ಗಣಿತ Mathematics

ಸಂಖ್ಯಾ ಪದ್ಧತಿ

ಮಕ್ಕಳು ಸಂಖ್ಯೆಗಳನ್ನು ಕಲಿಯುವಾಗ ಸಾಮಾನ್ಯವಾಗಿ ಸ್ಮರಣೆ ಹಾಗೂ ವಿಧಾನಗಳನ್ನು (procedures) ಆಧರಿಸಿ ಕಲಿಯುತ್ತಾರೆ. ಆದರೆ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಅದಕ್ಕಾಗಿ ಶಿಕ್ಷಕರು ಸಂಖ್ಯಾ ಪೂರ್ವ ಪರಿಕಲ್ಪನೆಗಳು, ಇನ್ನಿತರ ಅನುಭವಗಳನ್ನು ಮಕ್ಕಳಿಗೆ ನೀಡಬೇಕಾಗುತ್ತದೆ. ಎಣಿಕೆಗೂ ಮುನ್ನ ಸಂಖ್ಯೆಗಳ ಕುರಿತು ಮಗು ಏನು ತಿಳಿದಿರಬೇಕು? ಎಣಿಕೆಯ ತತ್ವಗಳು ಯಾವುವು?ಅವುಗಳ ಮಹತ್ವಗಳೇನು? ಸಂಖ್ಯೆಗಳ ಉಗಮ ಮತ್ತು ಇತಿಹಾಸ, ಬೆಬಿಲೋನಿಯನ್, ಈಜಿಪ್ಟಿಯನ್, ಮಾಯನ್, ರೋಮನ್,ಗ್ರೀಕ್,ಹಿಂದೂ ಅರೇಬಿಕ್ ಸಂಖ್ಯಾಪದ್ಧತಿಗಳ ಪರಿಚಯ ಹಾಗೂ ಸ್ಥಾನಬೆಲೆಗಳ ತಪ್ಪುಗ್ರಹಿಕೆಗಳ ನಿವಾರಣೆಗೆ ಅಗತ್ಯ ರಚನಾತ್ಮಕ ಸಂಪನ್ಮೂಲಗಳ ಬಗ್ಗೆ ಮಾಡ್ಯೂಲ್ನದಲ್ಲಿ ಚರ್ಚಿಸಲಾಗಿದೆ. DOWNLOAD


