗಿಂಗ್, ಸಾಮಾಜಿಕ ಜಾಲತಾಣಗಳ ಪರಿಚಯ, ಸೈಬರ್ ಬೆದರಿಸುವಿಕೆ ಅಥವಾ ಅವರ ಹಕ್ಕುಗಳನ್ನು ಉಲ್ಲಂಘಿಸುವ ಪರಿಣಾಮ ಹಾಗೂ ಇನ್ನಿತರ ವಿಷಯಗಳ ಅರಿವು ಮೂಡಿಸುವುದು ತರಬೇತಿಯ ಅತ್ಯಗತ್ಯ ಭಾಗವಾಗಬೇಕು. ಕಲಿಕಾ ಸಂದರ್ಭದಲ್ಲಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ನೊಂದಿಗೆ ಹೊಸ ಹೊಸ ವಿಧಾನಗಳನ್ನು ಬಳಸಿ ಪ್ರಯೋಗ ಮಾಡುವಾಗ ಕಲಿಕೆಯು ತುಂಬಾ ಅರ್ಥಪೂರ್ಣವಾಗಿರುತ್ತದೆ. ಈ ಪ್ರವೃತ್ತಿಗಳನ್ನು ಕಲಿಕಾ ಸನ್ನಿಇವೇಶಗಳಲ್ಲಿ ಸರಿಹೊಂದಿಸುವುದು ಮತ್ತು ಅವುಗಳನ್ನು ಬೋಧನೆ-ಕಲಿಕೆಯ ಪ್ರಕ್ರಿಯೆಗೆ ಸಹಕರಿಸುವುದು ಶಾಲೆಯಲ್ಲಿ ಐಸಿಟಿ ವ್ಯವಸ್ಥೆಗೆ ಸಮರ್ಥ ಬೆಂಬಲವನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ.
NCERT - CIET ಐಸಿಟಿ ವಿದ್ಯಾರ್ಥಿ ಕೋರ್ಸ್ ವರ್ಷ 1 ಅನ್ನು AY 2019-20ರಲ್ಲಿ ಅಳವಡಿಸಲಾಗುತ್ತಿದೆ.
View this page in English
ನವೀಕರಿಸಿದ ದಿನಾಂಕ : 21/10/2019