ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿ.ಎಸ್.ಇ.ಆರ್.ಟಿ.) ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿಜ್ಞಾನ ಕರ್ಯಕ್ರಮಗಳ ಉತ್ತೇಜನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯಪೂರ್ಣ ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಆರಂಭದಲ್ಲಿ ರಾಜ್ಯ ಶಿಕ್ಷಣ ಸಂಸ್ಥೆ ಎಂಬ ಹೆಸರಿನೊಂದಿಗೆ, ಶಾಲಾ ಶೈಕ್ಷಣಿಕ ಚಟುವಟಿಕೆಗಳ ಉಸ್ತುವಾರಿಗೆ ಚಿಕ್ಕ ಘಟಕವಾಗಿ ರಚನೆಗೊಂಡು 1964ರಲ್ಲಿ ಧಾರವಾಡದಲ್ಲಿ ತನ್ನ ಕಾರ್ಯಾರಂಭ ಮಾಡಿತು. ಈ ಘಟಕವನ್ನು ಬೆಂಗಳೂರಿಗೆ ವರ್ಗಾಯಿಸಿ ರಾಜ್ಯದಲ್ಲಿದ್ದ ಇತರ ಶೈಕ್ಷಣಿಕ ಘಟಕಗಳಾದ ರಾಜ್ಯ ವಿಜ್ಞಾನ ಸಂಸ್ಥೆ (SIS), ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಘಟಕ (SEEU) ಮತ್ತು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಘಟಕಗಳೊಡನೆ (EVG) ಸೇರಿಸಿ 1975 ರಲ್ಲಿ ಏಕರೂಪದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು ರಚಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯಗಳು, ಸರ್ಕಾರಿ ಶಿಕ್ಷಣ ತರಬೇತಿ ಸಂಸ್ಥೆಗಳು ಮತ್ತು ಅನುದಾನಿತ ಡಿ.ಎಲ್.ಇಡಿ ಕಾಲೇಜುಗಳು ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. www.dsert.kar.nic.in ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. http://dsert.kar.nic.in ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ
ಡಿ.ಎಸ್.ಇ.ಆರ್.ಟಿ. ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರಗಳು
ಕ್ರ.ಸಂ | ಸಿಬ್ಬಂದಿಯ ವರ್ಗ | ಮಂಜೂರಾದ ಹುದ್ದೆಗಳ ಹೆಸರು | ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ | ಭರ್ತಿ ಮಾಡಲ್ಪಟ್ಟ ಹುದ್ದೆಗಳ ಸಂಖ್ಯೆ | ಕಾಲಂ 6ರಲ್ಲಿನ ಒಟ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳಲ್ಲಿ | ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ | |||
---|---|---|---|---|---|---|---|---|---|
ಪುರುಷರು | ಸ್ತ್ರೀಯರು | ಒಟ್ಟು | ಪರಿಶಿಷ್ಟ ಜಾತಿಯವರ ಸಂಖ್ಯೆ | ಪರಿಶಿಷ್ಟ ಪಂಗಡದವರ ಸಂಖ್ಯೆ | |||||
1 | 2 | 3 | 4 | 5 | 6 | 7 | 8 | 9 | |
1 | ಗ್ರೂಪ್ ಎ | ನಿರ್ದೇಶಕರು | 1 | 1 | 0 | 1 | 0 | 0 | 0 |
2 | ಗ್ರೂಪ್ ಎ | ಸಹ ನಿರ್ದೇಶಕರು | 1 | 0 | 1 | 1 | 0 | 0 | 0 |