thumbnail

thumbnail

ಗಣಿತ Mathematics

ಪೂರ್ಣ ಸಂಖ್ಯೆಗಳ ಮೇಲಿನ ಮೂಲ ಕ್ರಿಯೆಗಳು

ಪ್ರಾಥಮಿಕ ಹಂತದಲ್ಲಿ ಸ್ಥಾನಬೆಲೆ ಆಧಾರಿತವಾಗಿ ತನ್ನದೇ ವಿಧಾನದಲ್ಲಿ ಅಲ್ಗಾರಿಥಂನ್ನು ಅನ್ವೇಷಿಸುವ ಮೂಲಕ ಮಗುವಿಗೆ ಕಲಿಯಲು ಅವಕಾಶ ಮಾಡಿಕೊಡುವುದು ಸೂಕ್ತವೆಂದು ಅನೇಕ ಸಂಶೋಧನೆಗಳು ತಿಳಿಸಿವೆ. ನಿರ್ದಿಷ್ಟವಾದ ಒಂದು ಅಲ್ಗಾರಿಥಂ ಮೂಲಕ ಮಾತ್ರ ಮೂಲಕ್ರಿಯೆ ಕಲಿಸುವುದು ಸೂಕ್ತವಾದುದಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ , ಶಿಕ್ಷಕರು ತಮ್ಮದೇ ವಿಧಾನ ಅಭಿವೃದ್ಧಿ ಪಡಿಸುವಲ್ಲಿ ಮತ್ತು ಅವುಗಳನ್ನು ಬಳಕೆ ಮಾಡುವ ಬಗ್ಗೆ ಸಂಪೂರ್ಣ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಹೀಗೆ ಹೊಸ ಹೊಸ ಕ್ರಮಾವಳಿ (ಅಲ್ಗಾರಿಥಂ)ಗಳ ಮೂಲಕ ಆಳವಾದ ಜ್ಞಾನವನ್ನು ಹುಡುಕುತ್ತಾ ಹೋದಂತೆ ಗಣಿತದ ಮೂಲಕ್ರಿಯೆಗಳ ಬಗ್ಗೆ ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ವಿಭಿನ್ನ ವಿಧಾನಗಳಲ್ಲಿ ಗಣಿತದ ಮೂಲಕ್ರಿಯೆಗಳನ್ನು ಮಾಡುವ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಬಲಗಡೆಯಿಂದ ಮಾತ್ರ ಸಂಕಲನ ಮಾಡಬೇಕೆ? ಎರವಲು ವಿಧಾನವಿಲ್ಲದೆ ವ್ಯವಕಲನ ಸಾದ್ಯವಿಲ್ಲವೆ ಇತ್ಯಾದಿ ಪ್ರಶ್ನೆಗಳ ಮೂಲಕ ಶಿಕ್ಷಕ ತನ್ನ ಕಲಿಕೆಯನ್ನು ತಾನೇ ಕಟ್ಟಿಕೊಳ್ಳಲು ವ್ಯಾಪಕ ಅವಕಾಶಗಳನ್ನು ನೀಡಲಾಗಿದೆ. DOWNLOAD


thumbnail

thumbnail

ಗಣಿತ Mathematics

ಅಳತೆ ಮತ್ತು ಪರಿವರ್ತನೆ

ಅಳತೆ ಮಾನವನ ಜೀವನದ ಅವಿಭಾಜ್ಯ ಭಾಗ. ನಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಅಳತೆಯ ಎಲ್ಲಾ ಪರಿಕಲ್ಪನೆಗಳು ತಿಳಿದಿರುವುದು ಅವಶ್ಯಕ. ಹಾಗಾಗಿ ಈ ಮಾಡ್ಯೂಲ್ನರಲ್ಲಿ ಅಳತೆಯ ಅರ್ಥ ಮತ್ತು ಗುಣಲಕ್ಷಣಗಳು. ಉದ್ದ, ಅಗಲ, ಎತ್ತರ, ಆಳ, ಅಂತರಗಳ ನಡುವಿನ ಸಹಸಂಬಂಧ, ಸಾಂಪ್ರದಾಯಿಕ ಮೂಲಮಾನಗಳು, ಅವುಗಳ ಮಿತಿಗಳುನ್ನು ಚರ್ಚಿಸಲಾಗಿದೆ. ಉದ್ದ ಅಳತೆಯ ಆದರ್ಶಮಾನಗಳ ಉಗಮ ಮತ್ತು ವಿವಿಧ ಏಕಮಾನಗಳ ಪರಿಚಯ ಹಾಗೂ ಪರಿವರ್ತನೆಗಳನ್ನು ಪರಿಚಯಿಸಲಾಗಿದೆ. ದ್ರವ್ಯರಾಶಿ ಮತ್ತು ತೂಕದ ನಡುವಿನ ವ್ಯತ್ಯಾಸ, ಬಳಸುವ ಸಂದರ್ಭಗಳು, ರಾಶಿಮಾಪಕಗಳು ಬೆಳೆದು ಬಂದ ಹಾದಿ, ದ್ರವ್ಯರಾಶಿಯ ಮಾನಗಳು, ಹಾಗೂ ಪರಿವರ್ತನೆಗಳ ಬಗ್ಗೆ ತಿಳಿಸಲಾಗಿದೆ. ಜೊತೆಗೆ ಕಾಲದ ಅಳತೆಯ ಪರಿಕಲ್ಪನೆ, ಅದರ ಅಳತೆಯ ಮಾಪನಗಳು ಬೆಳೆದುಬಂದ ಹಾದಿ, ಕಾಲದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವ ಬಗೆ ಕುರಿತು ಮಾಡ್ಯೂಲ್ ಅನುಭವ ನೀಡುತ್ತದೆ. ಪ್ರಮುಖವಾಗಿ ಇಂತಹ ಕ್ರಿಯೆಗಳನ್ನು ಮಾಡುವಾಗ ಸಂಭವಿಸಬಹುದಾದ ತಪ್ಪುಗಳು ಮತ್ತು ಮಕ್ಕಳಲ್ಲಿ ಇರಬಹುದಾದ ತಪ್ಪು ಪರಿಕಲ್ಪನೆಗಳ ಬಗ್ಗೆ ಚರ್ಚಿಸಿದೆ. DOWNLOAD


thumbnail

thumbnail

ಗಣಿತ Mathematics

ಕ್ಷೇತ್ರಗಣಿತ

ಈ ಮಾಡ್ಯೂಲ್ನಕಲ್ಲಿ ಒಂದು, ಎರಡು ಮತ್ತು ಮೂರು ಆಯಾಮಾದ ಆಕೃತಿಗಳ ಗುರುತಿಸುವಿಕೆ, ಅವುಗಳ ಸುತ್ತಳತೆ ಕಂಡುಹಿಡಿಯುವ ಬಗೆ, ವಿಸ್ತೀರ್ಣವನ್ನು ಕಂಡುಹಿಡಿಯುವ ವಿವಿಧ ನಿತ್ಯ ಸರಳ ಸಮೀಕರಣಗಳನ್ನು ತಾವೇ ಕಟ್ಟಿಕೊಳ್ಳುವಂತೆ ಅನುಕೂಲಿಸುವ ಪ್ರಯತ್ನ ಮಾಡಲಾಗಿದೆ. ಸುತ್ತಳತೆ ಮತ್ತು ವಿಸ್ತೀರ್ಣಗಳ ನಡುವಿನ ಸಂಬಂಧ, ವಿವಿಧ ಘನಾಕೃತಿಗಳ ಮೇಲ್ಮೈ ವಿಸ್ತೀರ್ಣ, ಘನಫಲಗಳನ್ನು ಸರಳವಾಗಿ ಕಂಡುಹಿಡಿಯುವ ವಿಧಾನಗಳ ಬಗೆ, ಚಟುವಟಿಕೆಗಳ ಮೂಲಕ ಸರಳ ಸಮೀಕರಣಗಳನ್ನು ತಾವೇ ಕಂಡುಕೊಳ್ಳುವ ಮಾರ್ಗಗಳನ್ನು ಚರ್ಚಿಸಲಾಗಿದೆ. ಹೊರಮೈ ವಿಸ್ತೀರ್ಣ ಮತ್ತು ಘನಫಲಗಳ ನಡುವಿನ ಸಂಬಂಧಗಳ ಬಗ್ಗೆ ವಿಮರ್ಶೆಗೆ ಒಳಪಡಿಸುವ ಪ್ರಯತ್ನಗಳಿವೆ. ದೈನಂದಿನ ಜೀವನದಲ್ಲಿ ಕಂಡುಬರುವ ಅಗತ್ಯ ವಸ್ತುಗಳ ಜೋಡಣೆಗೊಂಡ ಆಕೃತಿಗಳಿಗೆ ಹೊರಮೇಲ್ಮೈ ವಿಸ್ತೀರ್ಣ ಹಾಗೂ ಘನಫಲಗಳನ್ನು ಕಂಡು ಹಿಡಿಯುವುದನ್ನು ತಿಳಿಸಲಾಗಿದೆ. DOWNLOAD


thumbnail

thumbnail

> View Next: ವಿಜ್ಞಾನ