3 | ಗ್ರೂಪ್ ಎ | ಉಪ ನಿರ್ದೇಶಕರು | 2 | 2 | 0 | 2 | 0 | 0 | 0 |
4 | ಗ್ರೂಪ್ ಎ | ಹಿರಿಯ ಸಹಾಯಕ ನಿರ್ದೇಶಕರು | 14 | 7 | 6 | 13 | 1 | 0 | 1 |
5 | ಗ್ರೂಪ್ ಎ | ಲೆಕ್ಕಾಧಿಕಾರಿಗಳು | 1 | 0 | 0 | 0 | 0 | 0 | 1 |
6 | ಗ್ರೂಪ್ ಬಿ | ಸಹಾಯಕ ನಿರ್ದೇಶಕರು | 2 | 1 | 1 | 2 | 0 | 0 | 0 |
7 | ಗ್ರೂಪ್ ಬಿ | ಸಾಂಖ್ಯಿಕ ಅಧಿಕಾರಿಗಳು | 1 | 0 | 0 | 0 | 0 | 0 | 1 |
8 | ಗ್ರೂಪ್ ಸಿ | ಅಧೀಕ್ಷಕರು | 5 | 3 | 2 | 5 | 1 | 1 | 0 |
9 | ಗ್ರೂಪ್ ಸಿ | ಸ.ಸಾಂ.ಅ | 4 | 0 | 1 | 1 | 1 | 0 | 3 |
10 | ಗ್ರೂಪ್ ಸಿ | ತಾಂತ್ರಿಕ ಸಹಾಯಕರು | 5 | 4 | 1 | 5 | 0 | 0 | 0 |
11 | ಗ್ರೂಪ್ ಸಿ | ಗ್ರಂಥಪಾಲಕರು | 5 | 0 | 1 | 1 | 0 | 0 | 4 |
12 | ಗ್ರೂಪ್ ಸಿ | ಟೆಕ್ನೀಶಿಯನ್ | 2 | 2 | 0 | 2 | 0 | 0 | 0 |
13 | ಗ್ರೂಪ್ ಸಿ | ಕಲಾವಿದ | 1 | 1 | 0 | 1 | 0 | 0 | 0 |
14 | ಗ್ರೂಪ್ ಸಿ | ಗ್ರಂಥಾಲಯ ಅಧಿಕಾರಿ | 1 | 0 | 0 | 0 | 0 | 0 | 1 |
15 | ಗ್ರೂಪ್ ಸಿ | ಸಹಾಯಕ ಗ್ರಂಥಪಾಲಕರು | 1 | 1 | 0 | 1 | 0 | 0 | 0 |
16 | ಗ್ರೂಪ್ ಸಿ | ಶೀಘ್ರಲಿಪಿಗಾರರು | 4 | 0 | 4 | 4 | 0 | 0 | 0 |
17 | ಗ್ರೂಪ್ ಸಿ | ಪ್ರ.ದ.ಸ | 22 | 13 | 9 | 22 | 1 | 0 | 0 |
18 | ಗ್ರೂಪ್ ಸಿ | ಕಾರ್ಪೆಂಟರ್ | 1 | 0 | 0 | 0 | 0 | 0 | 1 |
19 | ಗ್ರೂಪ್ ಸಿ | ಎಸ್.ಡಿ.ಎ | 9 | 2 | 7 | 9 | 0 | 0 | 0 |
20 | ಗ್ರೂಪ್ ಸಿ | ಬೆರಳಚ್ಚುಗಾರರು | 6 | 0 | 0 | 0 | 0 | 0 | 6 |
21 | ಗ್ರೂಪ್ ಸಿ | ಟೆಸ್ಟಿಂಗ್ ಅಸಿಸ್ಟಂಟ್ | 1 | 0 | 0 | 0 | 0 | 0 | 1 |
22 | ಗ್ರೂಪ್ ಸಿ | ಫೀಲ್ಡ್ ಮ್ಯಾನ್ | 1 | 0 | 0 | 0 | 0 | 0 | 1 |
23 | ಗ್ರೂಪ್ ಸಿ | ಸಿ.ಸಿ.ಟಿ | 3 | 1 | 2 | 3 | 0 | 0 | 0 |
24 | ಗ್ರೂಪ್ ಸಿ | ವಾಹನ ಚಾಲಕರು | 5 | 4 | 0 | 4 | 0 | 0 | 1 |
25 | ಗ್ರೂಪ್ ಸಿ | ವಾಹನ ಚಾಲಕರು ಕಮ್ ಮೆಕ್ಯಾನಿಕ್ | 1 | 0 | 0 | 0 | 0 | 0 | 1 |
26 | ಗ್ರೂಪ್ ಡಿ | ಅಟೆಂಡರ್ | 11 | 2 | 1 | 3 | 0 | 0 | 8 |
27 | ಗ್ರೂಪ್ ಡಿ | ಜವಾನ | 22 | 6 | 5 | 11 | 0 | 1 | 11 |
28 | ಗ್ರೂಪ್ ಸಿ | ಕಾವಲುಗಾರ | 1 | 0 | 0 | 0 | 0 | 0 | 1 |
ಒಟ್ಟು | 133 | 50 | 41 | 91 | 4 | 2 | 42 |
View this page in English
ನವೀಕರಿಸಿದ ದಿನಾಂಕ : 31/8/2019